ಬಹುಕಾಲದ 'ಗೆ..' ಳೆಯನನ್ನು ಮದುವೆಯಾದ ಓಪನ್‌ ಎಐ ಸಿಇಒ ಸ್ಯಾಮ್‌ ಆಲ್ಟ್‌ಮನ್‌!

By Santosh Naik  |  First Published Jan 11, 2024, 9:46 PM IST

ಚಾಟ್‌ ಜಿಪಿಟಿ ಮೂಲಕ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಓಪನ್‌ ಎಐ ಸಂಸ್ಥಾಪಕ ಹಾಗೂ ಸಿಇಒ ಸ್ಯಾಮ್‌ ಆಲ್ಟ್‌ಮನ್‌ ತಮ್ಮ ಬಹುಕಾಲದ ಗೆಳೆಯ  ಆಲಿವರ್‌ ಮುಲ್ಹೆರಿನ್‌ರನ್ನು ವಿವಾಹವಾಗಿದ್ದಾರೆ. ಆಪ್ತರಿಂದ 'ಒಲ್ಲಿ' ಎಂದೇ ಕರೆಸಿಕೊಳ್ಳುವ ಮುಲ್ಹೆರಿನ್‌ ಹೆಚ್ಚಾಗಿ ಯಾರಿಗೂ ಪರಿಚಿತರಿರಲಿಲ್ಲ.


ನವದೆಹಲಿ (ಜ.11): ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ನ ಪ್ರಖ್ಯಾತ ಲ್ಯಾಬ್‌ ಓಪನ್‌ ಎಐ ಕಂಪನಿಯ ಸಿಇಓ ಸ್ಯಾಮ್‌ ಆಲ್ಟ್‌ಮನ್‌ ಹವಾಯಿಯಲ್ಲಿ ನಡೆದ ಅತ್ಯಾಕರ್ಷಕ ಸಮಾರಂಭದಲ್ಲಿ ತಮ್ಮ ಬಹುಕಾಲದ ಗೆಳೆಯ ಆಲಿವರ್‌ ಮುಲ್ಹೆರಿನ್‌ರನ್ನು ವಿವಾಹವಾಗಿದ್ದಾರೆ. ಜನವರಿ 10ರಂದು ಈ ಕಾರ್ಯಕ್ರಮ ನಡೆದಿದೆ ಎಂದು ತಿಳಿಸಲಾಗಿದ್ದು, ತೀರಾ ಆಪ್ತರಷ್ಟೇ ಈ ಕಾರ್ಯಕ್ರಮದಲ್ಲಿದ್ದರು. ಕುಟುಂಬ ಹಾಗೂ ಸ್ನೇಹಿತರ ಕೆಲವೇ ಕೆಲವು ಮಂದಿಗೆ ಈ ಮದುವೆಯ ಆಹ್ವಾನ ನೀಡಲಾಗಿತ್ತು. ಹವಾಯಿ ದ್ವೀಪದಲ್ಲಿರುವ ಸ್ಯಾಮ್‌ ಆಲ್ಟ್‌ಮನ್‌ ಅವರ ನಿವಾಸದ ಸಮೀಪವೇ ಈ ಕಾರ್ಯಕ್ರಮ ನಡೆದಿದೆ. ಆಪ್ತರಿಂದ ಒಲ್ಲಿ ಎಂದೇ ಕರೆಸಿಕೊಳ್ಳುವ ಆಲಿವರ್‌ ಮುಲ್ಹೆರಿನ್‌, ಹೆಚ್ಚಾಗಿ ಯಾರಿಗೂ ಪರಿಚಿತರಲ್ಲ. ಆಲ್ಟ್‌ಮನ್‌ ಅವರೊಂದಿಗೆ ಬಹಳ ಆಳವಾದ ಸ್ನೇಹ ಸಂಬಂಧವನ್ನು ಇಬರು ಹೊಂದಿದ್ದಾರೆ. ಅದರೊಂದಿಗೆ ಅವರ ಜೀವನದ ಕೆಲವು ಯೋಜನೆಗಳಿಗೆ ಇಬ್ಬರು ಪರಸ್ಪರ ಬೆಂಬಲಿತರಾಗೊದ್ದಾರೆ. ತಮ್ಮ ವಿಶೇಷ ದಿನದಂದು ಆಲ್ಟ್‌ಮನ್‌ ಹಾಗೂ ಆಲಿವರ್‌ ಇಬ್ಬರೂ ಒಂದೇ ರೀತಿ ಕಾಣಿಸಿಕೊಂಡರು. ಇಬ್ಬರೂ ಒಂದೇ ರೀತಿಯ ಬಿಳಿ ಶರ್ಟ್‌ಗಳು, ತಿಳಿ ಬಣ್ಣದ ಉಣ್ಣೆಯ ಪ್ಯಾಂಟ್‌ಗಳು, ಬಿಳಿ ಬಣ್ಣದ ಸ್ನೀಕರ್‌ಗಳನ್ನು ಅವರು ಧರಿಸಿದ್ದರು. ಭವಿಷ್ಯದ ದಿನದಲ್ಲಿ ತಮ್ಮಿಬ್ಬರ ಒಡನಾಟದ ಸಾಂಕೇತಿಕ ಪ್ರಾತಿನಿಧ್ಯವಾಗಿ ಈ ರೀತಿ ಕಾಣಿಸಿಕೊಂಡಿದ್ದರು.

ತಮ್ಮ ಜೀವನದ ವಿಶೇಷ ಕ್ಷಣವನ್ನು ಸಾರ್ವಜನಿಕವಾಗಿ ತಿಳಿಸುವ ಉದ್ದೇಶದೊಂದಿಗೆ ಇನ್ನರೂ ಇನ್ಸ್‌ಟಾಗ್ರಾಮ್‌ನಲ್ಲಿ ಆಕರ್ಷಕ ಪೋಸ್ಟ್‌ಅನ್ನು ಹಂಚಿಕೊಂಡಿದ್ದರು. ಚಿತ್ರದೊಂದಿಗೆ ಇದ್ದ ಶೀರ್ಷಿಕೆಯಲ್ಲಿ ಆಲಿವರ್‌ ಮುಲ್ಹೆರಿನ್‌, ನನ್ನ ಜೀವನದ ಆಪ್ತ ಸ್ನೇಹಿತ ಹಾಗೂ ನನ್ನ ಜೀವನದ ಏಕೈಕ ಪ್ರೀತಿಯಾಗಿರುವ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ಬರೆದಿದ್ದಾರೆ.
ಇನ್ಸ್‌ಟಾಗ್ರಾಮ್‌ನಲ್ಲಿ ಈ ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲಿಯೇ ಪ್ರಖ್ಯಾತ ಉದ್ಯಮಿಗಳು ಹಾಗೂ ವಿವಿಧ ರಂಗದ ಗಣ್ಯರಿಂದ ಹೊಸ ಜೋಡಿಗೆ ಶುಭಕೋರಿ ಕಾಮೆಂಟ್‌ ಮಾಡಲಾಗಿದೆ. ಅಮೇಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಅವರ ಗೆಳತಿಯಾಗಿರುವ ಲೌರೇನ್‌ ಸ್ಯಾಂಚೇಜ್‌, ಟೆಕ್ ಉದ್ಯಮಿಗಳಾದ ಝೆನ್ ಮಾಟೋಶಿ, ಅಲೆಕ್ಸಾಂಡರ್ ವಾಂಗ್, ಶೆರ್ವಿನ್ ಪಿಶೆವರ್, ಆಡ್ರಿಯನ್ ಔನ್ ಕೂಡ ಶುಭ ಹಾರೈಸಿದ್ದಾರೆ.

