ಟೀನೇಜಲ್ಲಿ ಒಂದಾಗಿ, ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಜೋಡಿಯೊಂದು, ಬಳಿಕ ಜೀವನದ ಏರುಪೇರುಗಳಿಂದ ದೂರವಾಗಿ, ಮದುವೆ, ಮಕ್ಕಳು, ಸಂಸಾರದ ಎಲ್ಲ ಜವಾಬ್ದಾರಿಗಳನ್ನೂ ಪೂರೈಸಿ, ಬದುಕಿನ ಸಂಧ್ಯಾಕಾಲದಲ್ಲಿ ಮತ್ತೆ ಒಂದಾಗಿದ್ದಾರೆ. ಆಸ್ಟ್ರೇಲಿಯಾದ ಈ ಜೋಡಿ ಲೆನ್ ಮತ್ತು ಜಾನೆಟ್.
ಟೀನೇಜ್ ಲವ್ ಶಾಶ್ವತವಲ್ಲ. ಟೀನೇಜಲ್ಲಿ ಪ್ರೀತಿಸುವುದು, ಯಾರನ್ನೋ ಇಷ್ಟಪಡುವುದು, ಪದೇ ಪದೆ ಕ್ರಶ್ ಉಂಟಾಗುವುದು ಇವೆಲ್ಲ ಸಹಜ. ಅಷ್ಟಕ್ಕೂ ಟೀನೇಜಲ್ಲಿ ಯಾರನ್ನಾದರೂ ಗಾಢವಾಗಿ ಪ್ರೀತಿಸಿದರೂ ಪಾಲಕರು ಅದಕ್ಕೆ ಬೆಲೆ ನೀಡುವುದು ಕಡಿಮೆಯೇ. ಇತ್ತೀಚೆಗೇನೋ ಲವ್ ಮ್ಯಾರೇಜ್ ಗಳು ಕಾಮನ್. ಆದರೆ ಕೆಲವೇ ವರ್ಷಗಳ ಹಿಂದೆ ಲವ್ ಮ್ಯಾರೇಜ್ ಆಗುವುದಕ್ಕೆ ಎಂಟೆದೆ ಬೇಕಾಗಿತ್ತು. ಹೀಗಾಗಿ, ಸಾಮಾನ್ಯವಾಗಿ ಟೀನೇಜ್ ಲವರ್ಸ್ ದೂರವಾಗುವುದೇ ಹೆಚ್ಚಾಗಿತ್ತು. ಇಂದಿಗೂ ಇದು ಸಾಮಾನ್ಯವಾಗಿದ್ದರೂ ಕಾರಣಗಳು ಬೇರೆ. ಹೀಗಾಗಿ, ಲವರ್ ಬಿಟ್ಟು ಬೇರೊಬ್ಬರನ್ನು ಮದುವೆಯಾಗಿ, ಮಕ್ಕಳಾಗಿ, ಸಂಸಾರ ನಿಭಾಯಿಸುವ ಸಮಯದಲ್ಲಿ ಟೀನೇಜ್ ಲವರ್ ನನ್ನು ಕಂಡರೂ ಭಾವನೆಗಳಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ಆದರೆ, ಆಸ್ಟ್ರೇಲಿಯಾದಲ್ಲಿ ನಡೆದ ವಿವಾಹವೊಂದು ಎಲ್ಲರ ಗಮನ ಸೆಳೆದಿದೆ. ಇದರಲ್ಲಿ ವರನಿಗೆ 79 ವರ್ಷ, ವಧುವಿಗೆ 78 ವರ್ಷ. ಜೀವನ ಎಷ್ಟು ನಿರ್ದಯಿ ನೋಡಿ. 1963ರಲ್ಲೇ ಇವರ ಎಂಗೇಜ್ ಮೆಂಟ್ ಆಗಿತ್ತು. ಆದರೆ, ಪಾಲಕರು ಇವರ ಮದುವೆಯನ್ನು ರದ್ದುಪಡಿಸಿದ್ದರಿಂದ ದೂರಾಗುವ ಪ್ರಸಂಗ ಒದಗಿತ್ತು. ಇದೀಗ, ಇಷ್ಟು ವರ್ಷಗಳ ಬಳಿಕ ಮತ್ತೆ ಮದುವೆಯಾಗಿ ಮುಖದಲ್ಲಿ ನಗು ತುಂಬಿಸಿಕೊಂಡಿದ್ದಾರೆ.
