ಸೆಕ್ಸ್‌ ಬಗ್ಗೆ ನೀವು ಹೀಗೆಲ್ಲ ಅಂದ್ಕೊಂಡಿದ್ದೀರಾ? ಅಷ್ಟಕ್ಕೂ ವಾಸ್ತವ ಏನು?

By Suvarna NewsFirst Published Oct 8, 2020, 7:06 PM IST
Highlights

ಸೆಕ್ಸ್‌ ಕುರಿತ ಒಂದಿಷ್ಟು ಸುಳ್ಳು ನಂಬಿಕೆಗಳನ್ನು ಬಹುತೇಕರು ನಿಜವೆಂದೇ ನಂಬಿರುತ್ತಾರೆ.ಆದ್ರೆ ಸೆಕ್ಸ್‌ ಕುರಿತ ಕೆಲವು ನಂಬಿಕೆಗಳು ವಾಸ್ತವದಲ್ಲಿ ಸುಳ್ಳಾಗಿರುತ್ತವೆ.ಹೀಗಾಗಿ ಯಾರದ್ದೋ ಮಾತು ಕೇಳಿ ಸೆಕ್ಸ್‌ ಬಗ್ಗೆ ತಪ್ಪು ಕಲ್ಪನೆಗಳನ್ನು ತಲೆಯಲ್ಲಿ ತುಂಬಿಕೊಳ್ಳಬೇಡಿ.

ಭಾರತದಲ್ಲಿ ಸೆಕ್ಸ್‌ ಬಗ್ಗೆ ಮುಕ್ತವಾಗಿ ಮಾತನಾಡೋ ಮನಸ್ಥಿತಿಯಾಗಲಿ,ವಾತಾವರಣವಾಗಲಿ ಇನ್ನೂ ಸೃಷ್ಟಿಯಾಗಿಲ್ಲ.ಆತ್ಮೀಯ ಸ್ನೇಹಿತರ ಬಳಗದಲ್ಲಿ ಆಗಾಗ ಈ ಕುರಿತ ಕುತೂಹಲ ತಣಿಸಿಕೊಳ್ಳಲು ಒಂದಿಷ್ಟು ಮಾತುಕತೆಗಳು ನಡೆಯುತ್ತಿರುತ್ತವೆ. ಕೆಲವರು ತಾವು ಎಲ್ಲೋ ಓದಿದ,ಕೇಳಿದ ಸಂಗತಿಗಳನ್ನು ಹಂಚಿಕೊಂಡರೆ,ಉಳಿದವರು ಅದನ್ನೇ ಸತ್ಯವೆಂದು ನಂಬಿಕೊಳ್ಳೋದೂ ಇರುತ್ತೆ.ಈಗ ಸೆಕ್ಸ್‌ ಕುರಿತ ಕುತೂಹಲ,ಅನುಮಾನಗಳಿಗೆ ಇಂಟರ್ನೆಟ್‌ ಎಂಬ ಮಾಹಿತಿ ಭಂಡಾರವಂತೂ ಇದ್ದೇಇದೆ. ಹೀಗಾಗಿ ಮೊಬೈಲ್‌ ಹಿಡಿದು ನೆಟ್‌ನಲ್ಲಿ ಈ ಕುರಿತು ಒಂದಿಷ್ಟು ಸರ್ಚ್‌ ಕೊಟ್ಟು ಮಾಹಿತಿ ಪಡೆದುಕೊಳ್ಳೋ ಕೆಲ್ಸವನ್ನು ಹದಿಹರೆಯದ ಮನಸ್ಸುಗಳು ಮಾಡುತ್ತಿರುತ್ತವೆ. ಸೆಕ್ಸ್‌ ಬಗ್ಗೆ ತಿಳಿದುಕೊಳ್ಳೋದು ಖಂಡಿತಾ ತಪ್ಪಲ್ಲ, ಇದು ವಯೋಸಹಜ ಪ್ರಕ್ರಿಯೆ. ಆದ್ರೆ ಇಂದಿಗೂ ಸೆಕ್ಸ್‌ ಕುರಿತು ಜನರಲ್ಲಿ ಅನೇಕ ತಪ್ಪು ಕಲ್ಪನೆಗಳು, ಭಾವನೆಗಳಿವೆ. ಅಂಥ ಕೆಲವು ತಪ್ಪು ಕಲ್ಪನೆಗಳ ಮಾಹಿತಿ ಇಲ್ಲಿದೆ.

ಡಾಕ್ಟರ್ ಮಗು ಆಗೊಲ್ಲ ಎಂದಾಗ ಈ ಸೆಲೆಬ್ರಿಟಿಗಳು ಮಾಡಿದ್ದೇನು?

