ಸ್ನೇಹ ಎಲ್ಲಕ್ಕಿಂತ ಮಿಗಿಲಾಗಿದ್ದು. ಸ್ನೇಹ – ಸ್ನೇಹಿತರಿಗೆ ಜೀವ ನೀಡುವ ಜನರಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲೂ ನೀವಿದನ್ನು ನೋಡ್ಬಹುದು. ಆದ್ರೆ ಈಗ ಸ್ನೇಹಿತರಿಬ್ಬರು ದೂರವಾಗಿದ್ದು, ಆಗ್ಲೂ ಅವರು ಸ್ನೇಹದ ಬಗ್ಗೆಯೇ ಆಲೋಚನೆ ಮಾಡ್ತಿದ್ದಾರೆ.
ಝೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಅಮೃತದಾರೆ ಧಾರಾವಾಹಿ ಅಭಿಮಾನಿಗಳಿಗೆ ಹತ್ತಿರವಾಗಿದೆ. ಅದ್ರಲ್ಲಿ ಜೀವನಕ್ಕೆ ಅಗತ್ಯವಿರುವ, ನಮ್ಮ ಜೀವನಕ್ಕೆ ಹತ್ತಿರ ಎನ್ನಿಸುವ ದೃಶ್ಯ, ಮಾತುಗಳು ವೀಕ್ಷಕರ ಮನಮುಟ್ಟುತ್ತಿದೆ. ಅಮೃತಧಾರೆಯಲ್ಲಿ ಹೀರೋ ಗೌತಮ್ ಆಪ್ತ ಗೆಳೆಯ ಆನಂದ್. ಇಬ್ಬರ ಮಧ್ಯೆ ಹಣದ ವಿಷ್ಯಕ್ಕೆ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಸ್ನೇಹಿತ ಆನಂದ್ ನಿರಪರಾಧಿ ಎಂಬುದು ಗೊತ್ತಿದ್ರೂ ಅವನ ಮೇಲೆ ಆರೋಪ ಹೊರಿಸಿರುವ ಗೌತಮ್, ಪಶ್ಚಾತಾಪ ಪಡ್ತಿದ್ದಾನೆ. ಆನಂದ್ ಮನೆಯವರೆಗೆ ಬಂದು ವಾಪಸ್ ಹೋಗಿರುವ ಗೌತಮ್ ಹಣಕ್ಕಿಂತ ಸ್ನೇಹ ಮುಖ್ಯ ಎಂಬುದನ್ನು ಹೇಳಿದ್ದಾನೆ.
ಇಬ್ಬರು ಒಳ್ಳೆಯ ಸ್ನೇಹಿತ (Friend) ರ ಮನಸ್ಸು ಶುದ್ಧವಾಗಿರುತ್ತದೆ. ಸ್ನೇಹಿತನೊಬ್ಬ ಸಾಧನೆ ಮಾಡಿದಾಗ ಅದನ್ನು ಮನಸ್ಪೂರ್ವಕವಾಗಿ ಆನಂದಿಸುತ್ತಾರೆ. ಸ್ನೇಹಿತನಿಗೆ ಕಷ್ಟ ಎಂದಾಗ ತನ್ನದೆಲ್ಲವನ್ನು ಧಾರೆ ಎರೆಯಲು ಸಿದ್ಧವಿತಾರೆ. ಸ್ನೇಹಿತರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ್ರೆ ಒಬ್ಬರನ್ನೊಬ್ಬರು ಬಿಟ್ಟಿರಲಾಗದೆ ಚಡಪಡಿಸುತ್ತಾರೆ. ಅವರ ಬಗ್ಗೆಯೇ ಸದಾ ಆಲೋಚನೆ ಮಾಡ್ತಾರೆ. ತಮ್ಮ ನೋವಿಗಿಂತ ಅವರಿಗೆ ಸ್ನೇಹಿತನ ನೋವು (pain) ಹೆಚ್ಚು ದುಃಖ ನೀಡಿರುತ್ತದೆ. ಎಷ್ಟೇ ಹಣವಿದ್ರೂ ಒಳ್ಳೆ ಸ್ನೇಹಿತ ಸಿಗೋದು ಬಹಳ ಕಷ್ಟ. ಹಣ ನೋಡಿ ಸ್ನೇಹ ಬೆಳೆಸುವವರೇ ಹೆಚ್ಚಿರುವ ಈ ಕಾಲದಲ್ಲಿ ಆನಂದ್ ನಂತಹ ಸ್ನೇಹಿತ ಸಿಕ್ಕಿದ್ದು ಗೌತಮ್ ಭಾಗ್ಯ. ಆದ್ರೆ ಗೌತಮ್ ಹಾಗೂ ಆನಂದ್ ಮಧ್ಯೆ ಈಗ ಭಿನ್ನಾಭಿಪ್ರಾಯ ಮೂಡಿದ್ದು, ಯಾವಾಗ ಸಮಸ್ಯೆ ಬಗೆಹರಿಯುತ್ತೆ ಎಂದು ಅಭಿಮಾನಿಗಳು ಕಾಯ್ತಿದ್ದಾರೆ.
