
ನದಿ ಮೂಲ ಕಂಡುಹಿಡಿಯಬಹುದು, ಋಷಿ ಮೂಲ ಕಂಡುಹಿಡಿಯಬಹುದು, ಒಂದು ಹೆಣ್ಣಿನ ಮನಸ್ಸಿನಲ್ಲಿ ಏನಿರುತ್ತದೆ ಎಂದು ಹೇಳೋಕೆ ಆಗೋದಿಲ್ಲ ಎಂದು ಹೇಳಲಾಗುತ್ತದೆ. ಸಖತ್ ಆಗಿರೋ ಹುಡುಗಿ, ಎವರೇಜ್ ಹುಡುಗನ ಹಿಂದೆ ಬೀಳೋದು ಯಾಕೆ ಅಂತ ಅನೇಕರಿಗೆ ಪ್ರಶ್ನೆ ಇರಬಹುದು. ಇದರ ಹಿಂದೆ ವೈಜ್ಞಾನಿಕ ವಿಷಯಗಳು ಇವೆ, ಆ ರೀತಿ ಹುಡುಗ, ಹುಡುಗಿಯ ಬ್ರೇನ್ ಕೆಲಸ ಮಾಡುತ್ತದೆ ಎಂದು Getsetfly SCIENCE by Gaurav Thakur ಯುಟ್ಯೂಬ್ ಚಾನೆಲ್‌ನಲ್ಲಿ ಹೇಳಲಾಗಿದೆ.
ಹುಡುಗಿ ಮನಸ್ಸು ಅರ್ಥ ಮಾಡಿಕೊಳ್ತೀರಾ?
ಓರ್ವ ಹುಡುಗಿ ಅಟ್ರ್ಯಾಕ್ಟ್ ಮಾಡದ ಹುಡುಗನ ಜೊತೆ ರಿಲೇಶನ್‌ಶಿಪ್‌ನಲ್ಲಿರುತ್ತಾಳೆ, ಮದುವೆ ಆಗುತ್ತಾಳೆ. ಆದರೆ ಈ ರೀತಿ ಹುಡುಗನಲ್ಲಿ ಕಾಣಿಸೋದಿಲ್ಲ. ಆದರೆ ಹುಡುಗ ಮಾತ್ರ ಅಟ್ರ್ಯಾಕ್ಟಿವ್ ಹುಡುಗಿ ಜೊತೆ ರಿಲೇಶನ್‌ಶಿಪ್‌ನಲ್ಲಿರಲು ಬಯಸುತ್ತಾಳೆ. ಈ ರೀತಿ ಭಾರತದಲ್ಲಿ ಒಂದೇ ಅಲ್ಲದೆ ವಿಶ್ವದಲ್ಲಿ ಕೂಡ ಆಗುತ್ತದೆ. ವಿಜ್ಞಾನಿ ಸಿಗ್ಮಂಡ್‌ರಾಡ್ ಅವರು ಹುಡುಗಿಯರಿಗೆ ಏನು ಬೇಕು ಅಂತ ನನ್ನ ಮೂವತ್ತು ವರ್ಷದ ಕರಿಯರ್‌ನಲ್ಲಿ ಗೊತ್ತಾಗಿಲ್ಲ ಎಂದು ಹೇಳಿದ್ದರಂತೆ.
ಭಯದಿಂದ ಈ ಸಂಬಂಧ ಮುಂದುವರೆಸಲು ಆಗಲ್ಲ: ನಟಿ ಅನುಷ್ಕಾ ಶೆಟ್ಟಿ ಶಾಕಿಂಗ್ ಹೇಳಿಕೆ
ಹುಡುಗಿ ಮನಸ್ಸು ಓದೋದು ಅಷ್ಟು ಕಷ್ಟ ಅಲ್ಲ!
