ಸೆಕ್ಸ್‌ ಲೈಫ್‌ ಚೆನ್ನಾಗಿರ್ಬೇಕು ಅಂತ ಭಾರತದದಲ್ಲಿ ಕೆಲವರು ಹೀಗೆಲ್ಲ ಮಾಡ್ತಾರಂತೆ!

By Suvarna News  |  First Published Jun 29, 2023, 2:31 PM IST

ಸೆಕ್ಸ್‌ನಲ್ಲಿ ಆಸಕ್ತಿ ತರಿಸಿಕೊಳ್ಳಲು ಹಲವು ಇಂಡಿಯನ್ಸ್ ಈ ಟ್ರಿಕ್ಸ್ ಫಾಲೋ ಮಾಡ್ತಾರಂತೆ. ಅಂಥದ್ದು ಈ ಏನಿದೆ ಈ ಟ್ರಿಕ್ಸ್‌ನಲ್ಲಿ..


ಬರೀ ಬೆಡ್‌ರೂಮೇ ಆಯ್ತು. ಹಾಲ್‌ನಲ್ಲಿ ಒಂದು ಸಲವಾದರೂ! ಅಥವಾ ಕಿಚನ್‌ ಕ್ಯಾಬಿನೆಟ್‌ನಲ್ಲಿ! ಒಮ್ಮೆಯಾದರೂ ಸೆಕ್ಸ್‌ ಟಾಯ್‌ ಬಳಸಬೇಕು! ಸಾಮಾನ್ಯವಾಗಿ ಭಾರತೀಯ ಮಧ್ಯಮವರ್ಗದ ವಿವಾಹಿತರ ಫ್ಯಾಂಟಸಿಗಳು ಹೀಗಿರ್ತವೆ. ಜೊತೆಯಲ್ಲಿ ಅತ್ತೆ- ಮಾವ ಅಪ್ಪ- ಅಮ್ಮ ಇಲ್ಲದ ಪಟ್ಟಣವಾಸಿ ಫ್ಯಾಮಿಲಿಗಳು ಈ ಫ್ಯಾಂಟಸಿಯನ್ನು ಹೇಗೋ ಈಡೇರಿಸಿಕೊಳ್ತವೆ ಅನ್ನೋಣ. ಆದ್ರೆ ಬಂಧುಗಳೆಲ್ಲ ಮನೇಲಿದ್ರೆ ಅದೇ ಅಡ್ಡಿ.

ಹೀಗಿರುವ ಭಾರತೀಯ ಫ್ಯಾಮಿಲಿಗಳಲ್ಲಿ (Indian Families) ದೊಡ್ಡ ದೊಡ್ಡ ಫ್ಯಾಂಟಸಿಗಳೂ (Fantacy) ಇರುತ್ತವಾ? ಅಂತ ಕೇಳಿದ್ರೆ, ಹೌದು, ಇನ್ನಷ್ಟು ದೊಡ್ಡ, ನೀವು ಬೆಚ್ಚಿ ಬೀಳುವಂಥ ಕನಸುಗಳು, ಫ್ಯಾಂಟಸಿಗಳು ಗಂಡ- ಹೆಂಡತಿಯ ಮನದಲ್ಲಿ ಇರುತ್ತವಂತೆ. ಸೆಕ್ಸ್‌ ಲೈಫ್‌ನಲ್ಲಿ (Sex Life) ಇರುವ ಏಕತಾನತೆ ಹೊಡೆದೋಡಿಸಲು ಭಾರತೀಯರು ಬಯಸುವ ಫ್ಯಾಂಟಸಿಗಳು ಇಲ್ಲಿವೆ. ಇದು ಒಂದು ಸಮೀಕ್ಷೆಯಲ್ಲಿ ಕಂಡು ಬಂದ ಅಂಶಗಳಂತೆ. ಭಾರತದ ಹಲವು ಮೆಟ್ರೋ ಪಟ್ಟಣಗಳಲ್ಲಿ ಈ ಸರ್ವೆ ನಡೆಸಲಾಗಿದೆ. ಎರಡು ಸಾವಿರಕ್ಕೂ ಅಧಿಕ ದಂಪತಿಗಳನ್ನು ಈ ವಿಷಯದಲ್ಲಿ ಮಾತನಾಡಿಸಲಾಗಿದೆ. ಅಲ್ಲಿ ಕಂಡುಬಂದ ಅಂಶಗಳಿವು.

