ನಾವು ಸೇವನೆ ಮಾಡುವ ಆಹಾರ ನಮ್ಮ ಆರೋಗ್ಯದ ಜೊತೆ ಸೆಕ್ಸ್ ಲೈಫ್ ನಿರ್ಧರಿಸುತ್ತೆ. ಏನ್ ತಿಂದ್ರೂ ಲೈಂಗಿಕ ಜೀವನಕ್ಕೆ ಹಾನಿಯಾಗಲ್ಲ ಎಂಬ ಭ್ರಮೆಯಲ್ಲಿ ಇರ್ಬೇಡಿ. ನಿಮ್ಮ ಆಹಾರ ನಿಮ್ಮ ಕಾಮಾಸಕ್ತಿ ಕಡಿಮೆ ಮಾಡ್ಬಹುದು.
ಆರೋಗ್ಯಕರ ಲೈಂಗಿಕ ಜೀವನಕ್ಕೆ ಸ್ವಚ್ಛತೆ ಎಷ್ಟು ಮುಖ್ಯವೋ ಆಹಾರ ಕೂಡ ಅಷ್ಟೇ ಮುಖ್ಯವಾಗುತ್ತದೆ. ಆರೋಗ್ಯಕರ, ಆನಂದದಾಯಕ ಲೈಂಗಿಕ ಜೀವನ ನಿಮ್ಮದಾಗಬೇಕು ಎಂದಾದ್ರೆ ನೀವು ಸೇವನೆ ಮಾಡುವ ಆಹಾರದ ಮೇಲೂ ಕಾಳಜಿ ವಹಿಸಬೇಕು. ಕೆಲವೊಂದು ಆಹಾರಗಳು ಹೊಟ್ಟೆ ಉಬ್ಬರ, ಅಜೀರ್ಣ, ತೇಗು ಸೇರಿದಂತೆ ಹೊಟ್ಟೆ ಉರಿಯಂತಹ ಸಮಸ್ಯೆಯನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದು ಕಷ್ಟವಾಗುತ್ತದೆ. ಕ್ರಮೇಣ ಲೈಂಗಿಕ ಬಯಕೆ ಕಡಿಮೆ ಆಗುತ್ತದೆ. ಸೆಕ್ಸ್ ದಂಪತಿಯನ್ನು ಮತ್ತಷ್ಟು ಹತ್ತಿರಕ್ಕೆ ತರುವ ಮಾರ್ಗವಾಗಿದೆ. ದಾಂಪತ್ಯದಲ್ಲಿ ಸಂಭೋಗ ಕಡಿಮೆ ಆದಂತೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಶುರುವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿನಾಕಾರಣ ಮುನಿಸು, ಮಾನಸಿಕ ಕಿರಿಕಿರಿ ಕಾಡುವುದಿದೆ. ಸೆಕ್ಸ್ ಮಾನಸಿಕ ಆರೋಗ್ಯದ ಜೊತೆ ದೈಹಿಕ ಆರೋಗ್ಯಕ್ಕೂ ಅಗತ್ಯವಾಗಿರುವ ಕಾರಣ ನಿಯಮಿತ ಸೆಕ್ಸ್ ಅತ್ಯಗತ್ಯ. ಆದ್ರೆ ನೀವು ಸೇವನೆ ಮಾಡುವ ಆಹಾರ ನಿಮ್ಮ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡ್ತಾ ಬಂದ್ರೆ ಇಬ್ಬರ ಮಧ್ಯೆ ಅಂತರ ಹೆಚ್ಚಾಗುತ್ತದೆ. ಸಂತೋಷಕರ ಲೈಂಗಿಕ ಜೀವನ ನಿಮ್ಮದಾಗಬೇಕು ಎಂದಾದ್ರೆ ಲಘು ಆಹಾರಕ್ಕೆ ಆದ್ಯತೆ ನೀಡಬೇಕು. ಕೆಲ ಆಹಾರದಿಂದ ನೀವು ದೂರವಿರುವುದು ಒಳ್ಳೆಯದು.
ಪೋಷಕಾಂಶ (Nutrient) ಗಳ ಕೊರತೆಯಿಂದಾಗಿ ಹೆಚ್ಚಿನ ಜನರು ಬಂಜೆತನ ಮತ್ತು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆ ಹೇಳಿದೆ. ಸ್ಯಾಚುರೇಟೆಡ್ ಕೊಬ್ಬು, ಟ್ರಾನ್ಸ್ ಕೊಬ್ಬು (fat) ಮತ್ತು ಕೊಲೆಸ್ಟ್ರಾಲ್ ನಿಂದ ಸಮೃದ್ಧವಾಗಿರುವ ಆಹಾರಗಳು ಹೃದಯ ಕಾಯಿಲೆಗಳಿಗೆ ಕಾರಣವಾಗುತ್ತವೆ. ಇದು ಅಪಧಮನಿಕಾಠಿಣ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಲೈಂಗಿಕ (sexual) ಅಂಗಗಳಲ್ಲಿ ರಕ್ತ ಪರಿಚಲನೆಯು ನಿಯಮಿತವಾಗಿ ನಡೆಯುವುದಿಲ್ಲ. ಹೀಗಾದಾಗ ಕಾಮಾಸಕ್ತಿ ಕಡಿಮೆ ಆಗುತ್ತದೆ.
