ಮದ್ವೆ ದಿನ ಕಾಯೋ ಕರ್ಮ ಯಾಕೆ, ಲೇಟಾಗಿ ಬಂದ ವರನಿಗೆ ಡಿಚ್ಚಿ, ಸ್ನೇಹಿತನ ವರಿಸಿದ್ಲು ವಧು !

By Vinutha Perla  |  First Published Jan 4, 2023, 2:20 PM IST

ಏನಾದ್ರೂ ಇರ್ಲಿ, ಟೈಂ ಸೆನ್ಸ್ ಅಂತೂ ಇರ್ಲೇಬೇಕು. ಇಲ್ಲದಿದ್ದರೆ ಎಲ್ಲಾ ಎಡವಟ್ಟೇ ಅಂತ ನಮ್ಮ ಹಿರಿಯರು ಹೇಳೋದನ್ನು ನೀವು ಕೇಳಿರಬಹುದು. ಸಮಯಕ್ಕೆ ಸರಿಯಾಗಿ ಯಾವುದೇ ಕೆಲಸ ಮಾಡದಿದ್ದರೆ ತೊಂದರೆಗಳಾಗುತ್ತವೆ ಅನ್ನೋದು ನಿಜ. ಆದ್ರೆ ಮಹಾರಾಷ್ಟ್ರದಲ್ಲಿ ಟೈಂ ಸೆನ್ಸ್ ಇಲ್ಲದೆ ಮಂಟಪಕ್ಕೆ ಬಂದ ಹುಡುಗನ ಮದ್ವೆಯೇ ತಪ್ಪಿ ಹೋಗಿದೆ.


ಹುಡುಗೀರು ರೆಡಿಯಾಗೋಕೆ ಟೈಂ ತಗೊಳ್ತಾರೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರೋ ವಿಚಾರ. ಸೀರೆ, ಆಭರಣ, ಹೇರ್‌ ಸ್ಟೈಲ್‌, ಅಲಂಕಾರ ಅಂತ ಗಂಟೆಗಟ್ಟಲೆ ಸಮಯ ಕಳೆದುಬಿಡುತ್ತಾರೆ. ಹಾಗಂತ ಅವ್ರು ಮದ್ವೆ (Marriage) ದಿನವಂತೂ ಲೇಟ್ ಮಾಡಿಕೊಳ್ಳಲ್ಲ. ತಿಂಗಳುಗಳ ಮೊದಲೇ ಔಟ್‌ಫಿಟ್ ಸಿದ್ಧಪಡಿಸಿ, ಮುಹೂರ್ತಕ್ಕೆ ಸರಿಯಾಗಿ ಸಿದ್ಧಗೊಳ್ಳುತ್ತಾರೆ. ಹಾಗೆ ನೋಡಿದರೆ ಹುಡುಗರಿಗೆ ಮದುವೆಗೆ ರೆಡಿಯಾಗಲು ಅಷ್ಟು ಸಮಯ ಬೇಕಾಗುವುದಿಲ್ಲ. ಔಟ್‌ಫಿಟ್, ಫೂಟ್‌ವೇರ್ ಧರಿಸಿದರೆ ಆಯ್ತು ಅಷ್ಟೆ. ಹೀಗಿದ್ದೂ ಮಹಾರಾಷ್ಟ್ರದಲ್ಲೊಬ್ಬ ವರ ತನ್ನ ಮದುವೆಗೇ ತಡವಾಗಿ ಬಂದಿದ್ದಾನೆ. ದಾಂಪತ್ಯನೇ ಶುರುವಾಗಿಲ್ಲ, ಆಗ್ಲೇ ಹೀಗೆ ಮಾಡಿದ್ರೆ ಯಾರಿಗಾದ್ರೂ ಸಿಟ್ಟು ಬರಲ್ವಾ ಹೇಳಿ. ಅದರಲ್ಲೂ ಹುಡುಗಿಯ ಸ್ಥಿತಿ ಹೇಗಿರಬೇಡ ?