ಹುಡುಗರಿಗೆ ಬಹುಮುಖ್ಯವಾಗಿ, “ಭರವಸೆ ಮುಖ್ಯ ಆಗುತ್ತದೆ, ವ್ಯಕ್ತಿತ್ವ ಮುಖ್ಯ ಆಗುತ್ತದೆ, ನನ್ನನ್ನು ಹೇಗೆ ಟ್ರೀಟ್ ಮಾಡುತ್ತಾನೆ, ನಾನು ಎಷ್ಟು ಆರ್ಥಿಕ ಭದ್ರತೆಯಿಂದ ಬದುಕಬಹುದು ಎನ್ನೋದು ಮುಖ್ಯ ಆಗುತ್ತದೆ” ಎಂದು ಗೌರವ್ ಹೇಳಿದ್ದಾರೆ. ಮಹಿಳೆಯರಿಗೆ ಅರ್ಥ ಮಾಡಿಕೊಳ್ಳೋರಿಗಿಂತ ಪ್ರೀತಿಸೋರು ಬೇಕು ಅಂತ ಕೂಡ ಒಂದು ವರದಿ ಹೇಳುತ್ತದೆ. ನಾವು ಅಂದುಕೊಂಡಷ್ಟು ಹುಡುಗಿಯರ ಮನಸ್ಸು ಕ್ಲಿಷ್ಟವಾಗಿಲ್ಲ ಎಂದು ಗೌರವ್ ಹೇಳುತ್ತಾರೆ.
ಹುಡುಗನಿಗೆ ಲೈಂಗಿಕ ಆಸಕ್ತಿ ಬೆಳೆಸಿಕೊಳ್ಳಲು ಎಷ್ಟು ಸಮಯ ಬೇಕು?
ವಯಸ್ಸಾದಂತೆ ಮಹಿಳೆಯರ ವೀರ್ಯ ಉತ್ಪಾದನೆ ಕಡಿಮೆ ಆಗುತ್ತದೆ, ಆದರೆ ಹುಡುಗರಲ್ಲಿ ಹಾಗೆ ಆಗೋದಿಲ್ಲ. ಆಗ ಪುರುಷರು ಮಹಿಳೆಯರ ಅಂಗಾಂಗಳ ಕಡೆಗೆ ಗಮನ ಕೊಡಲು ಆರಂಭಿಸಿದರು, ಆಸಕ್ತಿ ಬೆಳೆಸಿಕೊಂಡರು. ಮಗುವನ್ನು ಹೆರೋದು ಹೆಣ್ಣು ಎನ್ನೋದು ಎಲ್ಲರಿಗೂ ಗೊತ್ತಾಗಿದೆ. ಹೃದಯದ ಬಡಿತಕ್ಕೆ 800 ಮಿನಿ ಸೆಕೆಂಡ್‌ಬೇಕು, ಆದರೆ ಪುರುಷ ಓರ್ವ ಹುಡುಗಿ ಕಡೆಗೆ ಲೈಂಗಿಕ ಆಸಕ್ತಿ ಬೆಳೆಸಿಕೊಳ್ಳಲು 150 ಸೆಕೆಂಡ್ ಬೇಕು.
ಆ ವ್ಯಕ್ತಿಯ ಜೊತೆಗಿನ ಲಿಪ್ ಲಾಕ್…. ಅಭಿಷೇಕ್ - ರಾಣಿ ಮುಖರ್ಜಿ ಸಂಬಂಧ ಮುರಿಯೋದಕ್ಕೆ ಕಾರಣವಾಯ್ತ?
ಹುಡುಗನ ತಲೆಯಲ್ಲಿ ಏನು ಓಡುತ್ತದೆ?
