ಇಂದಿನ ತಲೆಮಾರಿನ ನಡುವೆ ವಿಚ್ಚೇದನ ಹೆಚ್ಚಿರುವ ಬಗ್ಗೆ ಗಾಯಕಿ ಆಶಾ ಭೋಸ್ಲೆ ಕೇಳಿದ ಪ್ರಶ್ನೆಗೆ ರವಿಶಂಕರ್ ಗುರೂಜಿ ಪ್ರತಿಯೊಬ್ಬರೂ ತಮ್ಮನ್ನು ತಾವು ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಅರ್ಥಪೂರ್ಣವಾಗಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ವಿವಾಹ, ಪ್ರೀತಿ, ವಿಚ್ಚೇದನದ ಕುರಿತ ಗುರೂಜಿಯ ಮಾತುಗಳು ಪ್ರತಿಯೊಬ್ಬರಿಗೂ ಕಣ್ತೆರೆಸುವಂತಿವೆ..
ಪ್ರೀತಿ, ಪ್ರೇಮ, ಪ್ರಣಯ, ವಿವಾಹ, ವಿಚ್ಚೇದನ- ಹೀಗೆ ಸಂಬಂಧಗಳ ನಡುವೆ ಹಲವಾರು ರೀತಿಯ ಭಾವನೆಗಳು ವ್ಯಕ್ತವಾಗುತ್ತವೆ. ಎಲ್ಲರಿಗೂ ಎಲ್ಲವನ್ನೂ ನಿಭಾಯಿಸಲು ಪ್ರಬುದ್ಧತೆ ಇರುವುದಿಲ್ಲ. ಅಥವಾ ಅವರ ಪರಿಸ್ಥಿತಿ ಹೊಂದುವುದಿಲ್ಲ. ಆದರೆ, ಸಂಬಂಧಗಳ ವಿಚಾರವಾಗಿ ಪ್ರತಿಯೊಬ್ಬರೂ ಸಾಕಷ್ಟು ಭಾವನಾತ್ಮಕ ಏರಿಳಿತಗಳನ್ನು ಅನುಭವಿಸುತ್ತಾರೆ. ಈ ಸಮಯವನ್ನು ಸುಲಭವಾಗಿ ನಿಭಾಯಿಸಲು ಶ್ರೀ ಶ್ರೀ ರವಿಶಂಕರ್ ಗುರೂಜಿಯ ಮಾತುಗಳಲ್ಲಿ ಮದ್ದಿದೆ. ಅಂದ ಹಾಗೆ ಇತ್ತೀಚಿನ ಪ್ರಶ್ನೋತ್ತರ ಸೆಶನ್ ಒಂದರಲ್ಲಿ ಗಾಯಕಿ ಆಶಾ ಭೋಸ್ಲೆ ಕೇಳಿದ ಪ್ರಶ್ನೆಗೆ ಅರ್ಥಗರ್ಭಿತವಾಗಿ ಉತ್ತರಿಸಿದ್ದಾರೆ ಗುರೂಜಿ. ಅದರ ಬಗ್ಗೆ ಕಣ್ಣು ಹಾಯಿಸೋಣ.
'ಈಗಿನ ದಿನಗಳಲ್ಲಿ ಪ್ರತಿ ತಿಂಗಳೂ ವಿಚ್ಚೇದನದ ಕತೆ ಕೇಳ್ತಾನೇ ಇರ್ತೀವಿ. ಈಗೀಗ ಜೋಡಿಗಳಲ್ಲಿ ಪ್ರೀತಿ ಬೇಗ ಮುಗಿದು ಹೋಗುತ್ತೆ. ಯಾಕೆ ಹೀಗಾಗುತ್ತೆ?' - ಆಶಾ ಭೋಸ್ಲೆ.
