ಅಪ್ಪನಂತೆ ಕ್ರೀಡೆಯಲ್ಲಿ ಮಿಂಚದೇ ಇದ್ದರೂ ಬಾಲಿವುಡ್ ಸೆಲೆಬ್ರಿಟಿ ಕಿಡ್ ಆಗದೇ ಇದ್ದರೂ, ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸದಾ ಸುದ್ದಿಯಲ್ಲಿರುತ್ತಾರೆ.
ಅಪ್ಪನಂತೆ ಕ್ರೀಡೆಯಲ್ಲಿ ಮಿಂಚದೇ ಇದ್ದರೂ ಬಾಲಿವುಡ್ ಸೆಲೆಬ್ರಿಟಿ ಕಿಡ್ ಆಗದೇ ಇದ್ದರೂ, ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸದಾ ಸುದ್ದಿಯಲ್ಲಿರುತ್ತಾರೆ. ಆಗಾಗ ಅವರ ಹೆಸರು ಯುವ ಕ್ರಿಕೆಟಿಗ ಶುಭಮನ್ ಗಿಲ್ ಹೆಸರಿನೊಂದಿಗೆ ತಳುಕು ಹಾಕಿ ಹೋಯ್ದಾಡುತ್ತಿರುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಇದರ ಜೊತೆಗೆ ಆಕೆ ಹೋದಲೆಲ್ಲಾ ಪಪಾರಾಜಿಗಳು ಆಕೆಯನ್ನು ಹಿಂಬಾಲಿಸುವುದರಿಂದ ಆಕೆ ಎಲ್ಲೆ ಹೋದರೂ ಯಾರೊಂದಿಗೆ ಹೋದರೂ ಅಲ್ಲೊಂದು ಗಾಸಿಪ್ ಸಿದ್ಧವಾಗಿ ಕೂತು ಬಿಡುತ್ತದೆ. ಅದೇ ರೀತಿ ಈಗ ಸಾರಾ ಹೊಸ ಗಾಸಿಪೊಂದರಲ್ಲಿ ಸಿಲುಕಿಕೊಂಡಿದ್ದಾರೆ.
ಸ್ಟಾರ್ ಕಿಡ್‌ಗಳಿಗೆ ಸೆಲೆಬ್ರಿಟಿ ಮಕ್ಕಳಿಗೆ ಪಾರ್ಟಿಯೆಲ್ಲಾ ಹೊಸದೇನಲ್ಲ ಅದೇ ರೀತಿ ಮುಂಬೈನಲ್ಲಿ ಪಾರ್ಟಿಯೊಂದರಲ್ಲಿ ಭಾಗವಹಿಸಿದ ನಂತರ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್, ಬಾಲಿವುಡ್‌ನ ಯುವ ನಟಿ ಹಾಗೂ ಶ್ರೀದೇವಿ, ಬೋನಿ ಕಪೂರ್ ಪುತ್ರಿಯೂ ಆಗಿರುವ ಜಾನ್ವಿ ಕಪೂರ್ ಬಾಯ್‌ಫ್ರೆಂಡ್ ಎಂದೇ ಸುದ್ದಿಯಲ್ಲಿರುವ ಶಿಖರ್ ಪಹರಿಯಾ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಂದೇ ಕಾರಿನಲ್ಲಿ ಪಾರ್ಟಿಯೊಂದರಿಂದ ಹೊರಟು ಹೋಗಿದ್ದು, ಈ ವೀಡಿಯೋ ಪಪಾರಾಜಿ ಇನ್ಸ್ಟಾಗ್ರಾಮ್ ಪೇಜ್‌ಗಳಲ್ಲಿ ವೈರಲ್ ಆಗುತ್ತಿದ್ದಂತೆ ಶುಭಮನ್ ಗಿಲ್ ಫ್ಯಾನ್‌ಗಳು ಹಾಗೂ ಜಾನ್ವಿ ಅಭಿಮಾನಿಗಳು ಒಂದೇ ಸಮನೆ ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಕಾಫಿ ವಿತ್ ಕರಣ್‌ನಲ್ಲಿ ಆಕಸ್ಮಿಕವಾಗಿ ಬಾಯ್‌ಫ್ರೆಂಡ್ ಹೆಸರು ಬಾಯಿ ಬಿಟ್ಟ ಜಾನ್ವಿ ಕಪೂರ್!
