ಕಾಫಿ ವಿತ್ ಕರಣ್ ಸೀಸನ್ ಪ್ರೋಮೋನಲ್ಲಿ ರಣವೀರ್ ಸಿಂಗ್ ಕಡಲ ಮಧ್ಯದ ಪ್ರದೇಶವೊಂದರಲ್ಲಿ ದೀಪಿಕಾಗೆ ಪ್ರಪೋಸ್ ಮಾಡಿದ್ದಾಗಿ ಹೇಳಿದ್ದರು. ಸದ್ಯ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯಂತೆಯೇ ಮಾಲ್ಡೀವ್ಸ್‌ನಲ್ಲಿ ಜೋಡಿಯೊಂದು ಬೀಚ್ ಪ್ರಪೋಸಲ್ ಕ್ಷಣವನ್ನು ಮರುಸೃಷ್ಟಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕಾಫಿ ವಿತ್ ಕರಣ್ ಸೀಸನ್ 8ನೇ ಸೀಸಸ್‌ನ ಪ್ರೋಮೋ ಕ್ಲಿಪ್ ಭಾರೀ ಕುತೂಹಲವನ್ನುಂಟು ಮಾಡಿದೆ. ಇದರಲ್ಲಿ ಬಾಲಿವುಡ್‌ನ ಡೈನಾಮಿಕ್ ಜೋಡಿಯಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಜೀವನದ ಕುತೂಹಲಕಾರಿ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ ದಂಪತಿ ತಮ್ಮ ಮದುವೆ, ವೈಯಕ್ತಿಕ ಹೋರಾಟಗಳು ಮತ್ತು ವೃತ್ತಿಪರ ಪ್ರಯಾಣದ ವಿಷಯಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ.
ಕಾಫಿ ವಿತ್ ಕರಣ್ 8ರಲ್ಲಿ ರಣವೀರ್ ಸಿಂಗ್ ಅವರು ದೀಪಿಕಾ ಪಡುಕೋಣೆ ಅವರ ಮೊದಲ ಭೇಟಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಾತ್ರವಲ್ಲ ಅವರಿಗೆ ವಿಭಿನ್ನವಾಗಿ ಪ್ರಪೋಸ್ ಮಾಡಿರುವ ರೀತಿಯನ್ನು ಈ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಈ ಶೋನಲ್ಲಿ ರಣವೀರ್ ಸಿಂಗ್ ಕಡಲ ಮಧ್ಯದ ಪ್ರದೇಶವೊಂದರಲ್ಲಿ ದೀಪಿಕಾಗೆ ಪ್ರಪೋಸ್ ಮಾಡಿದ್ದಾಗಿ ಹೇಳಿದ್ದರು. ಸದ್ಯ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯಂತೆಯೇ ಮಾಲ್ಡೀವ್ಸ್‌ನಲ್ಲಿ ಜೋಡಿಯೊಂದು ಬೀಚ್ ಪ್ರಪೋಸಲ್ ಕ್ಷಣವನ್ನು ಮರುಸೃಷ್ಟಿಸಿದೆ.
ದೀಪಿಕಾ, ಅನುಷ್ಕಾ ಜೊತೆ ರಣವೀರ್ ಮೊದಲ ಭೇಟಿ, ಸೇಮ್ ಟು ಸೇಮ್ ಹೇಗೆ ಸಾಧ್ಯವೆಂದ ನೆಟ್ಟಿಗರು
ಕಾಫಿ ವಿತ್ ಕರಣ್ ಶೋನಲ್ಲಿ ಮನ ಬಿಚ್ಚಿ ಮಾತನಾಡಿದ ಬಾಲಿವುಡ್ ತಾರಾ ಜೋಡಿ
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಾಲಿವುಡ್‌ನ ಅತ್ಯಂತ ಮುದ್ದಾದ ಜೋಡಿ. 2012ರಲ್ಲಿ ತಮ್ಮ ಚಿತ್ರವಾದ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ಸಮಯದಲ್ಲಿ ಪರಸ್ಪರ ಇಷ್ಟಪಟ್ಟರು. ಇದಾದ ಬಳಿಕ 2015ರಲ್ಲಿ ಸಮುದ್ರದ ನಡುವೆ ಕನಸಿನ ರೀತಿಯಲ್ಲಿ ದೀಪಿಕಾಗೆ ರಣವೀರ್ ಪ್ರಪೋಸ್ ಮಾಡಿದ್ದರು. 2018ರಲ್ಲಿ ಇಟಲಿಯಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ನಲ್ಲಿ ಇಬ್ಬರೂ ಮದುವೆ (Marriage)ಯಾದರು. ಇಬ್ಬರು ಖುಷಿಯಿಂದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ಈಗ ಸುಮಾರು 5 ವರ್ಷಗಳ ನಂತರ ಈ ಬಾಲಿವುಡ್ ತಾರಾ ಜೋಡಿ ತಮ್ಮ ಸಂಬಂಧದ ಬಗ್ಗೆ ಕಾಫಿ ವಿತ್ ಕರಣ್ ಶೋನಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.
