ಬಾಯ್‌ಫ್ರೆಂಡ್‌ಗಾಗಿ ಜುಟ್ಟು ಹಿಡಿದು ನಡು ರಸ್ತೇಲೇ ಕಿತ್ತಾಡಿದ ಹುಡುಗೀರು! ವಿಡಿಯೋ ವೈರಲ್

By Roopa Hegde  |  First Published Dec 19, 2024, 12:11 PM IST

ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಗಂಟು ಬಿದ್ದಿದ್ದಾರೆ. ನನ್ನವ ನನ್ನವ ಅಂತ ಬೀದಿಯಲ್ಲೇ ರಂಪಾಟ ಶುರು ಮಾಡಿದ್ದಾರೆ. ಕೈ ಕೈ ಮಿಲಾಯಿಸಿ, ಎಲ್ಲ ಪದ ಬಳಸಿ ಗುದ್ದಾಡಿದ್ದಾರೆ.
 


ಅವ್ನು ನನ್ನ ಬಾಯ್ ಫ್ರೆಂಡ್ (Boyfriend), ನಿಂದಲ್ಲ ನನ್ನ ಬಾಯ್ ಫ್ರೆಂಡ್ ಹೀಗೆ ಶುರುವಾದ ಜಗಳ, ರಸ್ತೆಯಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಕಾರಣವಾಗಿದೆ. ಇಬ್ಬರು ಹುಡುಗಿಯರು ರಸ್ತೆ (Road) ಮಧ್ಯೆ ಜುಟ್ಟು ಹಿಡಿದುಕೊಂಡು ಕಿತ್ತಾಡಿಕೊಂಡಿದ್ದಾರೆ. ಪಾಪ ದೂರದಲ್ಲಿ ನಿಂತಿದ್ದ ಬಾಯ್ ಫ್ರೆಂಡ್ ಯಾರಿಗೆ ಸಪೋರ್ಟ್ ಮಾಡ್ಬೇಕು ಗೊತ್ತಾಗ್ದೆ ಸುಮ್ಮನೆ ತಮಾಷೆ ನೋಡ್ತಿದ್ದ. ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಬಾಯ್ ಫ್ರೆಂಡ್ ಗಾಗಿ ಇಬ್ಬರು ಹುಡುಗಿಯರ ಫೈಟಿಂಗ್ ವಿಡಿಯೋ ವೈರಲ್ ಆಗಿದೆ. ಜನರು ವಿಡಿಯೋ ನೋಡಿ ಭಲೇ ಹುಡುಗಿಯರೇ ಅಂತ ಕಮೆಂಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ, ಉತ್ತರಾಖಂಡ (Uttarakhand)ದ ರಾಜಧಾನಿ ಡೆಹ್ರಾಡೂನ್ ನಲ್ಲಿ ನಡೆದಿದೆ. ಇಬ್ಬರು ಹುಡುಗಿಯರು ರಸ್ತೆ ಮಧ್ಯದಲ್ಲಿ ಗಲಾಟೆ ಮಾಡ್ತಿರೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. ಮೈ ಕೊರೆಯುವ ಚಳಿಯ ರಾತ್ರಿ ಎಲ್ಲರೂ ಬೆಚ್ಚಗೆ ಮನೆಯಲ್ಲಿರಲು ಬಯಸಿದ್ರೆ, ಇವರು ಬೆವರಿಳಿಯುವಷ್ಟು ಬಡಿದಾಡಿಕೊಂಡಿದ್ದಾರೆ. ಜುಟ್ಟು ಹಿಡಿದು ಜಗಳ ಮಾಡ್ತಿದ್ದವರಿಗೆ ಡ್ರೆಸ್ ಮೇಲೆ ಹೋದ ಪರಿವೆ ಕೂಡ ಇರಲಿಲ್ಲ. ಆರಂಭದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ಶುರುವಾಗಿದೆ. ಆತ ನನ್ನ ಬಾಯ್ ಫ್ರೆಂಡ್, ಅಲ್ಲ ನನ್ನವನು ಆತ. ಅವನ ಅಕ್ಕಪಕ್ಕ ಬಂದ್ರೂ ಸರಿ ಇರಲ್ಲ, ನಾನು ಬ್ರೇಕ್ ಅಪ್ ಮಾಡ್ಕೊಳೋದನ್ನು ನೀನು ಬಯಸ್ತಿದ್ದೀಯಾ, ನಿನಗೆ ಅವನ ಮೇಲೆ ಕಣ್ಣು ಬಿದ್ದಿದೆ, ಹೀಗೆ ಬೈದುಕೊಳ್ತಾ ಇಬ್ಬರು ಗಲಾಟೆ ಶುರು ಮಾಡ್ತಾರೆ. ನಂತ್ರ ಮೈಕೈ ಮುಟ್ಟಿಕೊಂಡು ಜಗಳಕ್ಕೆ ಇಳಿಯುತ್ತಾರೆ. ಕೆಟ್ಟ ಶಬ್ಧಗಳಿಂದ ಇಬ್ಬರು ಬೈದಾಡಿಕೊಂಡಿದ್ದಾರೆ. ಗಲಾಟೆ ಅತಿರೇಕಕ್ಕೆ ಹೋಗುತ್ತದೆ. ಕೂದಲು ಎಳೆದುಕೊಂಡು ರಸ್ತೆಯಲ್ಲೇ ಕುಳಿತು ಇಬ್ಬರು ಫೈಟ್ ಮಾಡ್ತಾರೆ. ಒಬ್ಬಳು, ಇನ್ನೊಬ್ಬಳಿಗೆ ಒದೆಯೋದನ್ನೂ ನೀವು ವಿಡಿಯೋದಲ್ಲಿ ಕಾಣ್ಬಹುದು.  

