ಆಫೀಸ್‌ ಹುಡುಗೀನಾ ಪ್ರೀತಿಸ್ತಿದ್ದೇನೆ, ಆಕೆ ಹೊಸದಾಗಿ ಜಾಯಿನ್ ಆದವನನ್ನು ಲವ್ ಮಾಡ್ತಿದ್ದಾಳೆ, ಏನ್ಮಾಡ್ಲಿ ?

By Suvarna News  |  First Published Jul 12, 2022, 5:46 PM IST

ಪ್ರೀತಿಯೆಂಬುದು ಒಂದು ಮಧುರ ಭಾವನೆ. ಅದು ಯಾರ ಮೇಲಾದರೂ, ಯಾವ ಕ್ಷಣದಲ್ಲಾದರೂ ಮೂಡಬಹುದು. ಆದರೆ ಪ್ರತಿಯಾಗಿ ಅವರಲ್ಲೂ ಅದೇ ಭಾವನೆ ಇರಬೇಕೆಂದಿಲ್ಲ. ಹೀಗೇ ಒನ್‌ ಸೈಡೆಡ್‌ ಲವ್ವಲ್ಲಿ ಬಿದ್ದ ವ್ಯಕ್ತಿಯೊಬ್ಬರು ತಾವು ಅನುಭವಿಸ್ತಿರೋದು ನೋವನ್ನು ಹೇಳ್ಕೊಂಡಿದ್ದಾರೆ. ಆತನ ಸಮಸ್ಯೆಗೆ ತಜ್ಞರು ಏನ್‌ ಉತ್ತರ ಹೇಳಿದ್ದಾರೆ ತಿಳಿಯೋಣ.