ವಿಧಿ ಬೇರೆ ಬೇರೆಯಾಗಿಸಿತ್ತು
1963ರಲ್ಲಿ ನ್ಯೂಪೋರ್ಟ್ ನ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲಿ ಲೆನ್ (Len) ಹಾಗೂ ಜಾನೆಟ್ (Jeanette) ಭೇಟಿಯಾಗಿದ್ದರು. ಪರಿಚಯ ಪ್ರೇಮಕ್ಕೆ (Love) ತಿರುಗಿತ್ತು. ಕೆಲ ತಿಂಗಳಲ್ಲೇ ಲೆನ್ ಪ್ರೊಪೋಸ್ ಮಾಡಿ, ಜಾನೆಟ್ ಒಪ್ಪಿಕೊಂಡೂ ಆಗಿತ್ತು. ಆದರೆ, ವಿಧಿ ಅವರಿಗೆ ಬೇರೆಯದೇ ಬದುಕನ್ನು ಬರೆದಿತ್ತು. ಅಂದು ವಿವಾಹದ (Marriage) ವಯಸ್ಸು 21 ಆಗಿದ್ದರಿಂದ ಜಾನೆಟ್ ಇನ್ನೂ ಚಿಕ್ಕವಳಾಗಿದ್ದಳು. ಹೀಗಾಗಿ, ಪಾಲಕರು ಇವರ ಮದುವೆಯನ್ನು ರದ್ದುಪಡಿಸಿದರು. ಆಗ ಜಾನೆಟ್ ಆಸ್ಟ್ರೇಲಿಯಾದಿಂದ ದೂರವಿದ್ದು ಓದುತ್ತಿದ್ದಳು. ಬಳಿಕ, ಇಬ್ಬರೂ ಹೆಚ್ಚಿನ ಸಂಪರ್ಕದಲ್ಲಿ ಇರಲಿಲ್ಲ.
ಈ ನಡುವೆ, ಲೆನ್ ಆಸ್ಟ್ರೇಲಿಯಾದ ಹುಡುಗಿಯೊಬ್ಬಳನ್ನು ಮದುವೆಯಾದ. ಮೂವರು ಮಕ್ಕಳನ್ನೂ ಪಡೆದ. ಅವರು ಸ್ಟಿವೆಂಜ್ ಎನ್ನುವ ಸ್ಥಳದಲ್ಲಿ ನೆಲೆಯೂರಿದರು. ಅಲ್ಲಿಯೇ ಮುಂದಿನ 50 ವರ್ಷಗಳನ್ನು ಜಿಲ್ಲಾ ನರ್ಸ್ ಆಗಿ ಕಳೆದ ಲೆನ್.
Viral Video : ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ ವೃದ್ಧ ಪತಿಯ ಪತ್ನಿ ಮೇಲಿನ ಕಾಳಜಿ
ಇತ್ತ, ಜಾನೆಟ್ ವೈಟ್ ದ್ವೀಪದಲ್ಲಿ ನರ್ಸ್ (Nurse) ಆಗಿ ಸೇವೆ ಸಲ್ಲಿಸುತ್ತಿದ್ದಳು. ಕೆಲ ಸಮಯದ ಬಳಿಕ ನೌಕಾಧಿಕಾರಿಯೊಬ್ಬನನ್ನು ಮದುವೆಯಾದಳು. ಇಬ್ಬರು ಮಕ್ಕಳಿಗೆ ತಾಯಿಯಾದಳು. ಬಹಳ ಸಮಯದ ನಂತರ ಲೆನ್ ಎಲೆಕ್ಟೊರಲ್ ಲಿಸ್ಟ್ ಮೂಲಕ ಜಾನೆಟ್ ಇರುವನ್ನು ಪತ್ತೆ ಹಚ್ಚಿದ. ಆಕೆಯನ್ನು ನೋಡುವ ಬಯಕೆಯಾಗಿ ಅವಳ ಅಡ್ರೆಸ್ ತಿಳಿದು ಮನೆಗೆ ಹೋದ. ಆಕೆ ನಿವೃತ್ತಿಯಾಗಿದ್ದು, ತನ್ನ ಪತಿಯ (Husband) ಜತೆ ವಾಸಿಸುತ್ತಾಳೆ ಎನ್ನುವುದನ್ನು ಅರಿತ. ಆಕೆಯ ಮನೆಯ ಎದುರಿನ ಗೇಟ್ ಎದುರು ನಿಂತಿದ್ದ ಲೆನ್ ಯಾರೆಂದೇ ಜಾನೆಟ್ ಗೆ ತಿಳಿಯಲಿಲ್ಲ.
