ಬರವಣಿಗೆ ನಮ್ಮ ಮನಸ್ಥಿತಿ, ವ್ಯಕ್ತಿತ್ವವನ್ನು ತೋರುತ್ತದೆ ಎಂದು ಹೇಳುತ್ತಾರೆ. ಹಾಗೆಯೇ, ಬರೆಯಲು ಪೆನ್ನು ಅಥವಾ ಪೆನ್ಸಿಲ್ ಹಿಡಿದುಕೊಳ್ಳುವ ಶೈಲಿಯೂ ನಿಮ್ಮ ಗುಣ, ಸ್ವಭಾವಗಳನ್ನು ಹೇಳಬಲ್ಲದು ಎಂದರೆ ಅಚ್ಚರಿಪಡುತ್ತೀರಿ. ನಿಮ್ಮದು ಯಾವ ಶೈಲಿ ನೋಡಿಕೊಳ್ಳಿ.
ಒಬ್ಬೊಬ್ಬರದು ಒಂದು ಶೈಲಿಯ ಬರವಣಿಗೆ. ಬರವಣಿಗೆಯ ರೀತಿ ಮಾತ್ರವಲ್ಲ, ಬರೆಯಲು ಪೆನ್ ಹಿಡಿದುಕೊಳ್ಳುವ ಶೈಲಿಯೂ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ನೀವು ಯಾವ ರೀತಿ ಪೆನ್ ಹಿಡಿದುಕೊಂಡು ಬರೆಯುತ್ತೀರಿ? ಒಬ್ಬೊಬ್ಬರಿಗೆ ಒಂದು ರೀತಿ ಪೆನ್ ಹಿಡಿದುಕೊಳ್ಳುವುದು ಇಷ್ಟ. ನೀವು ಪೆನ್ ಹಿಡಿದುಕೊಳ್ಳುವ ಶೈಲಿಯೂ ನಿಮ್ಮ ವ್ಯಕ್ತಿತ್ವನ್ನು ಸೂಚಿಸುತ್ತದೆ ಎಂದರೆ ಅಚ್ಚರಿಯಾಗಬಹುದು. ವ್ಯಕಿತ್ವದಲ್ಲಿ ಸ್ಮಾರ್ಟ್ ಎನಿಸಿರುವವರು ಯಾವ ರೀತಿ ಪೆನ್ ಹಿಡಿದುಕೊಳ್ಳುತ್ತಾರೆ ಗಮನಿಸಿದ್ದೀರಾ? ಕೆಲವು ಜನ ಮಧ್ಯಮ ಬೆರಳು, ತೋರು ಬೆರಳು, ಹೆಬ್ಬೆಟ್ಟಿನ ಮಧ್ಯದಲ್ಲಿ ಪೆನ್ ಹಿಡಿದುಕೊಂಡರೆ, ಇನ್ನು ಕೆಲವು ಜನ ಬರೆಯಲು ತೋರುಬೆರಳು ಮತ್ತು ಹೆಬ್ಬೆಟ್ಟನ್ನು ಮಾತ್ರವೇ ಬಳಸುತ್ತಾರೆ. ಅಧ್ಯಯನಗಳ ಪ್ರಕಾರ, ನೀವು ಪೆನ್ನು ಅಥವಾ ಪೆನ್ಸಿಲ್ ಹಿಡಿದುಕೊಳ್ಳುವ ಶೈಲಿ ನಿಮ್ಮ ಕೆಲವು ಗುಣಾವಗುಣಗಳನ್ನು ವ್ಯಕ್ತಪಡಿಸಬಲ್ಲದು, ನಿಮ್ಮ ವ್ಯಕ್ತಿತ್ವವನ್ನು ತೋರಬಲ್ಲದು. ಪೆನ್, ಪೆನ್ಸಿಲ್ ಯಾವುದಾದರೂ ಆಗಿರಲಿ. ಸಾಮಾನ್ಯವಾಗಿ ನಾಲ್ಕು ರೀತಿಯ ಶೈಲಿಯಲ್ಲಿ ಹಿಡಿದುಕೊಳ್ಳುವುದನ್ನು ಗುರುತಿಸಲಾಗಿದೆ. ಅವು ಯಾವುದು ನೋಡಿ.
• ತೋರು ಬೆರಳು (Index Finger) ಮತ್ತು ಹೆಬ್ಬೆಟ್ಟಿನ (Thumb) ಮಧ್ಯೆ ಪೆನ್ ಹಿಡಿದು ಬರೆಯುತ್ತೀರಾ?
ನೀವು ಒಮ್ಮೆ ತೋರು ಬೆರಳು ಮತ್ತು ಹೆಬ್ಬೆಟ್ಟಿನ ಮಧ್ಯೆ ಪೆನ್ (Pen) ಹಿಡಿದು ಬರೆಯುವವರಾಗಿದ್ದರೆ, ನೀವು ಹೊಸ ವಸ್ತುಗಳನ್ನು (New Things) ಇಷ್ಟಪಡುತ್ತೀರಿ ಎಂದರ್ಥ. ಹೊಸ ಸಲಕರಣೆಗಳನ್ನು ಖರೀದಿ ಮಾಡುವುದು ನಿಮಗೆ ಇಷ್ಟ. ಜೀವನಶೈಲಿಯಲ್ಲಿ (Lifestyle) ವಿನೂತನ ವಿಧಾನ ಅಳವಡಿಸಿಕೊಳ್ಳಲು ಬಯಸುತ್ತೀರಿ. ಹೊಸತನ್ನು ಕಲಿತುಕೊಳ್ಳಲು ಸಹ ಭಾರೀ ಆಸಕ್ತಿ (Interest) ನಿಮಗೆ ಇರುತ್ತದೆ. ಹೊಸ ಅನುಭವಗಳಿಗೆ ಒಳಗಾಗಲು, ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡುವುದೆಂದರೆ ನಿಮಗೆ ಭಾರೀ ಪ್ರೀತಿ. ನೀವು ರಹಸ್ಯವಾದ ವ್ಯಕ್ತಿಯೂ ಹೌದು. ನಿಮ್ಮ ಬಗ್ಗೆ ಯಾರಿಗೂ ಹೆಚ್ಚು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಜನರೊಂದಿಗೆ ಮಾತುಕತೆ ಮಾಡುವಾಗ, ಒಡನಾಡುವ ಸಮಯದಲ್ಲಿ ನೀವು ಬಹಿರ್ಮುಖಿ (Extrovert) ಎನಿಸುತ್ತೀರಿ. ಹಾಗೆಯೇ, ಸಾಕಷ್ಟು ಅಂತರ್ಮುಖಿಯೂ (Introvert) ಆಗಿರುತ್ತೀರಿ. ಖಾಸಗಿಯಾಗಿರಲು ಇಷ್ಟಪಡುತ್ತೀರಿ. ಭಾವನೆಗಳನ್ನು ಎಲ್ಲರ ಬಳಿ ವ್ಯಕ್ತಪಡಿಸಲು ಹಿಂಸೆ ಪಡುತ್ತೀರಿ.
undefined
ಸಂಬಂಧವನ್ನು ಈಸಿಯಾಗಿ ನಿಭಾಯಿಸೋ ಮಹಿಳೆಯರು ಹೇಗಿರ್ತಾರೆ ಗೊತ್ತಾ?
• ಹೆಬ್ಬೆಟ್ಟು ಮತ್ತು ನಾಲ್ಕು ಬೆರಳು ಸೇರಿಸಿ ಬರೆಯುತ್ತೀರಾ?
ಒಂದೊಮ್ಮೆ ನೀವು ಹೆಬ್ಬೆಟ್ಟು ಮತ್ತು ನಾಲ್ಕೂ ಬೆರಳುಗಳನ್ನು ಸೇರಿಸಿ ಬರೆಯುವವರಾಗಿದ್ದರೆ, ಸಿಕ್ಕಾಪಟ್ಟೆ ಶ್ರಮಜೀವಿ ಎಂದರ್ಥ. ಬಯಸಿದ್ದನ್ನು ಪಡೆಯಲು ಅಪಾರ ಶ್ರಮ ಹಾಕುತ್ತೀರಿ. ಆಸೆ ಪೂರೈಸಿಕೊಳ್ಳಲು ಎಂದಿಗೂ ಹಿಂದೇಟು ಹಾಕುವುದಿಲ್ಲ. ನೀವು ಭಾರೀ ಮಹತ್ವಾಕಾಂಕ್ಷೆಯ ವ್ಯಕ್ತಿ. ಹಾಗೆಯೇ, ವ್ಯಕ್ತಿಗಳು ಮತ್ತು ಪರಿಸ್ಥಿತಿಗಳನ್ನು (Situation) ಅಗತ್ಯಕ್ಕಿಂತಲೂ ಹೆಚ್ಚು ಟೀಕೆ, ವಿಶ್ಲೇಷಣೆ ಮಾಡುತ್ತೀರಿ. ಬಹಳ ಬೇಗ ಬೇಸರಕ್ಕೆ ತುತ್ತಾಗುತ್ತೀರಿ ಹಾಗೂ ಕೀಳರಿಮೆಗೆ ಒಳಗಾಗುತ್ತೀರಿ. ಕೆಲವು ವಿಚಾರಗಳ ಬಗ್ಗೆ ನಿಮ್ಮಲ್ಲಿ ಭಯ (Fear) ಇರುತ್ತದೆ. ನೀವು ಅಪಾರ ವಿಶ್ವಸನೀಯ ವ್ಯಕ್ತಿ ಎನ್ನುವುದರಲ್ಲಿ ಅನುಮಾನವಿಲ್ಲ.
• ಹೆಬ್ಬೆಟ್ಟು, ತೋರು ಬೆರಳು, ಮಧ್ಯಮ ಬೆರಳುಗಳ ಮಧ್ಯೆ ಪೆನ್ನು
ತೋರು ಬೆರಳು, ಮಧ್ಯದ ಬೆರಳುಗಳ ಮಧ್ಯೆ ಪೆನ್ನು ಹಿಡಿದುಕೊಂಡು ಹೆಬ್ಬೆಟ್ಟನ್ನು ಸುಮ್ಮನೆ ಬೆಂಬಲಕ್ಕೆ (Support) ಇರಿಸಿಕೊಳ್ಳುವುದು ಅತ್ಯಂತ ಸಾಮಾನ್ಯ ಶೈಲಿ. ಇವರು ಸಾಮಾಜಿಕ ಜೀವನವನ್ನು (Social Life) ಇಷ್ಟಪಡುತ್ತಾರೆ. ಜನರ ಎದುರು ಸಿಲ್ಲಿ (Silly) ವರ್ತನೆ ತೋರುವುದಿಲ್ಲ. ಇಷ್ಟವಾದ ಪಾನೀಯ (Drinks) ಸೇವನೆ ಮಾಡುವುದನ್ನು ಎಂಜಾಯ್ ಮಾಡುತ್ತಾರೆ. ಜಾಗತಿಕ, ರಾಷ್ಟ್ರೀಯ ಸುದ್ದಿಗಳು, ಅರ್ಥವ್ಯವಸ್ಥೆ (Financial Metter) ಮುಂತಾದ ವಿಚಾರಗಳ ಬಗ್ಗೆ ಮಾತನಾಡಬಲ್ಲರು. ಆಪ್ತರೆದುರು ಮಾತ್ರವೇ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಕೆಟ್ಟ ಘಟನೆಗಳನ್ನು (Bad Experience) ಬಹಳ ಬೇಗ ಮನದಿಂದ ದೂರ ಮಾಡುತ್ತಾರೆ. ಕ್ಷಮಾಶೀಲ ಗುಣದಿಂದ ಶಾಂತಚಿತ್ತರಾಗಿರುತ್ತಾರೆ.
ಬರೀ 15 ನಿಮಿಷ: ಸೋಷಿಯಲ್ ಮೀಡಿಯಾದಿಂದ ದೂರವಿರಿ, ಆರೋಗ್ಯ ಸುಧಾರಿಸ್ಕೊಳಿ
• ತೋರುಬೆರಳು, ಮಧ್ಯದ ಬೆರಳಿನ ಅಡಿ ಹೆಬ್ಬೆಟ್ಟು ಆಧಾರ
ಇವರು ಎರಡು ಮನಸ್ಸನ್ನು ಹೊಂದಿರುತ್ತಾರೆ. ಅಗತ್ಯಕ್ಕೆ ಅನುಗುಣವಾಗಿ ಬದಲಾಗುತ್ತಾರೆ. ಕೆಲವೊಮ್ಮೆ ಸಾಕಷ್ಟು ಮೂಡಿ (Moody) ಆಗಿರುತ್ತಾರೆ. ಯಾವುದಾದರು ವಿಷಯದ ಮೇಲೆ ಚರ್ಚಿಸುವುದು (Discuss), ವಿಶ್ಲೇಷಣೆ ಮಾಡುವುದು, ಒಂದು ನಿರ್ಧಾರಕ್ಕೆ ಬರುವುದು ಇವರಿಗೆ ಇಷ್ಟ. ಚಿಕ್ಕ ವಿಚಾರಗಳ ಬಗ್ಗೆ ಕೆಲವೊಮ್ಮೆ ಅತಿಯಾಗಿ ಉತ್ತೇಜಿತರಾಗುತ್ತಾರೆ. ಚಿಕ್ಕಪುಟ್ಟ ವಿಚಾರಕ್ಕೆ ಕೋಪಿಸಿ (Anrgy) ಕೊಳ್ಳುತ್ತಾರೆ. ಆದರೆ, ದಯಾಳು (Kind) ಮತ್ತು ಉದಾರಿಯೂ ಆಗಿರುತ್ತಾರೆ. ಕಟುವಾಗಿ ಟೀಕಿಸಬಲ್ಲರು.