ಪ್ರೀತಿ ಎಂಬುದು ಎಷ್ಟು ಸುಂದರ ಅನುಭೂತಿ. ಪದಗಳಲ್ಲಿ ಬಣ್ಣಿಸಲಾಗದ ಅದ್ಭುತ ಅನುಭವ. ಮತ್ತೊಂದು ಜೀವವನ್ನು ತನ್ನ ಜೀವದಂತೆಯೇ ಪ್ರೀತಿಸುವ ಪ್ರಕ್ರಿಯೆ. ಪ್ರೀತಿಯಲ್ಲಿದ್ದಾಗ ಲೋಕವೇ ಸುಂದರ ಎನ್ನುತ್ತಾರೆ. ಪ್ರೀತಿಗೆ ಬದುಕಿಗೆ ಅಷ್ಟು ಸುಂದರ ಬಣ್ಣಗಳನ್ನು ತುಂಬುತ್ತದೆ. ಆದ್ರೆ ಈ ಪ್ರೀತಿ ಯಾವಾಗಳು ಹಿತವಾಗಿರಬೇಕೆಂದೇನೂ ಇಲ್ಲ. ಪ್ರೀತಿ, ಕೆಲವೊಮ್ಮೆ ಇಡೀ ಜೀವನಕ್ಕೇ ಸಾಕಾಗುವ ನೋವನ್ನು ತಂದುಕೊಡುವ ವಿಚಾರವೂ ಹೌದು. ಯಾರ ಮೇಲಾದರೂ, ಯಾವ ಕ್ಷಣದಲ್ಲಾದರೂ ಮೂಡಬಹುದು. ಆದರೆ ಪ್ರತಿಯಾಗಿ ಅವರಲ್ಲೂ ಅದೇ ಭಾವನೆ ಇರಬೇಕೆಂದಿಲ್ಲ. ಈ ರೀತಿಯ ಒನ್‌ಸೈಡ್ ಲವ್‌ನಲ್ಲೇ ಹಲವು ಮನಸ್ಸುಗಳು ಮುದುಡುತ್ತವೆ. ಪ್ರೀತಿಸುವುದನ್ನು ನಿಲ್ಲಿಸಲಾಗದೆ, ಪ್ರೀತಿಯನ್ನು ಗಳಿಸಲಾಗದೆ ಒದ್ದಾಡುವಂತಾಗುತ್ತದೆ. ಅಂಥಾ ಮನಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬರು ಏಷ್ಯಾನೆಸ್ ಸುವರ್ಣ ನ್ಯೂಸ್ ಜೊತೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಪ್ರಶ್ನೆ: ನಾನು ಆಫೀಸ್‌ನಲ್ಲಿ ವರ್ಕ್ ಮಾಡ್ತಾ ಇದ್ದೀನಿ. ನಾನು ನನ್ನ ಆಫೀಸ್ (Office) ಹುಡುಗಿಯನ್ನು ಇಷ್ಟ ಪಟ್ಟಿದ್ದು, ಅವಳಿಗೆ ಕೂಡಾ ಇದನ್ನು ತಿಳಿಸಿದ್ದೇನೆ. ಆದರೆ ಅವಳು ಇದಕ್ಕೆ ಯಾವುದೇ ರೀತಿಯ ರಿಪ್ಲೆ ಮಾಡಿಲ್ಲ. ಮತ್ತೆ ನಾನು ಈ ಬಗ್ಗೆ ಜಾಸ್ತಿ ಒತ್ತಾಯ ಮಾಡಿಲ್ಲ. ಯಾಕಂದ್ರೆ ಅವಳು ಮನೆಗೆ ಒಬ್ಬಳೇ ಮುದ್ದಿನ ಮಗಳು. ಎಲ್ಲರೂ ಇವಳನ್ನು ತುಂಬಾ ಹಚ್ಚಿಕೊಂಡಿದ್ದಾರೆ. ಅವರ ಮನಸ್ಸಿಗೆ ನೋವು ಮಾಡುವುದು ನನಗೆ ಇಷ್ಟ ಇಲ್ಲ ಆದರೆ ಬೇರೊಬ್ಬ ಹುಡುಗ ನಮ್ಮ ಆಫೀಸ್‌ಗೆ ಜಾಯಿನ್ ಆಗಿದ್ದಾನೆ. ಈಗ ನಾನು ಪ್ರೀತಿಸಿದ (Love) ಹುಡುಗಿ ಅವನೆಡೆಗೆ ಒಲವು ತೋರಿಸ್ತಾ ಇದ್ದಾಳೆ. ಆದರೆ ಆತ ಹುಡುಗಿಗಿಂತ  ಬಹಳ ಚಿಕ್ಕವನು. ಅವನು ಪ್ರೀತಿಯೆಂಬ ಹೆಸರಲ್ಲಿ ಅವಳಿಗೆ ಮೋಸ ಮಾಡ್ತಾನೆ ಅಂತ ನಂಗನಿಸುತ್ತಿದೆ. ಒಂದೊಮ್ಮೆ ಮೋಸ ಹೋದರೆ ಅವಳಿಗೆ ನಿಭಾಯಿಸುವುದಕ್ಕೆ  ಬರಲ್ಲಅಂದ್ಕೊಂಡಿದ್ದೀನಿ. ಈ ತಪ್ಪಿನಿಂದ ಅವಳ ತಂದೆಯನ್ನು ಕಳೆದುಕೊಳ್ತಾಳೆ ಅನ್ನೋ ಭಯ ಕಾಡುತ್ತಿದೆ.  ಆಕೆಗೆ ಯಾವ ರೀತಿಯಲ್ಲಿ ತಿಳಿಸಬೇಕು ಅಂತ ಗೊತ್ತಾಗ್ತಾ ಇಲ್ಲ.

Tap to resize

Latest Videos

ಪ್ರೀತಿಸಿದ ಹುಡುಗಿ ಜೊತೆ ಬ್ರೇಕಪ್‌ ಆಯ್ತು, ಆದ್ರೆ ಆಕೆ ನೆನಪಿನಿಂದ ಹೊರಬರೋಕೆ ಆಗ್ತಿಲ್ಲ. ಏನ್ಮಾಡ್ಲಿ ?