Relationship Tips: ನಿಜಕ್ಕೂ ಯೋಚಿಸಿ ಹೇಳಿ, ಸಂಬಂಧ ಚೆನ್ನಾಗಿರೋಕೆ ಪ್ರೀತಿಯೊಂದೇ ಸಾಕಾ?
ಪತಿ ಜತೆ ಸುಖಿ ಸಂಸಾರ!
“ಗಾರ್ಡನ್ ಎದುರಿಗ ಗೇಟಿನ ಬಳಿಕ ನಿಂತಿರುವ ವ್ಯಕ್ತಿ ಲೆನ್ ಎಂದು ತಿಳಿದಾಗ ಸತ್ತೇ ಹೋಗುವ ಭಾವನೆ ಬಂತು. ಆತನನ್ನು ಬಹಳ ಕಾಲ ನೆನಪಿಸಿಕೊಂಡಿದ್ದೆʼ ಎಂದು ಜಾನೆಟ್ ಈಗ ಸ್ಮರಿಸುತ್ತಾಳೆ.
ಎರಡು ವರ್ಷಗಳ ಬಳಿಕ ಜಾನೆಟ್ ಪತಿ ಕ್ಯಾನ್ಸರ್ ನಿಂದ ಮೃತರಾಗುತ್ತಾರೆ. ಆಗ ಜಾನೆಟ್ ಖುದ್ದಾಗಿ ಲೆನ್ ನನ್ನು ಸಂಪರ್ಕಿಸುತ್ತಾಳೆ. ಲೆನ್ ಪತ್ನಿಯನ್ನು ಮೊದಲೇ ಕಳೆದುಕೊಂಡಿದ್ದ. 2017ರಲ್ಲಿ ವೃದ್ಧ ಲೆನ್ ಮದುವೆಯ ಪ್ರಸ್ತಾಪ (Propose) ಇಡುತ್ತಾನೆ. 2018ರಲ್ಲಿ ಆತನೊಂದಿಗೆ ನೆಲೆಸಲು ಸ್ಟಿವೆಂಜ್ (Stevenge) ಗೆ ತೆರಳುತ್ತಾಳೆ. ಫೆಬ್ರವರಿ 11ರಂದು ಇವರ ಮದುವೆಯಾಗುತ್ತದೆ. ಮದುವೆಯಲ್ಲಿ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಭಾಗಿಯಾಗಿದ್ದುದು ವಿಶೇಷವಾಗಿತ್ತು.
“ನಾವು ಮತ್ತೆ ಪ್ರೀತಿಯಲ್ಲಿ (Love) ಬಿದ್ದಿದ್ದೇವೆ. ಒಬ್ಬರಿಗೊಬ್ಬರು ಕವಿತೆ (Pooem) ಕೇಳಿಸುತ್ತೇವೆ. ಭಾವನೆಗಳನ್ನು (Feelings) ಹಂಚಿಕೊಳ್ಳುತ್ತೇವೆ, ನನ್ನಲ್ಲಿ ಆಕೆಯ ಪ್ರೀತಿ ಮಡುಗಟ್ಟಿದೆʼ ಎಂದು ಲೆನ್ ಹೇಳಿಕೊಂಡರೆ, ಜಾನೆಟ್, ವೈವಾಹಿಕ ಜೀವನ (Married Life) ಸುಂದರವಾಗಿದೆ, ಲೆನ್ ಗಾಗಿ ಏನಾದರೂ ಮಾಡಬಲ್ಲೆ, ಲೆನ್ ಜತೆಗಿನ ಬದುಕು ಹಿತವೆನಿಸುತ್ತಿದೆʼ ಎಂದು ಹೇಳಿದ್ದಾಳೆ.