ಹುಡುಗಿಯ ಮದ್ವೆಯಾದ ಹುಡುಗಿ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಲಿಂಗಿ ಜೋಡಿ

By Anusha Kb  |  First Published Jan 12, 2024, 11:37 AM IST

ಪಶ್ಚಿಮ ಬಂಗಾಳದ  ಮಹಿಳಾ ಸಲಿಂಗಿ ಜೋಡಿಯೊಂದು ಉತ್ತರ ಪ್ರದೇಶದ ದೇಗುಲವೊಂದರಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿ ಈ ಅಪರೂಪದ ಮದ್ವೆ ನಡೆದಿದೆ.  


ದಿಯೋರಿಯಾ: ಉತ್ತರ ಪ್ರದೇಶದ ದೇಗುಲದಲ್ಲಿ ಅಪರೂಪದ ಮದುವೆಯೊಂದು ನಡೆದಿದ್ದು, ಸಲಿಂಗಿ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.  ಭಾರತದಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಮಾನ್ಯತೆ ಇಲ್ಲ, ಸುಪ್ರೀಂಕೋರ್ಟ್‌ ಕೂಡ ಸಲಿಂಗಿಗಳ ಈ ಮನವಿಯನ್ನು ಇತ್ತೀಚಿನ ತನ್ನ ತೀರ್ಪಿನಲ್ಲಿ ತಿರಸ್ಕರಿಸಿದೆ. ಹಾಗಿದ್ದರೂ ಸಲಿಂಗಿಗಳು ವಿವಾಹ ಅಲ್ಲೊಂದು ಇಲ್ಲೊಂದು ಆಗಾಗ ನಡೆಯುತ್ತಿದೆ. 

ಅದೇ ರೀತಿ ಈಗ ಪಶ್ಚಿಮ ಬಂಗಾಳದ  ಮಹಿಳಾ ಸಲಿಂಗಿ ಜೋಡಿಯೊಂದು ಉತ್ತರ ಪ್ರದೇಶದ ದೇಗುಲವೊಂದರಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿ ಈ ಅಪರೂಪದ ಮದ್ವೆ ನಡೆದಿದೆ.  28 ವರ್ಷದ ಜಯಶ್ರೀ ರಾಹುಲ್‌ ಹಾಗೂ 23 ವರ್ಷದ ರಾಕಿ ದಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಲಿಂಗಿ ಜೋಡಿ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯವರಾದ ಇವರು ದಿಯೋರಿಯಾದಲ್ಲಿ ಆರ್ಕೆಸ್ಟ್ರಾದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದ ವೇಳೆ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ.

Tap to resize

Latest Videos

ನೇಪಾಳದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿ, ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟ ಜೋಡಿ

9 ವರ್ಷಗಳಿಂದ  ಜೊತೆಯಾಗಿ ಕೆಲಸ ಮಾಡುತ್ತಿದ್ದ ಇವರು ಮದುವೆಯಾಗಲು ನಿರ್ಧರಿಸಿದ್ದು, ನೋಟರೈಸ್ ಮೂಲಕ ಅಫಿಡವಿಟ್ ಪಡೆದು ತಮ್ಮ ವಿವಾಹದ ಸಂಬಂಧವನ್ನು ಔಪಚಾರಿಕಗೊಳಿಸಿದ್ದಾರೆ. ದಿಯೋರಿಯಾದ ಭಾತ್ಪರ್ ರಾಣಿಯಲ್ಲಿರುವ ಭಗದಾ ಭವಾನಿ ದೇವಸ್ಥಾನದಲ್ಲಿ ನಡೆದ ಈ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.

ಈ ಜೋಡಿ ಕೆಲಸ ಮಾಡುತ್ತಿದ್ದ ಆರ್ಕೆಸ್ಟ್ರಾದ ಮಾಲೀಕ ಮುನ್ನಾ ಪಾಲ್ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ್ದು, ನವಜೋಡಿಗೆ ಶುಭ ಹಾರೈಸಿದ್ದಾರೆ. ಈ ಇಬ್ಬರು ಹುಡುಗಿಯರು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯವರಾಗಿದ್ದು,  ದಿಯೋರಿಯಾದ  ಲಾರ್ ಪ್ರದೇಶದಲ್ಲಿರುವ  ತಮ್ಮ ಆರ್ಕೆಸ್ಟ್ರಾದ ಪ್ರಮುಖ ಭಾಗವಾಗಿದ್ದಾರೆ ಎಂದು ಮುನ್ನಾ ಪಾಲ್ ಹೇಳಿಕೊಂಡಿದ್ದಾರೆ. ಇವರ ಈ ಲವ್ ಸ್ಟೋರಿ ಬಗ್ಗೆ  ಅವರ ಕುಟುಂಬ ಸದಸ್ಯರಿಗೂ ಅರಿವಿತ್ತು ಹೀಗಾಗಿ ಜೋಡಿ  ಈಗ ದೇವಸ್ಥಾನದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗಂಡು ಮಗುವಿನ ಜನ್ಮ ನೀಡಿದ ಸಲಿಂಗಿ, ವಿಶ್ವದಲ್ಲೇ ಎರಡನೇ ಪ್ರಕರಣ!

click me!