ತಜ್ಞರ ಉತ್ತರ: ಪ್ರೀತಿಯಲ್ಲಿರುವುದು ತುಂಬಾ ಸುಂದರವಾದ ಭಾವನೆ (Feelings) ಹೌದು. ಆದರೆ ಒನ್‌ ಸೈಡೆಡ್ ಆದಾಗ ಅದು ಮನಸ್ಸಿಗೆ ತುಂಬಾ ದುಃಖ ನೀಡುತ್ತದೆ. ಹೀಗಿದ್ದೂ ಈ ಪ್ರೀತಿಯಲ್ಲಿ ನೀವು ನಿಸ್ವಾರ್ಥದಿಂದ ಆಕೆಯ ಒಳ್ಳೆಯದನ್ನು ಬಯಸಿರುವುದು ಮೆಚ್ಚುವಂತಹಾ ಕಾರ್ಯ. ಆಕೆಯ ಮನೆಯವರನ್ನು ಮನಸ್ಸಿನಲ್ಲಿಟ್ಟುಕೊಂಡು ಆಕೆಯನ್ನು ಪ್ರೀತಿಸಲು ಹೆಚ್ಚು ಒತ್ತಾಯ ಮಾಡಿಲ್ಲ. ಆಫೀಸಿಗೆ ಹೊಸದಾಗಿ ಬಂದ ಸಹೋದ್ಯೋ (Collegue) ಆಕೆಗೆ ಮೋಸ ಮಾಡಬಹುದು ಎಂಬ ಭಯ ನಿಮ್ಮನ್ನು ಕಾಡುತ್ತಿದೆ. ಇದು ನಿಮ್ಮ ಪ್ರೀತಿ ನಿಜವಾಗಿದೆ ಎಂಬುದನ್ನು ತೋರಿಸುತ್ತದೆ. 

ಇಬ್ಬರ ನಡುವಿನ ಪ್ರೀತಿ ನಿಜವಾ ಎಂದು ಪರೀಕ್ಷಿಸಿ: ಹುಡುಗ ನೀವು ಪ್ರೀತಿಸುವ ಹುಡುಗಿಗಿಂತ ಚಿಕ್ಕವನು ಎಂಬ ಕಾರಣಕ್ಕೆ ಅದು ಸುಳ್ಳು ಪ್ರೀತಿ ಆಗಿರಬೇಕೆಂದಿಲ್ಲ. ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಹೀಗಾಗಿ ಇದು ನಿಜವಾದ ಪ್ರೀತಿಯೂ ಆಗಿರಬಹುದು. ಹೀಗಾಗಿ ಮೊದಲಿಗೆ ಆ ವ್ಯಕ್ತಿಯ ಬಗ್ಗೆ ವಿಚಾರಿಸಿ. ಆತ ಸುಮ್ಮನೆ ಫ್ಲರ್ಟ್‌ (Flirt) ಮಾಡುತ್ತಿದ್ದಾನೆ, ಅಥವಾ ನಿಜವಾಗಿಯೂ ಪ್ರೀತಿಯ ಭಾವನೆ ಹೊಂದಿದ್ದಾನಾ ತಿಳಿದುಕೊಳ್ಳಿ. ಅದು ನಿಜವಾದ ಪ್ರೀತಿಯೇ ಆಗಿದ್ದರೆ ನೀವು ಅವರ ಜೀವನದಿಂದ ದೂರ ಸರಿಯಬಹುದು. ಆ ಹುಡುಗ ಮೋಸ ಮಾಡುವ ಉದ್ದೇಶ ಹೊಂದಿದ್ದಲ್ಲಿ ಅದನ್ನು ನೀವು ಪ್ರೀತಿಸಿದ ಹುಡುಗಿ ಬಿಡಿಸಿ ಹೇಳಿ.

