ನಮ್ಮ ಪ್ರೀತಿಗೆ ಯಾವ ಗೇಟ್ ಕೂಡ ಅಡ್ಡಿಯಾಗದು... ಶ್ವಾನಗಳ ಮುದ್ದಾದ ಫೋಟೋ ವೈರಲ್‌

By Anusha Kb  |  First Published Jul 7, 2022, 12:44 PM IST

ಎರಡು ಶ್ವಾನಗಳ ಮುದ್ದಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲ್ಯಾಬ್ರಡಾರ್ ಹಾಗೂ ಹಸ್ಕಿ ತಳಿಯ ಎರಡು ಶ್ವಾನಗಳ ಫೋಟೋ ಇದಾಗಿದೆ. ಹಸ್ಕಿ ಶ್ವಾನ ಗೇಟಿನ ಹೊರಗಿದ್ದರೆ ಲ್ಯಾಬ್ರಾಡಾರ್ ಶ್ವಾನ ಗೇಟಿನ ಒಳಗಿದ್ದು, ಎರಡು ಶ್ವಾನಗಳು ಗೇಟ್‌ನ ಮೇಲೆ ತಮ್ಮ ಎರಡು ಕೈಗಳನ್ನು ಇರಿಸಿ ಕಷ್ಟಸುಖ ವಿಚಾರಿಸುವಂತಿದೆ ಈ ಫೋಟೋ.


ಎರಡು ಶ್ವಾನಗಳ ಮುದ್ದಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲ್ಯಾಬ್ರಡಾರ್ ಹಾಗೂ ಹಸ್ಕಿ ತಳಿಯ ಎರಡು ಶ್ವಾನಗಳ ಫೋಟೋ ಇದಾಗಿದೆ. ಹಸ್ಕಿ ಶ್ವಾನ ಗೇಟಿನ ಹೊರಗಿದ್ದರೆ ಲ್ಯಾಬ್ರಾಡಾರ್ ಶ್ವಾನ ಗೇಟಿನ ಒಳಗಿದ್ದು, ಎರಡು ಶ್ವಾನಗಳು ಗೇಟ್‌ನ ಮೇಲೆ ತಮ್ಮ ಎರಡು ಕೈಗಳನ್ನು ಇರಿಸಿ ಕಷ್ಟಸುಖ ವಿಚಾರಿಸುವಂತಿದೆ ಈ ಫೋಟೋ. ಟ್ವಿಟ್ಟರ್‌ನಲ್ಲಿ ಪಪ್ಪಿಸ್ ಲವರ್ ಎಂಬ ಖಾತೆಯಿಂದ ಈ ಫೋಟೋ ಪೋಸ್ಟ್ ಮಾಡಲಾಗಿದೆ. ಕೆಲವು ಸ್ನೇಹ ಎಂದಿಗೂ ಮುರಿದು ಹೋಗುವುದಿಲ್ಲ ಎಂದು ಈ ಶ್ವಾನಗಳ ಫೋಟೋ ಪೋಸ್ಟ್‌ ಮಾಡಿ ಬರೆದುಕೊಂಡಿದ್ದಾರೆ. ಒಂದೇ ಬೀದಿಯಲ್ಲಿರುವ ವಾಸಿಸುವ ಗೆಳೆಯ ಗೆಳತಿ ಬೀದಿಯಲ್ಲಿ ಸಾಗುತ್ತಿದ್ದಾಗ ಗೇಟ್ ಒಳಗಿರುವ ತನ್ನ ಸ್ನೇಹಿತನ ಕಂಡು ಮಾತನಾಡಲು ಬಂದಂತಿದೆ ಈ ಫೊಟೋ. ನಮ್ಮ ಸ್ನೇಹಕ್ಕೆ ಯಾವ ಗೇಟ್ ಕೂಡ ಅಡ್ಡಿಯಾಗದು ಎಂಬಂತೆ ಈ ಶ್ವಾನಗಳು ಫೋಸ್ ನೀಡಿವೆ. ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಸಾವಿರಾರು ಜನ ಲೈಕ್ ಮಾಡಿದ್ದಾರೆ. 

ಕೆಲ ದಿನಗಳ ಹಿಂದೆ ಅಪಘಾನಿಸ್ತಾನದ ಶ್ವಾನವೊಂದರ ಫೋಟೋವೊಂದು ವೈರಲ್ ಆಗಿತ್ತು. ಇತ್ತೀಚೆಗಷ್ಟೇ ಅಫ್ಘಾನಿಸ್ತಾನದಲ್ಲಿ ಭಾರಿ ಭೂಕಂಪವುಂಟಾಗಿ 1000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಆದರೆ ಈ ಅನಾಹುತದಲ್ಲಿ ಬದುಕುಳಿದ ಶ್ವಾನವೊಂದು ಮತ್ತೆ ಮತ್ತೆ ಬಂದು ತಾನು ವಾಸವಿದ್ದ ಹಳೆಯ ಮನೆಯ ಸಮೀಪ ಬಂದು ಪಳೆಯುಳಿಕೆಯಲ್ಲಿ ತನ್ನವರಾರಾದರು ಇದ್ದಾರೋ ಎಂದು ನೋಡುತ್ತಿದೆ. ಜೂನ್‌ 22 ರ ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ, ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ, ಸಾವಿರಾರು ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ ಈ ಭೂಕಂಪನದ ತೀವ್ರತೆ 6.1 ರ ದಾಖಲಾಗಿತ್ತು. ಹಲವು ಮನೆಗಳು ಈ ಭೂಕಂಪನದಿಂದ ಕುಸಿದು ಧ್ವಂಸಗೊಂಡಿದ್ದವು. ಇಂತಹ ಅನೇಕ ಧ್ವಂಸಗೊಂಡ ಮನೆಗಳ ಅವಶೇಷಗಳಿರುವ ಸ್ಥಳಕ್ಕೆ ಶ್ವಾನವೊಂದು ಪ್ರತಿದಿನವೂ ಬಂದು ಯಾರನ್ನೋ ಹುಡುಕುವುದನ್ನು ಜನ ಗಮನಿಸಿದ್ದಾರೆ.