'ಸರಿಯಾಗಿ ಹೇಳಿದ್ದೀರಿ, ಈಗೀಗ ಜೋಡಿಗಳ ನಡುವೆ ಪ್ರೀತಿ ಬೇಗ ಮುಗಿದು ಹೋಗುತ್ತೆ. ಇಡೀ ಜೀವನ ಪ್ರೀತಿಯಲ್ಲಿ ಕಳೆವ ಸಮಯವೆಲ್ಲ ಹಿಂದಿನ ಕಾಲಕ್ಕೇ ಮುಗಿದು ಹೋಗಿದೆ. ಹಾಗೆ ಜೀವನಪೂರ್ತಿ ಪ್ರೀತಿ ಇರಬಲ್ಲದು ಎಂಬ ವಿಚಾರವೇ ಮರೆತಂತಾಗಿದೆ. ಹೀಗೇಕಾಗುತ್ತದೆ ಎಂದರೆ ಈಗಿನ ತಲೆಮಾರಿನವರು ಆಕರ್ಷಣೆಯನ್ನೇ ಪ್ರೀತಿ ಎಂದುಕೊಳ್ಳುತ್ತಾರೆ. ಆಕರ್ಷಣೆ ಮುಗಿಯುತ್ತಿದ್ದಂತೆಯೇ ಪ್ರೀತಿಯೇ ಮುಗಿದು ಬಿಡುತ್ತದೆ. ಜನ ಹೆಚ್ಚು ಸ್ವಾರ್ಥಿಗಳಾಗುತ್ತಿದ್ದಾರೆ. ಮತ್ತೊಬ್ಬರ ಭಾವನೆಗೆ ಯಾವುದೇ ಬೆಲೆ ಕೊಡುತ್ತಿಲ್ಲ. ನಮ್ಮ ಕಾಲದಲ್ಲಿ ಹಾಗಿರಲಿಲ್ಲ, ಜನ ಮತ್ತೊಬ್ಬರ ಬಗ್ಗೆ ಕಾಳಜಿ ಮಾಡುತ್ತಿದ್ದರು. ಅವರ ಭಾವನೆಗಳಿಗೆ ಬೆಲೆ ಕೊಡುತ್ತಿದ್ದರು. ಆ ಸಂವೇದನೆಶೀಲತೆ ಈಗ ಕಡಿಮೆಯಾಗಿದೆ. ಬರೀ ನಾನು ನಂದು ಎಂಬ ಯೋಚನೆಯಲ್ಲಿ ಮುಳುಗಿದ್ದಾರೆ. ಹಾಗಾಗಿ, ಜೀವನ ಅವರಿಗೆ ನೀರಸ ಎನಿಸುತ್ತದೆ. ಬದುಕು ಶುಷ್ಕ ಎನಿಸುತ್ತದೆ. ಹಾಗಾಗಿಯೇ ಜೀವನದಲ್ಲಿ ಭಕ್ತಿ, ಜ್ಞಾನ, ಧ್ಯಾನ ಅಗತ್ಯ. ಅವು ಜೀವನದಿಂದ ನೀರಸತೆ ಹಾಗೂ ಬೇಜಾರನ್ನು ತೆಗೆಯುತ್ತವೆ. ಆಗ ಇನ್ನೊಬ್ಬರಿಂದ ನಿರೀಕ್ಷಿಸುವುದನ್ನು ಕಡಿಮೆ ಮಾಡುತ್ತೇವೆ. ಮತ್ತೊಬ್ಬರಿಂದ ನಿರೀಕ್ಷೆ ಮಾಡದಿದ್ದಾಗ ಇನ್ನೊಬ್ಬರಿಗೆ ಕೊಡುವ ಬಗ್ಗೆ ಯೋಚಿಸಲಾರಂಭಿಸುತ್ತೇವೆ' - ರವಿಶಂಕರ್ ಗುರೂಜಿ.
ಈ ರೈಲು ಏರೋಪ್ಲೇನ್‌ಗಿಂತ ವೇಗವಾಗಿ ಓಡಬಲ್ಲದು!
ಹೌದಲ್ಲವೇ, ಸ್ವಾರ್ಥ ಬಿಟ್ಟಾಗಷ್ಟೇ ಪ್ರೀತಿ ಅರಳಲು ಸಾಧ್ಯ. ಅಂದ ಹಾಗೆ ಗುರೂಜಿ ವಿವಾಹಿತ ಜೋಡಿಗಳಿಗೆ ಬದುಕನ್ನು ಸಹನೀಯವಾಗಿಸುವ ಕೆಲ ಸುಲಭ ಟಿಪ್ಸ್‌ಗಳನ್ನು ಕೂಡಾ ನೀಡಿದ್ದಾರೆ. ಅವೇನೆಂದು ನೋಡೋಣ.
