
ಭರವಸೆ (Promise) ಮತ್ತು ಪ್ರೀತಿ (Love) ಜೀವನದಲ್ಲಿ ಅದರಲ್ಲೂ ದಾಂಪತ್ಯ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪ್ರೀತಿ,ವಿಶ್ವಾಸದಿಂದ ಬಾಳ್ವೆ ಮಾಡ್ತೇವೆಂದು ಪರಸ್ಪರ ಆಶ್ವಾಸನೆ ನೀಡಿ ಜೀವನ (Life) ಶುರು ಮಾಡಿರುತ್ತಾರೆ. ಅದರಲ್ಲಿ ಒಬ್ಬರು ದಾರಿ ತಪ್ಪಿದ್ರೂ ಸಂಸಾರ ಹಳ್ಳ ಹಿಡಿಯುತ್ತದೆ. ಆರಂಭದಲ್ಲಿ ತುಂಬಾ ಪ್ರೀತಿಸುವ ಜೋಡಿ ದಿನ ಕಳೆದಂತೆ ದೂರ ಸರಿಯಲು ಶುರು ಮಾಡ್ತಾರೆ. ಇಬ್ಬರ ಮಧ್ಯೆ ಅಂತರ ಹೆಚ್ಚಾಗುತ್ತದೆ. ದಾಂಪತ್ಯದಲ್ಲಿ ಮಾತ್ರವಲ್ಲ ಪ್ರೀತಿಸುವ ಜೋಡಿಯ ಮಧ್ಯೆಯೂ ಇದೂ ಕಾಣಿಸಿಕೊಳ್ಳುತ್ತದೆ. ಅತಿಯಾಗಿ ಪ್ರೀತಿಸುವ ವ್ಯಕ್ತಿ ಮೋಸ ಮಾಡ್ತಿದ್ದಾನೆ ಎಂಬುದು ಗೊತ್ತಾದ್ರೆ ನೆಲ ಕುಸಿದ ಅನುಭವವಾಗುತ್ತದೆ. ಮಹಿಳೆಯೊಬ್ಬಳು ತನ್ನ ಸಂಗಾತಿ ಮಾಡಿದ ಮೋಸವನ್ನು ಎಲ್ಲರ ಮುಂದಿಟ್ಟಿದ್ದಾಳೆ. ಹನಿಮೂನ್ ಸಂದರ್ಭದಲ್ಲಿ ಆಕೆ ಜೀವನದಲ್ಲಾದ ದೊಡ್ಡ ಬದಲಾವಣೆ ಏನು ಎಂಬುದನ್ನು ನಾವಿಂದು ಹೇಳ್ತೇವೆ.
ಐದು ವರ್ಷದ ಪ್ರೀತಿಗೆ ಮದುವೆ ಬಂಧ : ಮಹಿಳೆ ಐದು ವರ್ಷಗಳಿಂದ ಮಹಿಳೆ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳಂತೆ. ಇಬ್ಬರು ಬಿಟ್ಟಿರದಷ್ಟು ಪ್ರೀತಿಸುತ್ತಿದ್ದರಂತೆ. ಒಟ್ಟಿಗೆ ಜೀವನ ಮಾಡಲು ಬಯಸಿದ ಅವರು ಮದುವೆಯಾಗುವ ಮಹತ್ವದ ನಿರ್ಧಾರ ಕೈಗೊಂಡಿದ್ದರಂತೆ. ಇದಕ್ಕೆ ಆಕೆಯ ಪ್ರೇಮಿ ಕೂಡ ಒಪ್ಪಿಗೆ ನೀಡಿದ್ದನಂತೆ. ಎಷ್ಟು ವರ್ಷಗಳಿಂದ ಜೊತೆಗಿರಲಿ ಇಲ್ಲ ಎಷ್ಟು ವರ್ಷದಿಂದ ಪ್ರೀತಿಸುತ್ತಿರಲಿ ಮದುವೆ ಎಂಬುದು ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಮದುವೆ ಎಂದಾಗ ಪ್ರತಿಯೊಬ್ಬರೂ ಸ್ವಲ್ಪ ಆತಂಕಕ್ಕೊಳಗಾಗುತ್ತಾರೆ. ಮುಂದೆ ಹೇಗೆ ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತವೆ. ಐದು ವರ್ಷಗಳಿಂದ ಪ್ರೀತಿಸುತ್ತಿದ್ದರೂ ಇವರಿಬ್ಬರ ಮಧ್ಯೆ ಅದೇ ಆತಂಕವಿತ್ತಂತೆ.
SAMMY GRINER: ಈ ವೈರಲ್ ಮೀಮ್ ಬಾಯ್ ಯಾರು ಗೊತ್ತೇ?
ಕೆಲಸದ ಒತ್ತಡದಲ್ಲಿ ಪ್ರೇಮಿ : ಕೆಲ ದಿನಗಳ ಹಿಂದಷ್ಟೆ ಹೊಸ ಕೆಲಸ ಶುರು ಮಾಡಿದ್ದ ಪ್ರೇಮಿ ಸದಾ ಟೆನ್ಷನ್ ನಲ್ಲಿರುತ್ತಿದ್ದನಂತೆ. ಇಡೀ ದಿನ ಕೆಲಸದ ಬಗ್ಗೆ ಆಲೋಚನೆ ಮಾಡ್ತಿದ್ದ ಪ್ರೇಮಿ, ರಾತ್ರಿ ತಡವಾಗಿ ಬರ್ತಿದ್ದನಂತೆ. ಆದ್ರೆ ವಾರಾಂತ್ಯದಲ್ಲಿ ಮದುವೆ ಶಾಪಿಂಗ್ ಗೆ ನೆರವಾಗುತ್ತಿದ್ದನಂತೆ. ಎಂದಿಗೂ ಆತನ ಮುಖದಲ್ಲಿ ಮದುವೆ ಕಳೆಯಾಗ್ಲಿ, ಖುಷಿಯಾಗ್ಲಿ ಕಾಣಿಸಿರಲಿಲ್ಲವಂತೆ. ಮದುವೆ ಹಾಗೂ ಹೊಸ ಕೆಲಸದ ಆತಂಕ ಆತನಲ್ಲಿದೆ ಎಂದು ಮಹಿಳೆ ಸುಮ್ಮನಾಗಿದ್ದಳಂತೆ. ನಿಗದಿಯಂತೆ ಮದುವೆ ಕಾರ್ಯ ಮುಗಿದಿತ್ತಂತೆ. ವಿವಾಹ ಸಮಾರಂಭ ಮುಗಿದ್ರೂ ಪತಿಯ ಟೆನ್ಷನ್ ಕಡಿಮೆಯಾಗಿರಲಿಲ್ಲವಂತೆ.