Tap to resize

Latest Videos

ಬೇರೊಬ್ಬರ ಜೊತೆಗೆ!
ಹೌದು, ಸುಖೀ ಸೆಕ್ಸ್‌ ಜೀವನ (Happy Sexual Life) ನಡೆಸುತ್ತಿರುವ ಗಂಡ ಅಥವಾ ಹೆಂಡತಿಯರಲ್ಲಿ ಕೂಡ ಬೇರೊಬ್ಬರ ಜೊತೆಗೆ ಸೆಕ್ಸ್‌ ಮಾಡಬೇಕು ಎಂಬ ಬಯಕೆ ಒಂದಲ್ಲ ಒಂದು ಸಲ ಹೆಡೆ ಎತ್ತುತ್ತದಂತೆ. ಸುಮಾರು 19% ಪುರುಷರು ಹಾಗೂ 18% ಮಹಿಳೆಯರು ತಮಗೆ ಬೇರೊಬ್ಬಳ/ನ ಕೂಡ ಸೆಕ್ಸ್‌ ಅನುಭವ ಪಡೆಯಬೇಕು ಎಂದು ಕಾತರಿಸಿದ್ದು ಉಂಟು ಎಂದು ಒಪ್ಪಿಕೊಂಡಿದ್ದಾರೆ! ಆದರೆ ಇದರಿಂದ ಉಂಟಾಗುವ ರಿಸ್ಕ್‌ಗಳನ್ನು ತಂದುಕೊಳ್ಳಲು ಸಿದ್ಧರಿಲ್ಲ.

ಒನ್‌ ನೈಟ್‌ ಸ್ಟಾಂಡ್‌ (One Night Stand)
ಒನ್‌ ನೈಟ್‌ ಸ್ಟಾಂಡ್‌ ಅಥವಾ ಒಂದು ರಾತ್ರಿಯ ಸುಖ ಉಣ್ಣಬೇಕು ಎಂಬ ಬಹಳ ಮಂದಿ ಬಯಸುತ್ತಾರಂತೆ. ಕೆಲವೊಮ್ಮೆ ಪರಿಚಿತರ ಜತೆ, ಕೆಲವೊಮ್ಮೆ ಅಪರಿಚಿತರಾದರೂ ಸರಿ, ಒಳ್ಳೆಯ ಜೋಡಿ ಎನಿಸುವ ಪುರುಷ/ ಮಹಿಳೆ ಜತೆ ಕಳೆದು ಬರಬೇಕು ಎಂದು ಹಾತೊರೆಯುತ್ತಾರಂತೆ. ಕಚೇರಿಯ ಸಹೋದ್ಯೋಗಿ (Colleague) ಜತೆ ಹೀಗೆ ಹೊತ್ತು ಕಳೆಯಬೇಕು ಎಂದು ಬಹುಮಂದಿ ಆಸೆಪಡುತ್ತಾರೆ. 23% ಪುರುಷರು ಹಾಗೂ 20% ಸ್ತ್ರೀಯರು ಹೀಗೆ ಆಸೆಪಡುತ್ತಾರಂತೆ.

ಆನ್ ಲೈನ್ Sextortion ಎಂದರೇನು? ಸೋಷಿಯಲ್ ಮೀಡಿಯಾ ಬಗ್ಗೆ ಇರಲಿ ಎಚ್ಚರ!

ಫ್ಲರ್ಟಿಂಗ್‌ (Flirting)
ಫ್ಲರ್ಟಿಂಗ್‌ ಅಥವಾ ಚಕ್ಕಂದ ಹೊಡೆಯುವುದು- ಇದು ಬಹುತೇಕರು ಬಯಸುವ ಸಂಗತಿ. ಮದುವೆಯಾದ ಸಂಗಾತಿ ಅಲ್ಲದೆ ಬೇರೊಬ್ಬರ ಜತೆ ಕೆಲವೊಮ್ಮೆ ಫ್ಲರ್ಟ್‌ ಮಾಡಲು ಹಾತೊರೆಯುತ್ತಾರೆ. ಯಾಕೆಂದರೆ ಹೀಗೆ ಫ್ಲರ್ಟ್‌ ಮಾಡುವ ಮೂಲಕ ತಾವಿನ್ನೂ ಆಕರ್ಷಕ, ಆಸೆಪಡುವಂಥ ವ್ಯಕ್ತಿತ್ವ ಎಂದು ಸಾಧಿಸಬಯಸುತ್ತಾರೆ. ಮಾಡುತ್ತಾರೋ ಇಲ್ಲವೋ ಬೇರೆ ಮಾತು. 26% ಪುರುಷರು ಹಾಗೂ 22% ಸ್ತ್ರೀಯರು ಹೀಗೆ ಅಂದುಕೊಳ್ಳುತ್ತಾರೆ ಎಂದು ಗೊತ್ತಾಗಿದೆ.

