Vishnu Solanki: ಮಗಳ ಸಾವು, ಅಪ್ಪನ ಸಾವುಗಳ ನಡುವೆಯೂ ಶತಕ ಸಿಡಿಸಿದ ಕ್ರಿಕೆಟ್‌ ಆಟಗಾರ!

By Suvarna News  |  First Published Feb 28, 2022, 5:47 PM IST

ರಣಜಿ ಆಟಗಾರ ವಿಷ್ಣು ಸೋಲಂಕಿ ತಮ್ಮ ಮಗಳ ಸಾವಿನ ದುಃಖದ ನಡುವೆಯೇ ಶತಕ ಬಾರಿಸಿ ದಿಟ್ಟತೆ, ತಂಡಪ್ರಜ್ಞೆ ಮೆರೆದರು. ಇದಾಗಿ ಮರುದಿನವೇ ತಂದೆಯ ಸಾವಿನ ಸುದ್ದಿ!
 


ವಿಷ್ಣು ಸೋಲಂಕಿ (Vishnu Solanki) ಎಂಬ ಕ್ರಿಕೆಟ್ (Cricket) ಆಟಗಾರನ ದೃಢತೆ, ಸಮಯಪ್ರಜ್ಞೆ, ದುಃಖವನ್ನು ತಾಳಿಕೊಂಡು ತಂಡದ ಆಸ್ತಿಯಾಗಿ ನಿಲ್ಲುವ ಗುಣ ಈಗ ಎಲ್ಲೆಡೆ ವೈರಲ್ (Viral) ಆಗುತ್ತಿದೆ. ಇವರು ಬರೋಡಾದ ರಣಜಿ (Ranji) ಕ್ರಿಕೆಟ್ ತಂಡದಲ್ಲಿದ್ದಾರೆ. ಈ ಕ್ರಿಕೆಟರ್ ವಿರಾಟ್ ಕೊಹ್ಲಿಯಂತೆ ಪ್ರಸಿದ್ಧ ಆಟಗಾರರಲ್ಲವಾದರೂ, ಅವರ ದೃಢತೆ ಎಲ್ಲರ ಮನೆ ಗೆದ್ದಿದೆ. 

ವಿಷ್ಣು ಸೋಲಂಕಿ ಅವರ ಮಗಳು ಈಗ ಬದುಕಿಲ್ಲ. ಎರಡು ವಾರದ ಹಿಂದೆಯಷ್ಟೇ ಅವರ ಪತ್ನಿ, ಮುದ್ದಾದ ಹೆಣ್ಣು ಮಗುವಿಗೆ (Daughter) ಜನ್ಮ ನೀಡಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಆ ಮಗು ಸಾವನ್ನಪ್ಪಿತು. ಮಗಳ ಸಾವು ವಿಷ್ಣುವನ್ನು ಕಂಗೆಡಿಸಿದ್ದು ನಿಜ. ಮಗುವನ್ನು ನೋಡಲೆಂದು ಅವರು ತಮ್ಮ ಮನೆಗೆ ಹೋದರು. ಮನೆಯವರ ಹಾಗೂ ಪತ್ನಿಯ ದುಃಖದಲ್ಲಿ ಭಾಗಿಯಾದರು. ಮಗು ಕಳೆದುಕೊಂಡ ತಂದೆ- ತಾಯಿಯ ನೋವಿಗೆ ಬೇರೆ ಹೋಲಿಕೆಯೇ ಇಲ್ಲ. ಇಂಥ ನೋವಿನ ನಡುವೆಯೂ ಅವರನ್ನು ಕ್ರಿಕೆಟ್‌ ಆಟದ ಮೇಲಿದ್ದ ಪ್ಯಾಶನ್, ತಂಡದ ಪರ ಆಡಬೇಕಾದ ಬದ್ಧತೆ ಕೈಬೀಸಿ ಕರೆಯಿತು. ಅವರು ರಣಜಿಯಲ್ಲಿ ಭಾಗಿಯಾಗಲು ತಂಡದೊಂದಿಗೆ ಸಿದ್ಧರಾದರು. ತಂಡ ಸಂಕಷ್ಟದಲ್ಲಿದ್ದಾಗ ನೆರವಾದರು. ಚಂಡೀಗಢ ತಂಡದ ವಿರುದ್ಧದ ರಣಜಿ ಟ್ರೋಫಿ ( Ranji Trophy) ಪಂದ್ಯದಲ್ಲಿ ಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದರು. ತಂಡದ ಪರ ಉತ್ತಮ ಆಟ ಪ್ರದರ್ಶಿಸಿ ಶತಕ ಬಾರಿಸಿದ್ದನ್ನು ನೋಡಿದ ಬರೋಡಾ ಕ್ರಿಕೆಟ್ ಸಂಸ್ಥೆಯ ಸಿಇಒ ಅವರನ್ನು ''ರಿಯಲ್ ಹೀರೋ'' ಎಂದು ಬಣ್ಣಿಸಿದ್ದಾರೆ. ವಿಷ್ಣು ಸೋಲಂಕಿ ಅವರ ಈ ದಿಟ್ಟ ಇನ್ನಿಂಗ್ಸ್‌ಗೆ ಎದುರಾಳಿ ತಂಡದ ಆಟಗಾರರು ಸಹ ಸೆಲ್ಯೂಟ್ ಹೊಡೆದಿದ್ದಾರೆ. 