ವೈರಲ್ ಆದ ವೀಡಿಯೋವೊಂದರಲ್ಲಿ ಸಾರಾ ತೆಂಡೂಲ್ಕರ್ ಹಾಗೂ ಜಾನ್ವಿ ಬಾಯ್‌ಫ್ರೆಂಡ್ ಎನ್ನಲಾಗುವ ಶಿಖರ್ ಪಹರಿಯಾ ಹಾಗೂ ಜಾವೇದ್ ಜಾಫ್ರಿ ಪುತ್ರ ಮೀನಾಜ್ ಜಾಫ್ರಿ ಹಾಗೂ ಆತನ ಸೋದರಿ ಅಲ್ವಿಯಾ ಜಾಫ್ರಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇತ್ತ ಸಾರಾ ಅವರು ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಕಾರಣಕ್ಕೆ ಈ ಹಿಂದೆಯೇ ಸಾಕಷ್ಟು ಸುದ್ದಿಯಾಗಿದ್ದರು. ಈಗ ಅವರು ಪಳ ಪಳ ಮಿಂಚುವ ಕಪ್ಪು ಬಣ್ಣದ ಧಿರಿಸಿನಲ್ಲಿ ಶಿಖರ್ ಜೊತೆ ಕಾಣಿಸಿಕೊಂಡು ಒಂದೇ ಕಾರಿನಲ್ಲಿ ಹೊರಟು ಹೋಗಿದ್ದಾರೆ. ಅತ್ತ ಶಿಖರ್ ಬಿಳಿ ಬಣ್ಣದ ಶರ್ಟ್ ಜೊತೆ ಕಡುಗೆಂಪು ಬಣ್ಣದ ಕ್ಯಾಪ್ ಧರಿಸಿದ್ದರು. ಪಪಾರಾಜಿಗಳು ಫೋಟೋ ಕ್ಲಿಕ್ಕಿಸುತ್ತಿದ್ದಂತೆ ಸಾರಾ ನಾಚಿಕೆಯಿಂದಲೇ ಕಿರುನಗೆ ಬೀರುತ್ತಾ ಶಿಖರ್ ಹಾಗೂ ಅಲ್ವಿಯಾ ಜೊತೆ ಕಾರು ಹತ್ತಿ ಹೊರಟು ಹೋಗಿದ್ದಾರೆ.
ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳಿಗೆ ಕಾರಣವಾಗಿದೆ. ವೀಡಿಯೋ ನೋಡಿದ ನೆಟ್ಟಿಗರು ಶುಭಮನ್ ಗಿಲ್‌ಗೆ ಮೊಯೆ ಮೊಯೆ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ವೀಡಿಯೋ ನೋಡಿದ ಜಾನ್ವಿ ಹಾಗೂ ಶುಭಮನ್ ಗಿಲ್ ಸೈಡ್‌ನಲ್ಲಿ ನಿಂತು ಅಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಶುಭಮನ್ ಅವರ ಫಾರ್ಮ್ ಎಷ್ಟು ಹಾಳಾಗಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಡೇಟಿಂಗ್ ಸುದ್ದಿ ಬೆನ್ನಲ್ಲೇ ಜೊತೆಯಾಗಿ ಕಾಣಿಸಿಕೊಂಡ ಶುಬಮನ್ ಗಿಲ್-ಸಾರಾ ತೆಂಡೂಲ್ಕರ್!
ಇನ್ನು ಸಾರಾ ತೆಂಡೂಲ್ಕರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದಾಗಲೆಲ್ಲಾ ನೆಟ್ಟಿಗರು ಅಲ್ಲಿ ಶುಭಮನ್ ಗಿಲ್ಲ ಬಗ್ಗೆ ಏನಾದರು ಕಾಮೆಂಟ್ ಮಾಡಿ ಕಾಲೆಳೆಯುತ್ತಲೇ ಇರುತ್ತಾರೆ. ಇತ್ತ ಶಿಖರ್ ಪಹರಿಯಾ, ನಟಿ ಜಾನ್ವಿ ಕಪೂರ್ ಬಾಯ್‌ಫ್ರೆಂಡ್ ಎಂದೇ ಫೇಮಸ್ ಆಗಿದ್ದು, ಈ ಜೋಡಿ ಗುಟ್ಟಾಗಿ ಮದ್ವೆಯಾಗಿದ್ದಾರೆ ಎಂದು ಕೂಡ ಈ ಹಿಂದೆ ಗಾಸಿಪ್ ಹಬ್ಬಿದ್ದವು. ಇನ್ನು ಇತ್ತೀಚೆಗೆ ತನ್ನ ಸೋದರಿ ಖುಷಿ ಕಪೂರ್ ಜೊತೆ ಕಾಫಿ ವಿತ್ ಕರಣ್ ಟಾಕ್ ಶೋಗೆ ಆಗಮಿಸಿದ್ದ ಜಾನ್ವಿ ತಮ್ಮ ಸ್ಪೀಡ್ ಡಯಲ್‌ನಲ್ಲಿ ಶಿಖರ್ ಪಹರಿಯಾ ಹೆಸರು ಇರೋದಾಗಿ ಹೇಳಿಕೊಂಡಿದ್ದರು. ಸ್ಪೀಡ್ ಡಯಲ್ ಲಿಸ್ಟ್‌ನಲ್ಲಿರುವ ಮೂರು ಜನರು ಯಾರು ಎಂದು ಕೇಳಿದಾಗ, ಜಾನ್ವಿ ಯಾವುದೇ ಸಮಯ ತೆಗೆದುಕೊಳ್ಳದೆ, 'ಪಾಪಾ, ಖುಷು ಮತ್ತು ಶಿಖು' ಎಂದು ಪ್ರತಿಕ್ರಿಯಿಸಿದರು. ಈ ಮೂಲಕ ಜಾನ್ವಿ ಕಪೂರ್ ಶಿಖರ್ ಪಹಾರಿಯಾ ಅವರ ಜೊತೆ ತಮ್ಮ ಸಂಬಂಧವನ್ನು ಖಚಿತ ಪಡಿಸಿದ್ದಾರೆ.