ಕೆಫೆಯಲ್ಲಿ ಹುಡುಗ, ಹುಡುಗಿ ಭೇಟಿ ಆಗುತ್ತದೆ ಅಂದುಕೊಳ್ಳಿ. ಆಗ ಅವರಿಬ್ಬರ ತಲೆಯಲ್ಲಿ ಏನು ಓಡುತ್ತದೆ ಎಂದು ಅರ್ಥ ಮಾಡಿಕೊಳ್ಳಿ. ಹುಡುಗನಿಗೆ 100 ಸೆಕೆಂಡ್‌ವೊಳಗಡೆ ಹುಡುಗಿ ಚೆನ್ನಾಗಿದ್ದಾಳೋ ಇಲ್ಲವೋ ಎಂದು ಅರ್ಥ ಆಗುತ್ತದೆ, ಆಮೇಲೆ ಅವನು ಮುಂದಿನ ಕ್ರಮ ಏನು ಮಾಡಬೇಕು ಎಂದು ಯೋಚಿಸುತ್ತಾನೆ. ಹುಡುಗಿಗೆ ಹುಡುಗನನ್ನು ನೋಡಿ ಅಷ್ಟು ಎಕ್ಸೈಟ್ ಆಗೋದಿಲ್ಲ, ಬದಲಾಗಿ ಲೈಂಗಿಕವಾಗಿ ಮುಂದುವರೆಯೋದಿಲ್ಲ. ಆಗ ಅವಳು ಸಮಾಜ ಏನು ಹೇಳುತ್ತದೆ, ವ್ಯಕ್ತಿ ಹೇಗೆ? ಇವನು ಯಶಸ್ವಿಯೇ? ಇಲ್ಲವೇ ಎಂದು ಆಲೋಚಿಸುತ್ತಾಳೆ. ಹೀಗೆ ಸಾಕಷ್ಟು ವಿಚಾರ ಮಾಡುತ್ತಾಳೆ.
ಮಹಿಳೆಯರಲ್ಲಿ ಬೇಗ ಬಯಕೆ ಹುಟ್ಟೋದಿಲ್ಲ!
ಪಿಜ್ಜಾ ಕಾಣಿಸಿಕೊಂಡಲೇ ಕೆಲವರಿಗೆ ತಿನ್ನಬೇಕು ಎನಿಸುತ್ತದೆ. ಆದರೆ ಹುಡುಗಿ ಮಾತ್ರ ಆ ಪಿಜ್ಜಾ ನೋಡಿ ಚೆನ್ನಾಗಿರಬಹುದು ಅಂತ ಹೇಳಬಹುದು. ಆದರೆ ತಕ್ಷಣ ಅವಳಿಗೆ ಅದನ್ನು ತಿನ್ನಬೇಕು ಎಂದು ಮುಂದಾಗೋದಿಲ್ಲ. ಅಷ್ಟು ಬೇಗ ಮಹಿಳೆಯರಲ್ಲಿ ಬಯಕೆಗಳು ಹುಟ್ಟೋದಿಲ್ಲ ಎಂದು ಹೇಳುತ್ತಾರೆ. ಕಾರ್, ಇನ್ನೇನೋ ನೋಡಿ ಅವರು ಎಕ್ಸೈಟ್ ಆದಷ್ಟು ಹುಡುಗನ ವಿಷಯದಲ್ಲಿ ಎಕ್ಸೈಟ್ ಆಗೋದಿಲ್ಲ.
'ಆ ರನ್ಯನ್ ಜೋಡಿ ಯಾರ್ ಯಾರ್ ಸಂಬಂಧ ಅದವೋ..' ಅಶ್ಲೀಲ ಪದ ಬಳಕೆ, ಯತ್ನಾಳ್ ವಿರುದ್ಧ FIR!
ಹುಡುಗ, ಹುಡುಗಿ ಲೆಕ್ಕಾಚಾರ ಹೇಗೆ?
ಒಂದು ಕಾರ್ ಜೊತೆ ಹುಡುಗಿ ನಿಂತಿರುವ ಫೋಟೋ ನೋಡಿದಾಗ ಹುಡುಗ ನೋಡಿ ಚೆನ್ನಾಗಿದೆ ಎಂದು ಹೇಳಬಹುದು. ಆದರೆ ಅದೇ ಜಾಗದಲ್ಲಿ ಹುಡುಗ ಇದ್ದರೆ ಅವನ ಕಾರ್ ಇರಬಹುದಾ? ಕಾರ್‌ಖರೀದಿ ಮಾಡುವ ಶಕ್ತಿ ಇದೆಯಾ ಎಂಬ ಪ್ರಶ್ನೆ ಮೂಡುವುದು. ಅಂದರೆ ಹುಡುಗಿಯರು ಅಷ್ಟು ಲೆಕ್ಕಾಚಾರ ಮಾಡುತ್ತಾರೆ. ಹುಡುಗರಿಗೆ ಹೋಲಿಕೆ ಮಾಡಿದರೆ, ಹುಡುಗಿಯರಿಗೆ ಅಟ್ರ್ಯಾಕ್ಟ್ ಆಗೋಕೆ ಸ್ವಲ್ಪ ಸಮಯ ಬೇಕಾಗಬಹುದು, ಅಷ್ಟೇ ಸಂಕೀರ್ಣವಾಗಿರಲೂಬಹುದು. ಭರವಸೆ, ಸಮಾಜದಲ್ಲಿ ಅಸ್ತಿತ್ವವನ್ನು ಹೊಂದಿರುವ ಪುರುಷನ ಕಡೆಗೆ ಹುಡುಗಿ ಗಮನ ಕೊಡ್ತಾಳೆ. ಹೀಗಾಗಿ ಅವಳಿಗೆ ಲುಕ್ಸ್ ಮ್ಯಾಟರ್ ಆಗೋದಿಲ್ಲ.
ಬ್ರೇಕಪ್ ಆದ್ಮೇಲೆ ಹುಡುಗಿ ಡಿಪ್ರೆಶನ್‌ಗೆ ಹೋಗೋದು ಯಾಕೆ?
ಹುಡುಗಿ ಯಾಕೆ ಬ್ರೇಕಪ್ ಆದ್ಮೇಲೆ ಡಿಪ್ರೆಶನ್‌ಗೆ ಹೋಗ್ತಾಳೆ. ಆರಂಭದಲ್ಲಿ ಹುಡುಗಿ ಲೆಕ್ಕಾಚಾರ ಮಾಡಿಕೊಂಡು ಲವ್ ಮಾಡುತ್ತಿದ್ದರೂ ಕೂಡ ಆಮೇಲೆ ಬದಲಾಗುತ್ತಾಳೆ. ಭಾವನಾತ್ಮಕವಾಗಿ ಅವಳು ಹುಡುಗನ ಜೊತೆ ಕನೆಕ್ಟ್‌ಆಗಿ ಭವಿಷ್ಯದ ಬಗ್ಗೆ ಹೆಚ್ಚು ಕನಸು ಕಾಣ್ತಾಳೆ. ಹುಡುಗಿಯರೂ ಕೂಡ ಮನುಷ್ಯರು. ಹುಡುಗ ಮೋಸ ಮಾಡಿದಾಗ ಅವಳು ತುಂಬ ಡೌನ್‌ಆಗುತ್ತಾಳೆ. ಬ್ಯಾಡ್‌ಬಾಯ್ ಮೇಲೆ ಹುಡುಗಿಗೆ ಲವ್‌ಆಗಬಹುದು, ಆ ಮನಸ್ಥಿತಿ ಮೇಲೆ ಹುಟ್ಟಿಕೊಂಡ ಲವ್‌ಕೊನೇ ತನಕ ಇರುತ್ತದೆ ಅಂತ ಹೇಳಲಾಗದು. ಹುಡುಗಿಯಿಗೆ ಲುಕ್ಸ್ ಏನಿದ್ದರೂ ಸೆಕೆಂಡರಿ. ಗುಡ್ ಲುಕ್ಕಿಂಗ್ ಹುಡುಗ ಗುಡ್ ಲುಕ್ಕಿಂಗ್ ಹುಡುಗಿಯನ್ನು ಮದುವೆ ಆಗುತ್ತಾನೆ. ಜೋಡಿ ಚೆನ್ನಾಗಿರಬೇಕು ಎಂದು ಸಮಾಜ ಕೂಡ ಬಯಸಿ, ಒತ್ತಡ ಹಾಕುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.