Mandi Community: ತಂದೆಯನ್ನೇ ವಿವಾಹವಾಗ್ತಾಳೆ ಮಗಳು! ವಿಚಿತ್ರವಾಗಿದೆ ಕಾರಣ

Suvarna News   | Asianet News
Published : Feb 09, 2022, 05:58 PM IST
Mandi Community: ತಂದೆಯನ್ನೇ ವಿವಾಹವಾಗ್ತಾಳೆ ಮಗಳು! ವಿಚಿತ್ರವಾಗಿದೆ ಕಾರಣ

ಸಾರಾಂಶ

ರಕ್ತ ಸಂಬಂಧಿಗಳನ್ನು ವಿವಾಹವಾಗಬಾರದು ಎಂಬ ಪದ್ಧತಿ ಭಾರತದಲ್ಲಿದೆ. ಸಹೋದರ, ತಂದೆಯನ್ನು ಇಲ್ಲಿ ಪೂಜ್ಯ ಭಾವದಿಂದ ನೋಡಲಾಗುತ್ತದೆ. ಆದ್ರೆ ತಂದೆಯನ್ನೇ ಮದುವೆಯಾಗುವ ಜಾಗವೂ ವಿಶ್ವದಲ್ಲಿ ಇದೆ. ಅಲ್ಲಿನವರ ವಿಚಿತ್ರ ಪದ್ಧತಿ ಬಗ್ಗೆ ಇಂದು ಹೇಳ್ತೆವೆ.  

ತಂದೆ (Father) ಮತ್ತು ಮಗಳ (Daughter) ಸಂಬಂಧವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ತಂದೆ, ಮಗಳ ಬೆನ್ನೆಲುಬು ಎನ್ನಬಹುದು. ವಿದ್ಯೆ ಕಲಿಸುವುದ್ರಿಂದ ಹಿಡಿದು ಮಗಳನ್ನು ಬೆಳೆಸಿ ದೊಡ್ಡವಳಾದ್ಮೇಲೆ ಆಕೆಯನ್ನು ಮದುವೆ (Marriage) ಮಾಡುವ ಸಂಪೂರ್ಣ ಜವಾಬ್ದಾರಿ ತಂದೆ ಮೇಲಿರುತ್ತದೆ. ಭಾರತ (India) ದಲ್ಲಿ ಮನೆಗೆ ಮಗಳು ಬಂದಳು ಎಂದ್ರೆ ಲಕ್ಷ್ಮಿ (Laxmi) ಬಂದಳು ಎಂದರ್ಥ. ಮಗಳನ್ನು ಲಕ್ಷ್ಮಿಯಂತೆ ನೋಡಲಾಗುತ್ತದೆ. ಸಾಮಾನ್ಯವಾಗಿ ತಂದೆಯಾದವನು ತನ್ನ ಮಗಳನ್ನು ತಾಯಿಗೆ ಹೋಲಿಸುತ್ತಾನೆ. ಆಕೆಯಲ್ಲಿ ತಾಯಿ ಪ್ರೀತಿ (Love), ಮಮತೆ ನೋಡುತ್ತಾರೆ. ಮಗಳ ಉತ್ತಮ ಭವಿಷ್ಯ (Future) ತಂದೆಯ ಗುರಿ. ಆಕೆಗೆ ಸದಾ ನೆರಳಾಗಿ, ರಕ್ಷಣೆ ನೀಡುವ ಜವಾಬ್ದಾರಿಯನ್ನು ತಂದೆ ಹೊರುತ್ತಾನೆ.

