ಸಲಿಂಗಕಾಮಿ ಸ್ನೇಹಿತೆ ಜೊತೆ ತನ್ನ ಸಲ್ಲಾಪ ನೋಡಿದ ಮಗನನ್ನೇ ಹತ್ಯೆ ಮಾಡಿದ ತಾಯಿ

By Anusha Kb  |  First Published Feb 22, 2024, 12:53 PM IST

ತನ್ನ ಸಲಿಂಗಕಾಮಿ ಸ್ನೇಹಿತೆಯ ಜೊತೆ ಸರಸದಲ್ಲಿ ತೊಡಗಿದ್ದನ್ನು ನೋಡಿದ ಮಗನನ್ನು ತಾಯಿಯೇ ಹತ್ಯೆ ಮಾಡಿದ ಅನಾಹುತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.  ಹೀಗೆ ಮಗನನ್ನೇ ಹತ್ಯೆಗೈದ ಮಹಿಳೆಯನ್ನು ಶಾಂತಾ ಶರ್ಮಾ ಎಂದು ಗುರುತಿಸಲಾಗಿದೆ.


ಹೂಗ್ಲಿ: ತನ್ನ ಸಲಿಂಗಕಾಮಿ ಸ್ನೇಹಿತೆಯ ಜೊತೆ ಸರಸದಲ್ಲಿ ತೊಡಗಿದ್ದನ್ನು ನೋಡಿದ ಮಗನನ್ನು ತಾಯಿಯೇ ಹತ್ಯೆ ಮಾಡಿದ ಅನಾಹುತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.  ಹೀಗೆ ಮಗನನ್ನೇ ಹತ್ಯೆಗೈದ ಮಹಿಳೆಯನ್ನು ಶಾಂತಾ ಶರ್ಮಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಸಲಿಂಗಕಾಮಿ ಸ್ನೇಹಿತೆ ಇಶ್ರತ್ ಪರ್ವೀನ್ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಮಗನಿಗೆ ಸಿಕ್ಕಿಬಿದ್ದಿದ್ದಾಳೆ. ಇದಾದ ನಂತರ ಇಬ್ಬರೂ ಸೇರಿ ಹೆತ್ತ ಮಗನನ್ನೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಹತ್ಯೆಗೀಡಾದ 10 ವರ್ಷದ ಬಾಲಕನ ತಲೆಯಲ್ಲಿ  ಹಲವು ಗಂಭೀರ ಗಾಯಗಳಾಗಿದ್ದು, ಕೈಗಳನ್ನು ಕತ್ತರಿಸಲಾಗಿದೆ.  ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಶಾಂತಾ ಶರ್ಮಾ, ಪರ್ವಿನ್ ಜೊತೆ ಆಕೆಯ ಮದ್ವೆಗೂ ಮೊದಲೇ ಸಂಬಂಧ ಹೊಂದಿದ್ದಳು. ಈ ವಿಚಾರ ಆಕೆಯ 10 ವರ್ಷದ ಮಗನಿಗೆ ಆಕಸ್ಮಿಕವಾಗಿ ತಿಳಿದು ಹೋಗಿತ್ತು. ಇದರಿಂದ ಇದು ಬೇರೆಯವರಿಗೂ ಎಲ್ಲಿ ತಿಳಿದು ಹೋಗುವುದೋ ಎಂದು ಭಯಗೊಂಡ ಶಾಂತಾ ಶರ್ಮಾ ತಮ್ಮ ಈ ಸಂಬಂಧವನ್ನು ಮುಚ್ಚಿಡುವ ಪ್ರಯತ್ನವಾಗಿ ತನ್ನ ಸಲಿಂಗಕಾಮಿ ಸಂಗಾತಿ ಪರ್ವೀನ್ ಜೊತೆ ಸೇರಿ ತನ್ನ ಮಗನ ಹತ್ಯೆಗೆ ಮುಹೂರ್ತವಿಟ್ಟಿದ್ದಾಳೆ. 

Tap to resize

Latest Videos

ಆದರೆ ವಿಚಿತ್ರವೆಂದರೆ ಶಾಂತಾಳ ಗಂಡನಿಗೂ ಪತ್ನಿಯ ಈ ಅನೈತಿಕ ಸಲಿಂಗಾಕಾಮ ಸಂಬಂಧದ ಬಗ್ಗೆ  ತಿಳಿದಿತ್ತು.  ಆದರೆ ಸಮಾಜದಲ್ಲಿ ಎಲ್ಲಿ ತನ್ನ ಘನತೆಗೆ ಕುಂದು ಬರುವುದೋ ಎಂದು ಭಯಗೊಂಡ ಆತ ಈ ಬಗ್ಗೆ ಮೌನಕ್ಕೆ ಜಾರಿದ್ದ. 

ಆರೋಪಿಗಳ ಸುಳಿವು ನೀಡಿದ ಸಿಸಿಟಿವಿ
ಇನ್ನು ಬಾಲಕನ ಹತ್ಯೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಯ ಭಾಗವಾಗಿ ಸಿಸಿಟಿವಿಯ ಪರಿಶೀಲನೆಗೆ ಮಾಡಿದ್ದರು, ಜೊತೆಗೆ ಮೊಬೈಲ್ ಲೋಕೇಷನ್‌ಗಳನ್ನು ಪರೀಕ್ಷಿಸಿದ್ದರು. ಈ ವೇಳೆ ಅಪರಾಧ ಸ್ಥಳದಲ್ಲಿ ಇವರಿಬ್ಬರ ಮೊಬೈಲ್ ಲೋಕೇಷನ್ ಇರುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಹಿಡಿದು ತದುಕಿದಾಗ ಬಾಲಕನ ಕೊಲೆಯನ್ನು ತಾವೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. 

ಹಾಗೆಯೇ ಉತ್ತರಪ್ರದೇಶದ ಲಖೀಂಪುರ ಕೇರಿಯಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ ಸಲಿಂಗಸ್ನೇಹ ಹೊಂದಿದ್ದ 27 ವರ್ಷದ ಮಹಿಳೆಯೊರ್ವನನ್ನು ಮಂತ್ರವಾದಿಯೋರ್ವ ಹತ್ಯೆ ಮಾಡಿದ್ದಾನೆ. ಶಹಜಾನ್‌ಪುರದ ಈ ಮಹಿಳೆ ತಾನು ಕಾಲೇಜಿನಲ್ಲಿರುವಾಗ ಭೇಟಿಯಾದ ಯುವತಿಯೊಂದಿಗೆ ಸಂಬಂಧ ಹೊಂದಿದ್ದಳು. ಈಕೆಗೆ ಲಿಂಗ ಬದಲಿಸುವ ಭರವಸೆ ನೀಡಿದ ಮಂತ್ರವಾದಿ ಬಳಿಕ ಆಕೆಯನ್ನು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. 
 

click me!