ಅಕ್ಕನಿದ್ರೆ ಈ ಅನುಭವಗಳು ಪಕ್ಕಾ!

By Suvarna NewsFirst Published Dec 12, 2019, 10:06 AM IST
Highlights

ನಿಮಗೆ ಅಕ್ಕನೋ, ತಂಗಿಯೋ ಇದ್ದಲ್ಲಿ ಈ ವಿಷಯಗಳನ್ನು ನೀವು ರಿಲೇಟ್ ಮಾಡಿಕೊಳ್ಳಬಲ್ಲಿರಿ. ನಿಮ್ಮ ಜೀವನದಲ್ಲೂ ಸೋದರಿಯ ಪಾತ್ರ ಹೀಗಿದ್ದಲ್ಲಿ, ಅನುಮಾನವೇ ಬೇಡ, ಆಕೆ ನಿಮ್ಮ ಬೆಸ್ಟೀ...

ನೀವು ತಂದೆತಾಯಿಂದ ಹಲವಾರು ಸಂಗತಿಗಳನ್ನು ಮುಚ್ಚಿಟ್ಟರಬಹುದು. ಆದರೆ, ಅಕ್ಕ ಅಥವಾ ತಂಗಿಗೆ ಅವೆಲ್ಲ ಸೀಕ್ರೆಟ್‌ಗಳು ಗೊತ್ತಿರಲೇ ಬೇಕು. ಸೀಕ್ರೆಟ್ ಆಗಿಯೇ ಅವರು ನಿಮ್ಮೆಲ್ಲ ಸೀಕ್ರೆಟ್ ಕಾಪಾಡುತ್ತಾ ನಿಮ್ಮ ಖುಷಿಗೆ ಸಾಥ್ ನೀಡುತ್ತಿರುತ್ತಾರೆ. ನಿಮ್ಮ ಇಷ್ಟಕಷ್ಟಗಳನ್ನು ಅವರಷ್ಟು ಚೆನ್ನಾಗಿ ಬಲ್ಲವರು ಮತ್ತೊಬ್ಬರು ಸಿಗಲಿಕ್ಕಿಲ್ಲ. ಹಾಗಾಗಿಯೇ ಒಡಹುಟ್ಟಿದವರಿರಬೇಕು ಎನ್ನುವುದು. ಅದರಲ್ಲೂ ಸೋದರಿಯರಿದ್ದಾರಲ್ಲ, ಅವರು ಅಂತಃಕರಣದಲ್ಲಿ ಅಮ್ಮನಂತೆ, ರೇಗಿಸುವಲ್ಲಿ ಅಣ್ಣನಂತೆ, ಸದಾ ಗೆಳತಿಯಂತೆ, ನಿಮ್ಮ ಒಳಿತುಗಳನ್ನು ನಿರ್ಧರಿಸುವಲ್ಲಿ ಅಪ್ಪನಂತೆ ಯೋಚಿಸಿ ವರ್ತಿಸಬಲ್ಲರು. ಚೆಂದದ ಗೆಳೆತನವೊಂದಕ್ಕೆ ರಕ್ತಸಂಬಂಧವೂ ಸೇರಿದ ಅನುರೂಪದ ಬಂಧ ಇದು. ಆಕೆ ನಿಮ್ಮನ್ನು ಬಾಲ್ಯದಿಂದಲೂ ನೋಡಿದ್ದಾಳೆ, ನಿಮ್ಮೊಂದಿಗೆ ಜಗಳವಾಡಿದ್ದಾಳೆ, ಆಟವಾಡಿದ್ದಾಳೆ, ನಿಮ್ಮನ್ನು ಕಾಳಜಿಯಿಂದ ನೋಡಿಕೊಂಡಿದ್ದಾಳೆ. ಹಾಗಾಗಿ, ಬದುಕಲ್ಲಿ ಏನೇ ಸಲಹೆ, ಸಹಾಯ ಬೇಕೆಂದರೂ ಏನೊಂದೂ ಯೋಚಿಸದೆ ಆಕೆಯ ಬಳಿ ಓಡಬಹುದು. 

ಈ  ವಿಷಯಗಳು ನಿಮಗೆ ನಿಮ್ಮ ಬಾಲ್ಯ ನೆನಪಿಸುವ ಜೊತೆಗೆ, ನಿಮ್ಮ ಸೋದರಿಯೇ ನಿಮ್ಮ ಬೆಸ್ಟ್ ಫ್ರೆಂಡ್ ಎಂಬುದನ್ನು ಸೂಚಿಸುತ್ತವೆ. 

