ನೀವೊಮ್ಮೆ ಗೂಗಲ್‌ನಲ್ಲಿ ಆಂಟಿ ಅನ್ನೋ ಪದ ಕೊಟ್ಟು ಫೋಟೋ ಸರ್ಚ್ ಕೊಡಿ. ಬರೀ ಅಶ್ಲೀಲ ಫೋಟೋಗಳೇ ಬರುತ್ತವೆ. ಈ ಹೆಸರಿನಲ್ಲಿ ಅನೇಕ ಸೆಕ್ಸ್ ವೀಡಿಯೋಗಳು, ಪೋರ್ನ್ ವೀಡಿಯೋಗಳೂ ಬರುತ್ತಿವೆ. ಅದರಲ್ಲೂ ಮಧ್ಯ ವಯಸ್ಸಿನ ಭಾರತೀಯ ಹೆಣ್ಣುಮಕ್ಕಳ ಸೆಕ್ಸ್ ವೀಡಿಯೋಗಳು ಈ ಹೆಸರಿನಿಂದ ಅತೀ ಹೆಚ್ಚು ವೀಕ್ಷಣೆ ಪಡೆಯುತ್ತಿದೆ ಅನ್ನೋದು ಇತ್ತೀಚೆಗೆ ಬೆಳಕಿಗೆ ಬಂದ ಅಂಶ.
ಮದುವೆ ಆಗಿದೆ ಅಂತ ಗೊತ್ತಾದ್ರೆ ಸಾಕು, ಆಂಟಿ ಅನ್ನೋ ಹಣೆಪಟ್ಟಿಯಿಂದ ಹೆಣ್ಮಕ್ಕಳು ತಪ್ಪಿಸಿಕೊಳ್ಳೋದು ಕಷ್ಟ. ಚಿಕ್ಕ ಮಕ್ಕಳ ಕಥೆ ಬಿಡಿ, ಹೆಚ್ಚು ಕಮ್ಮಿ ತಮ್ಮ ವಯಸ್ಸಿನವರು, ಕಾಲೇಜಿಗೆ ಹೋಗುವವರು, ಗ್ರಾಚಾರ ಕೆಟ್ಟರೆ ತಮಗಿಂತ ವಯಸ್ಸಾದವರೂ ಆಂಟಿ ಅಂತ ಕರೀತಾರೆ. ಪುಟ್ಟ ಮಕ್ಕಳು ಆಂಟಿ ಅಂತ ಮುದ್ದಾಗಿ ಕರೆದರೆ ಪಾಪ ಚಿಕ್ ಮಗು ಅಂತ ಸುಮ್ಮನಾಗೋ ಹೆಣ್ಮಕ್ಕಳು ಕೊಂಚ ದೊಡ್ಡವರೆಲ್ಲಾದರೂ ಹೀಗೆ ಕರೆದರೆ ಪಡೋ ಮುಜುಗರ ಅಷ್ಟಿಷ್ಟಲ್ಲ. ಹಾಗೆಲ್ಲ ಕರೀಬೇಡಿ ಅಂದ್ರೆ ಯಾರೂ ಕ್ಯಾರೇ ಮಾಡಲ್ಲ. ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಿದ್ದ ಶಿಲ್ಪಾ ಶೆಟ್ಟಿ, ನನ್ನ ಯಾರಾದ್ರೂ ಅಜ್ಜಿ ಅಂತ ಕರೆದರೆ ಪಕಪಕ ನಗ್ತೀನಿ. ಆದ್ರೆ ಪ್ಲೀಸ್ ನಿಮ್ ಕಾಲಿಗೆ ಬೀಳ್ತೀನಿ ಆಂಟಿ ಅಂತ ಮಾತ್ರ ಕರೀಬೇಡ್ರಪ್ಪಾ. ಅದೊಂದನ್ನು ನನ್ನಿಂದ ಕೇಳೋದಕ್ಕಾಗಲ್ಲ ಅಂತ ಗೋಗರೆದರು.