ವರ್ಚುವಲ್‌ ಶೃಂಗಾರ (Virutal Sex)
ನೇರವಾಗಿ ಸರಸಕ್ಕಿಳಿಯಲು ಆತಂಕಪಡುವ ಬಹಳ ಮಂದಿ, ವರ್ಚುವಲ್‌ ಆಗಿ ಸರಸಕ್ಕಿಳಿಯಲು ಬಯಸುತ್ತಾರಂತೆ. ಆನ್‌ಲೈನ್‌ನಲ್ಲಿ(online) ಟ್ರಾಪ್‌ ಆಗುವ ಭಯ ಹೊರತುಪಡಿಸಿದರೆ, ವರ್ಚುವಲ್‌ ಆಗಿ ಸಲ್ಲಾಪದಿಂದ ಹಿಡಿದು ಸೆಕ್ಸ್‌ವರೆಗೂ(sex) ಎಷ್ಟು ಸಾಧ್ಯವೋ ಅಷ್ಟು ಸುಖಪಡುವ ಹಪಹಪಿ ಹಲವರಿಗಿದೆ. ಇದರಲ್ಲಿ ಸುರಕ್ಷಿತ, ನಂಬಲರ್ಹ ಸಂಗಾತಿಗಳನ್ನು ಅಪೇಕ್ಷಿಸುತ್ತಾರೆ. 31% ಪುರುಷರು ಹಾಗೂ 24% ಸ್ತ್ರೀಯರು ಹೀಗೆ ಬಯಸುತ್ತಾರಂತೆ.

ಮೈ ಮರೆತು ತಂದೆಗೇ ಲಿಪ್‌ ಲಾಕ್‌ ಮಾಡಿದ್ದ ನಟಿ, ಪೋಷಕರ ಮೇಲೆಯೇ ಲೈಂಗಿಕಾಸಕ್ತಿ, ಏನಿದು ಈಡಿಪಸ್ ಕಾಂಪ್ಲೆಕ್ಸ್?

ಫ್ಯಾಂಟಸಿ ಮತ್ತು ರಿಯಾಲಿಟಿ (Fantacy and Reality)
ಈ ಪಟ್ಟಿಯಲ್ಲಿ ಕೊನೇಯಲ್ಲಿ ಇರೋದು ತಮ್ಮ ಜತೆಗೆ ಈಗಿರುವ ಸಂಗಾತಿಯೇ ಜತೆಗೇ ಸೆಕ್ಸ್!‌ ಆದರೆ ಬೇರೆ ಸ್ಥಳದಲ್ಲಿ, ಬೇರೆ ಸ್ವರೂಪದಲ್ಲಿ, ಬೇರೆ ರೀತಿಯಲ್ಲಿ. ತಮ್ಮ ಸಂಗಾತಿ ಹೊಸ ವ್ಯಕ್ತಿಯಾಗಿ ಬರಲಿ ಎಂದು ಹಾರೈಸುವವರು ಉಂಟು. ಸಂಗಾತಿಗೆ ಉದ್ರೇಕಕಾರಿ ಬಟ್ಟೆ(Provoking dress) ಧರಿಸುವಂತೆ ಆಸೆಪಡುವವರುಂಟು. 26% ಪುರುಷರು ಹಾಗೂ 22% ಸ್ತ್ರೀಯರು ಹೀಗೆ ಇದ್ದಲ್ಲೇ ಇದ್ದವರಲ್ಲೇ ಹೊಸ ಸುಖ ಪಡೆಯಲು ಆಸೆಪಡುತ್ತಾರೆ ಅಂತ ಗೊತ್ತಾಗಿದೆ.

click me!