ಮದುವೆ ಮಂಟಪಕ್ಕೆ ತಡವಾಗಿ ಬಂದ ವರ (Groom)ನನ್ನು ನೋಡಿ ವಧು (Bride) ಸಿಟ್ಟಿಗೆದ್ದಿದ್ದಾಳೆ. ಹುಡುಗನ ಬೇಜವಾಬ್ದಾರಿತನವನ್ನು ನೋಡಿ ಆತನ ಸ್ನೇಹಿತನನ್ನು ಮದ್ವೆಯಾಗಿದ್ದಾಳೆ. ಅಂಥಹದ್ದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡ್ದಿದೆ. ಬುಲ್ಧಾನ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

Tap to resize

Latest Videos

Relationship Tips: ವೈವಾಹಿಕ ಜೀವನದಿಂದ ನೆಗೆಟಿವಿಟಿಯನ್ನು ಹೀಗೆ ದೂರ ಮಾಡಿ

ವಧು ಮಂಟಪದಲ್ಲಿ ಕಾಯ್ತಿದ್ಲು, ವರ ಕುಡಿದು ಡ್ಯಾನ್ಸ್ ಮಾಡ್ತಿದ್ದ 
ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಮಂಟಪವೊಂದರಲ್ಲಿ ಮದುವೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗ್ತಿತ್ತು. ವಧು ಅಲಂಕಾರಗೊಂಡು ವರನಿಗಾಗಿ ಕಾಯುತ್ತಿದ್ದಳು. ಆದ್ರೆ ವರ ಮದುವೆಯ ಸಂಭ್ರಮದಲ್ಲಿ ಮೆರವಣಿಗೆಯಲ್ಲಿ ಫ್ರೆಂಡ್ಜ್‌ ಜೊತೆ ಸಖತ್ ಡ್ಯಾನ್ಸ್ ಮಾಡುತ್ತಿದ್ದನು. ವರನು ಗಂಟೆಗಟ್ಟಲೆ ಡ್ಯಾನ್ಸ್‌ ಮಾಡುತ್ತಿರುವುದು ಹುಡುಗಿಗೆ ಕೋಪ (Angry) ತರಿಸಿತ್ತು. ಆದರೂ ಆಕೆ ಮೆರವಣಿಗೆಯ ಡ್ಯಾನ್ಸ್ ಮುಗಿಯಲು ಬಹಳ ಹೊತ್ತು ಕಾದಳು. ಆದರೆ ಅದೆಷ್ಟು ಹೊತ್ತು ಕಾದರೂ ಹುಡುಗನ ಡ್ಯಾನ್ಸ್ ಮುಗಿಯದಿದ್ದಾಗ ಕೋಪಗೊಂಡು ಅದೇ ಮಂಟಪದಲ್ಲಿ ವರನ ಸ್ನೇಹಿತನನ್ನು ಮದುವೆಯಾದಳು. ಆತನಿಂದಲೇ ತಾಳಿ ಕಟ್ಟಿಸಿಕೊಂಡು, ಸಪ್ತಪದಿ ತುಳಿದಳು.

ವರನು ಸಮಯಕ್ಕೆ ಸರಿಯಾಗಿ ಹುಡುಗಿಯ ಮನೆಗೆ ಮೆರವಣಿಗೆಯನ್ನು ತಂದಿದ್ದನು. ಶುಭ ಮುಹೂರ್ತದ ಪ್ರಕಾರ ಆಗಲೇ ಮೆರವಣಿಗೆ ತಡವಾಗಿತ್ತು. ಅಲ್ಲಿ ಸುತ್ತಲೂ ಜೋರಾಗಿ ಸಂಗೀತ ಮೊಳಗುತ್ತಿತ್ತು. ಒಂದು ಕಡೆ ಶುಭ ಮುಹೂರ್ತ ನಡೆಯುತ್ತಿದ್ದರೆ, ಇನ್ನೊಂದು ಕಡೆ ಮೆರವಣಿಗೆಯಲ್ಲಿ ಬಂದ ಹುಡುಗನ ಕಡೆಯವರು ಒಳಗೆ ಬರುವ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಎಲ್ಲರೂ ಡ್ಯಾನ್ಸ್ ಮಾಡುವುದರಲ್ಲಿ ನಿರತರಾಗಿದ್ದರು. ಗೆಳೆಯರು ಕುಣಿದಾಡುವುದನ್ನು ನೋಡಿದ ವರ ತಾನು ಕೂಡಾ ತಡೆಯಲಾರದೆ ಕಾರಿನಿಂದ ಇಳಿದು ಅವರ ಜೊತೆ ಡ್ಯಾನ್ಸ್ ಮಾಡಲು ತೊಡಗಿದ್ದ. ಆದರೆ ಹಲವು ಗಂಟೆಗಳ ಕಾಲ ಕಾದ ಬಳಿಕವೂ ವರ ಬಾರದಿದ್ದಾಗ, ವಧು ಕೋಪಗೊಂಡಿದ್ದಾಳೆ.

