ಪ್ರೀತಿ, ಮದ್ವೆ ಗಿದ್ವೆ ಏನೂ ಬೇಡ, ಒಂಟಿಯಾಗೇ ಇರ್ತೇವೆ ಅಂತಿದೆ ಈಗಿನ ಜನರೇಷನ್? ಯಾಕ್ಹೀಗೆ?

By Suvarna News  |  First Published Feb 22, 2024, 3:45 PM IST

ಪ್ರೀತಿ ಹಾಗೂ ಯುವಕರಿಗೆ ವಿಶೇಷ ನಂಟಿದೆ. ಡೇಟಿಂಗ್, ಈಟಿಂಗ್ ಅಂತ ಕೆಲವರು ಸುತ್ತಾಡ್ತಿದ್ದರೆ ಮತ್ತೆ ಕೆಲ ಯುವಕರ ಆಲೋಚನೆ ಡಿಫರೆಂಟ್ ಆಗಿದೆ. ಜಂಟಿಗಿಂತ ಒಂಟಿ ಬೆಸ್ಟ್ ಎನ್ನುತ್ತಿದ್ದಾರೆ ಅವರು. 
 


ಜೀವನದಲ್ಲಿ ಪ್ರೀತಿ ಇರಬೇಕು, ಸಂಗಾತಿ ಜೊತೆ ಸುಖಕರ ಜೀವನ ನಡೆಸಬೇಕು ಎಂದು ಅನೇಕರು ಹೇಳ್ತಿರುತ್ತಾರೆ. ಪ್ರೀತಿ ಇದ್ರೆ ಜೀವನದಲ್ಲಿ ಸಂತೋಷ ಸಾಧ್ಯ ಎಂದು ನಂಬುವವರು ಅನೇಕರು. ಮದುವೆ, ಪ್ರೀತಿಯನ್ನು ಕೆಲವರು ಸಮರ್ಥಿಸಿಕೊಳ್ಳುತ್ತಾರೆ. ಮದುವೆ, ಸಂಗಾತಿ, ಸಂಸಾರದಲ್ಲಿ ಜಗಳ ಸಾಮಾನ್ಯ. ಇದೇ ಜಗಳ ಅನೇಕ ವಿಷ್ಯಗಳನ್ನು ನಮಗೆ ಕಲಿಸುತ್ತೆ. ಒಂಟಿ ಜೀವನದ ನೋವು ಜಂಟಿಯಾಗಿದ್ದಾಗ ಕಾಡುವುದಿಲ್ಲ ಎನ್ನುವವರಿದ್ದಾರೆ. ಮದುವೆ ಆಗಿ, ಸಂಸಾರದ ಜವಾಬ್ದಾರಿ ವಹಿಸಿಕೊಂಡ ಮೇಲೆ ಈ ಮದುವೆ ಜಂಜಾಟ ಬೇಡವಾಗಿತ್ತು ಎನ್ನುವವರು ಕೆಲವರಿದ್ದಾರೆ. ಮಧ್ಯವಯಸ್ಸಿನ ಜನರಲ್ಲಿ ನೀವು ಈ ಮಾತುಗಳನ್ನು ಕೇಳಿರಬಹುದು. ಆದ್ರೆ ಈಗಿನ ಜನರೇಷನ್ ಬದಲಾಗಿದೆ. ಪ್ರೀತಿ, ಪ್ರೇಮದ ಗುಂಗಿನಲ್ಲಿರಬೇಕಾಗಿದ್ದ ಯುವಕರ ಆಲೋಚನೆಯಲ್ಲಿ ಸಾಕಷ್ಟು ಬದಲಾವಣೆ ಕಾಣಿಸ್ತಿದೆ. ಸಮೀಕ್ಷೆಯೊಂದರಲ್ಲಿ ಅನೇಕ ಯುವ ಜನರು ಪ್ರೀತಿಯಿಂದ ದೂರವಿರೋದೇ ಬೆಸ್ಟ್ ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದಕ್ಕೆ ತಮ್ಮದೆ ಕಾರಣಗಳನ್ನು ಅವರು ಮುಂದಿಟ್ಟಿದ್ದಾರೆ. 

