ರಾಧಿಕಾ ಮರ್ಚೆಂಟ್ ಹಾಗೂ ಅಂಬಾನಿ ಮದುವೆ ಅದ್ಧೂರಿಯಾಗಿ ನಡೆದಿತ್ತು. ಎರಡು ತಿಂಗಳುಗಳ ಕಾಲ ನಡೆದ ಸಂಭ್ರಮಾಚರಣೆ ವಿಡಿಯೋಗಳು ಈಗ್ಲೂ ವೈರಲ್ ಆಗ್ತಾನೆ ಇದೆ. ಈಗ ರಾಧಿಕಾ ಅರಿಶಿನದ ವಿಡಿಯೋ ಟ್ರೋಲ್ ಆಗಿದೆ.
ರಾಧಿಕಾ ಮರ್ಚೆಂಟ್ (Radhika Merchant) ಹಾಗೂ ಅನಂತ್ ಅಂಬಾನಿ (Anant Ambani) ಮದುವೆಯಾಗಿ ಆರು ತಿಂಗಳಾಗ್ತಾ ಬಂತು. ಆದ್ರೂ ಇವರಿಬ್ಬರ ಮದುವೆ ಸುದ್ದಿ ಇನ್ನೂ ಸದ್ದು ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ, ಫೋಟೋಗಳು ವೈರಲ್ ಆಗ್ತಾನೇ ಇದೆ. ಈಗ ಮತ್ತೊಂದು ವಿಡಿಯೋ ಚರ್ಚೆಗೆ ಗ್ರಾಸವಾಗಿದೆ. ರಾಧಿಕಾ ಹಳದಿ ಸಮಾರಂಭದಲ್ಲಿ ಆಕಾಶ್ ಅಂಬಾನಿ (Akash Ambani) ಏನ್ ಮಾಡಿದ್ರು ಎಂಬುದು ವಿಡಿಯೋದಲ್ಲಿದೆ.
ರಾಧಿಕಾ ಹಾಗೂ ಅನಂತ್ ಅಂಬಾನಿ ಹಳದಿ ಸಮಾರಂಭಕ್ಕೆ ಬಾಲಿವುಡ್ ದಂಡೇ ಬಂದಿತ್ತು. ಸೆಲೆಬ್ರಿಟಿಗಳು ಹಳದಿ ಸಮಾರಂಭವನ್ನು ಎಂಜಾಯ್ ಮಾಡಿದ್ರು. ಅನಂತ್ ಅಂಬಾನಿ ಸಹೋದರ, ರಾಧಿಕಾ ಮರ್ಚೆಂಟ್ ಭಾವ ಆಕಾಶ್ ಅಂಬಾನಿ ಕೂಡ ಹಳದಿ ಶಾಸ್ತ್ರವನ್ನು ಸಂಪೂರ್ಣ ಎಂಜಾಯ್ ಮಾಡಿದ್ದಾರೆ. ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ. ಈ ವಿಡಿಯೋದಲ್ಲಿ ಆಕಾಶ್ ಅಂಬಾನಿ, ರಾಧಿಕಾ ಅಂಬಾನಿಗೆ ಅರಿಶಿನ ಹಚ್ಚುತ್ತಿದ್ದಾರೆ. ಆದ್ರೆ ಅವರು ರಾಧಿಕಾ ಹೊಟ್ಟೆಗೆ ಅರಿಶಿನ ಹಚ್ಚಿದ್ದು, ಎಲ್ಲರ ಗಮನ ಸೆಳೆದಿದೆ. ಅನೇಕರು ಈ ವಿಡಿಯೋ ನೋಡಿ ಕೋಪಗೊಂಡಿದ್ದಾರೆ. ಹಿಂದೂ ಸಂಪ್ರದಾಯವನ್ನು ಅತ್ಯಂತ ಅಚ್ಚುಕಟ್ಟಾಗಿ ಆಚರಿಸುವ ಅಂಬಾನಿ ಕುಟುಂಬಕ್ಕೆ, ಹಿರಿಯ ಸಹೋದರ ತನ್ನ ಕಿರಿಯ ಸಹೋದರನ ಪತ್ನಿಗೆ ಅರಿಶಿನ ಹಚ್ಚಬಾರದು ಎಂಬ ಸಂಪ್ರದಾಯ ತಿಳಿದಿಲ್ಲವೇ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿ ಆಕಾಶ್ ಅಂಬಾನಿ, ರಾಧಿಕಾ ಅಂಬಾನಿ ಹೊಟ್ಟೆಗೆ ಅರಿಶಿನ ಹಚ್ಚುತ್ತಿದ್ರೆ ರಾಧಿಕಾ ನಗ್ತಿದ್ದಾರೆ. ಈ ವಿಡಿಯೋ ನೋಡಿದ ಬಳಕೆದಾರರು, ಇದನ್ನು ವಿರೋಧಿಸಿದ್ದಾರೆ. ಆದ್ರೆ ಕೆಲವರು ಆಕಾಶ್ ಬೆಂಬಲಕ್ಕೆ ಬಂದಿದ್ದಾರೆ. ಈ ವಿಡಿಯೋ ಎಡಿಟ್ ಮಾಡಲಾಗಿದೆ, ಆಕಾಶ್ ಅಂಬಾನಿ ಹಾಗೆ ಮಾಡಿಲ್ಲ ಎನ್ನುತ್ತಿದ್ದಾರೆ. ಈ ವಿಡಿಯೋ ಎಡಿಟ್ ಮಾಡಲಾಗಿದೆಯೇ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