ಯಾರಿವರು ಅಲಿವರ್‌ ಮುಲ್ಹೆರಿನ್‌:
ಕಾರ್ಪೊರೇಟ್ ಕ್ಷೇತ್ರದ ಹೊರಗೆ, ಸ್ಯಾಮ್ ಆಲ್ಟ್‌ಮ್ಯಾನ್ ಅವರ ವೈಯಕ್ತಿಕ ಜೀವನವು ಆಲಿವರ್ ಮುಲ್ಹೆರಿನ್ ಅವರೊಂದಿಗೆ ರೂಪಿತವಾಗಿದೆ. ಆಸ್ಟ್ರೇಲಿಯನ್‌ ಪ್ರೋಗ್ರಾಮರ್‌ ಆಗಿರುವ ಮುಲ್ಹೆರಿನ್‌ ಹಾಗೂ ಸ್ಯಾಮ್‌ ಆಲ್ಟ್‌ಮನ್‌,  ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ಆಯೋಜಿಸಿದ್ದ ಶ್ವೇತಭವನದ ಔತಣಕೂಟದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಸಭೆಯು ಇತರ ಪ್ರಭಾವಿ ದಂಪತಿಗಳಾದ ಸತ್ಯ ಮತ್ತು ಅನು ನಾಡೆಲ್ಲಾ, ಹಾಗೆಯೇ ಸುಂದರ್ ಮತ್ತು ಅಂಜಲಿ ಪಿಚೈ ಅವರೊಂದಿಗೂ ಕಾಣಿಸಿಕೊಂಡಿದ್ದರು.
ಮೆಲ್ಬೋರ್ನ್ ವಿಶ್ವವಿದ್ಯಾನಿಲಯದಿಂದ ಸಾಫ್ಟ್‌ವೇರ್ ಇಂಜಿನಿಯರಿಂಗ್ ಪದವೀಧರರಾದ ಆಲಿವರ್ ಮುಲ್ಹೆರಿನ್ ಅವರು ತಮ್ಮ ವಿಶ್ವವಿದ್ಯಾನಿಲಯದ ವರ್ಷಗಳಲ್ಲಿ ವಿವಿಧ AI ಯೋಜನೆಗಳನ್ನು ಅಧ್ಯಯನ ಮಾಡಿದರು. ಭಾಷೆ ಪತ್ತೆ ಮತ್ತು ನಿರ್ದಿಷ್ಟ ಗೇಮ್‌ಗಳ ಮೇಳೆ ಅವರ ಎಐ ಅಧ್ಯಯನವಿತ್ತು. ಅವರ ಪ್ರಾಥಮಿಕ ಪರಿಣತಿಯು ಇಂಟರ್ನೆಟ್ ಆಫ್ ಥಿಂಗ್ಸ್ (IoT) ಕ್ಷೇತ್ರದಲ್ಲಿದೆ, 2018 ರಲ್ಲಿ IOTA ಫೌಂಡೇಶನ್, ಓಪನ್ ಸೋರ್ಸ್ ಕೋಡಿಂಗ್ ಸಂಸ್ಥೆಗೆ ಸೇರಲು ಇದು ಕಾರಣವಾಯಿತು.

OpenAIನಿಂದ ವಜಾಗೊಂಡ ಬೆನ್ನಲ್ಲೇ ಐಫೋನ್ ಸ್ಥಗಿತ, ಆತಂಕ ಹೆಚ್ಚಿಸಿದ ಆಲ್ಟ್‌ಮನ್ ಹೇಳಿಕೆ!

ಕಳೆದ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ ಮ್ಯಾಗಝೀನ್‌ಗೆ ನೀಡಿದ ಸಂದರ್ಶನದಲ್ಲಿ ವಾರದ ದಿನಗಳಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ರಷ್ಯನ್ ಹಿಲ್‌ನಲ್ಲಿ ತಾನು ಮತ್ತು ಮುಲ್ಹೆರಿನ್ ನಿವಾಸವನ್ನು ಹಂಚಿಕೊಂಡಿರುವುದಾಗಿ ಆಲ್ಟ್‌ಮ್ಯಾನ್ ಬಹಿರಂಗಪಡಿಸಿದರು. ವಾರಾಂತ್ಯದಲ್ಲಿ, ಅವರು ಕ್ಯಾಲಿಫೋರ್ನಿಯಾದ ನಾಪಾದಲ್ಲಿನ ಖಾಸಗಿ ರಾಂಚ್‌ನಲ್ಲಿರುವ 25-ವರ್ಷ-ಹಳೆಯ ನವೀಕರಿಸಿದ ಮನೆಯಲ್ಲಿ ಕಳೆಯುತ್ತಿರುವುದಾಗಿ ತಿಳಿಸಿದ್ದರು. ಭವಿಷ್ಯದ ದಿನಗಳಲ್ಲಿ ತಾವು ಸಂಸಾರ ಆರಂಭಿಸುವ ಗುರಿ ಹೊಂದಿದ್ದೇವೆ ಎಂದೂ ಆ ವೇಳೆ ತಿಳಿಸಿದ್ದರು.

Tap to resize

Latest Videos

OpenAI ಸಿಇಒ ಸ್ಥಾನಕ್ಕೆ ಮರಳಿದ ಸ್ಯಾಮ್ ಆಲ್ಟ್ ಮನ್; ಸುಖಾಂತ್ಯ ಕಂಡ ಚಾಟ್ ಜಿಪಿಟಿ ಮಾತೃಸಂಸ್ಥೆ ಬಿಕ್ಕಟ್ಟು

click me!