Arranged Marriage ಆದ್ರೇನು, ದಾಂಪತ್ಯದಲ್ಲಿ ಪ್ರೀತಿ ಉಕ್ಕಿ ಹರಿಯಲಿ!

ಕುಟುಂಬ ನಡುವೆ ಜಗಳ, ಸಿಟ್ಟಿಗೆದ್ದು ವರನ ಸ್ನೇಹಿತನನ್ನು ಮದ್ವೆಯಾದ ವಧು
ಡ್ಯಾನ್ಸ್ ನಿಲ್ಲಿಸುವಂತೆ ವಧುವಿನ ತಂದೆ ಕೇಳಿದಾಗ ಕುಡಿದ ಮತ್ತಿನಲ್ಲಿದ್ದ ವರನ ಕಡೆಯವರು ವಧುವಿನ ಕಡೆಯವರ ಮೇಲೆ ಹಲ್ಲೆ ನಡೆಸಿದ್ದಾರೆ.  ಕುಟುಂಬದೊಂದಿಗಿನ ಜಗಳವು ವಧುವನ್ನು ಸಹ ಕೆರಳಿಸಿತು. ಕೂಡಲೇ ಆಕೆ ಆ ಹುಡುಗನನ್ನು ಮದುವೆಯಾಗಲು ನಿರಾಕರಿಸಿದಳು. ನಂತರ ಹುಡುಗಿ ಕಡೆಯವರು ಮದುವೆಯನ್ನು ಬೇಡವೆಂದು ಕ್ಯಾನ್ಸಲ್ ಮಾಡಿ ಹುಡುಗನ ಕಡೆಯವರನ್ನು ವಾಪಾಸ್ ಕಳುಹಿಸಿದರು.

ಮದುವೆ ಮುರಿದು ಬಿದ್ದ ನಂತರ ಮಾನಹಾನಿ ತಪ್ಪಿಸಲು ಹುಡುಗಿಯ ಕುಟುಂಬಸ್ಥರು ಪಂಚಾಯತಿ ಮಾಡಿದ್ದು, ನಂತರ ಮನೆಯಲ್ಲಿ ಅಲಂಕೃತ ಮಂಟಪದಲ್ಲಿ ಮದುವೆ ಆದರೆ ವರ ಬೇರೆಯವರದ್ದು ಎಂದು ತೀರ್ಮಾನಿಸಲಾಗಿತ್ತು. ಕುಟುಂಬವು ಹೊಸ ಅಳಿಯನನ್ನು ಹುಡುಕಲು ಪ್ರಾರಂಭಿಸಿದಾಗ, ಅವರು ಅತಿಥಿಗಳಲ್ಲಿ ಒಬ್ಬರನ್ನು ಇಷ್ಟಪಟ್ಟರು. ಹುಡುಗನೂ ಒಪ್ಪಿದ. ವಿಶೇಷವೆಂದರೆ ಆ ಹುಡುಗ ಮತ್ತು ಇಬ್ಬರೂ ಒಂದೇ ಮಂಟಪದಲ್ಲಿ ಏಳು ಸುತ್ತು ಹಾಕಿರುವುದು ವಧುವಿಗೆ ಮೊದಲೇ ತಿಳಿದಿತ್ತು.

ಅಚ್ಚರಿಯ ಸಂಗತಿ ಎಂದರೆ ಈ ಘಟನೆ ನಡೆದ ಮರುದಿನವೇ ಡ್ಯಾನ್ಸಿಂಗ್ ವರ ಕೂಡ ಹೊಸ ಹುಡುಗಿಯನ್ನು ಕಂಡು ಮದುವೆ ಮಾಡಿಕೊಂಡಿದ್ದಾನೆ. ವಿಶೇಷವೆಂದರೆ ಎರಡನೇ ದಿನದ ಮದುವೆಯಲ್ಲಿ ವರ ಮಾತ್ರವಲ್ಲ, ವರನ ದೂರದ ಸಂಬಂಧಿ ಕೂಡ ಮದ್ಯ ಮುಟ್ಟಿರಲಿಲ್ಲ.

click me!