17 ವರ್ಷದ ವಿದ್ಯಾರ್ಥಿ ಶಿಕ್ಷಕಿ ತನ್ನೊಂದಿಗೆ ಪದೇ ಪದೇ ಸೆಕ್ಸ್ ಮಾಡಿರುವ ಬಗ್ಗೆ ದೂರು ನೀಡಿದ ಬೆನ್ನಲ್ಲಿಯೇ 17 ವರ್ಷದ ಶಾಲಾ ಶಿಕ್ಷಕಿಯನ್ನು 2023ರ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು.
ನವದೆಹಲಿ (ಜ.24): ಅಮೆರಿಕದ ಅರ್ಕಾನ್ಸಾಸ್‌ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಹೈಸ್ಕೂಲ್ ಹುಡುಗನೊಂದಿಗೆ 30 ಬಾರಿ ಲೈಂಗಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ತಪ್ಪೊಪ್ಪಿಕೊಂಡಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಪ್ರಸ್ತುತ ಮದುವೆಯಾಗಿರುವ ಮೂವತ್ಮೂರು ವರ್ಷದ ಹೀದರ್ ಹೇರ್ ತಮ್ಮ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಲೈಂಗಿಕ ಚಟುವಟಿಕೆಗಾಗಿ ಅಪ್ರಾಪ್ತು ವಯಸ್ಕರನ್ನು ಬಳಸಿಕೊಳ್ಳುವುದು ಗಂಭೀರ ಪ್ರಮಾಣದ ಅಪರಾಧವಾಗಿದೆ. ಕೋವಿಡ್ ಕಾರಣದಿಂದಾಗಿ ಆಕೆಯ ವಿದ್ಯಾರ್ಥಿಗಳು ಟಿವಿ ಕಾರ್ಯಕ್ರಮವೊಂದರಲ್ಲಿ ಅವರಿಗೆ ವಿದಾಯ ಹೇಳಿದ್ದ ಸಂದರ್ಭದಲ್ಲಿ ಹೀದರ್ ಹೇರ್ 2020ರಲ್ಲಿ ಮೊಟ್ಟಮೊದಲ ಬಾರಿಗೆ ಸುದ್ದಿಯಾಗಿದ್ದರು. ಈ ಹಂತದಲ್ಲಿ 17 ವರ್ಷ ವಿದ್ಯಾರ್ಥಿಯೊಬ್ಬ, ಶಿಕ್ಷಕಿ ಹೀದರ್ ಹೇರ್ ತಮ್ಮನ್ನು ಪದೇ ಪದೇ ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಆರೋಪ ಮಾಡಿದ ಬಳಿಕ 2023ರ ಏಪ್ರಿಲ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದರು.
ವಿದ್ಯಾರ್ಥಿಯನ್ನು ಜೆಆರ್ ಎಂದು ಗುರುತಿಸಲಾಗಿದೆ. , 2021 ರಲ್ಲಿ ಬ್ರ್ಯಾಂಟ್ ಹೈಸ್ಕೂಲ್‌ನಲ್ಲಿ ತನ್ನ ಹಿರಿಯ ವರ್ಷದ ಮೊದಲ ದಿನದಂದು ಹೀದರ್ ಹೇರ್ ಅವರನ್ನು ಭೇಟಿಯಾಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದರು. "ಹೇರ್ ಅಪ್ರಾಪ್ತ ಹುಡುಗನೊಂದಿಗೆ ಒನ್ ಟು ಒನ್ ಸಮಾಲೋಚನೆಗಳ ಮೂಲಕ ಆರಂಭಿಸಿದ್ದರು. ಅಂತಿಮವಾಗಿ ಹುಡುಗನಿಗೆ ತಮ್ಮ ವೈಯಕ್ತಿಕ ಫೋನ್ ಸಂಖ್ಯೆ ನೀಡಿದ್ದಲ್ಲದೆ, ಇನ್ಸ್‌ಟಾಗ್ರಾಮ್ ಹಾಗೂ ಸ್ನಾಪ್‌ಚಾಟ್ ಮೂಲಕ ಅವರೊಂದಿಗೆ ಸ್ನೇಹ ಬೆಳೆಸಲು ಆರಂಭಿಸಿದ್ದರು. ಒಂದು ಹಂತದಲ್ಲಿ ಹೀದರ್ ಹೇರ್ ಅವರು ಜೆಆರ್ ಜೊತೆ ಲೈಂಗಿಕ ಸಂಬಂಧ ಕನಸನ್ನು ಹೊಂದಿದ್ದರು ಎಂದು ಅಸಿಸ್ಟೆಂಟ್ ಅಟಾರ್ನಿ ಜಾನ್ ರೇ ವೈಟ್ ಅವರ ನ್ಯಾಯಾಲಯಕ್ಕೆ ಹೇಳಿರುವುದಾಗಿ ಪೋಸ್ಟ್ ಉಲ್ಲೇಖಿಸಿದೆ.