ಸಮ್ಮತಿಸಿದ ಮೇಲೆ ಇಲ್ಲ ಅನ್ನುವಂತಿಲ್ಲ
ಸೆಕ್ಸ್‌ಗೆ ಇಬ್ಬರ ಸಮ್ಮತಿ ಅಗತ್ಯ.ಇಬ್ಬರು ಒಪ್ಪಿಕೊಂಡು ಮುಂದುವರಿದ ಬಳಿಕವೂ ಒಬ್ಬರಿಗೆ ಮಧ್ಯದಲ್ಲೇ ಯಾವುದೋ ಕಾರಣಕ್ಕೆ ಇಲ್ಲಿಗೆ ಸಾಕು ಅನ್ನಿಸಿದ್ರೆ ಅದನ್ನು ವ್ಯಕ್ತಪಡಿಸೋ ಹಕ್ಕಿದೆ. ಅವರು ನೇರವಾಗಿ ಇದನ್ನು ಸಂಗಾತಿಗೆ ತಿಳಿಸಿ ಅಲ್ಲಿಗೆ ನಿಲ್ಲಿಸಲು ಹೇಳಬಹುದು.ಸಂಗಾತಿಗಳು ಪರಸ್ಪರ ಒಬ್ಬರನ್ನೊಬ್ಬರು ಗೌರವಿಸೋದು ಅಗತ್ಯ. ಅದು ಸೆಕ್ಸ್‌ ವಿಚಾರಕ್ಕೂ ಅನ್ವಯಿಸುತ್ತೆ. ಹೀಗಾಗಿ ಒಮ್ಮೆ ಸೆಕ್ಸ್‌ಗೆ ಸಮ್ಮತಿಸಿದ ಮೇಲೆ ಮಧ್ಯದಲ್ಲಿ ಬೇಡ ಅನ್ನುವಂತಿಲ್ಲ ಎಂಬ ಅಲಿಖಿತ ನಿಯಮ ಒಂದು ತಪ್ಪು ಕಲ್ಪನೆಯಷ್ಟೆ. 

ಮೊದಲ ಬಾರಿಗೆ ನೋವಿನ ಅನುಭವ
ಮೊದಲ ಬಾರಿ ಸೆಕ್ಸ್‌ ಮಾಡಿದಾಗ ಮಹಿಳೆಗೆ ಹೆಚ್ಚು ನೋವುಂಟಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.ಇಂಥ ಮಾತನ್ನು ಸ್ನೇಹಿತರಿಂದಲೂ ಅಥವಾ ಬೇರೆಲ್ಲಿಂದಲೂ ತಿಳಿದುಕೊಂಡ ಕೆಲವು ಹುಡುಗೀರು ಇದೇ ಭಯಕ್ಕೆ ಮದುವೆ ಬಳಿಕ ಸೆಕ್ಸ್‌ನಲ್ಲಿ ತೊಡಗಲು ಹಿಂದೇಟು ಹಾಕಿದಂತಹ ಅನೇಕ ಪ್ರಸಂಗಗಳು ಕೂಡ ನಡೆದಿವೆ. ಮೊದಲ ಬಾರಿಗೆ ಸೆಕ್ಸ್‌ನಲ್ಲಿ ತೊಡಗುವಾಗ ಕೆಲವರಿಗೆ ಸ್ವಲ್ಪ ನೋವಿನ ಅನುಭವವಾಗಬಹುದು,ಆದ್ರೆ ಎಲ್ಲರಿಗೂ ಇಂಥದ್ದೇ ಅನುಭವವಾಗಬೇಕು ಎಂದೇನಿಲ್ಲ.

ಪುರುಷರಿಗೆ ಸೆಕ್ಸ್‌ ಬಯಕೆ ಹೆಚ್ಚು
ಮಹಿಳೆಯರಿಗೆ ಹೋಲಿಸಿದ್ರೆ ಪುರುಷರು ಹೆಚ್ಚು ಕಾಮಾಸಕ್ತಿ ಹೊಂದಿರುತ್ತಾರೆ ಎಂಬುದು ಸುಳ್ಳು. ಮಹಿಳೆ ಹಾಗೂ ಪುರುಷ ಇಬ್ಬರೂ ಸೆಕ್ಸ್‌ನಲ್ಲಿ ಸಮಾನ ಆಸಕ್ತಿ ಹೊಂದಿದ್ದಾರೆ ಎಂಬುದು ಅನೇಕ ಅಧ್ಯಯನಗಳಿಂದ ಕೂಡ ಸಾಬೀತಾಗಿದೆ. 

ಗರ್ಭಿಣಿ ಅನುಷ್ಕಾ ಶರ್ಮಾ ಮನದಲ್ಲಿ ಏನು ಬಯಕೆಯಿದೆ ಗೊತ್ತಾ?

