Latest Videos

ಹಾಯ್ ಅಂದು ಡೇಟಿಂಗ್ ಕರೀತಾಳೆ, ತಿಂದು ಉಂಡು ಹೋದ್ಮೇಲೆ ಶುರುವಾಗುತ್ತೆ ಯುವಕನಿಗೆ ಸಂಕಷ್ಟ!

By Mahmad RafikFirst Published Jun 30, 2024, 10:49 AM IST
Highlights

ಕೆಫೆ ಸಿಬ್ಬಂದಿ 1,21,917.70 ರೂಪಾಯಿ ಬಿಲ್ ನೀಡಿದಾಗ ಯುವಕ ಶಾಕ್ ಆಗಿದ್ದಾನೆ. ಇಷ್ಟು ಮೊತ್ತದ ಆಹಾರ ಆರ್ಡರ್ ಮಾಡಿಲ್ಲ ಎಂದು ಹಣ ಪಾವತಿಸಲು ಹಿಂದೇಟು ಹಾಕಿದಾಗ ಆತನಿಗೆ ಬೆದರಿಕೆ ಹಾಕಲಾಗಿದೆ.

ನವದೆಹಲಿ: ಡೇಟಿಂಗ್ ಆಪ್ ಟಿಂಡರ್ (Dating App Tinder) ಮೂಲಕ ಐಪಿಎಸ್ ಪರೀಕ್ಷಾ ಅಭ್ಯರ್ಥಿಗೆ ವಂಚಿಸಿರುವ ಪ್ರಕರಣ ರಾಜಧಾನಿ ದೆಹಲಿಯಲ್ಲಿ (Delhi)  ದಾಖಲಾಗಿದೆ. ಘಟನೆ ಸಂಬಂಧ ಯುವತಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಯುವಕ-ಯುವತಿಯರು ಸಂಗಾತಿ ಹುಡುಕಾಟಕ್ಕೆ ಆನ್‌ಲೈನ್ ಆಪ್‌ಗಳ ಮೊರೆ ಹೋಗುತ್ತಿದ್ದಾರೆ. ಟಿಂಡರ್ ಸಹ ಆ ರೀತಿಯ ಆಪ್‌ಗಳಲ್ಲಿ ಒಂದಾಗಿದೆ. ಇದೇ ಆಪ್‌ನಲ್ಲಿ ಭೇಟಿಯಾದ ವರ್ಷಾ ಎಂಬಾಕೆಯ ಬರ್ತ್ ಡೇ ಆಚರಣೆಗೆ ತೆರಳಿದ್ದ ಯುವಕನಿಂದ 1.24 ಲಕ್ಷ ರೂಪಾಯಿ ಹಣವನ್ನು ಬಿಲ್ ಹೆಸರಿನಲ್ಲಿ ವಸೂಲಿ ಮಾಡಿಕೊಂಡಿದ್ದಾರೆ. 

ಯುವಕನಿಗೆ ಟಿಂಡರ್ ಆಪ್‌ನಲ್ಲಿ ವರ್ಷಾ ಎಂಬಾಕೆ ಪರಿಚಯವಾಗಿದ್ದಳು. ಆಕೆಯ ಹುಟ್ಟುಹಬ್ಬದ ಹಿನ್ನೆಲೆ ದೆಹಲಿಯ ವಿಕಾಸ್ ಮಾರ್ಗದಲ್ಲಿರುವ ಬ್ಲಾಕ್ ಮಿರರ್ ಕೆಫೆಯಲ್ಲಿ ಟೇಬಲ್ ಬುಕ್ ಮಾಡಿದ್ದನು. ಅಲ್ಲಿಗೆ ವರ್ಷಾ ಬರುತ್ತಿದ್ದಂತೆ ಕೇಕ್ ಹಾಗೂ ಕೆಲ ತಿಂಡಿ ಆರ್ಡರ್ ಮಾಡಿದ್ದಾರೆ. ಈ ವೇಳೆ ವರ್ಷಾ ಸಹ ಹಣ್ಣಿನ ವೈನ್ ಕುಡಿದಿದ್ದಾಳೆ. ನಂತರ ಮನೆಯಿಂದ ಎಮೆರ್ಜೆನ್ಸಿ ಕರೆ ಬಂದಿದೆ ಎಂದು ವರ್ಷಾ ಅಲ್ಲಿಂದ ಹೊರಟಿದ್ದಾಳೆ. ಕೆಫೆ ಸಿಬ್ಬಂದಿ 1,21,917.70 ರೂಪಾಯಿ ಬಿಲ್ ನೀಡಿದಾಗ ಯುವಕ ಶಾಕ್ ಆಗಿದ್ದಾನೆ. ಇಷ್ಟು ಮೊತ್ತದ ಆಹಾರ ಆರ್ಡರ್ ಮಾಡಿಲ್ಲ ಎಂದು ಹಣ ಪಾವತಿಸಲು ಹಿಂದೇಟು ಹಾಕಿದಾಗ ಆತನಿಗೆ ಬೆದರಿಕೆ ಹಾಕಲಾಗಿದೆ. ಕೊನೆಗೆ ಬಿಲ್ ಪಾವತಿಸಿದ ಯುವಕ ಹೊರಗೆ ಬಂದು ಪೊಲೀಸ್ ಠಾಣೆಗೆ ತೆರಳಿ ತನಾಗದ ವಂಚನೆ ಕುರಿತು ದೂರು ದಾಖಲಿಸಿದ್ದಾನೆ.