ಪ್ರೀತಿ (Love) ಬೇಡ ಎನ್ನುವವರ ಅಭಿಪ್ರಾಯ : 
ನಾಟಕವಿಲ್ಲ – ಉದ್ವೇಗವಿಲ್ಲ : ಸ
ಮೀಕ್ಷೆ (Survey) ಯಲ್ಲಿ ಮಾತನಾಡಿದ ಹುಡುಗಿಯೊಬ್ಬಳು ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ. ಆಕೆ ಮೊದಲು ಪ್ರೀತಿಯಲ್ಲಿದ್ದಳು. ಆಗ ಸಾಕಷ್ಟು ನಾಟಕದ, ಉದ್ವೇಗದ ಜೀವನ ನಡೆಸಬೇಕಾಗಿತ್ತು. ಪ್ರತಿ ದಿನ ಒಂದಲ್ಲ ಒಂದು ವಿಷ್ಯಕ್ಕೆ ಗಲಾಟೆ ಆಗ್ತಿತ್ತು. ಇದು ಉದ್ವೇಗ ಹೆಚ್ಚಿಸಿತ್ತು. ಅಗತ್ಯವೆನ್ನಿಸಿದಾಗ ಸಂಗಾತಿ (Spouse) ಮುಂದೆ ಪ್ರೀತಿ ನಾಟಕ ಆಟಬೇಕಾಗಿತ್ತು. ಆದ್ರೀಗ ಯಾವುದೇ ಚಿಂತೆಯಿಲ್ಲ. ಒಂಟಿಯಾಗಿದ್ದೇನೆ ಆದ್ರೆ ಖುಷಿಯಾಗಿದ್ದೇನೆ. ನಾಟಕವಿಲ್ಲದ ಜೀವನ ನಡೆಸುತ್ತಿದ್ದೇನೆ ಎಂದಿದ್ದಾಳೆ. 

Latest Videos

undefined

ಆಲಿಯಾರಿಂದ ಇಮೇಲ್‌ ಮೂಲಕ ಮಗಳಿಗೆ ಭಾರತೀಯ ಗ್ರಂಥಗಳ ನೀತಿ ಪಾಠ!

ವೃತ್ತಿ (Career) ಹಾಗೂ ವೈಯಕ್ತಿಕ ಜೀವನಕ್ಕೆ ಅಡ್ಡಿ : ಪ್ರೀತಿಸಿದ ಮೇಲೆ ಒಬ್ಬರಿಗೊಬ್ಬರು ಸಮಯ ನೀಡೋದು ಅನಿವಾರ್ಯ. ಇದ್ರಿಂದ ಯಾವುದೇ ಕೆಲಸದಲ್ಲಿ ಫೋಕಸ್ ಸಾಧ್ಯವಾಗೋದಿಲ್ಲ. ವೃತ್ತಿ ಬೆಳವಣಿಗೆ ಹಾಗೂ ವೈಯಕ್ತಿಕ ಬೆಳವಣಿಗೆಗೆ ಇದು ಅಡ್ಡಿಯುಂಟು ಮಾಡುತ್ತದೆ ಎಂದು ಇನ್ನೊಬ್ಬ ವಿದ್ಯಾರ್ಥಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾನೆ. ದಿನದಲ್ಲಿ ಒಂದು ಗಂಟೆಯಾದ್ರೂ ಅವರ ಜೊತೆ ಮಾತನಾಡಬೇಕು, ನಮ್ಮ ಜೀವನದಲ್ಲಿ ನಡೆದ ವಿಷ್ಯವನ್ನೆಲ್ಲ ಅವರ ಜೊತೆ ಹಂಚಿಕೊಳ್ಳಬೇಕು ಅಷ್ಟೇ ಅಲ್ಲ ವಾರಾಂತ್ಯದಲ್ಲಿ ಅವರನ್ನು ಭೇಟಿ ಮಾಡ್ಬೇಕು. ಇದೆಲ್ಲ ಸಮಯ ಹಾಳು ಮಾಡುವ ಕೆಲಸ ಎನ್ನುತ್ತಾರೆ ಕೆಲ ವಿದ್ಯಾರ್ಥಿಗಳು. ವೃತ್ತಿ ಜೀವನದ ಮೇಲೆ ಗಮನ ಹರಿಸಬೇಕು, ನಿರ್ಧಿಷ್ಟ ಗುರಿ ಸಾಧನೆ ಮಾಡಬೇಕು ಎನ್ನುವವರು ಪ್ರೀತಿಯಿಂದ ದೂರವಿರುವುದು ಒಳಿತು ಎನ್ನುತ್ತಾರೆ ಇವರು. 

