200 ಕೊರೋನಾ ಮೃತದೇಹ ಸಾಗಿಸಿದ ಆಂಬುಲೆನ್ಸ್ ಚಾಲಕ ಕೋವಿಡ್‌ಗೆ ಬಲಿ

By Suvarna News  |  First Published Oct 11, 2020, 12:25 PM IST

ಮಾರ್ಚ್‌ನಿಂದ ಕೊರೋನಾ ಸೇವೆಯಲ್ಲಿ ತೊಡಗಿದ್ದ ಚಾಲಕ | 200 ಸೋಂಕಿತ ಮೃತದೇಹ ಸಾಗಣೆ | 


ಕಳೆದ 6 ತಿಂಗಳಿಂದ ಪಾರ್ಕಿಂಗ್ ಸ್ಲಾಟ್‌ನಲ್ಲೇ ಮಲಗಿ, ಎದ್ದು ಕರ್ತವ್ಯ ನಿರ್ವಹಿಸಿದ್ದ ಆಂಬುಲೆನ್ಸ್ ಚಾಲಕ ಆರಿಫ್ ಖಾನ್ ಕೊರೋನಾಗೆ ಬಲಿಯಾಗಿದ್ದಾರೆ. ದೆಹಲಿಯ ಸೀಲಂಪುರದಲ್ಲಿರುವ ತನ್ನ ಮನೆ, ಪತ್ನಿ, ನಾಲ್ವರು ಮಕ್ಕಳನ್ನೂ ಫೋನ್‌ ಮೂಲಕ ಮಾತ್ರ ಸಂಪರ್ಕಿಸಿದ್ದ ಈತ ಕೊರೋನಾ ಸೋಂಕು ಎಂದು ಕಷ್ಟದಲ್ಲಿದ್ದ ಜನರ ಬಳಿ ಓಡಿ ತಲುಪುತ್ತಿದ್ದರು.

24*7 ಆಂಬುಲೆನ್ಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕ 200ಕ್ಕೂ ಹೆಚ್ಚು ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಸಾಗಿಸಿದ್ದರು. ಶನಿವಾರ ಬೆಳಗ್ಗೆ ಈ ಸ್ವತಃ ಕೊರೋನಾ ರೋಗಿಯಾಗಿ ಹಿಂದೂ ರಾವ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Latest Videos

undefined

ಬಸ್ಸಿನ ಖರ್ಚಿಗೆ 500 ರೂಪಾಯಿ ಸಾಲ ಕೊಟ್ಟಿದ್ದ ಶಿಕ್ಷಕನಿಗೆ 30 ಲಕ್ಷದ ಗಿಫ್ಟ್ ಕೊಟ್ಟ ಉದ್ಯಮಿ

ಶಾಹೀದ್ ಭಗತ್ ಸಿಂಗ್ ಸೇವಾ ದಳದೊಂದಿಗೆ ಕೆಲಸ ಮಾಡಿ ಎಮರ್ಜೆನ್ಸಿ ಇದ್ದಲ್ಲಿಗೆ ಆಂಬುಲೆನ್ಸ್ ತಲುಪಿಸುತ್ತಿದ್ದ ಇವರು ಬಡವರಿಗೆ ಅಂತ್ಯಸಂಸ್ಕಾರ ನಡೆಸಲು ತಮ್ಮಿಂದಾದ ಧನಸಹಾಯವನ್ನೂ ಮಾಡುತ್ತಿದ್ದರು. ಮೃತರ ಸಂಬಂಧಿಕರು ಸಮೀಪದಲ್ಲಿರದಿದ್ದರೆ ಅಂತ್ಯ ಸಂಸ್ಕಾರವನ್ನೂ ಮಾಡುತ್ತಿದ್ದರು ಎಂದಿದ್ದಾರೆ ಇವರ ಸಹುದ್ಯೋಗಿಗಳು.

ಎಲ್ಲರಿಗೂ ಸರಿಯಾದ ರೀತಿಯ ವಿವಾದ ಸಿಗಬೇಕು ಎಂದು ಬಯಸುತ್ತಿದ್ದ ಆರಿಫ್ ಖಾನ್‌ಗೆ ಮಾತ್ರ ಸರಿಯಾದ ಅಂತ್ಯ ಸಂಸ್ಕಾರ ನೀಡಲು ಅವರ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಬಹಳ ದೂರ ನಿಂತು ಅವರ ಕುಟುಂಬಸ್ಥರು ಅವರನ್ನು ಕೊನೆಯದಾಗಿ ನೋಡಿದ್ದಾರೆ. ಖಾನ್ ಮಾರ್ಚ್‌ನಲ್ಲಿ ಕೊರೋನಾ ಆರಂಭವಾದಾಗಿನಿಂದ 200ರಷ್ಟು ಮೃತದೇಹ ಸಾಗಿಸಿದ್ದಾರೆ ಎಂದಿದ್ದಾರೆ ಅವರ ಸಹುದ್ಯೋಗಿ ಜಿತೇಂದರ್.

ಡಾಕ್ಟರ್ ಮಗು ಆಗೊಲ್ಲ ಎಂದಾಗ ಈ ಸೆಲೆಬ್ರಿಟಿಗಳು ಮಾಡಿದ್ದೇನು?

ಅಕ್ಟೋಬರ್ 3ರಂದು ಖಾನ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೊರೋನಾ ಪರೀಕ್ಷೆಯಲ್ಲಿ ಫಲಿತಾಂಶ ಪಾಸಿಟಿವ್ ಬಂದಿದೆ.  ಆಸ್ಪತ್ರೆಗೆ ದಾಖಲಾಗಿ ಒಂದೇ ದಿನದಲ್ಲಿ ಇವರು ಮೃತಪಟ್ಟಿದ್ದಾರೆ. ಕಳೆದ ಆರು ತಿಂಗಳಲ್ಲಿ ಒಂದೇ ಬಾರಿ ಮನೆಗೆ ಹೋಗಿದ್ದರು ಖಾನ್. ನಾವು ಒಂದು ಬಾರಿ ಬಟ್ಟೆ ತೆಗೆದುಕೊಳ್ಳಲು ಬಂದಿದ್ದಾಗ ಮಾತ್ರ ಭೇಟಿಯಾಗಿದ್ದೆವು. ನಮಗೆ ಅವರ ಬಗ್ಗೆ ಹೆಚ್ಚು ಭಯವಿತ್ತು. ಆದರೆ ಅವರಿಗೆ ಕೊರೋನಾ ಬಗ್ಗೆ ಭಯವಿರಲಿಲ್ಲ, ತಮ್ಮ ಕರ್ತವ್ಯ ಮಾಡಬೇಕೆಂದಷ್ಟೇ ಹೇಳಿದ್ದರು ಎಂದಿದ್ದಾರೆ ಖಾನ್ ಪುತ್ರ ಆದಿಲ್. ಖಾನ್ ದಿನಕ್ಕೆ 16 ಸಾವಿರ ಸಂಪಾದಿಸುತ್ತಿದ್ದರು. ಅದರಲ್ಲಿ ಮನೆ ಬಾಡಿಗೆಯೇ 9 ಸಾವಿರ ಇತ್ತು.

click me!