undefined
ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಹೈಫೈ ಪತ್ನಿಗೆ ಉಗಿದು ಕಳಿಸಿದ ನ್ಯಾಯಾಧೀಶೆ: ಕೋರ್ಟ್
ಈ ಹಿಂದೆ ಕೂಡ ರಾಧಿಕಾ ಹಾಗೂ ಆಕಾಶ್ ವಿಡಿಯೋ ಒಂದು ಚರ್ಚೆಗೆ ಬಂದಿತ್ತು. ಅದ್ರಲ್ಲಿ ಆಕಾಶ್, ರಾಧಿಕಾ ಸೊಂಟ ಬಳಸಿ, ಅವರನ್ನು ಹಿಡಿದುಕೊಂಡಿದ್ದರು. ಇದನ್ನು ನೋಡಿದ ಬಳಕೆದಾರರು, ಆಕಾಶ್ ಕೆಲಸವನ್ನು ಖಂಡಿಸಿದ್ದರು. ಇನ್ನೊಂದು ವಿಡಿಯೋದಲ್ಲಿ ರಾಧಿಕಾ, ಬರ್ತ್ ಡೇ (Birthday) ಸಂಭ್ರಮದಲ್ಲಿ ಆಕಾಶ್ ಅಂಬಾನಿಗೆ ಕೇಕ್ ತಿನ್ನಿಸಲು ಮುಂದಾದ್ರೆ ಆಕಾಶ್ ನಿರಾಕರಿಸಿದ್ದರು. ಅಂಬಾನಿ ಕುಟುಂಬಸ್ಥರ ಒಂದೊಂದೇ ವಿಡಿಯೋ ನಿತ್ಯ ವೈರಲ್ ಆಗ್ತಾನೆ ಇರುತ್ತೆ.
ಆಕಾಶ್ ಹಾಗೂ ಶ್ಲೋಕಾ ಲವ್ ಸ್ಟೋರಿಯನ್ನು ಬಹುತೇಕರು ಮೆಚ್ಚಿಕೊಳ್ತಾರೆ. ಅವರಿಬ್ಬರು ಪರ್ಫೆಕ್ಟ್ ಕಪಲ್ ಎನ್ನಲಾಗುತ್ತದೆ. ಶ್ಲೋಕಾಗೆ ಆಕಾಶ್ ಸದಾ ಬೆಂಬಲ ನೀಡ್ತಾರೆ. ಪತ್ನಿ ಜೊತೆಗಿರುವ ಆಕಾಶ್ ವಿಡಿಯೋಗಳು, ಬಳಕೆದಾರರ ಮನಗೆದ್ದಿದ್ದಿದೆ. ಆದ್ರೆ ರಾಧಿಕಾ ಮಾತ್ರ ಅನೇಕ ಬಾರಿ ಟ್ರೋಲ್ ಆಗ್ತಿರುತ್ತಾರೆ. ಮುಖೇಶ್ ಅಂಬಾನಿ ರಾಧಿಕಾ ಜೊತೆ ನಡೆದುಕೊಳ್ಳೋದು ಬಳಕೆದಾರರಿಗೆ ಇಷ್ಟವಾಗೋದಿಲ್ಲ.
4 ಸಂದರ್ಭಗಳಲ್ಲಿ ಗಂಡ ತನ್ನ ಹೆಂಡತಿಯನ್ನು ಬಿಟ್ಟು ಹೋಗಬಹುದು
ರಾಧಿಕಾ ಬಾಲ್ಯದಿಂದಲೂ ಅಂಬಾನಿ ಕುಟುಂಬದ ಜೊತೆ ವಿಶೇಷ ಬಾಂಡಿಂಗ್ ಹೊಂದಿದ್ದರು. ಅನಂತ್ ಜೊತೆ ಮದುವೆಗೂ ಮುನ್ನವೇ ಅಂಬಾನಿ ಕುಟುಂಬಕ್ಕೆ ಹತ್ತಿರವಾಗಿದ್ದರು. ಹಾಗಾಗಿ ರಾಧಿಕಾರನ್ನು ಅಂಬಾನಿ ಕುಟುಂಬಸ್ಥರು ತಮ್ಮ ಮನೆಯ ಹುಡುಗಿ, ಮನೆ ಮಗಳಂತೆ ನೋಡ್ತಾರೆ. ಅವರ ಜೊತೆ ಎಲ್ಲರೂ ಅತಿ ಕ್ಲೋಸ್ ಆಗಿದ್ದಾರೆ. ಆಕಾಶ್ ಅಂಬಾನಿ, ಮುಖೇಶ್ ಅಂಬಾನಿ ಮಾತ್ರವಲ್ಲ ನೀತಾ ಅಂಬಾನಿ, ಶ್ಲೋಕಾ ಅಂಬಾನಿ (Shloka Ambani), ಇಶಾ ಅಂಬಾನಿ (Isha Ambani) ಎಲ್ಲರ ಅಚ್ಚುಮೆಚ್ಚಿನ ಸದಸ್ಯೆ ರಾಧಿಕಾ. ರಾಧಿಕಾ ಹಾಗೂ ಅನಂತ್ ಅಂಬಾನಿ ಮದುವೆ ಜುಲೈ 12ರಂದು ನಡೆದಿದೆ. ಸತತ ಎರಡು ತಿಂಗಳ ಕಾಲ ಮದುವೆ ಸಮಾರಂಭ ನಡೆದಿತ್ತು. 2024ರ ಅತ್ಯಂತ ಪ್ರಸಿದ್ಧ ಮದುವೆಯಲ್ಲಿ ಅನಂತ್ ರಾಧಿಕಾ ಮದುವೆ ಸೇರಿದೆ.