Tap to resize

Latest Videos

25 ದಿನ ಪೂರೈಸಿದ ಖುಷಿಯಲ್ಲಿ ಕುಣಿದು ಸಂಭ್ರಮಿಸಿದ ಚಾರ್ಲಿ; ಮೊದಲ ಪೀಸ್ ಕೇಕ್ ಯಾರಿಗೆ?

ಈ ನಾಯಿಯನ್ನು ಸಾಕುತ್ತಿದ್ದ ಮನೆಯ ಜನ ಎಲ್ಲರೂ ಭೂಕಂಪನದಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಈ ಶ್ವಾನವನ್ನು ನಾವು ಕರೆದುಕೊಂಡು ಹೋಗಿ ಆಹಾರ ನೀಡುತ್ತಿದ್ದೇವೆ. ಆದರೆ ಈ ಶ್ವಾನ ಮತ್ತೆ ಮತ್ತೆ ಈ ಧ್ವಂಸಗೊಂಡಿರುವ ತನ್ನ ಹಳೆಯ ಮನೆ ಬಳಿ ಬಂದು ಅಲ್ಲಿ ಯಾರಾದರೂ ತನ್ನ ಯಜಮಾನ ಅಥವಾ ಕುಟುಂಬದವರು  ಇದ್ದಾರೋ ಎಂದು ಸುತ್ತಮುತ್ತ ನೋಡಲು ಶುರು ಮಾಡುತ್ತದೆ. ಅಲ್ಲದೇ ಜೋರಾಗಿ ಅಳುವಂತೆ ಬೊಬ್ಬಿಡುತ್ತದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಅಫ್ಘಾನಿಸ್ತಾನದ ಪಕ್ಟಿಕಾದ ಗಯಾನ್‌ನಲ್ಲಿರುವ ಒಚ್ಕಿ ಗ್ರಾಮ ಈ ಘಟನೆ ನಡೆದಿದೆ. ತನ್ನ ಮಾಲೀಕನ ಹುಡುಕಾಟದಲ್ಲಿ ಹತಾಶವಾಗಿರುವ ನಾಯಿಯ ಹೃದಯ ವಿದ್ರಾವಕ ಫೋಟೋಗೆ ನೆಟ್ಟಿಗರು ಭಾವುಕರಾಗಿದ್ದಾರೆ.

ಅಫ್ಘಾನಿಸ್ತಾನದಲ್ಲಿ (Afghanistan) ಸಂಭವಿಸಿದ ಭೀಕರ ಭೂಕಂಪವು (Earthquake) ಇಡೀ ದೇಶವನ್ನು ಅಕ್ಷರಶಃ ನರಕವನ್ನಾಗಿ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಹೆಚ್ಚಿನ ಮಾಹಿತಿಗಳೂ ಸಿಗದೇ ಇದ್ದರೂ, ಕೆಲವೊಂದು ಚಿತ್ರಗಳು ಬೆಟ್ಟಗುಡ್ಡಗಳಿಂದಲೇ ತುಂಬಿರುವ ದೇಶದಲ್ಲಿ ಯಾವ ರೀತಿಯ ವಿನಾಶವಾಗಿದೆ ಎನ್ನುವುದನ್ನು ಸಾರಿ ಹೇಳುವಂತಿತ್ತು.

Dharwad: ನಾಯಿಯನ್ನು ಕೊಲ್ಲಲು ಮುಂದಾದ ದುರುಳರು: ರಕ್ಷಣೆ ಮಾಡಿದ ಶ್ವಾನ ಪ್ರಿಯ
ಭೂಕಂಪದಲ್ಲಿ ಅಫ್ಘಾನಿಸ್ತಾನದಲ್ಲಿ 1 ಸಾವಿರಕ್ಕೂ ಅಧಿಕ ಜನ ಸಾವಿಗೀಡಾಗಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ಜವಾಬ್ದಾರಿಯುತ ಸರ್ಕಾರವಿಲ್ಲದೆ, ಭಯೋತ್ಪಾದಕ ಗುಂಪು ತಾಲಿಬಾನ್ (Taliban) ಆಡಳಿತದಲ್ಲಿ ಅಫ್ಘನ್ ಜನತೆ ದಿನ ದೂಡುತ್ತಿದ್ದಾರೆ. ಈ ಮಧ್ಯ ಭೂಕಂಪದ ನಡುವೆ ಅಫ್ಘಾನಿಸ್ತಾನದ 3 ವರ್ಷದ ಬಾಲಕಿಯ ಹೃದಯ ವಿದ್ರಾವಕ ಚಿತ್ರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral) ಆಗಿದ್ದು, ಅಫ್ಘನ್ ದೇಶದ ಪರಿಸ್ಥಿತಿಯನ್ನು ವಿವರಿಸುತ್ತಿದೆ.

click me!