ಇಲ್ಲೊಂದು ಕಡೆ ಮನುಷ್ಯ ಹಾಗೂ ಆನೆಯ ನಡುವಿನ ಪ್ರೀತಿಯನ್ನು ಸಾರುವ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿದೆ.
ಮನುಷ್ಯ ಹಾಗೂ ಪ್ರಾಣಿಗಳ ಒಡನಾಟದ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಮನುಷ್ಯ ಹೇಗೆ ಪ್ರೀತಿ ತೋರುತ್ತಾನೋ ಅದಕ್ಕಿಂತ ತುಸು ಜಾಸ್ತಿಯೇ ಪ್ರಾಣಿಗಳು ಮನುಷ್ಯನ ಮೇಲೆ ಪ್ರೀತಿ ತೋರುತ್ತವೆ. ಸಾಕುಪ್ರಾಣಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದೇ ರೀತಿ ಇಲ್ಲೊಂದು ಕಡೆ ಮನುಷ್ಯ ಹಾಗೂ ಆನೆಯ ನಡುವಿನ ಪ್ರೀತಿಯನ್ನು ಸಾರುವ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿದೆ.
ಆನೆಯೊಂದು ತನ್ನ ಮಾಲೀಕ ತನ್ನ ಬಿಟ್ಟು ಹೋಗದಂತೆ ತಡೆಯುತ್ತಿರುವ ವೀಡಿಯೋ ಇದಾಗಿದೆ. ಒಂದು ನಿಮಿಷ 48 ಸೆಕೆಂಡ್‌ಗಳ ಈ ವೀಡಿಯೋವನ್ನು ಅನಂತ್ ರೂಪನಗುಡಿ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಆನೆಯ ಪಾಲಕ ಹಾಗೂ ಆನೆಯ ನಡುವಿನ ಒಡನಾಟವಿದು, ಆನೆ ತನ್ನ ನೋಡಿಕೊಳ್ಳುವವನ್ನು ಬಿಟ್ಟು ಹೋಗುವುದಕ್ಕೆ ಬಿಡುತ್ತಿಲ್ಲ ಎಂದು ಬರೆದು ಈ ವೀಡಿಯೋವನ್ನು ಅನಂತ್ ರೂಪನಗುಡಿ ಪೋಸ್ಟ್ ಮಾಡಿದ್ದಾರೆ. ರಸ್ತೆಯೊಂದರಲ್ಲಿ ಈ ವೀಡಿಯೋವನ್ನು ಸೆರೆ ಹಿಡಿಯಲಾಗಿದೆ.
ವೀಡಿಯೋದಲ್ಲಿ ಏನಿದೆ?
ರಸ್ತೆಯಲ್ಲಿ ಆನೆ ಹಾಗೂ ಆನೆಯನ್ನು ನೋಡಿಕೊಳ್ಳುವವ ಹಾಗೂ ಮತ್ತೊರ್ವ ಇದ್ದಾರೆ, ಜೊತೆಗೆ ಒಂದು ಮೊಪೆಡ್ ರೀತಿಯ ಗಾಡಿ ಇದ್ದು, ಓರ್ವ ಈ ಗಾಡಿಯನ್ನು ಸ್ಟಾರ್ಟ್ ಮಾಡಿದ್ದರೆ. ಆನೆ ಮಾಲೀಕ ಹಿಂಬದಿ ಸವಾರನಾಗಿ ಗಾಡಿ ಮೇಲೆ ಕೂರಲು ನೋಡುತ್ತಾನೆ. ಆದರೆ ಅಲ್ಲೇ ಇದ್ದ ಆನೆ ಏನು ಮಾಡಿದರು ಮಾಲೀಕ ತನ್ನನ್ನು ಬಿಟ್ಟು ಹೋಗುವುದಕ್ಕೆ ಸುತಾರಾಂ ಒಪ್ಪುತ್ತಿಲ್ಲ, ಗಾಡಿ ಮೇಲೆ ಕೂತಿದ್ದ ಆತನನ್ನು ಸೊಂಡಿಲಿನಿಂದ ಎಳೆದು ಕೆಳಗಿಳಿಸಿದ ಆನೆ ಬಳಿಕ ಆತನನ್ನು ತನ್ನ ಬಾಲದಲ್ಲಿ ಸುತ್ತಿ ಹಿಡಿದು ಎಳೆದುಕೊಂಡು ಹೋಗುತ್ತದೆ. ಈ ವೇಳೆ ಮತ್ತೆ ಆನೆಯಿಂದ ತಪ್ಪಿಸಿಕೊಂಡು ಬರುವ ಮಾಲೀಕ ಮತ್ತೆ ಗಾಡಿ ಮೇಲೆ ಕೂರಲು ಯತ್ನಿಸಿದ್ದು, ಈ ವೇಳೆಯೂ ಆನೆ ಮಾತ್ರ ಆತನನ್ನು ಗಾಡಿ ಏರುವುದಕ್ಕೆ ಏನು ಮಾಡಿದರು ಬಿಡುವುದೇ ಇಲ್ಲ..