'ನಾವಿಬ್ಬರೂ ಮಾಲ್ಡೀವ್ಸ್‌ಗೆ ಹೋಗಿದ್ದೆವು. ಬೋಟ್‌ನಲ್ಲಿ ನಮ್ಮನ್ನು ಸಮುದ್ರದ ಮಧ್ಯಕ್ಕೆ ಕರೆದೊಯ್ಯಲಾಯಿತು. ಸಮುದ್ರದ ಮಧ್ಯದಲ್ಲಿ ಕೇವಲ ಒಂದು ಸಣ್ಣ ತೆಳ್ಳನೆಯ ಮರಳಿನ ಜಾಗವಿದೆ. ಸುತ್ತಲೂ ಸಮುದ್ರ. ಬೇರೆ ಯಾರೂ ಇಲ್ಲ. ಈ ಸಂದರ್ಭದಲ್ಲಿ ನಾನು ಮೊದಲೇ ತೆಗೆದುಕೊಂಡು ಹೋಗಿದ್ದ ರಿಂಗ್ ತೆಗೆದುಕೊಂಡು ಅವಳಿಗೆ ಪ್ರಪೋಸ್ ಮಾಡಿದೆ. ಅವಳು ಅದನ್ನು ನಿರೀಕ್ಷಿಸಿರಲ್ಲಿಲ್ಲ. ಹೀಗಾಗಿ ತುಂಬಾ ಭಾವುಕಳಾದಳು. ಮತ್ತು ಯೆಸ್ ಎಂದು ಹೇಳಿದಳು' ಎಂದು ರಣವೀರ್ ಸಿಂಗ್ ಹೇಳಿದ್ದರು.
ದೀಪಿಕಾ, ಅನುಷ್ಕಾ ಜೊತೆ ರಣವೀರ್ ಮೊದಲ ಭೇಟಿ, ಸೇಮ್ ಟು ಸೇಮ್ ಹೇಗೆ ಸಾಧ್ಯವೆಂದ ನೆಟ್ಟಿಗರು
ಮಹಿ ಮತ್ತು ಜಯ್ ಜೋಡಿಯ ವೀಡಿಯೋ ವೈರಲ್
ಅದೇ ರೀತಿ ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪ್ರಪೋಸಲ್ ಕ್ಷಣದಿಂದ ಸ್ಫೂರ್ತಿ ಪಡೆದು, ನಿಜ ಜೀವನದ ದಂಪತಿಗಳು ಸಹ ಇದೇ ರೀತಿ ಮಾಡಿದ್ದಾರೆ. ಮಹಿ ಮತ್ತು ಜಯ್ ಜೋಡಿಯ ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 'ರಣವೀರ್ ಸಿಂಗ್ ಶೈಲಿಯಲ್ಲಿ ಪ್ರಪೋಸ್' ಎಂಬ ಶೀರ್ಷಿಕೆಯಡಿ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಮಹಿ ಮತ್ತು ಜಯ್ ಹೆಲಿಕಾಫ್ಟರ್ ಹತ್ತುವುದರಿಂದ ವಿಡಿಯೋ ಆರಂಭವಾಗುತ್ತದೆ. ನಂತರ ಜಯ್ ವೈಟ್ ಕಲರ್ ಪ್ಯಾಂಟ್ ಸೂಟ್ ಹಾಗೂ ಮಹಿ ಫುಲ್ ಸ್ಲೀವ್‌ಗಳನ್ನು ಒಳಗೊಂಡಿರುವ ಆಫ್-ಶೋಲ್ಡರ್ ಗೌನ್ ಧರಿಸಿ ಬರುತ್ತಾರೆ. ಬಟ್ಟೆಯಿಂದ ಅವಳ ಕಣ್ಣುಗಳನ್ನು ಮುಚ್ಚಿರಲಾಗಿರುತ್ತದೆ.ಸಮುದ್ರದ ಮಧ್ಯಕ್ಕೆ ತಲುಪಿದಾಗ ಜಯ್, ಆಕೆಯ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆಗೆಯುತ್ತಾನೆ. ನಂತರ ಆಕೆಯ ಎದುರು ಮಂಡಿಯೂರಿ ಕುಳಿತು ಪ್ರಪೋಸ್ ಮಾಡುತ್ತಾನೆ. ಆಕೆ ಅಚ್ಚರಿಗೊಂಡು ಭಾವುಕಳಾಗುತ್ತಾಳೆ. ಪ್ರಪೋಸಲ್‌ಗೆ ಯೆಸ್ ಎಂದು ಹೇಳಿ ಜಯ್‌ನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತಾಳೆ. ನಂತರ, ಇಬ್ಬರೂ ಖುಷಿಯಿಂದ ಡ್ಯಾನ್ಸ್ ಮಾಡುವಲ್ಲಿಗೆ ವೀಡಿಯೋ ಮುಕ್ತಾಯಗೊಳ್ಳುತ್ತದೆ.