Tap to resize

Latest Videos

undefined

ಪದೇ ಪದೇ ಮಾಜಿ ಪ್ರೇಮಿ ಕನಸಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಯೇ? ಇದಕ್ಕೇನು ಅರ್ಥ?

ಈ ವಿಡಿಯೋವನ್ನು ಸ್ನೇಹಿತೆಯೊಬ್ಬಳು ಮಾಡಿದ್ದಾಳೆ. ಆಕೆ ಕೂಡ, ಹೊಡಿ, ಯಾಕೆ ಅಂತ ಆಗಾಗ ಜಗಳಕ್ಕೆ ಪ್ರೋತ್ಸಾಹ ನೀಡೋದನ್ನು ನೀವು ಕೇಳ್ಬಹುದು. ಇನ್ನೊಬ್ಬಳ ಜೊತೆ ಬಂದಿದ್ದ ಸ್ನೇಹಿತೆ ಸ್ಕೂಟಿ ಮೇಲೆ ಆರಾಮವಾಗಿ ಕುಳಿತು ಮೊಬೈಲ್ ನೋಡ್ತಿದ್ದಾಳೆ. ಇಬ್ಬರು ರಕ್ತ ಬರುವ ಮಟ್ಟಿಗೆ ಹೊಡೆದುಕೊಂಡ್ರು ಸ್ಕೂಟಿಯಿಂದ ಆಕೆ ಕದಲಿಲ್ಲ. ಆದ್ರೆ ರಸ್ತೆಯಲ್ಲಿ ಹೋಗುವವರು ಮಾತ್ರ ಸ್ವಲ್ಪ ಹೊತ್ತು ನಿಂತು ಏನಾಗ್ತಿದೆ ಎಂಬುದನ್ನು ನೋಡಿ ಹೋಗಿದ್ದಾರೆ. ಹುಡುಗಿಯರ ಜಗಳ ಎಂಜಾಯ್ ಮಾಡಿದ್ದಾರೆ. ಕೆಲವರು ಜಗಳ ಬಿಡಿಸುವ ಪ್ರಯತ್ನ ನಡೆಸುತ್ತಾರೆ. ಸ್ವಲ್ಪ ಸಮಯದ ನಂತ್ರ ಅಲ್ಲಿಗೆ ಬರುವ ಮಹಿಳೆಯೊಬ್ಬಳು ಇಬ್ಬರನ್ನು ಸಮಾಧಾನಪಡಿಸಿದ್ದಾಳೆ. ಬೈದಾಡಿಕೊಳ್ತಲೆ ಸಮಾಧಾನಗೊಂಡ ಹುಡುಗಿಯರು ಅಲ್ಲಿಂದ ಹೋಗಿದ್ದಾರೆ. ಬಾಯ್ ಫ್ರೆಂಡ್ ಯಾರ ಪಾಲಾದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. 

ಹಿಂದೂಗೆ ಇಬ್ಬರು ಮುಸ್ಲಿಂ ಪತ್ನಿಯರು, ನಮಾಜ್ ಜೊತೆ ಪಠಿಸ್ತಾರೆ ಹನುಮಾನ್ ಚಾಲೀಸ್

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ಕಮೆಂಟ್ ಶುರು ಮಾಡಿದ್ದಾರೆ. ಇಬ್ಬರ ಜೊತೆ ಆಟವಾಡಿದ್ದು ಹುಡುಗ, ಆತನಿಗಾಗಿ ಇವರಿಬ್ಬರು ಜಗಳ ಮಾಡ್ತಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಿಜವಾದ ಪ್ರೀತಿಯಾದ್ರೆ ಸಿಕ್ಕೇ ಸಿಗುತ್ತೆ, ಯಾಕೆ ಕಿತ್ತಾಡುತ್ತಿದ್ದೀರಿ ಎಂದು ಇನ್ನೊಬ್ಬರು ಕೇಳಿದ್ದಾರೆ. ಇಂದಿನ ಪೀಳಿಗೆ ನೋಡಿ ಹೇಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ನೀವಿಬ್ಬರು ಆ ಹುಡುಗನಿಗೆ ಹೊಡೆಯಬೇಕಿತ್ತು, ನೀವೇ ಹೊಡೆದಾಡಿಕೊಳ್ತಿದ್ದೀರಾ, ಆ ಹುಡುಗ ಅದೃಷ್ಟವಂತ, ಅವನಿಗಾಗಿ ಇಬ್ಬರು ಹುಡುಗಿಯರು ಫೈಟ್ ಮಾಡ್ತಿದ್ದಾರೆ, ಹುಡುಗ ಬೇರೆಯವರ ಹಿಂದೆ ಹೋದ ಅಂದ್ಮೇಲೆ ಅವನನ್ನು ಬಿಟ್ಬಿಡಿ, ಜಗಳ ಬೇಡ ಹೀಗೆ ಬಳಕೆದಾರರು ನಾನಾ ಕಮೆಂಟ್ ಮಾಡಿದ್ದಾರೆ. ಆಯ್ತು, ಈ ಹೊಡೆದಾಟದಿಂದ ನೀವು ಪ್ರಸಿದ್ಧಿ ಪಡೆದ್ರಿ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದವನಿಗೆ ವೀವ್ಸ್ ಬಂತು ಅಂತ ಕೆಲವರು ಕಾಲೆಳೆದಿದ್ದಾರೆ.
 

click me!