ದಾರಿಮಧ್ಯೆ ಸಂಕಷ್ಟಕ್ಕೊಳಗಾದ ಒಡತಿಯ ಸುರಕ್ಷಿತವಾಗಿ ಕರೆತಂದ ಶ್ವಾನ: ಕ್ಯಾಮರಾದಲ್ಲಿ ದೃಶ್ಯ ಸೆರೆ
ಈ ವೀಡಿಯೋ ನೋಡಿದ ಅನೇಕರು ಇವರಿಬ್ಬರ ಒಡನಾಡ ಬಹಳ ಪ್ರೀತಿಯಿಂದ ತುಂಬಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ನೋಡಿದ ಮೇಲೆ ನನಗೂ ಆನೆ ಸಾಕುವ ಮನಸಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆತ ತನ್ನ ಪಾಲಕನನ್ನು ಬೈಕ್‌ನಿಂದ ಇಳಿಸುವ ವೇಳೆ ಆತನಿಗೆ ನೋವಾಗದಂತೆ ಎಷ್ಟು ಕಾಳಜಿಯಿಂದ ನಿರ್ವಹಿಸುತ್ತಾನೆ ನೋಡಿ ಎಂದು ಆನೆಯ ಬುದ್ಧಿವಂತಿಕೆ ಹಾಗೂ ಕಾಳಜಿಯನ್ನು ಮತ್ತೊಬ್ಬರು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಪ್ರಾಣಿಗಳು ಸ್ವಲ್ಪ ಪ್ರೀತಿ ತೋರಿದರೆ ತನ್ನ ಪ್ರೀತಿಸುವವನಿಗಾಗಿ ಏನು ಮಾಡಲು ಸಿದ್ಧವಿರುತ್ತವೆ ಎಂಬುದನ್ನು ಈ ವೀಡಿಯೋ ಸಾಬೀತುಪಡಿಸಿದೆ.
ಮೊಲ ಆಮೆಯ ಓಟದ ಕತೆ ಕೇಳಿದ್ದೀರಾ.... ಈ ಕತೆ ನಿಜ ಅಂತ ಹೇಳ್ತಿರುವ ವೀಡಿಯೋ ಇಲ್ಲಿದೆ ನೋಡಿ
ಆದರೆ ಇತ್ತೀಚೆಗೆ ಕಾಡುಗಳ ನಾಶದಿಂದಾಗಿ ಆನೆ ಎಂದರೆ ಭಯಪಡುವವರೇ ಹೆಚ್ಚಾಗಿದ್ದಾರೆ. ಕಾಡುಗಳ ನಾಶದಿಂದಾಗಿ ಕಾಡು ಪ್ರಾಣಿಗಳಾದ ಆನೆ, ಹುಲಿ, ಚಿರತೆ ಮುಂತಾದವುಗಳು ಆಗಾಗ ಆಹಾರ ಅರಸುತ್ತಾ ಕಾಡಂಚಿನಲ್ಲಿರುವ ಗ್ರಾಮಗಳಿಗೆ ಬಂದು ದಾಳಿ ಮಾಡಿ ಕೃಷಿ ಭೂಮಿಯ ಜೊತೆ ಮನುಷ್ಯರ ಪ್ರಾಣವನ್ನು ತೆಗೆದಂತಹ ಹಲವು ಘಟನೆಗಳು ನಡೆದಿವೆ. ಆದರೆ ಈ ದೃಶ್ಯ ಮಾತ್ರ ಅಂತಹ ಘಟನೆಗಳಿಗೆ ತದ್ವಿರುದ್ಧವಾಗಿದೆ.
The bonding between the elephant and it's caretaker - it won't just let him go! ❤️ pic.twitter.com/AOkTmi7ceJ
— Ananth Rupanagudi (@Ananth_IRAS)