ಮನಸ್ಸನ್ನು ಗೆಲ್ಲಲು ಯತ್ನಿಸಿ: ಹುಡುಗಿ ಪ್ರೀತಿ ಮಾಡುವಂತೆ ಮಾಡಲು ಮೊದಲು ಆಕೆಯ ಮನಸ್ಸನ್ನು ಗೆಲ್ಲುವುದು ಮುಖ್ಯ. ಹೀಗಾಗಿ ಆಕೆಯ ಮನಸ್ಸನ್ನು ನಿಮ್ಮೆಡೆಗೆ ಸೆಳೆಯಲು ಆಕೆ ಇಷ್ಟಪಡುವಂತೆ ವರ್ತಿಸಿ. ಇವನು ನನ್ನ ಸಂಗಾತಿಯಾಗಲು ಬೆಸ್ಟ್ ಅಲ್ವಾ ಅಂತ ಅವರಿಗೇ ಅನಿಸಬೇಕು. ಆಕೆಯ ಬಗ್ಗೆ ಹೆಚ್ಚು ಕಾಳಜಿ ನೀಡಿ. ತಿಂಡಿ, ಊಡ ಮಾಡಿದ್ದೀರಾ ಎಂಬುದನ್ನು ವಿಚಾರಿಸಿಕೊಳ್ಳಿ. ಆರೋಗ್ಯದ ಬಗ್ಗೆಯೂ ವಿಚಾರಿಸುವುದನ್ನು ಮರೆಯಬೇಡಿ.

ಗೆಳತಿ ಇನ್ನೊಬ್ಬನನ್ನು ಮದ್ವೆಯಾಗ್ತಿದ್ದಾಳೆ, ಮೂವ್ ಆನ್ ಆಗೋಕಾಗ್ತಿಲ್ಲ ಏನ್ಮಾಡ್ಲಿ ?

ಜೀವನಪೂರ್ತಿ ಆಕೆಯೊಂದಿಗೆ ಬಾಳಲು ಇಚ್ಛಿಸುವುದಾಗಿ ಹೇಳಿ: ಪ್ರೀತಿ ಹೇಳುವ ರೀತಿಯೂ ಕೆಲವೊಮ್ಮೆ ತುಂಬಾ ಮುಖ್ಯವಾಗುತ್ತದೆ. ನೀವು ಪ್ರೀತಿ ತೋರ್ಪಡಿಸಿದ ರೀತಿ ನಿಮ್ಮ ಹುಡುಗಿಗೆ ನಿಮ್ಮ ಮೇಲೆ ಫೀಲಿಂಗ್ಸ್ ಮೂಡದಿರಲು ಕಾರಣವಾಗಿರಬಹುದು. ಹುಡುಗಿ ಯಾವತ್ತೂ ತನ್ನ ಪ್ರೀತಿಯಲ್ಲಿ ಸುರಕ್ಷಿತವಾಗಿರಬೇಕೆಂದು ಬಯಸುತ್ತಾಳೆ. ಆಫೀಸಿನ ಕಚೇರಿಯೊಳಗಿನ ಪ್ರೀತಿಯೆಂದಾಗ ಸುಮ್ನೆ ಫ್ಲರ್ಟ್‌ ಮಾಡ್ತಾರೆ ಎಂದು ತಪ್ಪು ತಿಳಿದುಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ನಿಮ್ಮ ಪ್ರೀತಿಯ ಗಾಢತೆಯನ್ನು ಅವಳಿಗೆ ವಿವರಿಸಿ ಹೇಳಿ. ಜೀವನ ಪೂರ್ತಿ ನಿನ್ನೊಂದಿಗಿರಲು ಬಯಸುತ್ತೇನೆ. ಖುಷಿಯಿಂದ ನೋಡಿಕೊಳ್ಳುತ್ತೇನೆ. ಅವಳ ಮನೆಯವರಿಗೂ ಮಗನಂತೆ ಇರುತ್ತೇನೆ ಎಂದು ಭರವಸೆ ನೀಡಿ. 

ಸೂಚನೆ: ನೀವು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುವ ಯಾವುದೇ ಸಂಬಂಧ ಸಂಬಂಧಿತ ಕಥೆಯನ್ನು ಹೊಂದಿದ್ದರೆ, ನೀವು ಅದನ್ನು digitalblr@suvarnanews.inಗೆ ಕಳುಹಿಸಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.

click me!