ವಿಚ್ಛೇದಿತ ಮಗಳನ್ನು ಅದ್ಧೂರಿಯ ಸ್ವಾಗತ ಮಾಡಿಕೊಂಡ ನಿವೃತ್ತ ನ್ಯಾಯಾಧೀಶ: ವಿಡಿಯೋ ನೋಡಿ

Published : Apr 06, 2026, 05:33 AM IST
 Meerut Divorce Case

ಸಾರಾಂಶ

ನಿವೃತ್ತ ನ್ಯಾಯಾಧೀಶರೊಬ್ಬರು, ವಿಚ್ಛೇದನ ಪಡೆದು ಮನೆಗೆ ಮರಳಿದ ತಮ್ಮ ಮಗಳನ್ನು ಬಾಜಾ, ಬಜಂತ್ರಿಯೊಂದಿಗೆ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ವಿಚ್ಛೇದನ ಎಂಬುದು ಕಳಂಕವಲ್ಲ, ಸಮಾಜಕ್ಕಿಂತ ಮಗಳ ಸಂತೋಷ ಮತ್ತು ಘನತೆಯೇ ಮುಖ್ಯ ಎಂದು ಅವರು ಸಮಾಜಕ್ಕೆ ಸಂದೇಶ ಸಾರಿದ್ದಾರೆ.

ಮೇರಠ್‌: ವಿಚ್ಛೇದನ ವಿಷಯವು ಬಹಿರಂಗವಾಗದಂತೆ ಕಾಯ್ದುಕೊಳ್ಳಲು ಯತ್ನಿಸುವ ಜನರ ನಡುವೆ ಇಲ್ಲೊಬ್ಬ ನಿವೃತ್ತ ನ್ಯಾಯಾಧೀಶರು ತಮ್ಮ ವಿಚ್ಛೇದಿತ ಮಗಳನ್ನು ಅದ್ಧೂರಿಯಾಗಿ ಮನೆಗೆ ಬರಮಾಡಿಕೊಂಡಿದ್ದಾರೆ. ಈ ಮೂಲಕ, ‘ವಿಚ್ಛೇದನವೆಂಬುದು ಕಳಂಕವಲ್ಲ’ ಎಂಬ ಸಂದೇಶವನ್ನು ಸಾರಿದ್ದಾರೆ.

ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿದ್ದ ಮಗಳು

ವಕೀಲ ಜ್ಞಾನೇಂದ್ರ ಕುಮಾರ್‌ರ ಪುತ್ರಿ ಪ್ರಣಿತಾ ವಸಿಷ್ಠ, ಭಾರತೀಯ ಸೇನೆಯ ಮೇಜರ್‌ ಒಬ್ಬರನ್ನು 2018ರಲ್ಲಿ ವಿವಾಹವಾಗಿದ್ದರು. ಆದರೆ ವರ್ಷ ಕಳೆದಂತೆ ಪ್ರಣೀತಾ ತಮ್ಮ ಪತಿಯ ಮನೆಯಲ್ಲಿ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಮಗು ಜನನದ ಬಳಿಕವೂ ಪರಿಸ್ಥಿತಿ ಸುಧಾರಿಸದಾಗ ಮೇರಠ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದರು.

ಮಗಳಿಗೆ ಅದ್ಧೂರಿ ಸ್ವಾಗತ

ಶನಿವಾರ ತಮ್ಮಿಚ್ಛೆಯಂತೆ ಡಿವೋರ್ಸ್‌ ಪಡೆದ ಪ್ರಣೀತಾರನ್ನು ಪರಿವಾರದವರೆಲ್ಲಾ ಡ್ರಮ್‌ಗಳೊಂದಿಗೆ ಕುಣಿಯುತ್ತಾ ಮನೆಗೆ ಕರೆತಂದರು. ಅಲ್ಲಿ ತಂದೆ ಜ್ಞಾನೇಂದ್ರ ಅವರು ಹೂವಿನ ಹಾರದೊಂದಿಗೆ ಆಕೆಯನ್ನು ಬರಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು.

ಇದನ್ನೂ ಓದಿ: ಚುನಾವಣಾ ಪ್ರಚಾರ ಮುಗಿಸಿ ಮರಳುವಾದ ಬಿಜೆಪಿ ಮಹಿಳಾ ಅಭ್ಯರ್ಥಿ ಕಾರು ಅಪಘಾತ, ತೆಲೆಗೆ ಗಾಯ

‘ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ’ ಎಂದು ಬರೆದಿದ್ದ ಕಪ್ಪು ಟೀಶರ್ಟ್‌ ಧರಿಸಿದ್ದ ಜ್ಞಾನೇಂದ್ರ, ‘ನನ್ನ ಪುತ್ರಿಯ ವೈವಾಹಿಕ ಜೀವನ ಸುಖಕರವಾಗಿರದಿದ್ದರೆ ಆಕೆಯನ್ನು ಆ ವಾತಾವರಣದಿಂದ ಪಾರು ಮಾಡುವುದು ನನ್ನ ಕರ್ತವ್ಯ. ಯಾವುದೇ ಜೀವನಾಂಶ ಕೇಳದೆ ಆಕೆಯನ್ನು ಕರೆತಂದಿದ್ದೇನೆ. ಹೆಣ್ಣುಮಕ್ಕಳು ಆಸ್ತಿಯಲ್ಲ. ಸಮಾಜಕ್ಕಿಂತ ಅವರ ಖುಷಿ ಮತ್ತು ಘನತೆಗೆ ಆದ್ಯತೆ ನೀಡಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸಮಾಜದಲ್ಲಿ ವಿಚ್ಛೇದನದ ಬಗೆಗಿರುವ ಋಣಾತ್ಮಕ ಭಾವನೆಯನ್ನು ಅಳಿಸಿಹಾಕುವುದು ಅವರ ಉದ್ದೇಶವಾಗಿದೆ.

ಇದನ್ನೂ ಓದಿ: ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪದೇ ಪದೇ ತಪ್ಪು ವ್ಯಕ್ತಿನೇ ಯಾಕೆ ಆಯ್ಕೆ ಮಾಡ್ತೀರಾ? ಆ ಗುಟ್ಟು ಬಿಚ್ಚಿಟ್ಟ ಮನಃಶಾಸ್ತ್ರ!
Love Jihadಗೆ ಹೊಸ ರೂಪ ಕೊಟ್ಟ ಸಮೀರ್ ಫ್ಯಾಮಿಲಿ! ಡೌಟೇ ಬರದಂತೆ ಮನೆಯಲ್ಲಿ ಹಿಂದೂ ದೇವರ ಪೂಜೆ