ಕನ್ಯತ್ವದ ಕನವರಿಕೆ
ಇನ್ನು ಮಹಿಳೆಯ ಕನ್ಯತ್ವದ ಬಗ್ಗೆ ಸಮಾಜದಲ್ಲಿ ಅನೇಕ ಮೂಢನಂಬಿಕೆಗಳಿವೆ.ಕೆಲವೆಡೆ ಮದುವೆಗೂ ಮುನ್ನ ಹೆಣ್ಣಿನ ಕನ್ಯತ್ವ ಪರೀಕ್ಷಿಸುವ ಕೆಟ್ಟ ಪರಿಪಾಠವೂ ಇದೆ.ಕನ್ಯಾಪೊರೆಗೂ ಹೆಣ್ಣಿನ ಪಾವಿತ್ರ್ಯತೆಗೂ ಸಂಬಂಧ ಕಲ್ಪಿಸೋದು ತಪ್ಪು.ಸೆಕ್ಸ್‌ನಿಂದ ಮಾತ್ರವಲ್ಲ,ಸೈಕಲಿಂಗ್‌ ಸೇರಿದಂತೆ ಅನೇಕ ಚಟುವಟಿಕೆಗಳನ್ನು ಮಾಡುವಾಗಲೂ ಕನ್ಯಾಪೊರೆಗೆ ಹಾನಿಯಾಗೋ ಸಾಧ್ಯತೆಯಿರುತ್ತೆ.ಹೀಗಾಗಿ ಕನ್ಯತ್ವದ ಪ್ರಶ್ನೆ ಮುಂದಿಟ್ಟುಕೊಂಡು ಹೆಣ್ಣಿನ ಮಾನಹಾನಿ ಮಾಡೋದು ಸರಿಯಲ್ಲ. 

ಸುರಕ್ಷಿತ ಸೆಕ್ಸ್‌ನಿಂದ ಎಸ್‌ಟಿಐ ಬರಲ್ಲ
ಅನಗತ್ಯ ಗರ್ಭಧಾರಣೆ ಹಾಗೂ ಲೈಂಗಿಕ ರೋಗ (ಎಸ್‌ಟಿಐ)ಗಳಿಂದ ಸುರಕ್ಷಿತವಾಗಿರಲು ಸೆಕ್ಸ್‌ ವೇಳೆ ಕಾಂಡೋಮ್‌ ಬಳಸುವಂತೆ ಸಲಹೆ ನೀಡಲಾಗುತ್ತದೆ.ಇದು ಸತ್ಯವಾದ್ರೂ ಕೆಲವು ಅಧ್ಯಯನಗಳ ಪ್ರಕಾರ ಕಾಂಡೋಮ್‌ ಬಳಸಿದರೂ ಚರ್ಮ ಹಾಗೂ ಚರ್ಮದ ನಡುವಿನ ಸಂಪರ್ಕದಿಂದ ಎಸ್‌ಟಿಐ ಹರಡೋ ಸಾಧ್ಯತೆ ಶೇ.೧ರಷ್ಟಿದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಅಮೆರಿಕನ್‌ ಸೆಕ್ಸ್‌ಚುವಲ್‌ ಹೆಲ್ತ್‌ ಅಸೋಸಿಯೇಷನ್‌ ಪ್ರಕಾರ ಎಸ್‌ಟಿಐ ಹರಡೋದ್ರಲ್ಲಿ ಎಚ್‌ಪಿವಿ ಹಾಗೂ ಹರ್ಪ್ಸ್‌ಗೆ ಹೋಲಿಸಿದ್ರೆ ಕಾಂಡೋಮ್‌ ಅಷ್ಟೊಂದು ಪರಿಣಾಮಕಾರಿಯಲ್ಲ.

ಶುಗರ್ ಡ್ಯಾಡಿ ಅಂತೆ, ಗೋಲ್ಡ್ ಡಿಗ್ಗರ್ ಅಂತೆ, ಏನಿದೆಲ್ಲಾ?

ಅತಿಯಾದ ಸೆಕ್ಸ್‌ ಆರೋಗ್ಯಕ್ಕೆ ಹಾನಿಕಾರಕ
ಸೆಕ್ಸ್‌ ಅತಿಯಾದ್ರೆ ಆರೋಗ್ಯಕ್ಕೆ ಒಳ್ಳೆಯದ್ದಲ್ಲ ಎಂಬ ಅಭಿಪ್ರಾಯ ಕೆಲವರಲ್ಲಿದೆ. ಆದ್ರೆ ಸೆಕ್ಸ್‌ ದೇಹದ ಕಾರ್ಯನಿರ್ವಹಣೆಯನ್ನು ಹೆಚ್ಚಿಸೋ ಜೊತೆ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡೋ ಸಾರ್ಮಥ್ಯ ಹೊಂದಿದೆ. ಸೆಕ್ಸ್‌ನಿಂದ ಶರೀರದಲ್ಲಿನ ಹಾರ್ಮೋನ್‌ಗಳು ಕೂಡ ಸಮರ್ಪಕವಾಗಿ ಕೆಲಸ ಮಾಡುತ್ತವೆ. 
 

click me!