ಮಗಳನ್ನು ಅಪ್ಪಿತಪ್ಪಿಯೂ ಕೆಟ್ಟ ದೃಷ್ಟಿಯಲ್ಲಿ ನೋಡುವುದಿಲ್ಲ. ಆಕೆ ಜೊತೆ ಸಂಬಂಧ ಬೆಳೆಸುವುದು ಪಾಪವೆಂದು ನಾವು ನಂಬಿದ್ದೇವೆ. ಆದರೆ ಜಗತ್ತಿನಲ್ಲಿ ಚಿತ್ರವಿಚಿತ್ರ ಪದ್ಧತಿಗಳಿವೆ. ಕೆಲ ಪ್ರದೇಶದಲ್ಲಿ ತಂದೆ-ಮಗಳ ಸಂಬಂಧಕ್ಕೆ ಬೇರೆ ಅರ್ಥ ನೀಡಲಾಗಿದೆ. ಹೆಣ್ಣು ಮಕ್ಕಳನ್ನು ಅವರ ತಂದೆಯೇ ಮದುವೆಯಾಗುವ ಪದ್ಧತಿಯೂ ಇದೆ. ಅಚ್ಚರಿಯೆನಿಸಿದ್ರೂ ಇದು ಸತ್ಯ. ತಂದೆಯನ್ನೇ ಮಗಳು ಮದುವೆಯಾಗುವ ಸಂಪ್ರದಾಯದ ಬಗ್ಗೆ ನಾವಿಂದು ಹೇಳ್ತೆವೆ. 

ಎಲ್ಲಿದೆ ತಂದೆ-ಮಗಳ ಮದುವೆ ಸಂಪ್ರದಾಯ? : ತಂದೆಯೇ ಮಗಳನ್ನು ಮದುವೆಯಾಗುವ ಈ ವಿಚಿತ್ರ ಸಂಪ್ರದಾಯವು ಬಾಂಗ್ಲಾದೇಶ (Bangladesh ) ದ ಮಂಡಿ (Mandi) ಬುಡಕಟ್ಟು ಜನಾಂಗದಲ್ಲಿದೆ. ಬಾಂಗ್ಲಾದೇಶದಲ್ಲಿ ವಾಸಿಸುವ ಮಂಡಿ ಬುಡಕಟ್ಟಿನಲ್ಲಿ ಹುಡುಗಿಯರು ಬೇರೆ ವ್ಯಕ್ತಿಗಳನ್ನು ಮದುವೆಯಾಗುವುದಿಲ್ಲ. ಅಲ್ಲಿ ಹುಡುಗರನ್ನು ಹುಡುಕುವ ಪದ್ಧತಿಯಿಲ್ಲ. ಮಂಡಿ ಬುಡಕಟ್ಟಿನ ಹುಡುಗಿಯರು ತಂದೆಯನ್ನು ಮಾತ್ರ ಮದುವೆಯಾಗುತ್ತಾರೆ. 

ತಂದೆ ತೀರಿಕೊಂಡರೆ ಏನು ಮಾಡ್ತಾರೆ : ಮಂಡಿ ಬುಡಕಟ್ಟು ಕುಟುಂಬದಲ್ಲಿ ಮತ್ತೊಂದು ಪದ್ಧತಿ ಜಾರಿಯಲ್ಲಿದೆ. ಅಲ್ಲಿ ಮಹಿಳೆಯರ ಪತಿ ತೀರಿಕೊಂಡರೆ ಆಕೆಗೆ ಎರಡನೇ ಮದುವೆ ಮಾಡಲಾಗುತ್ತದೆ. ಪುನರ್ವಿವಾಹಕ್ಕೆ ಇಲ್ಲಿ ಅವಕಾಶವಿದೆ. ಮದುವೆ ನಂತ್ರ ಅವರಿಗೆ ಹೆಣ್ಣು ಮಗು ಜನಿಸಿದ್ರೆ ಅಥವಾ ತೀರಿಕೊಂಡ ಪತಿಯಿಂದಲೇ ಮಹಿಳೆ ಹೆಣ್ಣು ಮಗು ಪಡೆದಿದ್ದರೆ ಅವರು ಹೊಸ ತಂದೆಯನ್ನು ಮದುವೆಯಾಗಬೇಕಾಗುತ್ತದೆ. 

Valentine's day: ಪ್ರೇಮಿ ಇಲ್ಲವೇ? ಗೆಳೆಯರ ಜೊತೆಗೇ ಆಚರಿಸಿ!

