ಗಡಿ ದಾಟಿದ ಲವ್ ಸ್ಟೋರಿ; ಪ್ರಿಯಕರನಿಗಾಗಿ ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬಂದ ಗೆಳತಿ

By Vinutha Perla  |  First Published Aug 22, 2023, 10:16 AM IST

ಗಡಿಯಾಚೆಗಳಿನ ಪ್ರೇಮಕಥೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಭಾರತ-ಪಾಕ್‌ ನಡುವಿನ ಸೀಮಾ ಹೈದರ್‌ ಮತ್ತು ಅಂಜು ಪ್ರೇಮ ಪ್ರಕರಣಗಳ ನಂತರ ಇದೀಗ ಗೆಳೆಯನನ್ನು ಹುಡುಕಿಕೊಂಡು ಭಾರತಕ್ಕೆ ಬಂದ ದಕ್ಷಿಣ ಕೊರಿಯಾ ಯುವತಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಲಖನೌ: ದೇಶ-ವಿದೇಶಗಳ ನಡುವಿನ ಲವ್‌ಸ್ಟೋರಿಗಳು ಇತ್ತೀಚಿಗೆ ಹೆಚ್ಚು ಸುದ್ದಿಯಾಗುತ್ತಿವೆ. ಪ್ರೀತಿಸಿದವನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್‌, ಪಾಕಿಸ್ತಾನಕ್ಕೆ ತೆರಳಿದ ರಾಜಸ್ಥಾನದ ಅಂಜು ವಿಚಾರ ಈಗಾಗ್ಲೇ ಸುದ್ದಿಯಾಗಿದೆ. ಇದೆಲ್ಲದರ ಮಧ್ಯೆ, ಗೆಳೆಯನಿಗಾಗಿ ದಕ್ಷಿಣ ಕೊರಿಯಾದ ಯುವತಿಯೊಬ್ಬಳು ಭಾರತಕ್ಕೆ ಬಂದಿದ್ದಾಳೆ. ಭಾರತ-ಪಾಕ್‌ ನಡುವಿನ ಸೀಮಾ ಹೈದರ್‌ ಮತ್ತು ಅಂಜು ಪ್ರೇಮ ಪ್ರಕರಣಗಳ ನಡುವೆಯೇ ಭಾರತೀಯ ಮೂಲದ ತನ್ನ ಪ್ರೇಮಿಯನ್ನು ಮದುವೆಯಾಗಲು ಈಕೆ ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬಂದಿದ್ದಾಳೆ.

ಉತ್ತರ ಪ್ರದೇಶದ ಸುಖ್‌ಜಿತ್‌ ಸಿಂಗ್‌ ಕೊರಿಯಾದ ಬುಸಾನ್‌ನ ಕಾಫಿ ಶಾಪ್‌ ಒಂದರಲ್ಲಿ ಕೆಲಸ (Work) ಮಾಡುತ್ತಿದ್ದ ವೇಳೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಕಿಮ್‌ ಬೋಹ್‌ ಜೊತೆ ಪ್ರೇಮ (Love)ವಾಗಿತ್ತು. ಇಬ್ಬರು 4 ವರ್ಷ ಲಿವ್‌ ಇನ್‌ ಸಂಬಂಧ (Relationship)ದಲ್ಲಿದ್ದರು. ಇದಾದ ಬಳಿಕ ಇತ್ತೀಚೆಗೆ ಸುಖ್‌ಜಿತ್‌ ಭಾರತಕ್ಕೆ ಮರಳಿದ್ದ. ಆತ ಬಂದ 2 ತಿಂಗಳ ಬಳಿಕ ಕಿಮ್‌ ಕೂಡ ಭಾರತಕ್ಕೆ ಬಂದಿದ್ದಾಳೆ. ಗುರುದ್ವಾರದಲ್ಲಿ ಇಬ್ಬರು ಸಿಖ್‌ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಕಿಮ್‌ 3 ತಿಂಗಳ ವೀಸಾ ಮೇಲೆ ಭಾರತಕ್ಕೆ ಬಂದಿದ್ದು, ಆಕೆ ಬುಸಾನ್‌ಗೆ ಮರಳುತ್ತಾಳೆ. ಬಳಿಕ ನಾನು ಬುಸಾನ್‌ಗೆ ತೆರಳುತ್ತೇನೆ ಎಂದು ಸುಖ್‌ಜಿತ್‌ ಹೇಳಿದ್ದಾರೆ.