ಪ್ರೀತಿಯ ದಾಂಪತ್ಯದ ಗುಟ್ಟು
ಎರಡು ಸಾಲುಗಳು ಪರಸ್ಪರ ಸಮಾನಾಂತರವಾಗಿ ಚಲಿಸಿದಾಗ, ಅವು ಬಹಳ ದೂರ ಹೋಗಬಹುದು. ಆದರೆ ಗೆರೆಗಳು ಒಂದನ್ನೊಂದು ದಾಟಿದಾಗ ಅವು ಹೆಚ್ಚು ದೂರ ಒಟ್ಟಿಗೇ ಹೋಗಲಾರವು. ಮಹಿಳೆ ತನ್ನ ಪತಿಯ ಅಹಂಕಾರವನ್ನು ಎಂದಿಗೂ ಕೆಣಕಬಾರದು ಮತ್ತು ಪತಿಯು ಹೆಂಡತಿಯ ಭಾವನೆಗಳನ್ನು ಅಗೌರವಿಸಬಾರದು.
ಇಡೀ ಜಗತ್ತು ಒಬ್ಬನಿಗೆ ‘ಮೆದುಳು ಇಲ್ಲ’ ಎಂದು ಹೇಳಬಹುದು, ಆದರೆ ಅವನ ಹೆಂಡತಿ ಎಂದಿಗೂ ಹಾಗೆ ಹೇಳಬಾರದು. ಅವಳು ಯಾವಾಗಲೂ, 'ನೀವು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ವ್ಯಕ್ತಿ' ಎಂದು ಹೇಳುತ್ತಾ ಅವನ ಅಹಂಕಾರವನ್ನು ಪಂಪ್ ಮಾಡಬೇಕು. ಇದು ಅತ್ಯಗತ್ಯ. ಹೆಂಗಸು ತನ್ನ ಪುರುಷನಿಗೆ ತನ್ನ ಗಂಡನೊಬ್ಬ ಯಾತಕ್ಕೂ ಬರದವನು ಎಂದು ಹೇಳುತ್ತಿದ್ದರೆ ಆತ ನಿಜವಾಗಿಯೂ ಹಾಗೆಯೇ ಆಗಿಬಿಡುತ್ತಾನೆ!
ಅಯೋಧ್ಯೆಯಲ್ಲಿ ರಾಮಜ್ಯೋತಿ ಪಡೆದು ಕಾಶಿಗೆ ಹೊರಟ ಮುಸ್ಲಿಂ ಮಹಿಳೆಯರು!
ಪುರುಷರಿಗೆ ಒಂದು ರಹಸ್ಯ ಸಲಹೆಯೆಂದರೆ ಅವರು ತಮ್ಮ ಹೆಂಡತಿಯ ಭಾವನೆಗಳನ್ನು ಎಂದಿಗೂ ಘಾಸಿಗೊಳಿಸಬಾರದು. ಅವಳು ತನ್ನ ಸಹೋದರ, ತಾಯಿ ಅಥವಾ ಕುಟುಂಬದ ಬಗ್ಗೆ ನಿಮಗೆ ದೂರು ನೀಡಬಹುದು. ಆದರೆ ನೀವು ಅವಳೊಂದಿಗೆ ಸೇರಿಕೊಂಡು ದೂರಲಾರಂಭಿಸಬಾರದು. ನೀವು ಅವಳ ದೂರುಗಳೊಂದಿಗೆ ತಲೆದೂಗಲು ಪ್ರಾರಂಭಿಸಿದ ಕ್ಷಣ, ಅವಳು ತಲೆ ಕೆಳಗಾಗಿಬಿಡುತ್ತಾಳೆ! ತಕ್ಷಣ ಅವಳು ತನ್ನವರ ಬದಲು ನಿಮ್ಮನ್ನೇ ದೂರಲು ಆರಂಭಿಸುತ್ತಾಳೆ.
ಗುರೂಜಿ ನೀಡಿದ ಈ ಎರಡು ಸಲಹೆಗಳು ಸಂಬಂಧದಲ್ಲಿ ಸಾಕಷ್ಟು ಕೆಲಸ ಮಾಡುವುದಂತೂ ಸತ್ಯ. ಬೇಕಿದ್ದರೆ ನೀವೂ ಟ್ರೈ ಮಾಡಿ ನೋಡಿ..