ಇಂಗ್ಲೀಷ್‌ನ ಈ ಪದ ನಮ್ ಇಂಡಿಯನ್ಸ್‌ಗೆ ಅದ್ಯಾಕೆ ಆ ಪರಿ ಆಕರ್ಷಿಸುತ್ತೋ ಗೊತ್ತಿಲ್ಲ. ಇಂಗ್ಲೀಷಿನಲ್ಲಿ ಆಂಟಿ ಅಂದರೆ ಅತ್ತೆ ಅಥವಾ ಚಿಕ್ಕಮ್ಮ. ಅಲ್ಲಿ ಆ ಸಂಬಂಧ ಇರುವವರನ್ನು ಆ ಸಂಬಂಧದ ಹೆಸರಿಂದ ಕರೀತಾರೆ. ಆದರೆ ನಮ್ ಇಂಡಿಯದಲ್ಲಿ ಕೆಲಸಕ್ಕೆ ಬರೋ ಹೆಣ್ ಮಗಳೂ ಆಂಟಿನೇ, ಪಕ್ಕದ್ಮನೆಯ ಹೆಂಗಸೋ ಆಂಟಿನೇ. ಈಗಷ್ಟೇ ಮದುವೆ ಆಗಿ ಬಂದಾಕೆ ಆಂಟಿ, ಕೂದಲಿಗೆ ಬಣ್ಣ ಹಚ್ಚಿರೋ ಅವಳಮ್ಮನೂ ಆಂಟಿ, ಇಂಡಿಯಾದಲ್ಲಿ ಸಂಬಂಧಗಳ ವಿಚಾರದಲ್ಲಿ ಅತೀ ಹೆಚ್ಚು ಬಳಕೆಯಾಗೋ ಪದ ಅಂದರೆ ಅದು ಆಂಟಿ. ಹಾಗಂತ ಈ ಸಂಬಂಧದ ದುರ್ಬಳಕೆಯೂ ಚೆನ್ನಾಗಾಗುತ್ತೆ. ಮಧ್ಯ ವಯಸ್ಸಿನ ಹೆಣ್ ಮಗಳು ಸೆಕ್ಸ್ ಸ್ಕಾಂಡಲ್‌ನಲ್ಲಿ ಸಿಕ್ಕಿಬಿದ್ದಳೋ ಮುಗೀತು ಕಥೆ, ಎಲ್ಲ ವೀಡಿಯೋಗಳಲ್ಲೂ ಈ ಆಂಟಿ ಏನ್ ಮಾಡಿದ್ಲು ಗೊತ್ತಾ ಅಂತ ಪ್ರಶ್ನಾರ್ಥಕ ಚಿಹ್ನೆ ಹಾಕಿ ಕಲರ್‌ಫುಲ್ ಸುದ್ದಿ. ಮಹಿಳೆ ಅಂತಲೋ, ಲೇಡಿ ಅಂತಲೋ ಇನ್ನೇನು ಪದ ಬಳಸಿದರೂ ಸಿಗದ ವ್ಯೂ ಈ ಪದ ಹಾಕಿದಾಗ ಸಿಗುತ್ತೆ. ಅಂದ ಮ್ಯಾಜಿಕ್ ಈ ಪದದಲ್ಲಿದೆ.
ಆಂಟಿ ಅನ್ನೋ ಪದವನ್ನು ಕೋಡ್ ವರ್ಡ್ ಆಗಿ ಬಳಸಿ ಕೋಟಿ ಕೋಟಿ ಅವ್ಯವಹಾರ ನಡೆಸಲಾಗುತ್ತಿದೆ ಅನ್ನೋ ಸುದ್ದಿ ಆಗಾಗ ಬರುತ್ತಿರುತ್ತೆ. ಇತ್ತೀಚೆಗೆ ಅಂತಾರಾಷ್ಟ್ರೀಯ ವಂಚಕ ಜಾಲವೊಂದು ಇದೇ ಹೆಸರನ್ನು ಇಟ್ಟುಕೊಂಡು ಕೋಟ್ಯಂತರ ರುಪಾಯಿ ಪಂಗನಾಮ ಹಾಕಿತ್ತು. ಆಂಟಿಯ ಈ ಗಿಮಿಕ್‌ಗೆ ಸಾವಿರಾರು ಜನ ಬಲಿಯಾದ್ರು.
