Bad Speaker: ಈ ತರ ಮಾತಾಡಿ ಕೆಟ್ಟ ಮಾತುಗಾರ ಎನಿಸಿಕೊಳ್ಳಬೇಡಿ

Suvarna News   | Asianet News
Published : Feb 09, 2022, 05:36 PM IST
Bad Speaker: ಈ ತರ ಮಾತಾಡಿ ಕೆಟ್ಟ ಮಾತುಗಾರ ಎನಿಸಿಕೊಳ್ಳಬೇಡಿ

ಸಾರಾಂಶ

ಮಾತಿನಿಂದ ಮನ ಗೆಲ್ಲುವುದು ಸುಲಭವಲ್ಲ. ವಾಕ್ ಪುತ್ರರು ಎನಿಸಿಕೊಳ್ಳಲು ಕೌಶಲ ಬೇಕೇ ಬೇಕು. ನಿಮ್ಮ ಮಾತು ಇತರರನ್ನು ಸೆಳೆಯಲು ಕೆಲವು ಗುಣಗಳನ್ನು ಕೈಬಿಡಬೇಕು. ಇಲ್ಲವಾದರೆ ಕೆಟ್ಟ ಮಾತುಗಾರ ಎನಿಸಿಕೊಳ್ಳಲು ಈ ಗುಣಗಳೇ ಸಾಕಾಗುತ್ತವೆ.   

ಮಾತಿನಿಂದಲೇ ಎಲ್ಲರನ್ನೂ ಸೆಳೆಯುವವರಿಗೆ “ಮಾತಿನಲ್ಲೇ ಮನೆ ಕಟ್ಬೇಡ’ ಎಂದು ರೇಗಿಸುತ್ತೇವೆ. ಅಸಲಿಗೆ, ಮಾತನಾಡುವುದೊಂದು (Speech) ಕಲೆ (Art). ಮಾತುಗಾರಿಕೆಯಿಂದಲೇ ಜನಪ್ರಿಯತೆ ಪಡೆದುಕೊಂಡವರಿದ್ದಾರೆ. ಬಹಳಷ್ಟು ಜನರಿಗೆ ಮಾತುಗಾರಿಕೆಯೇ ಬದುಕಿನ ದುಡಿಮೆಯ ಮೂಲ. ಉಪನ್ಯಾಸ, ಅವಧಾನ, ತಾಳಮದ್ದಲೆ, ಯಕ್ಷಗಾನ, ನಾಟಕ ಮುಂತಾದ ಕಲೆಗಳಿಗೆ ಮಾತುಗಾರಿಕೆಯೇ ಬಂಡವಾಳ. ಇದು ಮಾತುಗಾರಿಕೆಯನ್ನೇ ನೆಚ್ಚಿಕೊಂಡವರ ಮಾತಾಯ್ತು. 

ನಮ್ಮ ನಿಮ್ಮಂಥ ಸಾಮಾನ್ಯರೂ ಪರಸ್ಪರ ಅಥವಾ ಗುಂಪಿನಲ್ಲಿ ಮಾತನಾಡುತ್ತೇವಲ್ಲವೇ? ಅಲ್ಲೂ ಕೂಡ ಮಾತಿಗೊಂದು ತೂಕ ಇರಬೇಕು. ನೀವೇ ನೋಡಿ. ಕೆಲವರ ಮಾತುಗಳನ್ನು ಕೇಳಿದರೆ, ಕೇಳುತ್ತಲೇ ಇರಬೇಕು ಎನಿಸುತ್ತದೆ. ತಮ್ಮ ಅನುಭವ (Experience), ವಿಚಾರಗಳ ಮೂಲಕ ನಮ್ಮನ್ನು ನಗಿಸುವ ಜತೆಗೇ ಯಾರಿಗೂ ನೋವಾಗದಂತೆ, ಬೋರಾಗದಂತೆ ಮಾತನಾಡುತ್ತಾರೆ. ಎಲ್ಲೂ ಅಡೆತಡೆಯಿಲ್ಲದೆ ನಿರರ್ಗಳವಾಗಿ ಅವರು ಬೇರೆ ಬೇರೆ ವಿಷಯದ ಕುರಿತು ಮಾತನಾಡುತ್ತಿರಬಲ್ಲರು. ಆದರೆ, ಕೆಲವರನ್ನು ನೋಡಿ, ಅವರ ಮಾತುಗಳನ್ನು ಕೇಳಬೇಕು ಎನಿಸುವುದಿಲ್ಲ. ಇದು ನಿಮ್ಮ ಅನುಭವಕ್ಕೂ ಬಂದಿರಬಹುದು.