ಮೋಸದಾಟದಲ್ಲಿ ಕೆಫೆಯ ಮಾಲೀಕ ಭಾಗಿ

ಪೊಲೀಸರು ವಂಚನೆಗೊಳಗಾದ ಯುವಕನ ಹೆಸರನ್ನು ರಿವೀಲ್ ಮಾಡಿಲ್ಲ. ಕೆಫೆಯ ಮಾಲೀಕರಲ್ಲಿ ಒಬ್ಬರಾದ 32 ವರ್ಷದ ಅಕ್ಷಯ್ ಪವ್ಹಾ ಎಂಬಾತನ ಖಾತೆಗೆ ಯುವಕ ದುಡ್ಡು ಪಾವತಿಸಿದ್ದನು. ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಅಕ್ಷಯ್ ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕೆಫೆ ಸಂಬಂಧಿ ವಂಶಾ, ಗೆಳೆಯ ಅಂಶ್ ಗ್ರೋವರ್ ಹಾಗೂ ತನ್ನ ಮಾಲೀಕತ್ವದಲ್ಲಿ ಎಂಬ ವಿಷಯವನ್ನು ಬಾಯಿ ಬಿಟ್ಟಿದ್ದಾನೆ. ಕೆಫೆಯಲ್ಲಿ ಟೇಬಲ್ ಮ್ಯಾನೇಜರ್ ಕೆಲಸ ಮಾಡುವ ಆರ್ಯನ್ ಏಳನೇ ಕ್ಲಾಸ್ ಡ್ರಾಪ್‌ಔಟ್ ಎಂಬ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

ಐವರು ಯುವಕರ ಜೊತೆ ವಧುವಿನ ಫಸ್ಟ್ ನೈಟ್- ಶಾಕಿಂಗ್ ನ್ಯೂಸ್ ಬೆಳಕಿಗೆ 

ಬೇರೊಬ್ಬನ ಜೊತೆಯಲ್ಲಿರುವಾಗಲೇ ಯುವತಿಯ ಬಂಧನ

ಯುವಕನ ಜೊತೆ ಬಂದಿದ್ದ 25 ವರ್ಷದ ವರ್ಷಾ ತಮ್ಮ ಗುಂಪಿನ ಸದಸ್ಯೆಯಾಗಿದ್ದು, ಆಕೆಯ ನಿಜವಾದ ಹೆಸರು ಅಫ್ಸಾನ್ ಪರ್ವೀಣ್  ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಯೇಷಾ ಅಥವಾ ನೂರ್ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದಳು. ಸೆಲ್ ನೆಟ್‌ವರ್ಕ್ ಆಧರಿಸಿ ವಂಚಕಿಯನ್ನು ಮತ್ತೊಂದು ಕೆಫೆಯಲ್ಲಿ ಬಂಧಿಸಿದ್ದಾರೆ. ಶಾದಿ ಡಾಟ್ ಕಾಮ್‌ನಲ್ಲಿ ಪರಿಚಯವಾದ ಯುವಕನ ಜೊತೆ ವಂಚಕಿ ಡೇಟ್‌ಗೆ ಬಂದಿದ್ದಳು.

ಬಂದ ಹಣದಲ್ಲಿ ಹಂಚಿಕೆ 

ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಗೆಳೆಯರನ್ನು ಕೆಫೆಗೆ ಕರೆದುಕೊಂಡು ಬರುತ್ತಿದ್ದ ಯುವತಿ ಲಘು ಆಹಾರ ಸೇವಿಸಿ ನೆಪ ಹೇಳಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು. ಆನಂತರ ಕೆಫೆ ಸಿಬ್ಬಂದಿ ದೊಡ್ಡ ಮೊತ್ತದ ಬಿಲ್ ನೀಡಿ ಬಲವಂತವಾಗಿ ಹಣ ವಸೂಲಿ ಮಾಡಿಕೊಳ್ಳುತ್ತಿದ್ದರು. ಬಂದ ಹಣದಲ್ಲಿ ಯುವತಿಗೆ ಶೇ.15, ಕೆಫೆಯ ಟೇಬಲ್ ಮತ್ತು ಕೆಫೆ ಮ್ಯಾನೇಜರ್‌ಗೆ ಶೇ.45 ಮತ್ತು ಕೆಫೆಯ ಮಾಲೀಕನಿಗೆ ಶೇ.40ರಷ್ಟು ಹಂಚಿಕೆಯಾಗುತ್ತಿತ್ತು. ಇದೇ ರೀತಿ ಹಲವರಿಗೆ ಮೋಸ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. 

ಜೈಲಿನಲ್ಲಿ ಕೈದಿಗಳ ಜೊತೆ ಮಹಿಳಾ ಪೊಲೀಸ್ ಅಧಿಕಾರಿಯ ಸೆಕ್ಸ್ ವಿಡಿಯೋ ವೈರಲ್

ದೆಹಲಿ, ಎನ್‌ಸಿಆರ್, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ನಂತಹ ಮಹಾನಗರಗಳಲ್ಲಿ ಈ ರೀತಿಯ ವಂಚನೆ ಪ್ರಕರಣಗಳು ಹೆಚ್ಚಾಗಿವೆ. ಮಹಾನಗರದ ಯುವ ಜನತೆ ಡೇಟಿಂಗ್ ಆಪ್‌ನಲ್ಲಿ ಪರಿಚಯವಾಗುವ ಅನಾಮಧೇಯರ ಜೊತೆ ಹೋಗಿ ಹಣ ಕಳೆದುಕೊಳ್ಳುತ್ತಿದ್ದಾರೆ. 

click me!