ನಕಾರಾತ್ಮಕದಿಂದ ಸಕಾರಾತ್ಮದ ಕಡೆಗೆ ಚಿಂತಿಸಲು ಮಕ್ಕಳನ್ನು ಹೀಗೆ ಟ್ರೈನ್ ಮಾಡಿ

By Contributor Asianet  |  First Published Jan 4, 2023, 12:56 PM IST

ಮಕ್ಕಳು ಬಹಳ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಅವರು ಪೋಷಕರನ್ನು ಹಾಗೂ ಹಿರಿಯರ ನಡೆನುಡಿಗಳನ್ನು ಅನುಸರಿಸುವುದರಿಂದ ದೊಡ್ಡವರು ಎಚ್ಚರಿಕೆಯಿಂದ ವರ್ತಿಸುವುದು ಬಹಳ ಅಗತ್ಯ. ಆದರೆ ಇತ್ತೀಚಿನ ಜೀವನಶೈಲಿಯೇ ಹಾಗಿರುವಾಗ ಮಕ್ಕಳ ಮನಸ್ಸಿನಲ್ಲಿ ಗಾಢ ಪರಿಣಾಮ ಬೀರುತ್ತಿದೆ.


ಮಕ್ಕಳ ಕಡೆ ಗಮನ ಕೊಡುವ ಪೋಷಕರ ಸಂಖ್ಯೆ ಇತ್ತೀಚೆಗೆ ಕ್ಷೀಣಿಸುತ್ತಿದೆ ಎಂದರೆ ತಪ್ಪಾಗಲಾರದು. ಅವರೇನು ಮಾಡುತ್ತಿದ್ದಾರೆ, ಏನು ಓದುತ್ತಿದ್ದಾರೆ, ಅಗತ್ಯಗಳ ಬಗ್ಗೆ, ಅವರ ಓದು ಹಾಗೂ ವೈಯಕ್ತಿಕ ಜೀವನದಲ್ಲಿ ಆಗು ಹೋಗುಗಳ ಬಗ್ಗೆ ತಿಳಿಯುವುದು ಪೋಷಕರ ಆದ್ಯ ಕರ್ತವ್ಯಗಳಲ್ಲಿ (Primary Duty) ಒಂದಾಗಬೇಕು. ಆದರೆ ಇತ್ತೀಚಿನ ಬಹುತೇಕ ಪೋಷಕರು ಇಬ್ಬರೂ ಸಹ ಆಫೀಸ್ (Office), ವರ್ಕ್(Work) ಎಂದು ಬ್ಯುಸಿ (Busy) ಇರುವಾಗ ಮಕ್ಕಳ ವಿಷಯದಲ್ಲಿ ಎಷ್ಟರ ಮಟ್ಟಿಗೆ ತಲೆಕೆಡಿಸಿಕೊಳ್ಳುತ್ತಾರೆ? ಹೋಗಲಿ ಸ್ಕೂಲ್‌ಗಳಿಂದ ಪೇರೆಂಟ್ಸ್ ಮೀಟಿಂಗ್(Parents Meeting) ಎಂದು ಕರೆ ಬಂದಾಗ ಅಟೆಂಡ್ (Attend) ಮಾಡುವವರು ಎಷ್ಟು ಹಾಗೂ ಈ ಮೀಟಿಂಗ್‌ನಲ್ಲಿ ಸರಿಯಾಗಿ ಆಲೈಸುವವರು ಎಷ್ಟು? ಯಾವುದಕ್ಕೂ ಪುರಸೊತ್ತಿಲ್ಲ. ಹೀಗಿರುವಾಗ ಮಕ್ಕಳಲ್ಲಿ ಪೋಷಕರ ಕುರಿತು ಮೂಡುವ ಅಭಿಪ್ರಾಯವೇನು. 

ಪೋಷಕರು ಮಕ್ಕಳ ಕಡೆ ಸರಿಯಾಗಿ ಗಮನಿಸದಿದ್ದಾಗ ಅವರಲ್ಲಿ ಖಿನ್ನತೆ(Depression), ನಕಾರತ್ಮಕ ಆಲೋಚನೆ(Negetive Thoughts), ಮುಕ್ತವಾಗಿ ಮಾತನಾಡುವ ಕೊರತೆ (Lack of Talking) ಹೀಗೆ ಏನೊಂದು ಸರಿಯಾಗಿ ಹಂಚಿಕೊಳ್ಳದಿದ್ದಾಗ, ಸಮಯ ಕಳೆಯದಿದ್ದಾಗ ಮಕ್ಕಳಲ್ಲಿ ನಾನಾ ರೀತಿಯ ಬದಲಾವಣೆಗಳನ್ನು ಕಾಣಬಹುದು. ಇದಕ್ಕೆ ಕಾರಣ ಇನ್ನಾರನ್ನೋ ದೂರುವ ಬದಲು ಪೋಷಕರೇ ಇದಕ್ಕೆ ನೇರ ಹೊಣೆಗಾರರಾಗುತ್ತಾರೆ. 

Tap to resize

Latest Videos

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ನಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಈ ಬಗ್ಗೆ ತಿಳಿದುಕೊಂಡು ಸರಿಯಾದ ದಾರಿಯಲ್ಲಿ ತರುವುದು ಪೋಷಕರ ಮಾರ್ಗದರ್ಶನ(Direction) ಅವರಿಗೆ ಬಹಳ ಮುಖ್ಯ. ಚಿಕ್ಕ ವಯಸ್ಸಿನಿಂದಲೇ ನಕಾರಾತ್ಮಕ ಚಿಂತನೆಗೆ ಬಲಿಯಾದ ಜನರು ಧನಾತ್ಮಕವಾಗಿ ಯೋಚಿಸುವ ಜನರಿಗಿಂತ ಕಡಿಮೆ ಆರೋಗ್ಯಕರ ಮತ್ತು ಸಂತೋಷವಾಗಿರುತ್ತಾರೆ ಎಂದು ನಂಬಲಾಗಿದೆ. ನಕಾರಾತ್ಮಕ ಚಿಂತನೆಯು ಮಕ್ಕಳ ವ್ಯಕ್ತಿತ್ವ(Personality) ಮತ್ತು ಭವಿಷ್ಯದ(Future) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳ ಮನಸ್ಸಿನಿಂದ ಋಣಾತ್ಮಕತೆಯನ್ನು(Negativity) ತೆಗೆದುಹಾಕಲು ಪೋಷಕರಿಗೆ ಬಹಳ ಕಷ್ಟ. ಅದಾಗ್ಯೂ, ಮಕ್ಕಳ ನಿರಾಶಾವಾದಿ ಚಿಂತನೆಯು ಹೆಚ್ಚು ಪ್ರಚಲಿತವಾಗುತ್ತಿದ್ದರೆ, ಅದರಿಂದ ಹೊರಬರಲು ಅವರಿಗೆ ಸಹಾಯವಾಗುವ ಕೆಲ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮೊಬೈಲ್ ಕೈಯಲ್ಲಿ ಇಲ್ಲದಾಗರೂ, ಕೆಲವು ಮಕ್ಕಳು ಮಾತೇ ಆಡೋಲ್ಲ! ಯಾಕೀ ಮೌನ?

 ಮಕ್ಕಳ ಋಣಾತ್ಮಕ ಚಿಂತನೆಯನ್ನು ಧನಾತ್ಮಕ ಚಿಂತನೆಯಾಗಿ ಹೀಗೆ ಪರಿವರ್ತಿಸಿ.

1. ಆಶಾವಾದದ ಮನೋಭಾವ: ಮಕ್ಕಳು ತಾವು ನೋಡುವ ಮತ್ತು ಕೇಳುವುದರಿಂದ (Listening) ಅಭ್ಯಾಸಗಳನ್ನು ಪಡೆಯುತ್ತಾರೆ. ಮಕ್ಕಳು ಹೆಚ್ಚಿನ ಸಮಯ ತಮ್ಮ ಪೋಷಕರ ಬಳಿ ಇರುವುದರಿಂದ ಪೋಷಕರ ನಡವಳಿಕೆ, ಆಲೋಚನೆಯು ಮಕ್ಕಳು ಹೇಗೆ ವರ್ತಿಸುತ್ತಾರೆ, ಯೋಚಿಸುತ್ತಾರೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ. ಪೋಷಕರು ಮಕ್ಕಳ ನಕಾರಾತ್ಮಕತೆಯನ್ನು ಎದುರಿಸಲು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಬೇಕು. ಆದ್ದರಿಂದ, ಮಕ್ಕಳ ಮುಂದೆ, ಎಲ್ಲದರ ಸಕಾರಾತ್ಮಕ ಅಂಶಗಳನ್ನು ನೋಡಿ ಮತ್ತು ನ್ಯೂನತೆಗಳನ್ನು ಹುಡುಕುವುದನ್ನು ತಪ್ಪಿಸಿ.

2. ಮಕ್ಕಳಿಗೆ ವ್ಯತ್ಯಾಸ ವಿವರಿಸಿ (Explain Differences): ಮಕ್ಕಳು ಯಾವಾಗಲೂ ಋಣಾತ್ಮಕ ಮತ್ತು ಧನಾತ್ಮಕವಾದವುಗಳ ನಡುವೆ ವ್ಯತ್ಯಾಸ ತಿಳಿದಿರುವುದಿಲ್ಲ. ಪರಿಣಾಮವಾಗಿ, ಮಕ್ಕಳು ಅರಿವಿಲ್ಲದೆ ನಕಾರಾತ್ಮಕತೆಯತ್ತ ಆಕರ್ಷಿತರಾಗುತ್ತಾರೆ. ಅಂತಹ ಸಂದರ್ಭದಲ್ಲಿ, ಒಳ್ಳೆಯದು ಮತ್ತು ಕೆಟ್ಟದರ ನಡುವೆ ವ್ಯತ್ಯಾಸವನ್ನು ಗುರುತಿಸಲು ಮತ್ತು ಎಲ್ಲಾ ಸಂದರ್ಭಗಳಲ್ಲಿ ಧನಾತ್ಮಕವಾಗಿರಲು ಮಕ್ಕಳಿಗೆ ಮಾರ್ಗದರ್ಶನ ನೀಡಬಹುದು. ನಕಾರಾತ್ಮಕವಾಗಿ ಯೋಚಿಸುವುದರಿಂದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ ಎಂದು ಮಕ್ಕಳಿಗೆ ತಿಳಿಸಿ.

3. ಮಗುವಿಗೆ ಏನು ತೊಂದರೆಯಾಗುತ್ತಿದೆ ಎಂಬುದನ್ನು ತಿಳಿಯಿರಿ (Study the Difficulties): ಪೋಷಕರು ತಮ್ಮ ಮಕ್ಕಳ ನಕಾರಾತ್ಮಕ ಚಿಂತನೆಯ ಬಗ್ಗೆ ತಿಳಿದಾಗ, ಅವರು ಉತ್ತಮ ಭಾವನೆಯನ್ನು ಮೂಡಿಸುವ ಏನನ್ನಾದರೂ ಮಾಡುವ ಮೂಲಕ ಮನವೊಲಿಸಲು ಪ್ರಯತ್ನಿಸಿ. ಅದಾಗ್ಯೂ ಹಾಗೆ ಮಾಡುವ ಮೊದಲು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯಕ. ಮಕ್ಕಳ ಋಣಾತ್ಮಕತೆಯ ಚಿಂತನೆಗೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿ ಮತ್ತು ಅವರು ಇರುವ ರೀತಿಯಲ್ಲಿ ಯೋಚಿಸುವುದನ್ನು ತಡೆಯಿರಿ. ಅದರ ಬಗ್ಗೆ ತಿಳಿದ ನಂತರ ಕಾರಣವನ್ನು ಚರ್ಚಿಸಿ. 

Parenting Tips : ಮಕ್ಕಳ ಮೇಲೆ ಕೂಗಾಡೋ ಬದಲು ಶಾಂತವಾಗಿದ್ದು ನೋಡಿ..

4. ಧನಾತ್ಮಕ ಅಂಶಗಳ ಬಗ್ಗೆ ಚಿಂತಿಸುವುದನ್ನು ಕಲಿಯಿರಿ(Thinking Positive): ಸಾಮಾನ್ಯವಾಗಿ ನಕಾರಾತ್ಮಕ ಚಿಂತನೆ ಹೊಂದಿರುವ ಮಕ್ಕಳು ಎಲ್ಲದರಲ್ಲೂ ಅಪೂರ್ಣತೆಯನ್ನು ಕಂಡುಕೊಳ್ಳುತ್ತಾರೆ. ಏಕಕಾಲದಲ್ಲಿ ಅವರು ಯಾವಾಗಲೂ ದುಃಖಿತರಾಗಿ, ಅವರು ಕೆಟ್ಟ ಭಾಗವನ್ನು ಕೇಂದ್ರೀಕರಿಸುತ್ತಾರೆ. ಈ ಸಂದರ್ಭದಲ್ಲಿ ಸಾಧ್ಯವಾದಷ್ಟು ಆಶಾವಾದಿಯಾಗಿ ಉಳಿಯಲು ಮಕ್ಕಳಿಗೆ ಸಲಹೆ ನೀಡಿ. ಮಕ್ಕಳು ಒಳ್ಳೆಯ ವಿಷಯಗಳತ್ತ ಮಾತ್ರ ಗಮನ ಹರಿಸಿದರೆ ಸಂತೋಷವಾಗುತ್ತದೆ. 

click me!