ತುಂಬ ಜನ ಮಾತನಾಡಲು ಬಯಸುತ್ತಾರಾದರೂ ಅವರು ಎಲ್ಲೋ ಒಂದು ಕಡೆ ಜನರ ವಿಶ್ವಾಸ (Confidence) ಗಳಿಸಲು ಅಥವಾ ಅವರ ಮನ ಗೆಲ್ಲಲು ಸೋಲುತ್ತಾರೆ. ಅಂಥದ್ದೇನು ಕಾರಣವಿರಬಹುದು ಅವರ ಮಾತಿನ ವಿಧಾನದಲ್ಲಿ? 
ಹೌದು, ಮಾತುಗಾರಿಕೆಗೆ ಎಷ್ಟು ವಿಶೇಷತೆಗಳ ಅಗತ್ಯವಿದೆಯೋ ಹಾಗೆಯೇ ಕೆಟ್ಟ ಮಾತುಗಾರ (Bad Speaker) ಎನಿಸಲು ಕೆಲವು ಗುಣಗಳು ಸಾಕು. ಅವು ನಿಮ್ಮಲ್ಲೂ ಇವೆಯೇ ಎಂದು ಚೆಕ್ ಮಾಡಿಕೊಳ್ಳಿ. 

Teddy Day : ಮುದ್ದು ಮುದ್ದಾದ ಟೆಡ್ಡಿ ಗಿಫ್ಟ್ ಮಾಡುವ ಮೊದಲು ಅರ್ಥ ತಿಳಿದುಕೊಳ್ಳಿ

•    ಉತ್ಪ್ರೇಕ್ಷೆ (Exaggeration) ಮಾಡುವ ಗುಣ: ಸತ್ಯವನ್ನು ತೀರ ಉತ್ಪ್ರೇಕ್ಷೆ ಮಾಡಿ ಹೇಳಬಾರದು. ಸತ್ಯವನ್ನು ಸಂದರ್ಭಕ್ಕೆ ತಕ್ಕಂತೆ, ಎದುರಿಗಿರುವವರನ್ನು ನಗಿಸಲು ಸ್ವಲ್ಪ ನಾಟಕೀಯವಾಗಿ ಹೇಳಬಹುದೇ ವಿನಾ ಅದನ್ನು ಇದ್ದುದಕ್ಕಿಂತ ಹೆಚ್ಚಾಗಿ ಬಣ್ಣಿಸಬಾರದು. ಆಗ ಜನ ನಮ್ಮನ್ನು ನಂಬುವುದಿಲ್ಲ. ಹಾಗೂ ಯಾರೂ ನಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. 
•    ಧೋರಣೆ (Attitude) ಬದಲಿಸಿಕೊಳ್ಳಿ: ಉತ್ತಮ ಮಾತುಗಾರ ಎನಿಸಲು ಕೆಲವು ಕೌಶಲ ರೂಢಿಸಿಕೊಳ್ಳಬೇಕು. ಮಾತಿಗೆ ಬೆನ್ನೆಲುಬಾಗಿ ಹೆಚ್ಚಿನ ಅಧ್ಯಯನ ಹಾಗೂ ತಿಳಿವಳಿಕೆ ಖಂಡಿತ ಬೇಕು. 
•    ಗಾಸಿಪಿಂಗ್ (Gossiping): ಯಾರದ್ದಾದರೂ ಅನುಪಸ್ಥಿತಿಯಲ್ಲಿ ಅವರ ಕುರಿತು ಕೆಟ್ಟ ಮಾತುಗಳನ್ನಾಡುವುದು ಭೂಷಣವಲ್ಲ. ಸಾಮಾನ್ಯವಾಗಿ ಇದು ಸರಪಳಿಯಂತೆ ಉದ್ದವಾಗುತ್ತ ಹೋಗಿ ಕೊನೆಗೆ ನಿಮ್ಮ ಬುಡಕ್ಕೇ ಬರುತ್ತದೆ. ಆಗ ನಿಮ್ಮ ವ್ಯಕ್ತಿತ್ವಕ್ಕೇ ಹಾನಿಯಾಗುತ್ತದೆ. ಆಗಲೂ ಜನರು ನಿಮ್ಮನ್ನು ಇಷ್ಟಪಡುವುದಿಲ್ಲ. “ಇನ್ನೊಬ್ಬರ ಬಗ್ಗೆ ಮಾತನಾಡುವವರು ನಮ್ಮ ಬಗ್ಗೆಯೂ ಹೀಗೆ ಮಾತನಾಡಬಹುದಲ್ಲವೇ’ ಎಂದು ಯೋಚಿಸಿ ದೂರವಾಗುತ್ತಾರೆ. 