ಟಬು @52: ಮದ್ವೆಯಾಗಿದ್ರೆ ಅನ್ಯಾಯವಾಗ್ತಿತ್ತು, ಸಿಂಗಲ್ ಆಗಿದ್ದೇ ನನ್ನ ಯಶಸ್ಸಿನ ಗುಟ್ಟು ಎಂದ ನಟಿ
ಆನಂದ್ ಮನೆ ಮುಂದೆ ನಿಂತಿರುವ ಗೌತಮ್, ತನ್ನ ನೋವನ್ನು ತೋಡಿಕೊಳ್ತಾನೆ. ಲೈಫಲ್ಲಿ ನಾನು ಸಂಪಾದನೆ ಮಾಡಿದ್ದು ಹಣ, ಆಸ್ತಿ,ಪಾಸ್ತಿಯನ್ನಲ್ಲ ಸ್ನೇಹವನ್ನು (Freindship) ಎನ್ನುವ ಗೌತಮ, ಅದೇ ಸ್ನೇಹವನ್ನು ಕಳೆದುಕೊಂಡೆ ಎಂದು ದುಃಖ ವ್ಯಕ್ತಪಡಿಸ್ತಾನೆ. ಸ್ನೇಹಿತ ಆನಂದ್ ಇಲ್ಲದೆ ಇರಲು ಸಾಧ್ಯವಿಲ್ಲ ಎಂದು ಪತ್ನಿ ಮುಂದೆ ಕಣ್ಣೀರು ಹಾಕುವ ಗೌತಮ್, ನಾನು ಎಲ್ಲವನ್ನೂ ಕಳೆದುಕೊಂಡೆ ಎಂದು ಅಳ್ತಾನೆ. ಆನಂದ್ಗೆ ತುಂಬಾ ನೋವುಕೊಟ್ಟೆ ಎಂದು ನೊಂದುಕೊಳ್ಳುವ ಗೌತಮ್, ಆನಂದ್ ಮನಸ್ಸಿಗೆ ಎಷ್ಟು ನೋವಾಯ್ತೋ ಎನ್ನುತ್ತಾನೆ. ಆನಂದ್ ಬಗ್ಗೆಯೇ ಯೋಚನೆ ಮಾಡುವ ಗೌತಮ್, ಆತ ಊಟ ಮಾಡಿದ್ನೋ, ನಿದ್ರೆ ಮಾಡಿದ್ನೋ ಗೊತ್ತಿಲ್ಲ. ಸದಾ ನಗ್ತಿದ್ದ, ನಗಿಸ್ತಿದ್ದ ಆನಂದ್ ಅಳುವ ಹಾಗಾಯ್ತು ಎಂದು ಗೌತಮ್ ನೊಂದುಕೊಳ್ತಾನೆ.
