
ಪ್ರೀತಿ ಹೇಳಿ ಕೇಳಿ ಬರುವಂತಹದ್ದಲ್ಲ. ಪ್ರೀತಿಗೆ ಯಾವುದೇ ಜಾತಿ, ಮತ, ವಯಸ್ಸು, ದೇಶದ ಮಿತಿಯಿಲ್ಲ. ಒಬ್ಬ ವ್ಯಕ್ತಿ ಜೊತೆ ಪ್ರೀತಿ ಚಿಗುರಿದ ಮೇಲೆ ಜನರು ಪ್ರಪಂಚ ಮರೆಯುತ್ತಾರೆ. ಪ್ರೀತಿಯ ಅಮಲಿನಲ್ಲಿ ತೇಲುತ್ತಾರೆ. ಅನೇಕ ಬಾರಿ ಪ್ರೀತಿ ಹಾಗೂ ಆಕರ್ಷಣೆ ಮಧ್ಯೆ ಇರುವ ವ್ಯತ್ಯಾಸ ತಿಳಿಯದೆ ತೊಂದರೆಗೀಡಾದವರು ಅನೇಕರಿದ್ದಾರೆ. ಪ್ರೀತಿ ಕುರುಡು. ವಯಸ್ಸಿನ ಅಂತರ ಅರಿಯದೆ ಪ್ರೀತಿಗೆ ಬಿದ್ದವರು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ.
ಹಿಂದಿನ ಕಾಲದಲ್ಲಿ ಮದುವೆ (Marriage) ವಿಷ್ಯ ಬಂದಾಗ ವಯಸ್ಸ (Age) ನ್ನು ಕೂಡ ಪರಿಗಣಿಸಲಾಗ್ತಿತ್ತು. ಮಹಿಳೆಗಿಂತ ಪುರುಷನ ವಯಸ್ಸು ಹೆಚ್ಚಿರಬೇಕು ನಿಜ. ಆದ್ರೆ ಅತಿ ಹಿರಿಯ ವ್ಯಕ್ತಿಯನ್ನು ಪಾಲಕರು ಒಪ್ಪಿಕೊಳ್ತಿರಲಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಪ್ರೀತಿ (Love) , ಮದುವೆಗೆ ವಯಸ್ಸು ಅಡ್ಡಿಯಾಗ್ತಿಲ್ಲ. ಸಮಾಜ ಏನೇ ಹೇಳಿದ್ರೂ ಪ್ರೀತಿಗೆ ಬಿದ್ದವರು ಮಾತ್ರ ವಯಸ್ಸನ್ನು ಗಮನಿಸುತ್ತಿಲ್ಲ. ಆದ್ರೆ ಮಿತಿ ಮೀರಿದ ವಯಸ್ಸಿನ ಅಂತರ ಸುಖ ದಾಂಪತ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ಪ್ರೀತಿಸಿ ಎರಡು ವರ್ಷದಿಂದ ಜೊತೆಗಿರುವ ಹುಡುಗಿಗೆ ಈಗ ಸಮಸ್ಯೆಯ ಅರಿವಾಗ್ತಿದೆ. ಮುಂದೇನು ಮಾಡೋದು ಎಂಬ ಪ್ರಶ್ನೆ ಕಾಡ್ತಿದೆ.
ಅಷ್ಟಕ್ಕೂ ಆಕೆ ಪ್ರೀತಿಸಿದ್ದು ಆಕೆ ವಯಸ್ಸಿನ ವ್ಯಕ್ತಿಯನ್ನಲ್ಲ. ಆಕೆಗಿಂತ ಚಿಕ್ಕ ವಯಸ್ಸಿನ ಹುಡುಗನನ್ನೂ ಅಲ್ಲ. ಆಕೆಗಿಂತ ಬರೋಬ್ಬರಿ 50 ವರ್ಷ ಹೆಚ್ಚಿರುವ ವ್ಯಕ್ತಿಯನ್ನು. ಹಿರಿಯ ವ್ಯಕ್ತಿ ಮೇಲೆ ಪ್ರೀತಿ : ಆಕೆಗೆ ಈಗ 23 ವರ್ಷ. ಆಕೆಯ ಪ್ರೇಮಿಗೆ 71 ವರ್ಷ. ಇಬ್ಬರು ಎರಡು ವರ್ಷದಿಂದ ಜೊತೆಗಿದ್ದಾರೆ. ಆ ವ್ಯಕ್ತಿಯನ್ನು ಅತಿಯಾಗಿ ಪ್ರೀತಿಸುತ್ತೇನೆ ಎನ್ನುವ ಯುವತಿ, ಮದುವೆ ವಿಷ್ಯ ಬಂದ್ರೆ ಟೆನ್ಷನ್ ಹೆಚ್ಚಾಗುತ್ತೆ ಎನ್ನುತ್ತಾಳೆ. ಸಮಾಜದಿಂದ ಅನೇಕ ಮಾತುಗಳು ಕೇಳಿ ಬರ್ತಿವೆ. ಇದ್ರಿಂದ ಮುಂದೇನು ಮಾಡ್ಬೇಕು ಎನ್ನುವ ಸಮಸ್ಯೆ ನನ್ನನ್ನು ಕಾಡ್ತಿದೆ ಎನ್ನುತ್ತಾಳೆ ಮಹಿಳೆ.