Tap to resize

Latest Videos

undefined

ರಣಜಿ ಟ್ರೋಫಿ ಎಲೈಟ್ ಗುಂಪಿನ ಬಿ ಪಂದ್ಯದಲ್ಲಿ ಚಂಡೀಗಢ ವಿರುದ್ಧ ವಿಷ್ಣು ಸೋಲಂಕಿ 12 ಬೌಂಡರಿಗಳ ಸಹಾಯದಿಂದ 104 ರನ್ ಗಳಿಸಿದರು. ಸೌರಾಷ್ಟ್ರ ಪರ ರಣಜಿ ಟ್ರೋಫಿ ಆಡುತ್ತಿರುವ ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್ ಸೋಶಿಯಲ್ ಮೀಡಿಯಾದಲ್ಲಿ ಸೋಲುಂಕಿ ಶತಕಕ್ಕೆ ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ''ವಿಷ್ಣು ಮತ್ತು ಅವರ ಕುಟುಂಬಕ್ಕೆ ನಾನು ನಮಸ್ಕರಿಸುತ್ತೇನೆ. ಅವರ ಬ್ಯಾಟ್‌ನಿಂದ ಇನ್ನೂ ಹೆಚ್ಚಿನ ಶತಕಗಳು ಬರಲಿ ಎಂದು ನಾನು ಬಯಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

Bengaluru ಕುರಿತ ಈ ವಿಷಯಗಳು ಸ್ವತಃ ಬೆಂಗಳೂರಿಗರಿಗೇ ಗೊತ್ತಿಲ್ಲ!