2021-22ರ ಶಾಲಾ ಅವಧಿಯಲ್ಲಿ ಅಪ್ರಾಪ್ತ ಹುಡುಗನ ಜೊತೆ 20 ರಿಂದ 30 ಬಾರಿ ಹೀದರ್ ಹೇರ್ ಸೆಕ್ಸ್ ನಡೆಸಿದ್ದಾರೆ. ಆಕೆಯ ಕಾನ್ವೆ ರೆಸಿಡೆನ್ಸ್‌ನಲ್ಲಿ, ಆಕೆಯ ಕಾರ್, ಕ್ಲಾಸ್ ರೂಮ್ ಹಾಗೂ ಬ್ರ್ಯಾಂಟ್ ಹೈಸ್ಕೂಲ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಸೆಕ್ಸ್ ನಡೆಸಿದ್ದಾರೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. 2022ರಲ್ಲಿ ಶಾಲೆಯ ಪ್ರವಾಸದ ಸಮಯದಲ್ಲೂ ಒಮ್ಮೆ ಹೀದರ್ ಹೇರ್, ಜೆಆರ್ ಜೊತೆ ಸೆಕ್ಸ್ ನಡೆಸಿದ್ದರು. ಟ್ರಿಪ್ ವೇಳೆ ಒಮ್ಮೆ ಸೆಕ್ಸ್ ಮಾಡುವ ಯೋಚನೆಯನ್ನು ಆಕೆ ಜೆಆರ್ಗೆ ತಿಳಿಸಿದ್ದು ಮಾತ್ರವಲ್ಲದೆ, ಸಿಕ್ಕಿ ಹಾಕಿಕೊಳ್ಳುವ ಯಾವುದೇ ಭಯಬೇಡ ಎಂದಿದ್ದರು. ಅದರಂತೆ ಇಬ್ಬರೂ ಹೋಟೆಲ್ ರೂಮ್‌ನಲ್ಲಿ ಸೆಕ್ಸ್‌ನಲ್ಲಿ ಭಾಗಿಯಾಗಿದ್ದರು ಎಂದು ಅಟಾರ್ನಿ ಜಾನ್ ರೇ ವೈಟ್ ತಿಳಿಸಿದ್ದಾರೆ. ಆಕೆಯ ಕುರಿತಾಗಿ ಮಾಡಿರುವ ಆರೋಪಗಳು ನಿಜವೇ ಎಂದು ಕೋರ್ಟ್‌ನಲ್ಲಿ ಕೇಳಿದಾಗ ಮಾಜಿ ಶಿಕ್ಷಕಿ ಕೋರ್ಟ್ ಹಾಲ್‌ನಲ್ಲಿಯೇ ಕಣ್ಣೀರಿಟ್ಟಿದ್ದಾರೆ.
ಹೆಂಡ್ತಿ, ಗಂಡನ ಜೊತೆ ಸೆಕ್ಸ್ ನಿರಾಕರಿಸುವುದು ಕ್ರೌರ್ಯ, ಪತಿ ಡಿವೋರ್ಸ್ ಕೊಡ್ಬೋದು; ಹೈಕೋರ್ಟ್ ತೀರ್ಪು
ಈ ಆರೋಪಗಳ ಬಗ್ಗೆ ಪ್ರಶ್ನೆ ಕೇಳಿದಾಗ, ಹೀದರ್ ಹೇರ್ ಹೌದು ಎಂದು ಉತ್ತರಿಸಿದ್ದು ಮಾತ್ರವಲ್ಲದೆ, ತಪ್ಪನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. ಆಕೆ 13 ವರ್ಷಗಳ ಜೈಲು ಶಿಕ್ಷೆಗೆ ಅರ್ಜಿ ಸಲ್ಲಿಸಿದ್ದಳು. ಆದರೆ, ನ್ಯಾಯಾಧೀಶರು ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಿಲ್ಲ ಎಂದು ಪೋಸ್ಟ್ ವರದಿ ತಿಳಿಸಿದೆ. ಇದರಿಂದಾಗಿ ಆಕೆಗೆ ಜೀವಾವಧಿ ಶಿಕ್ಷೆ ಆಗುವ ಸಾಧ್ಯತೆ ಇದೆ.
ವಿದ್ಯಾರ್ಥಿ ಜತೆ ಲೈಂಗಿಕ ಸಂಬಂಧ: ಅತ್ಯಾಚಾರ ಆರೋಪದ ಮೇಲೆ ಶಿಕ್ಷಕಿ ಅರೆಸ್ಟ್, ಬಾಲಕನ ತಂದೆಯೂ ಸೆರೆ!