ಪತ್ನಿಯ ಬರ್ತ್‌ಡೇ ಸಪ್ರೈಸ್ ನೀಡಿದ ಪತಿ, ವಿಚ್ಛೇದನಕ್ಕೆ ಕಾರಣವಾಯ್ತು ಕೊಟ್ಟ ಆ ಗಿಫ್ಟ್
ಆನಂದ್‌ಗೆ ಮುಖ ತೋರಿಸಲು ಹಿಂದೇಟು ಹಾಕಿದ ಗೌತಮ್, ನನ್ನ ಮುಖ ನೋಡಿದ್ರೆ, ನಾನಾಡಿದ ಮಾತು ಅವನ ನೆನಪಿಗೆ ಬರುತ್ತೆ ಎನ್ನುತ್ತಾನೆ. ಚಿಕ್ಕವರು, ದೊಡ್ಡವರ ಮಧ್ಯೆ ಇರುವ ವ್ಯತ್ಯಾಸವನ್ನು ಹೇಳುವ ಗೌತಮ್, ಚಿಕ್ಕವರಿದ್ದಾಗ ಎಲ್ಲವನ್ನೂ ಮರೆತು ಒಂದಾಗ್ತೇವೆ. ಅದೇ ಬೆಳೀತಾ ಬೆಳೀತಾ ಮುಗ್ದತೆಯನ್ನು ಕಳೆದುಕೊಳ್ತೇವೆ ಎನ್ನುವ ಗೌತಮ್, ನಮ್ಮಲ್ಲಿ ಅಹಂಕಾರವಿದೆ ಎಂದಿದ್ದಾರೆ.
ಸ್ನೇಹಿತರ ಮಧ್ಯೆ ತಮಾಷೆಗೆ ಅನೇಕ ಬೈಗುಳ ಬರುತ್ತೆ. ಕಳ್ಳ ಎಂದೂ ಹೇಳಿರ್ತೇವೆ. ಆದ್ರೆ ನಿಜವಾಗ್ಲೂ ಕಳ್ಳ ಎನ್ನುವ ಆರೋಪ ಬಂದಾಗ ಅದು ಸ್ನೇಹಕ್ಕೆ ಕುತ್ತು ತರುತ್ತದೆ ಎನ್ನುತ್ತಾನೆ ಗೌತಮ್. ಇದೇ ಕಾರಣಕ್ಕೆ ಆನಂದ್ ಮುಖ ತೋರಿಸಲು ನನಗೆ ಸಾಧ್ಯವಾಗ್ತಿಲ್ಲ ಎಂದ ಗೌತಮ್, ಅಲ್ಲಿಂದ ಹೊರಟು ಹೋಗ್ತಾನೆ.
ಅದೇ ಇತ್ತ ಸ್ನೇಹಿತ ಆನಂದ್ ಕೂಡ ಗೌತಮ್ ನೆನೆದು ಕಣ್ಣೀರು ಹಾಕ್ತಾನೆ. ಗೌತಮ್ ತನಗೆ ಅವಮಾನ ಮಾಡಿದ ಎನ್ನುವುದಕ್ಕಿಂತ ಗೌತಮ್ ಎಷ್ಟು ನೊಂದುಕೊಂಡಿದ್ದಾನೆ ಎಂಬುದನ್ನೇ ಆನಂದ್ ಅಲೋಚನೆ ಮಾಡ್ತಾನೆ. ನನಗೆ ಕಳ್ಳ ಅಂದೆ ಅಂತ ನನಗಿಂತ ಗೌತಮ್ ಹತ್ತು ಪಟ್ಟು ನೋವು ಅನುಭವಿಸ್ತಾನೆ ಎಂದು ಆನಂದ್ ಹೇಳ್ತಾನೆ. ಒಟ್ಟಿನಲ್ಲಿ ಹಣಕ್ಕಿಂತ ಸ್ನೇಹ ಮುಖ್ಯ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಹೇಳಲಾಗ್ತಿದೆ.