ಇಷ್ಟೇ ಆದ್ರೆ ಪರ್ವಾಗಿಲ್ಲ. ನೀವೊಮ್ಮೆ ಗೂಗಲ್‌ನಲ್ಲಿ ಆಂಟಿ ಅನ್ನೋ ಪದ ಕೊಟ್ಟು ಫೋಟೋ ಸರ್ಚ್ ಕೊಡಿ. ಬರೀ ಅಶ್ಲೀಲ ಫೋಟೋಗಳೇ ಬರುತ್ತವೆ. ಈ ಹೆಸರಿನಲ್ಲಿ ಅನೇಕ ಸೆಕ್ಸ್ ವೀಡಿಯೋಗಳು, ಪೋರ್ನ್ ವೀಡಿಯೋಗಳೂ ಬರುತ್ತಿವೆ. ಅದರಲ್ಲೂ ಮಧ್ಯ ವಯಸ್ಸಿನ ಭಾರತೀಯ ಹೆಣ್ಣುಮಕ್ಕಳ ಸೆಕ್ಸ್ ವೀಡಿಯೋಗಳು ಈ ಹೆಸರಿನಿಂದ ಅತೀ ಹೆಚ್ಚು ವೀಕ್ಷಣೆ ಪಡೆಯುತ್ತಿದೆ ಅನ್ನೋದು ಇತ್ತೀಚೆಗೆ ಬೆಳಕಿಗೆ ಬಂದ ಅಂಶ. ಇದಲ್ಲದೇ ಸಾಮಾನ್ಯ ಜನರಲ್ಲಿ ಅನೇಕರು ಆಂಟಿ ಅನ್ನೋದನ್ನು ಅಶ್ಲೀಲವಾಗಿ ಬಳಕೆ ಮಾಡ್ತಾರೆ. ಹಾಗಂತ ಸಭ್ಯವಾಗಿ ಬಳಕೆ ಮಾಡೋರೂ ಬಹಳ ಮಂದಿ ಇದ್ದಾರೆ. ಆದರೆ ನಿಜವಾದ ಸಂಬಂಧದಲ್ಲಿ ಆಂಟಿ ಆಗಿದ್ದರೂ ಈ ಎಲ್ಲ ಕಚಡಾ ವಿಚಾರಗಳಿಂದ ಬೇಸತ್ತು, ಹೆಚ್ಚಿನ ವಿವಾಹಿತ ಹೆಣ್ಮಕ್ಕಳು ಆಂಟಿ ಅಂದರೆ ಬೆಚ್ಚಿ ಬೀಳೋ ಹಾಗಾಗಿದೆ. ಜೊತೆಗೆ ಗೂಗಲ್‌ನಲ್ಲಿ ಆಂಟಿ ಅನ್ನೋ ವರ್ಡ್ ಹಾಕಿ ಟೀನ್ ಹುಡುಗರಿಂದ ಮುದುಕರವರೆಗೂ ಅಶ್ಲೀಲ ಫೋಟೋಗಳಿಗೆ ಸರ್ಚ್ ಕೊಡುತ್ತಲೇ ಇರುತ್ತಾರೆ ಅನ್ನೋದೂ ಸಾಬೀತಾಗಿದೆ.
ಪಾಪದ ಹೆಣ್ಮಕ್ಕಳನ್ನ ಆಂಟಿ ಅಂತ ಕರೆಯೋದನ್ನು ಇನ್ಮೇಲಾದ್ರೂ ನಿಲ್ಲಿಸ್ತೀರ ಪ್ಲೀಸ್.. ಅನ್ನೋದು ಹೆಣ್ಮಕ್ಕಳ ಕೋರಿಕೆ.
ಕಿಚನ್‌ನಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ ಗೃಹಿಣಿ, ಸೆರಗು ಮುಚ್ಕೊಳಮ್ಮಾ ಎಂದ ನೆಟ್ಟಿಗರು