ಆಕೆ ಸದಾ ನಿಮ್ಮ ಬೆನ್ನಿಗಿರುತ್ತಾಳೆ

ಪೋಷಕರು ನಿಮಗೆ ಬೈದಾಗಲೆಲ್ಲ ನಿಮ್ಮ ಅಕ್ಕ/ತಂಗಿ ಸದಾ ನಿಮ್ಮ ಬೆಂಬಲಕ್ಕೆ ಬಂದಿದ್ದಾರೆ. ಮುಂದೆಯೂ ಬರುತ್ತಾರೆ. ನಿಮ್ಮನ್ನು ಸೇವ್ ಮಾಡುವುದಕ್ಕಾಗಿ ಸುಳ್ಳು ಹೇಳುವುದರಿಂದ ಹಿಡಿದು, ನಿಮ್ಮ ಗೆಳೆಯರ ವಿರುದ್ಧ ನಿಲ್ಲುವವರೆಗೆ ಆಕೆ ಯಾವಾಗಲೂ ರೆಡಿ ಇರುತ್ತಾಳೆ. ಭಾವನಾತ್ಮಕವಾಗಿ, ಅಗತ್ಯ ಬಿದ್ದರೆ ಆರ್ಥಿಕವಾಗಿಯೂ ಆಕೆ ನಿಮ್ಮ ಬೆಂಬಲವಾಗಿ ನಿಲ್ಲುತ್ತಾಳೆ.

ಹೊಸತನ್ನು ಟ್ರೈ ಮಾಡಲು ಪ್ರೋತ್ಸಾಹಿಸುತ್ತಾಳೆ

ನಿಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಬರುವಂತೆ ಯಾವಾಗಲೂ ಒತ್ತಾಯಿಸುವ ಸಾಹಸ ಮಾಡುವುದು ನಿಮ್ಮ ಅಕ್ಕ. ನಿಮ್ಮ ಹೃದಯ ಚೂರಾಗಿದ್ದರೂ, ಬದುಕಲ್ಲಿ ಭರವಸೆ ಕಳೆದುಕೊಂಡಿದ್ದರೂ ಆಕೆ ಜೊತೆಗೆ ನಿಂತು ಹೊರ ಹೋಗಿ ಬದುಕನ್ನು ಎಂಜಾಯ್ ಮಾಡುವಂತೆ, ಹೊಸ ಬದುಕನ್ನು ಕಂಡುಕೊಳ್ಳುವಂತೆ ಪ್ರೇರೇಪಿಸುತ್ತಾಳೆ. ನೀವು ಹಾಗೆ ಸಂತೋಷವಾಗಿರುವವರೆಗೂ ಆಕೆ ಬಿಡುವವಳಲ್ಲ. ಒಂದು ವೇಳೆ ಪೋಷಕರ ಇಚ್ಛೆಗೆ ವಿರುದ್ಧವಾದುದನ್ನು ನೀವು ಓದಬೇಕೆಂದರೆ, ಅಥವಾ ಅವರಿಗಿಷ್ಟವಿಲ್ಲದ ಉದ್ಯೋಗವನ್ನು ಇಷ್ಟಪಟ್ಟರೆ ಆಗೆಲ್ಲ ನಿಮ್ಮದೇ ಸರಿ ಎಂದು ಜೊತೆಗೆ ನಿಂತು 'ನಿನ್ನ ಬದುಕನ್ನು ನೀನು ಪ್ರಯೋಗ ಮಾಡಿ ಕಲಿ' ಎಂದು ಪ್ರೋತ್ಸಾಹಿಸುತ್ತಾಳೆ. 

ಕೈ ಕೊಟ್ಟ ಲವರ್‌ಗೆ ಡೋಂಟ್‌ ಕೇರ್; ಬಿಟ್ಹಾಕಿ!

ತನ್ನ ಬಟ್ಟೆ ಶೇರ್ ಮಾಡುತ್ತಾಳೆ

ಅಕ್ಕನ ಕ್ಲೋಸೆಟ್ ನಿಮ್ಮ ಕ್ಲೋಸೆಟ್ ಕೂಡಾ. ಆಕೆಯ ಬಟ್ಟೆ, ಚಪ್ಪಲಿ, ಹೇರ್‌ಪಿನ್, ಬಂಗಾರ- ಯಾವುದನ್ನು ತೊಡಲೂ ನೀವವಳ ಅನುಮತಿ ಕೇಳಬೇಕಿಲ್ಲ. ಒಂದು ವೇಳೆ ಆಕೆ ಇನ್ನೂ ತೊಟ್ಟೇ ಇರದ ಹೊಸಬಟ್ಟೆಯನ್ನು ನೀವು ಧರಿಸಿದರೂ ಆಕೆಗೆ ಏನೂ ಬೇಸರವಿಲ್ಲ. ನೀವು ಯಾವುದೋ ಪಾರ್ಟಿಗೆ ಹೋಗಬೇಕೆಂದರೆ ಅವಳೇ ಸರಿಯಾದ ಬಟ್ಟೆ ಆಯ್ಕೆ ಮಾಡಿ ಹಾಕಿಕೊಳ್ಳುವಂತೆ ಒತ್ತಾಯಿಸುತ್ತಾಳೆ. 