Live-in Relationship: ಲಿವ್ ಇನ್ ಎಷ್ಟು ಸುರಕ್ಷಿತ? ಸಂಬಂಧದಲ್ಲಿರೋ ಮುನ್ನ ಹಕ್ಕುಗಳ ಬಗ್ಗೆ ತಿಳ್ಕೊಳಿ
ಬಾಯ್‌ಫ್ರೆಂಡ್ ಆತನ ವಯಸ್ಸಿಗಿಂತ ಹೆಚ್ಚು ಫಿಟ್ ಮತ್ತು ಆಕ್ಟೀವ್ ಆಗಿದ್ದಾನೆ . ಕುಟುಂಬದ ಇತಿಹಾಸ ನೋಡಿದ್ರೆ ನಾವಿಬ್ಬರು ಇನ್ನಷ್ಟು ವರ್ಷ ಒಟ್ಟಿಗೆ ಇರ್ತೆವೆ ಎನ್ನಿಸುತ್ತೆ ಎನ್ನುತ್ತಾಳೆ ಯವತಿ. ಮದುವೆಯಾದ್ಮೇಲೆ ನಾನು ನನ್ನ ಪತಿಯಿಂದ ಯಾವುದೇ ಮಗುವನ್ನು ಪಡೆಯೋದಿಲ್ಲ. ನನಗೆ ಮಕ್ಕಳು ಬೇಕಾಗಿಲ್ಲ. ಆದ್ರೆ ನಾವಿಬ್ಬರು ಅನೇಕ ವರ್ಷ ಒಟ್ಟಿಗೆ ಇರಬೇಕೆಂಬ ಬಯಕೆ ನನಗಿದೆ ಎನ್ನುವ ಯುವತಿಗೆ ಒಂದು ಸಮಸ್ಯೆ ಇದೆ. ಬಾಯ್ ಫ್ರೆಂಡ್ ಗೆ ವಯಸ್ಸಾಗಿದೆ. ಹಾಗಾಗಿ ಆತನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಒಂದು ಸಮಯದ ನಂತ್ರ ಆತನ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳಬೇಕು. ಇದು ನನ್ನಿಂದ ಸಾಧ್ಯವೇ ಎಂಬುದು ನನ್ನ ಈಗಿನ ಗೊಂದಲ ಎನ್ನುತ್ತಾಳೆ ಆಕೆ.
Relationship Tips: ಸಂಗಾತಿಗೆ ಇಂಥಾ ಸಮಯದಲ್ಲಿ ಅಪ್ಪಿತಪ್ಪಿಯೂ ಟೆಕ್ಸ್ಟ್ ಮಾಡ್ಬೇಡಿ
ವೆಬ್ಸೈಟ್ ಒಂದರಲ್ಲಿ ಮಾತನಾಡಿವ ಮಹಿಳೆ, ಬಾಯ್ ಫ್ರೆಂಡ್ (Boy Friend) ತಾಯಿ, ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರಂತೆ. ಈ ಸಮಸ್ಯೆ ಮಗನಿಗೆ ಕಾಡುವ ಸಾಧ್ಯತೆಯಿದೆ. ತಂದೆಗೆ ನೆನಪಿನ ಶಕ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿರಲಿಲ್ಲ. ಸ್ಟ್ರೋಕ್ ಕಾಡಿತ್ತು. ಒಂದು ವಯಸ್ಸಿನಲ್ಲಿ ನನ್ನ ಬಾಯ್ ಫ್ರೆಂಡ್ ಸೇವೆ ಮಾಡುವುದು ನನಗೆ ಅನಿವಾರ್ಯವಾಗುತ್ತೆ. ಕೆಲಸ, ವೈಯಕ್ತಿಕ ಜೀವನದ ಜೊತೆ ಆತನನ್ನು ಕೂಡ ನೋಡಿಕೊಳ್ಳಬೇಕಾಗುತ್ತದೆ ಎನ್ನುತ್ತಾಳೆ ಯುವತಿ. ಯುವತಿಯ ಈ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಆತನನ್ನು ಮದುವೆಯಾಗದೆ ಇರೋದು ಬೆಸ್ಟ್ ಎನ್ನುತ್ತಾರೆ ಕೆಲವರು. ನೀನು ಪತ್ನಿ ಬದಲು ನರ್ಸ್ ರೀತಿ ಜೀವನ ನಡೆಸಬೇಕಾಗುತ್ತದೆ ಎನ್ನುತ್ತಾರೆ ಕೆಲವರು. ಮತ್ತೆ ಕೆಲವರು ಯೋಗ್ಯ ವ್ಯಕ್ತಿಯನ್ನು ಹುಡುಕಿಕೊಳ್ಳುವಂತೆ ಸಲಹೆ ನೀಡ್ತಿದ್ದಾರೆ. ಇಡೀ ಜೀವನ ಕಷ್ಟದಲ್ಲಿ ಕೈತೊಳೆಯುವ ಜೊತೆಗೆ ಒತ್ತಡದಲ್ಲಿ ಜೀವನ ಸಾಗಿಸಬೇಕಾಗುತ್ತದೆ ಎನ್ನುತ್ತಾಳೆ ಜನರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.