ಓರೋಲಾ ಹೇಳುವುದೇನು : ಇದು ಹಿಂದಿನ ಕಥೆ. ಆದ್ರೆ ಈಗ್ಲೂ ಮಂಡಿ ಬುಡಕಟ್ಟು ಕುಟುಂಬದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಓರೋಲಾ ಹೆಸರಿನ ಹುಡುಗಿಯ ತಂದೆ ಆಕೆ ಚಿಕ್ಕವಳಿರುವಾಗ್ಲೇ ತೀರಿಕೊಂಡಿದ್ದನಂತೆ. ನಂತರ ಅವಳ ತಾಯಿ ನೋಟೆನ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ವಿವಾಹವಾದಳಂತೆ. ತನ್ನ ಇನ್ನೊಬ್ಬ ತಂದೆಯನ್ನು ನೋಡಿ ಅವನು ಎಷ್ಟು ಒಳ್ಳೆಯವನು ಎಂದುಕೊಂಡಿದ್ದಳಂತೆ ಓರೋಲಾ. ಹೊಸ ತಂದೆಯನ್ನು ಆಕೆ ಇಷ್ಟಪಡಲು ಶುರು ಮಾಡಿದ್ದಳಂತೆ. ಯೌವನಕ್ಕೆ ಬಂದಾಗ ತಂದೆಯೇ ಪತಿಯಾಗ್ತಿದ್ದಾನೆಂಬ ಸಂಗತಿ ಆಕೆಗೆ ಖುಷಿ ನೀಡಿತ್ತಂತೆ. ಕನಸು ಕಾಣ್ತಿರುವಂತೆ ನಾನು ಭಾವಿಸಿದ್ದೆ ಎನ್ನುತ್ತಾಳೆ ಓರೋಲಾ. ಆದರೆ ಇದು ನಿಜವಾಗಿತ್ತು. ವಾಸ್ತವವಾಗಿ, ಓರೋಲಾ ತನ್ನ ತಂದೆಯೊಂದಿಗೆ ವಿವಾಹವಾದಳಂತೆ.  ಓರೋಲಾ ತಂದೆಯೇ ಆಕೆಯ ಪತಿ.  

Relationship Tips: ನಿಮ್ಮನ್ನು ಯಾರೂ ಮಿಸ್ ಮಾಡ್ಕೊಳ್ತಿಲ್ವಾ..ಈ ಟ್ರಿಕ್ ಯೂಸ್ ಮಾಡಿ

ರಕ್ಷಣೆ ಹೆಸರಿನಲ್ಲಿ ನಡೆಯುತ್ತಿದೆ ಪದ್ಧತಿ : ಜಗತ್ತು ಸಾಕಷ್ಟು ಬದಲಾಗಿದೆ. ಆದ್ರೆ ಅನೇಕ ಪದ್ಧತಿ-ಸಂಪ್ರದಾಯಗಳು ಈಗ್ಲೂ ಮುಂದುವರೆದಿವೆ. ಅದ್ರಲ್ಲಿ ಇದು ಕೂಡ ಒಂದು. ಮಂಡಿ ಬುಡಕಟ್ಟು ಜನಾಂಗದವರು ಈಗ್ಲೂ ತಂದೆಯನ್ನು ಮದುವೆಯಾಗ್ತಿದ್ದಾರೆ.ಮಗಳನ್ನು ಬೇರೆಯವರ ಕೈಗೆ ನೀಡಿದ್ರೆ ಅವರು ಹೇಗೆ ನೋಡಿಕೊಳ್ತಾರೆ ಎಂಬ ಭಯವಿರುತ್ತದೆ. ಮಗಳು ಹುಟ್ಟಿದ ಮೇಲೆ ಆಕೆ ಬೇರೆ ಮನೆಗೆ ಹೋಗುವವಳು ಎಂಬ ಭಾವನೆ ನಮ್ಮಲ್ಲಿದೆ. ಮಗಳಿಗೆ ಅಲ್ಲಿ ಸರಿಯಾಗಿ ರಕ್ಷಣೆ ಸಿಗದೆ ಹೋದ್ರೆ ಎಂಬ ಆತಂಕ ಮಂಡಿ ಬುಡಕಟ್ಟಿನವರದ್ದು. ತಾಯಿ ಹಾಗೂ ಮಗಳಿಗೆ ರಕ್ಷಣೆ ನೀಡುವ ಕಾರಣಕ್ಕೆ ತಂದೆಯೇ ಮಗಳನ್ನು ಮದುವೆಯಾಗುತ್ತಾನೆ. ಇದು ಬಹಳ ವಿಚಿತ್ರ ಪದ್ಧತಿಯೆನ್ನಬಹುದು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು