ಶಕ್ತಿಯಿಲ್ಲದ ವ್ಯಕ್ತಿ ಮದುವೆಯಾಗಿ ಬಾಳು ಹಾಳ್ಮಾಡ್ಕೊಂಡ ಮಹಿಳೆ

By Suvarna News  |  First Published Jul 12, 2022, 6:13 PM IST

ಲವ್ ಮ್ಯಾರೇಜ್ ಹಾಗೂ ಅರೇಂಜ್ಡ್ ಮ್ಯಾರೇಜ್ ಇದ್ರಲ್ಲಿ ಯಾವುದು ಸರಿ ಎಂಬ ಪ್ರಶ್ನೆ ಬಂದಾಗ ಆಯ್ಕೆ ಕಷ್ಟ. ಯಾಕೆಂದ್ರೆ, ಮದುವೆ ಹೇಗೆ ಎನ್ನುವುದಕ್ಕಿಂತ ಇಬ್ಬರ ಮಧ್ಯೆ ಸಂಬಂಧ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ಅನೇಕ ಬಾರಿ ಗೊತ್ತಿಲ್ಲದೆ ಮದುವೆಯಾಗಿ ಮುಂದೆ ಸಂಕಷ್ಟ ಎದುರಿಸಬೇಕಾಗುತ್ತದೆ.
 


ಮದುವೆ ಜೀವನದ ಪಥ ಬದಲಿಸುತ್ತದೆ. ಇಡೀ ಜೀವನವನ್ನು ಒಬ್ಬರ ಜೊತೆ ಕಳೆಯಬೇಕೆಂದಾಗ ಸಂಗಾತಿ ಆಯ್ಕೆ ಮಾಡೋದು ಸುಲಭವಲ್ಲ. ಉತ್ತಮ ಗೆಳೆಯ ಸಂಗಾತಿಯಾಗಿ ಬಂದ್ರೆ ಜೀವನ ಸುಖಕರವಾಗಿ ನಡೆಯುತ್ತದೆ. ತಪ್ಪು ಸಂಗಾತಿ ಸಿಕ್ಕರೆ ದಾಂಪತ್ಯದ ದಾರಿ ತಪ್ಪುತ್ತದೆ. ಪ್ರತಿಯೊಬ್ಬರೂ ನೂರು ಕಾಲ ಒಟ್ಟಿಗೆ ಬಾಳ್ಬೇಕೆಂದು ಬಯಸ್ತಾರೆ. ಆದ್ರೆ ಬಯಸಿದ್ದು ನಡೆಯಲು ಸಾಧ್ಯವಿಲ್ಲ. ಕೆಲವೊಮ್ಮೆ ಸಣ್ಣ ತಪ್ಪುಗಳೂ ವಿಚ್ಛೇದನ (Divorce) ಕ್ಕೆ ದಾರಿ ಮಾಡಿಕೊಡುತ್ತವೆ. ಪ್ರೇಮ ವಿವಾಹದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅರಿತು ಮದುವೆಯಾಗಿರ್ತಾರೆ. ಹಾಗಂತ ಪ್ರೇಮ ವಿವಾಹದಲ್ಲಿ ವಿಚ್ಛೇದನ ನಡೆಯೋದಿಲ್ಲ ಎಂದಲ್ಲ. ನಾವಿಂದು ಬರೀ ಅರೇಂಜ್ಡ್ ಮ್ಯಾರೇಜ್ ಬಗ್ಗೆ ಹೇಳ್ತಿದ್ದೇವೆ. ಅರೇಂಜ್ಡ್ ಮ್ಯಾರೇಜ್ ನ ದೊಡ್ಡ ಅನಾನುಕೂಲವೆಂದರೆ ಇಬ್ಬರು ಸರಿಯಾಗಿ ತಿಳಿದಿರುವುದಿಲ್ಲ. ಮದುವೆಯ ನಂತರ ಅವರ ನಡುವೆ ಸಮಸ್ಯೆಗಳು ಉದ್ಭವಿಸುತ್ತವೆ. ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ  ಪೋಷಕರು ಸಂಗಾತಿ ಆಯ್ಕೆ ಮಾಡುತ್ತಾರೆ. ಅರೇಂಜ್ಡ್ ಮ್ಯಾರೇಜ್ ಮುರಿದು ಬಿದ್ದ ಕಾರಣವನ್ನು ಕೆಲವರು ಹೇಳಿದ್ದಾರೆ. ಅದೇನು ಎಂಬುದನ್ನು ನಾವಿಂದು ನೋಡೋಣ. 

ಅತ್ತೆ - ಮಾವನ ಹಸ್ತಕ್ಷೇಪ : ಮದುವೆಯಾದ ಎರಡು ವರ್ಷಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಐಟಿ ಸಲಹೆಗಾರ್ತಿಯೊಬ್ಬರು ಅದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾರೆ. ವಿಚ್ಛೇದನಕ್ಕೆ ಕಾರಣ ಅವರ ಮಾವನಂತೆ. ನಿವೃತ್ತಿ ನಂತ್ರ ಮಗನ ಜೊತೆ ಮಾವನ ವಾಸ ಶುರುವಾಗಿತ್ತಂತೆ. ಆರಂಭದಲ್ಲಿ ಸರಿಯಾಗಿದ್ದ ಮಾವ, ದಿನ ಕಳೆದಂತೆ ಇವರ ಜೀವನದಲ್ಲಿ ಹಸ್ತಕ್ಷೇಪ ಶುರು ಮಾಡಿದ್ರಂತೆ. ಇದು ದಾಂಪತ್ಯ ಮುರಿದು ಬೀಳಲು ಕಾರಣವಾಯ್ತು. ಸಂಗಾತಿ ಮಧ್ಯೆ ಜಗಳ, ಮನಸ್ತಾಪ ಶುರುವಾಯ್ತು ಎನ್ನುತ್ತಾರೆ ಅವರು. 
ಎಲ್ಲದಕ್ಕೂ ಮಾವನಿಂದ ಅನುಮತಿ ಪಡೆಯಬೇಕಿತ್ತು. ಪತಿ ಮತ್ತು ನಾನು ಜಗಳವಾಡಿದಾಗ, ನನ್ನ ಪತಿ ತನ್ನ ತಾಯಿಯ ಪರವಾಗಿ ನಿಲ್ಲುತ್ತಿದ್ದರು. ಅವರಿಬ್ಬರ ಆಗಮನದ ನಂತ್ರ ನಮ್ಮಿಬ್ಬರ ಮನಸ್ತಾಪ ಜಾಸ್ತಿಯಾಯ್ತು. ಹೊಂದಾಣಿಕೆ ಸಾಧ್ಯವಿಲ್ಲವೆಂದಾಗ ನಾನು ವಿಚ್ಛೇದನ ಪಡೆದೆ ಎನ್ನುತ್ತಾರೆ ಅವರು.

Tap to resize

Latest Videos

ಮನೆಯಿಂದ ದೂರವಿರೋದು ಕಷ್ಟ, HOMESICKNESS ಹೋಗಲಾಡಿಸುವುದು ಹೇಗೆ ?

ಮಾಜಿ ಜೊತೆ ಹೆಂಡತಿಯ ಸಂಬಂಧ :  ಕೆಲವರು ಮನಸ್ಸಿಲ್ಲದ ಮನಸ್ಸಿನಲ್ಲಿ ಮದುವೆಯಾಗ್ತಾರೆ. ಇದು ಕೂಡ ದಾಂಪತ್ಯ ಮುರಿಯಲು ಕಾರಣವಾಗುತ್ತದೆ. ಉದ್ಯಮಿಯೊಬ್ಬರೂ ತಮ್ಮ ಪತ್ನಿಯಿಂದ ದೂರವಾಗಿದ್ದಾರೆ. ಮದುವೆಯಾದ ಎರಡೇ ತಿಂಗಳಲ್ಲಿ ಮದುವೆ ಮುರಿದು ಬಿದ್ದಿದೆ. ಮದುವೆಗೆ ಮೊದಲು ಎರಡು ಬಾರಿ ಮಾತ್ರ ಭೇಟಿಯಾಗಿದ್ದ ಅವರು ಬೇರೆ ಬೇರೆ ನಗರದಲ್ಲಿ ವಾಸವಾಗಿದ್ದರಿಂದ ಹೆಚ್ಚಾಗಿ ಏನೂ ತಿಳಿದಿರಲಿಲ್ಲವಂತೆ. ಮದುವೆ ಬಗ್ಗೆ ಆಸಕ್ತಿ ತೋರದ ಪತ್ನಿ, ಮದುವೆಯನ್ನು ನಿರಾಕರಿಸಿರಲಿಲ್ಲವಂತೆ. ಆದ್ರೆ ಮದುವೆಯಾದ  ಕೆಲವು ತಿಂಗಳ ನಂತರ ವಿಚ್ಛೇದನ ನೀಡುವಂತೆ ಕೇಳಿದ್ದಳಂತೆ. ಮದುವೆ ಇಷ್ಟವಿರಲಿಲ್ಲ, ಪಾಲಕರ ಒತ್ತಾಯಕ್ಕೆ ಮದುವೆಯಾಗಿದ್ದೇನೆ, ನಾನು ಮಾಜಿ ಪ್ರೇಮಿಯನ್ನು ಪ್ರೀತಿಸ್ತಿದ್ದೇನೆ ಎಂದಿದ್ದಳಂತೆ. ಆಕೆ ಸಂತೋಷಕ್ಕಾಗಿ ನಾನು ನನ್ನ ದಾರಿ ಬದಲಿಸಿದೆ ಎನ್ನುತ್ತಾನೆ ಉದ್ಯಮಿ. 

ಕೆಲಸದ ಬಗ್ಗೆ ಸುಳ್ಳು ಮಾಹಿತಿ : ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎನ್ನುತ್ತಾರೆ. ಆದ್ರೆ ಒಂದು ಸುಳ್ಳು ಕೂಡ ಈಗ ಮದುವೆ ಮುರಿಯಲು ಕಾರಣವಾಗುತ್ತದೆ ಎಂಬುದು ನೆನಪಿರಲಿ. ಹುಡುಗ ಅಮೆರಿಕಾದಲ್ಲಿ ಇಂಜಿನಿಯರ್ ಎಂಬ ಕಾರಣಕ್ಕೆ ಮದುವೆಯಾಗಿದ್ದ ಮಹಿಳೆಗೆ ಮೋಸವಾಗಿದೆ. ಅಮೆರಿಕಾದಲ್ಲಿ ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದವನನ್ನು ಇಂಜಿನಿಯರ್ ಎಂದೇಳಿ ಮದುವೆ ಮಾಡಿಸಲಾಗಿದೆ. ಅತ್ತೆಮನೆಯವರ ಸುಳ್ಳಿಗೆ ಬೇಸತ್ತ ಮಹಿಳೆ ವಿಚ್ಛೇದನ ನೀಡಿದ್ದಾಗಿ ತಿಳಿಸಿದ್ದಾಳೆ.  

ಸೆಕ್ಸ್ ನಿಂದ ಪಡೆಯಿರಿ 10 ಆರೋಗ್ಯಕರ ಪ್ರಯೋಜನಗಳು

ತಪ್ಪು ಮಾಹಿತಿ : ಪಾಲಕರ ಒತ್ತಾಯಕ್ಕೆ ಯುವಕನೊಬ್ಬ ಮದುವೆಗೆ ಒಪ್ಪಿಕೊಂಡು ಮಹಿಳೆ ಬಾಳು ಹಾಳು ಮಾಡಿದ್ದಾನೆ. ಆತನ ಆರೋಗ್ಯದ ಬಗ್ಗೆ ಮದುವೆಗೆ ಮುನ್ನ ಯಾರೂ ಮಾಹಿತಿ ನೀಡಿರಲಿಲ್ಲ. ಮದುವೆಯಾದ್ಮೇಲೆ ಆತನ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ ಬಳಸ್ತಿದ್ದಾನೆ ಎಂಬುದು ಗೊತ್ತಾಗಿದೆ. ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ, ಬಾಲ್ಯದ ಗಾಯದಿಂದ ಹೀಗಾಗಿದೆ ಎಂಬುದು ಗೊತ್ತಾಗಿದೆ. ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆತನನ್ನು ಬಿಟ್ಟಿಲ್ಲ, ಸತ್ಯವನ್ನು ಮರೆಮಾಚಿದ್ದು ಸರಿ ಎನ್ನಿಸಲಿಲ್ಲ ಎಂದಿದ್ದಾಳೆ ಮಹಿಳೆ.  
 

click me!