ಹನಿಮೂನ್ ನಲ್ಲೂ ಒಂದಾಗದ ಜೋಡಿ : ಹೊಸ ಕೆಲಸ ಪತಿಯ ಚಿಂತೆ ಹೆಚ್ಚಿಸಿದೆ ಎಂದುಕೊಂಡ ಮಹಿಳೆ ಹನಿಮೂನ್ ಪ್ಲಾನ್ ಮಾಡಿದ್ದಳಂತೆ. ಮದುವೆಯಾದ 6 ತಿಂಗಳ ನಂತ್ರ ಹನಿಮೂನ್ ಗೆ ಹೊರಟಿದ್ದರಂತೆ. ಮದುವೆಯಲ್ಲಿ ಸೆಪ್ಪೆ ಮುಖ ಹಾಕಿದ್ದ ಪತಿ ಹನಿಮೂನ್ ನಲ್ಲಿ ಚುರುಕಾಗಿರ್ತಾನೆಂದು ಮಹಿಳೆ ಭಾವಿಸಿದ್ದಳಂತೆ. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಮಹಿಳೆ ಸುಂದರವಾಗಿ ರೆಡಿಯಾದ್ರೆ ಖುಷಿ ಪಡ್ತಿದ್ದ ವ್ಯಕ್ತಿ ಆಕೆ ಡ್ರೆಸ್ ಗೆ ಪ್ರತಿಕ್ರಿಯೆ ನೀಡಲಿಲ್ಲವಂತೆ. ಹನಿಮೂನ್ ಗೆ ಬಂದ್ರೂ ಹೊಟೇಲ್ ನಲ್ಲಿ ಸಾಕಷ್ಟು ಸಮಯ ಕಳೆದ ಅವರ ಮಧ್ಯೆ ಶಾರೀರಿಕ ಸಂಬಂಧ ಬೆಳೆಯಲಿಲ್ಲವಂತೆ. ಕೋಣೆಯಲ್ಲಿಯೇ ಬಂಧಿಯಾಗಿರ್ತಿದ್ದ ಪತಿ ಬಗ್ಗೆ ಆಗ ಪತ್ನಿಗೆ ಅನುಮಾನ ಶುರುವಾಗಿದೆ.
ಪಾಶವಾಯ್ತು ಜಿಮ್ ನಲ್ಲಿ ಶುರುವಾದ Extra Marital Affair
ಮೇಲ್ ನಲ್ಲಿತ್ತು ರಹಸ್ಯ : ಒಂದು ದಿನ ಮಹಿಳೆ ಪತಿಯ ಫೋನ್ ಚೆಕ್ ಮಾಡಲು ಮುಂದಾಗಿದ್ದಾಳೆ. ಪತಿ ಯಾವ ಸಮಸ್ಯೆ ಎದುರಿಸುತ್ತಿದ್ದಾನೆ? ಸ್ನೇಹಿತರ ಬಳಿ ಇದನ್ನು ಹೇಳಿಕೊಂಡಿರಬಹುದು ಎಂದುಕೊಂಡ ಮಹಿಳೆ ಫೋನ್ ಚೆಕ್ ಮಾಡಿದ್ದಾಳೆ. ಆದ್ರೆ ಫೋನ್ ನಲ್ಲಿ ಯಾವುದೇ ಮಾಹಿತಿ ಸಿಗಲಿಲ್ಲ. ಮೇಲ್ ನಲ್ಲಿ ಮಹಿಳೆಯೊಬ್ಬಳ ಸಂದೇಶ ಕಾಣಿಸಿದೆ. ಅದ್ರಲ್ಲಿ ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆಂದು ಬರೆಯಲಾಗಿತ್ತಂತೆ. ಆಕೆಯ ಇನ್ನೊಂದಿಷ್ಟು ಮೇಲ್ ಚೆಕ್ ಮಾಡಿದ ಮಹಿಳೆಗೆ ಶಾಕ್ ಆಗಿದೆ. ತಕ್ಷಣ ಮುಂಬೈಗೆ ವಿಮಾನ ಬುಕ್ ಮಾಡಿ ಹೊರಟ ಮಹಿಳೆ, ನಿಮ್ಮ ಅಕ್ರಮ ಸಂಬಂಧ ನನಗೆ ತಿಳಿದಿದೆ ಎಂದಿದ್ದಾಳೆ. ಸಾಕಷ್ಟು ಬಾರಿ ಪತಿ ಕ್ಷಮೆ ಕೇಳಿದ್ದಾನಂತೆ. ಆದ್ರೆ ಮಹಿಳೆ ವಿಚ್ಛೇದನ ನೀಡಲು ಮುಂದಾಗಿದ್ದೇನೆಂದು ಹೇಳಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.