undefined
ನಟ ಜಾಕಿ ಭಗ್ನಾನಿ ಕೈ ಹಿಡಿದ ಗಿಲ್ಲಿ ಬೆಡಗಿ: ಗೋವಾದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ರಾಕುಲ್ ಪ್ರೀತ್
ಲೈಂಗಿಕ ಕ್ರಿಯೆಯ ಮೊದಲು ನೀವು ಮಸಾಲೆ ಆಹಾರ ಸೇವನೆ ಮಾಡಬಾರದು. ಇದು ಆಸಿಡಿಟಿಯನ್ನು ಹೆಚ್ಚಿಸುತ್ತದೆ. ಹೊಟ್ಟೆಯಲ್ಲಿ ನೋವು, ಎದೆಯುರಿಯಂತಹ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಇದ್ರಿಂದ ನಿಮ್ಮ ಕಾಮಾಸಕ್ತಿ ಕಡಿಮೆ ಆಗುತ್ತದೆ. ಲೈಂಗಿಕ ಬಯಕೆ ಕಡಿಮೆ ಆಗ್ತಿದೆ ಎನ್ನುವವರು ಮಸಾಲೆ ಆಹಾರದಿಂದ ದೂರ ಇರುವುದು ಒಳ್ಳೆಯದು.
ಪುದೀನಾ ಆರೋಗ್ಯಕ್ಕೆ ಒಳ್ಳೆಯದು. ಇದು ಬಾಯಿ ವಾಸನೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿಯೇ ಕೆಲವರು ಸೆಕ್ಸ್ ಮೊದಲು ಪುದೀನಾ ಸೇವನೆ ಮಾಡ್ತಾರೆ. ತಜ್ಞರ ಪ್ರಕಾರ ಇದು ಒಳ್ಳೆಯದಲ್ಲ. ಪುದೀನಾ ಕಾಮಾಸಕ್ತಿ ಮೇಲೆ ಪರಿಣಾಮ ಬೀರುತ್ತದೆ. ಇದು ಲೈಂಗಿಕ ಬಯಕೆ ಕಡಿಮೆ ಮಾಡುತ್ತದೆ ಎಂಬುದು 2010ರಲ್ಲಿ ನಡೆದ ಸಂಶೋಧನೆಯಿಂದ ಬಹಿರಂಗವಾಗಿದೆ. ಪುದೀನಾ ಟೀ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಸೆಕ್ಸ್‌ಗೆ ಮೊದಲು ಪಿಷ್ಟಯುಕ್ತ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬಾರದು. ಇದು ದೇಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಪ್ರತಿ ನಿತ್ಯ ಮದ್ಯ ಸೇವನೆ ಮೆಲಟೋನಿನ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾರ್ಮೋನುಗಳ ಅಸಮತೋಲನವು ಕಾಮಾಸಕ್ತಿಯ ಮೇಲೆ ಪರಿಣಾಮ ಬೀರುತ್ತದೆ.
ಆಲಿಯಾರಿಂದ ಇಮೇಲ್ ಮೂಲಕ ಮಗಳಿಗೆ ಭಾರತೀಯ ಗ್ರಂಥಗಳ ನೀತಿ ಪಾಠ!
ಲೈಂಗಿಕ ಕ್ರಿಯೆ ಮೊದಲು ಹೆಚ್ಚು ಕಾಫಿ, ಟೀ ಇಲ್ಲವೆ ದ್ರವ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು. ಇದು ಪದೇ ಪದೇ ಮೂತ್ರ ವಿಸರ್ಜನೆಗೆ ನಿಮ್ಮನ್ನು ಪ್ರೇರೇಪಿಸುತ್ತದೆ. ಇದ್ರಿಂದ ಲೈಂಗಿಕ ಆನಂದ ಪಡೆಯಲು ಸಾಧ್ಯವಾಗೋದಿಲ್ಲ. ಕಾರ್ಬೊನೇಟೆಡ್ ಪಾನೀಯಗಳ ಸೇವನೆಯಿಂದ ಹೊಟ್ಟಡ ಉಬ್ಬರ ಸಮಸ್ಯೆ ನಿಮ್ಮನ್ನು ಕಾಡುವುದಿದೆ.
ಲೈಂಗಿಕ ಕ್ರಿಯೆಯಲ್ಲಿ (Sexual Intercourse) ಯಾವುದೇ ಸಮಸ್ಯೆ ಆಗಬಾರದು, ಸಂಪೂರ್ಣ ಆನಂದ ಸಿಗಬೇಕು ಎನ್ನುವವರು ಸೆಕ್ಸ್ ಮುನ್ನ ಪ್ರೋಟೀನ್ ಭರಿತ ಆಹಾರವನ್ನು (Protein Rich Food) ಸೇವಿಸಿ. ಬಾದಾಮಿ (Almond) ಮತ್ತು ಹಾಲಿನ ಸೇವನೆಯು (Drinking Milk) ಲೈಂಗಿಕ ಜೀವನವನ್ನು ಶಕ್ತಿಯುತಗೊಳಿಸುವುದಲ್ಲದೆ ಲೈಂಗಿಕ ಜೀವನದ ಸಂತೋಷಕ್ಕೆ ಇದು ಕಾರಣವಾಗುತ್ತದೆ.