ಹನಿಮೂನ್ ಫೋಟೋ ಹಂಚಿಕೊಂಡು ಕ್ಷಮಿಸಿ ಎಂದ ವಿಜಯ್‌ ಮಲ್ಯ ಸೊಸೆ ಜಾಸ್ಮಿನ್‌!

By Gowthami K  |  First Published Jun 29, 2024, 7:27 PM IST

ಗ್ರೀಸ್‌ ನ ಸ್ಯಾಂಟೋರಿನಿ  ದ್ವೀಪ ಸಮುದ್ರದಲ್ಲಿ ಹನಿಮೂನ್‌ನಲ್ಲಿರುವ ಸಿದ್ದಾರ್ಥ್‌ ಮಲ್ಯ ಮತ್ತು  ಜಾಸ್ಮಿನ್‌ ಮಲ್ಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದು, ಕೋಟಿ ಕುಳ ತನ್ನ ಬ್ಯಾಗ್ ಅನ್ನು ಹಿಡಿದು ಹೋಗುತ್ತಿರುವ ಫೋಟೋ ಗಮನ ಸೆಳೆದಿದೆ.


ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯರ ಪುತ್ರ ಸಿದ್ದಾರ್ಥ್‌ ಮಲ್ಯ ತಮ್ಮ ಗೆಳತಿ, ರೂಪದರ್ಶಿ ಜಾಸ್ಮಿನ್‌ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದು, ಸದ್ಯ ನವ ಜೋಡಿ ಗ್ರೀಸ್‌ ನ ಸ್ಯಾಂಟೋರಿನಿ  ದ್ವೀಪ ಸಮುದ್ರದಲ್ಲಿ ಹನಿಮೂನ್‌ನಲ್ಲಿದ್ದಾರೆ.

ಇದೀಗ ವಿಜಯ್ ಮಲ್ಯ ಸೊಸೆ, ಜಾಸ್ಮಿನ್‌ ಹನಿಮೂನ್ ನಲ್ಲಿರುವ ಹಲವು ಫೋಟೋಗಳನ್ನು ಹಂಚಿಕೊಂಡು ಕ್ಷಮಿಸಿ ಎಂದು ಬರೆದುಕೊಂಡಿದ್ದಾರೆ. ಹಂಚಿಕೊಂಡಿರುವ ಎಲ್ಲಾ ಫೋಟೋಗಳಿಗಾಗಿ  ಕ್ಷಮಿಸಿ ಎಂದಿದ್ದಾರೆ. ಇದಕ್ಕೆ ಹಲವು ಕಮೆಂಟ್‌ಗಳು ಬಂದಿದೆ.

Tap to resize

Latest Videos

undefined

ಕ್ರಿಕೆಟಿಗ ಶಮಿ ಜೊತೆ ಮದುವೆ ಎಂಬ ಸುದ್ದಿ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡ ಸಾನಿಯಾ!

ಸ್ಯಾಂಟೋರಿನಿ  ದ್ವೀಪದ ಸುಂದರ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಗಂಡ ಸಿದ್ದಾರ್ಥ್‌ ಮಲ್ಯ ತನ್ನ ಟ್ರಾಲಿ ಬ್ಯಾಗನ್ನು ಎಳೆದುಕೊಂಡು ಹೋಗುತ್ತಿರುವ ಫೋಟೋ ಕೂಡ ಹಾಕಿಕೊಂಡಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ. ಮಾತ್ರವಲ್ಲ ಕೋಟಿ ಕುಳನಾದ್ರೂ ತನ್ನ ಬ್ಯಾಗ್ ಅನ್ನು ತಾನೇ ಎಳೆದುಕೊಂಡು ಹೋಗುತ್ತಿದ್ದಾನೆ. ಮದುವೆ ಆದ ತಕ್ಷಣ ಈ ಪರಿಸ್ಥಿತಿ ಬಂತೇ ಎಂದು ಕಮೆಂಟ್ ಮಾಡಿದ್ದಾರೆ. ಹೇಳಿ ಕೇಳಿ ಅಪ್ಪ ವಿಜಯ್ ಮಲ್ಯ ದಿವಾಳಿಯಾದ್ರೂ ಮಗ ಸಿದ್ದಾರ್ಥ್ 2023ರ ವರದಿ ಪ್ರಕಾರ 3,175 ಕೋಟಿ ಆಸ್ತಿ ಒಡೆಯನಾಗಿದ್ದಾರೆ. ಎಲ್ಲಾ ಆಸ್ತಿಗಳು ವಿದೇಶದಲ್ಲೇ ಇದೆ

ಜೂನ್ 28ರಂದು ಸಿದ್ಧಾರ್ಥ ಮಲ್ಯ ಹನಿಮೂನ್ ಫೋಟೋ ಹಂಚಿಕೊಂಡಿದ್ರು., ಇದಕ್ಕೂ ಭಾರತೀಯರು ತರಹೇವಾರಿ ಕಮೆಂಟ್‌ ಮಾಡಿ, ಹಳೆ ಗರ್ಲ್ ಪ್ರೆಂಡ್ಸ್ ಗಳನ್ನು ನೆನಪಿಸಿಕೊಳ್ಳಿ ಜೊತೆಗೆ ಅಪ್ಪ ವಿಜಯ್ ಮಲ್ಯರನ್ನು ಕರೆದುಕೊಂಡು ಯಾವಾಗ ಭಾರತಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದ್ದರು.

ಹನಿಮೂನ್ ಫೋಟೋ ಹಂಚಿಕೊಂಡ ಸಿದ್ಧಾರ್ಥ್ ಮಲ್ಯ, ಸ್ಟಾರ್ ನಟಿಯರೊಂದಿಗಿನ ಡೇಟಿಂಗ್ ನೆನಪಿಸಿದ ಭಾರತೀಯರು!

ಜೂನ್‌ 23ರಂದು ಸಿದ್ಧಾರ್ಥ್‌ ಮಲ್ಯ ಮತ್ತು ಜಾಸ್ಮಿನ್ ಅವರ ವಿವಾಹ  ಕ್ರೈಸ್ತ ಸಂಪ್ರದಾಯದಂತೆ ನಡೆದಿತ್ತು. ಜಾಸ್ಮಿನ್ ತಮ್ಮ ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು  ‘ಎಂದೆಂದಿಗೂ’ ಎಂದು ಕ್ಯಾಪ್ಷನ್‌ ಬರೆದು ಸಿದ್ಧಾರ್ಥ್‌ರನ್ನು ಟ್ಯಾಗ್‌ ಮಾಡಿದ್ದರು.  ಮದುವೆಯಲ್ಲಿ ಜಾಸ್ಮಿನ್ ಬಿಳಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ದರೆ, ಸಿದ್ಧಾರ್ಥ್‌ ಸೂಟ್‌ನಲ್ಲಿ ಕಂಗೊಳಿಸಿದ್ದರು. ಲಂಡನ್‌ನ ಐಷಾರಾಮಿ ಬಂಗಲೆಯಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. 

 

 
 
 
 
 
 
 
 
 
 
 
 
 
 
 

A post shared by jasmine (@jassofiaa)

click me!