ನಿಮಗೆ ಬೇರೆ ಗೆಳೆಯರ ಅಗತ್ಯವೇ ಕಾಣುವುದಿಲ್ಲ

ಹೊರಗೆ ಹೋಗಲು, ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಲು, ನೀವು ನೀವಾಗಿರಲು ಗೆಳೆಯರ ಸಾಂಗತ್ಯ ಬೇಕು. ಆದರೆ, ಇವೆಲ್ಲವೂ ಅಕ್ಕನ ಬಳಿಯೇ ಸಾಧ್ಯವಾಗುವಾಗ ಬೇರೆ ಗೆಳೆಯರ ಅಗತ್ಯ ನಿಮಗೆ ಬೀಳುವುದಿಲ್ಲ. ಒಂದು ವೇಳೆ ನಿಮಗೆ ಗೆಳೆಯರಿದ್ದರೂ, ಅಕ್ಕನ ಪಕ್ಕ ಸುಮ್ಮನೆ ಕುಳಿತೂ ಟೈಂಪಾಸ್ ಆಗುವಂತೆ ಬೇರೆಯವರೊಂದಿಗೆ ಆಗುವುದಿಲ್ಲ. 

ಅಕ್ಕನ ಅನುಮತಿಯಿಲ್ಲದೆ ಡೇಟ್‌ ಹೋಗಲ್ಲ

ಹೌದು, ನಿಮಗಾತನೆಂದರೆ ಇಷ್ಟ. ಸಖತ್ ಕ್ಯೂಟ್ ಎನಿಸುತ್ತಾನೆ. ಆದರೆ, ಅಕ್ಕನಿಗೆ ಆತ ಸರಿಯಿಲ್ಲ ಎನಿಸಿದರೆ ನೀವು ಖಂಡಿತಾ ಅವನೊಂದಿಗೆ ಡೇಟ್ ಹೋಗಲು ಮನಸ್ಸು ಮಾಡುವುದಿಲ್ಲ. ಅಕ್ಕನಿಗೆ ಹಾಗೆನಿಸಿರಬೇಕೆಂದರೆ ಅವನಲ್ಲಿ ಏನೋ ದೋಷವಿರಬೇಕು ಎಂದು ನಿಮಗೆ ಅನಿಸಿಬಿಡುತ್ತದೆ. 

ಆಕೆ ನಿಮ್ಮ ಪರ್ಸನಲ್ ಸ್ಟೈಲಿಸ್ಟ್

ನಿಮ್ಮ ಸ್ಪೆಶಲ್ ದಿನಗಳಲ್ಲಿ, ನೀವು ಡೇಟ್ ಹೋಗುವಾಗ, ಪಾರ್ಟಿಗೆ ಹೋಗುವಾಗ, ಮದುವೆ ಕಾರ್ಯಕ್ರಮಕ್ಕೆ ರೆಡಿಯಾಗಬೇಕೆಂದರೆ ಅಕ್ಕನೇ ನಿಮ್ಮ ಪರ್ಸನಲ್ ಸ್ಟೈಲಿಸ್ಟ್. ಔಟ್‌ಫಿಟ್‌ನಿಂದ ಹಿಡಿದು ಮೇಕಪ್ ತನಕ ಆಕೆಯೇ ಎಲ್ಲವನ್ನೂ ನೋಡಿಕೊಳ್ಳಬಲ್ಲಳು. 

ಮ್ಯಾಜಿಕ್‌ ಮೊಮೆಂಟ್: ಅಮ್ಮನಿಗೆ ಕೊಟ್ಟಮೊದಲ ಉಡುಗೊರೆ!

ನಿಮ್ಮಿಬ್ಬರಿಗೂ ಕೆಲವೊಂದಿಷ್ಟು ಜನರನ್ನು ಕಂಡರಾಗುವುದಿಲ್ಲ

ಕೆಲವೊಬ್ಬರೆಂದರೆ ನಿಮಗಾಗುವುದಿಲ್ಲ. ಅವರನ್ನು ಕಂಡರೆ ನಿಮಗಾಗುವುದಿಲ್ಲವೆಂಬ ಕಾರಣಕ್ಕೇ ಅಕ್ಕನಿಗೂ ಆಗುವುದಿಲ್ಲ. ಹೀಗೆ ಇಬ್ಬರೂ ಕೆಲವರನ್ನು ಹೇಟ್ ಮಾಡುವ, ಅವರಿಗೆ ಬೈದುಕೊಳ್ಳುವ ಸುಖ ನಿಮ್ಮಿಬ್ಬರಿಗಷ್ಟೇ ಗೊತ್ತು.  

click me!