ಸಿಂಗಲ್ ಆಗಿದ್ರೆ ಹಣ ಉಳಿಯುತ್ತೆ (To Save Money) : ಸಂಬಂಧದಲ್ಲಿರುವಾಗ ಒಬ್ಬರಿಗೊಬ್ಬರು ಗಿಫ್ಟ್ ನೀಡ್ಬೇಕು. ಒಂದಿಷ್ಟು ಅದಕ್ಕೆ ಇದಕ್ಕೆ ಅಂತ ಖರ್ಚಾಗೇ ಆಗುತ್ತೆ. ಅದೇ ಒಂಟಿಯಾಗಿದ್ದರೆ ಅಷ್ಟೂ ಹಣ ಉಳಿಯುತ್ತೆ ಎನ್ನುತ್ತಾರೆ ಕೆಲ ಯುವಕರು. ಒಬ್ಬ ವ್ಯಕ್ತಿಗೆ ಇಷ್ಟೊಂದು ಹಣ ಹಾಳು ಮಾಡುವ ಬದಲು, ಅದನ್ನು ಕೂಡಿಟ್ಟು ಭವಿಷ್ಯದಲ್ಲಿ ಐಷಾರಾಮಿ ವಸ್ತು ಖರೀದಿಗೆ ಬಳಸಿದ್ರೆ ಒಳ್ಳೆಯದು. ಭವಿಷ್ಯ ಭದ್ರವಾಗುತ್ತೆ ಎನ್ನುವವರೂ ಇದ್ದಾರೆ.

ಲಿವ್ ಇನ್ ಸಂಬಂಧ, ಮದುವೆಗೆ ಮುನ್ನ ಮಗು… ಭಾರತದ ಈ ಬುಡಕಟ್ಟು ಜನಾಂಗದಲ್ಲಿ ಎಲ್ಲವೂ ನಡೆಯುತ್ತೆ

ಸ್ವತಂತ್ರ ಹಕ್ಕಿ (Independent Bird) : ಪ್ರೀತಿಯಿಲ್ಲದ ಜೀವನದಲ್ಲಿ ಸ್ವತಂತ್ರ್ಯತೆ ಇರುತ್ತೆ ಎನ್ನುವವರಿದ್ದಾರೆ. ಪ್ರತಿಯೊಂದಕ್ಕೂ ಸಂಗಾತಿ ಒಪ್ಪಿಗೆ ತೆಗೆದುಕೊಳ್ಳುವ ಅಗತ್ಯವಿರೋದಿಲ್ಲ. ಅವರಿಗೆ ಹೇಳಿಯೇ ಕೆಲಸ ಮಾಡಬೇಕಾಗಿಲ್ಲ. ಬೇಕಾದಾಗ, ಬೇಕಾದಲ್ಲಿ ಹೋಗುವ, ಇಷ್ಟದ ಕೆಲಸ ಮಾಡುವ ಅಧಿಕಾರವಿರುತ್ತದೆ. ಸ್ವಚ್ಛಂದ ಹಕ್ಕಿಯಂತೆ ಹಾರಾಟ ನಡೆಸಬಹುದು. ಸಂಗಾತಿಗೆ ಹೇಳಿಲ್ಲ ಎನ್ನುವ ಕಾರಣಕ್ಕೆ ಜಗಳ, ಗಲಾಟೆ ಇಲ್ಲಿ ನಡೆಯೋದಿಲ್ಲ. ಯಾರಿಂದಲೂ ಯಾವುದೇ ನಿರೀಕ್ಷೆ ಇರೋದಿಲ್ಲ. ಬೇರೆಯವರಿಗೆ ನಾವು ಅವಲಂಭಿತರಾಗಿಲ್ಲ ಎಂದಾಗ ದುಃಖವಾಗೋದಿಲ್ಲ. ಸ್ನೇಹಿತರ ಜೊತೆ ಬೇಕಾದಷ್ಟು ಸಮಯ ಕಳೆದ್ರೂ ಪ್ರಶ್ನೆ ಮಾಡುವವರಿರೋದಿಲ್ಲ ಎನ್ನುತ್ತಾರೆ ಯುವಕರು.  

click me!