ಇದು ನಡೆದು ಒಂದೇ ವಾರದಲ್ಲಿ ವಿಷ್ಣು ಅವರ ತಂದೆಯೂ (Father) ಅಗಲಿದ್ದಾರೆ. ಭಾನುವಾರ ಚಂಡೀಗಢ ವಿರುದ್ಧಧ ಪಂದ್ಯದ ಬಳಿಕ ತಮಗೆ ಈ ವಿಚಾರ ಅರಿವಿಗೆ ಬಂತು ಎಂದು ಬರೋಡಾ ತಂಡದ ನಾಯಕ ಕೇದಾರ್ ಧೇವಧರ್ ಈ ಬಗ್ಗೆ ವಿವರಿಸಿದ್ದಾರೆ. 'ಆತನ ತಂದೆ ಅಗಲಿದ್ದಾರೆ ಎಂಬ ವಿಚಾರ ನಮಗೆ ತಡವಾಗಿ ತಿಳಿಯಿತು. ಡ್ರೆಸ್ಸಿಂಗ್‌ರೂಮ್‌ನ ಮೂಲೆಯಲ್ಲಿ ಕುಳಿತು ವಿ‍ಷ್ಣು ತಂದೆಯ ಅಂತಿಮ ವಿಧಿವಿಧಾನವನ್ನು ವಿಡಿಯೋ ಕಾಲ್ ಮೂಲಕ ನೋಡುತ್ತಿದ್ದರು. ಅದು ನಿಜಕ್ಕೂ ಆತನ ಪಾಲಿಗೆ ಅತ್ಯಂತ ಕಠಿಣ ಕ್ಷಣ. ಆದರೆ ಇಂಥಾ ಸಂದರ್ಭದಲ್ಲಿಯೂ ಆತ ತೋರಿದ ಧೈರ್ಯಕ್ಕೆ ನಮ್ಮಲ್ಲಿ ಪದಗಳಿಲ್ಲ' ಎಂದು ಬರೋಡಾ ತಂಡದ ನಾಯಕ ಕೇದಾರ್ ದೇವಧರ್ ಪ್ರತಿಕ್ರಿಯೆ ನೀಡಿದ್ದಾರೆ.

Russia Ukraine Crisis: ಪ್ರಾಣ ಉಳಿಸಿಕೊಳ್ಳುವ ಪಲಾಯನದಲ್ಲಿ ಪ್ರಾಣಿಗಳನ್ನು ಮರೆಯದ ಉಕ್ರೇನಿಯನ್ನರು

ಬರೋಡಾ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಅಜಿತ್ ಲೀಲೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು 'ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನಾವು ತಂಡೆದ ಮ್ಯಾನೇಜರ್‌ಗೆ ಮಾಹಿತಿ ನೀಡಿ ಸೋಲಂಕಿ ಅವರಿಗೆ ಮನೆಗೆ ತೆರಳಲು ಅವಕಾಶವನ್ನು ನೀಡಿದ್ದೆವು. ಆದರೆ ಅವರು ತಂಡದಲ್ಲಿಯೇ ಮುಂದುವರಿಯಲು ಬಯಸುವುದಾಗಿ ತಿಳಿಸಿದ್ದರು. ಇದು ತಂಡದ ಮೇಲೆ ಹಾಗೂ ಆಟದ ಮೇಲೆ ಅವರಿಗಿರುವ ಬದ್ಧತೆಯನ್ನು ವ್ಯಕ್ತಪಡಿಸುತ್ತದೆ' ಎಂದು ಹೇಳಿದರು. ವಿಷ್ಣು ಸೋಲಂಕಿ ಅವರ ತಂದೆ ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ತೀರಿಕೊಂಡ ವಿಚಾರ ಗೊತ್ತಾದಾಗ, ವಿಷ್ಣು ಪ್ರಯತ್ನಪಟ್ಟರೂ ಸಮಯಕ್ಕೆ ಸರಿಯಾಗಿ ಮನೆಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಆದರೆ ದುಃಖದ ಹೊರೆಯನ್ನು ಹೊತ್ತುಕೊಂಡು ಕ್ರಿಕೆಟ್ ಅನ್ನು ಬದ್ಧತೆಯಿಂದ ಆಡಿದ್ದಕ್ಕೆ ಅವರಿಗೆ ಹ್ಯಾಟ್ಸ್ ಆಫ್ ಎಂದು ಬರೋಡಾ ತಂಡದ ನಾಯಕ ಕೇದಾರ್ ದೇವಧರ್ ಪ್ರತಿಕ್ರಿಯೆ ನೀಡಿದ್ದಾರೆ.
 

click me!