Long Distance Relationship: ದೂರವಿದ್ದೇ ಹತ್ತಿರ ಎನಿಸುವಂತೆ ಪ್ರೇಮಿಗಳ ದಿನ ಆಚರಿಸಿ

•    ನಕಾರಾತ್ಮಕ (Negative) ಮಾತುಗಳು ಸಲ್ಲ: ಮಾತಿನಲ್ಲಿ ಯಾವತ್ತೂ ಆಶಾವಾದ ಇಣುಕಬೇಕು. ನಕಾರಾತ್ಮಕ ಮಾತುಗಳು ಸಕಾರಾತ್ಮಕ ಮನಸ್ಥಿತಿಯ ವ್ಯಕ್ತಿಗಳನ್ನಂತೂ ಸೆಳೆಯುವುದಿಲ್ಲ. ಬದಲಿಗೆ, ನಕಾರಾತ್ಮಕ ಧೋರಣೆಯ ಜನರೇ ನಿಮ್ಮ ಸ್ನೇಹಿತರಾಗುತ್ತಾರೆ. ಹೀಗಾಗಿ, ಮನಸ್ಥಿತಿ ಹಾಗೂ ಮಾತು ಎರಡರಲ್ಲೂ ಧನಾತ್ಮಕತೆ ಇರಬೇಕು. 
•    ನ್ಯಾಯತೀರ್ಮಾನ (Judging) ನೀಡಬೇಡಿ: ಇತರ ವ್ಯಕ್ತಿಗಳ ಜೀವನ, ಅನುಭವ, ಅನಿಸಿಕೆ ಯಾವುದೇ ವಿಚಾರದ ಕುರಿತು ನ್ಯಾಯತೀರ್ಮಾನ ನೀಡಬಾರದು. ಕೆಲವರು ಅತಿ ಸುಲಭವಾಗಿ ಇನ್ನೊಬ್ಬರ ಕುರಿತು ಜಡ್ಜ್ ಮಾಡಿಬಿಡುತ್ತಾರೆ. ಹಾಗೆ ಮಾಡಿದರೆ ನಂತರ ಅವರು ನಿಮ್ಮನ್ನೂ ಜಡ್ಜ್ ಮಾಡುತ್ತಾರೆ ಹಾಗೂ ದೂರವೇ ಉಳಿಯುತ್ತಾರೆ. 
•    ದೂರುವ (Complain) ಮನಸ್ಥಿತಿ: ಜೀವನದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಹೋರಾಟಗಳು, ಸಮಸ್ಯೆಗಳು ಇದ್ದೇ ಇರುತ್ತವೆ. ಅವುಗಳ ಕುರಿತೇ ಸದಾಕಾಲ ಮಾತನಾಡುವುದು, ಅವುಗಳನ್ನು ದೂರುತ್ತಿರುವುದು, ಗೊಣಗುವುದು ಮಾಡುತ್ತಿದ್ದರೆ ಜನ ನಿಮ್ಮಿಂದ ದೂರ ಓಡುತ್ತಾರೆ. ಏಕೆಂದರೆ ದೂರುವ, ಗೊಣಗುವ ಮೂಲಕ ನೀವು ಅರಿಯದೆಯೇ ನೆಗೆಟಿವ್ ವಿಚಾರಗಳನ್ನು ಹರಡುತ್ತೀರಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಣಕ್ಯ ನೀತಿಯ ಪ್ರಕಾರ ಮಹಿಳೆಯರು ಈ 5 ರೀತಿಯ ಪುರುಷರಿಂದ ದೂರವಿರೋದೆ ಒಳ್ಳೇದು
ಗೆಳತಿಯೊಂದಿಗೆ ಹೋಟೆಲ್‌ನಲ್ಲಿದ್ದಾಗ ಬಂದ ಹೆಂಡ್ತಿ, ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿಷಯ ಈಗ ಜಗಜ್ಜಾಹೀರು