Tap to resize

Latest Videos

ಸೀಮಾ, ಅಂಜು ಆಯ್ತು, ಪ್ರಿಯಕರನಿಗಾಗಿ ಗಂಡ, ಮಕ್ಕಳನ್ನು ಬಿಟ್ಟು ಕುವೈತ್‌ಗೆ ಪರಾರಿಯಾದ ರಾಜಸ್ಥಾನದ ಮಹಿಳೆ!

ಕಾಫಿ ಶಾಪ್‌ನಲ್ಲಿ ಪ್ರೀತಿ
ಭಾರತಕ್ಕೆ ಬಂದ ದಕ್ಷಿಣ ಕೊರಿಯಾ ಯುವತಿ ಪಂಜಾಬಿ ಸಂಪ್ರದಾಯದಂತೆ ವಿವಾಹ (Marriage)ವಾಗಿದ್ದಾರೆ. ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಪುವಾಯಾನ್‌ನಲ್ಲಿರುವ ಗುರುದ್ವಾರ ನಾನಕ್ ಬಾಗ್‌ನಲ್ಲಿ ದಂಪತಿಗಳು ವಿವಾಹವಾದರು. ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಬಿಲ್ಲಿಂಗ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಿಮ್ ಬೋಹ್ ನಿ (30) ಅವರನ್ನು ಭೇಟಿಯಾದರು. ಕೆಲವೇ ತಿಂಗಳುಗಳಲ್ಲಿ ಕೊರಿಯನ್ ಭಾಷೆ (Language)ಯನ್ನು ಕಲಿಯುವ ಮೂಲಕ ತನ್ನ ಮತ್ತು ಬೋಹ್ ನಿ ನಡುವಿನ ಭಾಷಾ ತಡೆಗೋಡೆಯನ್ನು ನಿವಾರಿಸಿದೆ ಎಂದು ಸಿಂಗ್ ಹೇಳಿದರು. ಮದುವೆಗೆ ಮೊದಲು ದಂಪತಿಗಳು ನಾಲ್ಕು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು.

'ನಾನು ಮತ್ತು ಕಿಮ್ ನಡುವಿನ ಭಾಷಾ ಸಮಸ್ಯೆಯನ್ನು ಎರಡರಿಂದ ನಾಲ್ಕು ತಿಂಗಳಲ್ಲಿ ನಿವಾರಿಸಿ ಕೊರಿಯನ್ ಭಾಷೆಯನ್ನು ಕಲಿತಿದ್ದೇನೆ. ನಮ್ಮ ಕುಟುಂಬಗಳ ಅನುಮತಿಯೊಂದಿಗೆ 4 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದ ನಂತರ, ನಾವಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದೇವೆ' ಎಂದು ಸುಖ್‌ಜಿತ್‌ ತಿಳಿಸಿದ್ದಾರೆ. 'ಮಗ-ಸೊಸೆ' ಭಾರತದಲ್ಲಿಯೇ ಇರಬೇಕೆಂಬುದು ನನ್ನ ಆಸೆ. ಇದು ಅವರ ಜೀವನ. ಅವರು ಎಲ್ಲಿದ್ದರೂ ಖುಷಿಯಾಗಿರಲಿ ಎಂದು ಆಶಿಸುತ್ತೇನೆ' ಎಂದು ಸುಖ್‌ಜಿತ್‌ ತಾಯಿ ಹರ್ಜಿಂದರ್ ಕೌರ್ ಹೇಳುತ್ತಾರೆ.

ಸೀಮಾ, ಅಂಜು ಬಳಿಕ ಅಮೀನಾ ಸರದಿ, ವಿಡಿಯೋ ಕಾಲ್ ಮೂಲಕ ಭಾರತೀಯನ ವರಿಸಿದ ಪಾಕ್ ಯುವತಿ!

click me!