Live-in Relationship: ಲಿವ್ ಇನ್ ಎಷ್ಟು ಸುರಕ್ಷಿತ? ಸಂಬಂಧದಲ್ಲಿರೋ ಮುನ್ನ ಹಕ್ಕುಗಳ ಬಗ್ಗೆ ತಿಳ್ಕೊಳಿ
ಲಿವ್ ಇನ್ ಸಂಬಂಧಕ್ಕೆ ಸಮಾಜದಲ್ಲಿ ಮಾನ್ಯತೆ ಇಲ್ಲವಾದರೂ ಆಧುನಿಕ ಯುವಜನತೆ ಇದನ್ನು ಒಪ್ಪಿಕೊಂಡಿದೆ. ದೊಡ್ಡ ನಗರಗಳಲ್ಲಿ ಹುಡುಗ-ಹುಡುಗಿ ಒಟ್ಟಾಗಿ ಕೇವಲ ನಂಬಿಕೆಯ ಆಧಾರದ ಮೇಲೆ ಬದುಕುವುದು ಕಂಡುಬರುತ್ತಿದೆ. ಈ ಸಂಬಂಧಕ್ಕೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿದೆಯಾದರೂ ಎಚ್ಚರಿಕೆ ಅತ್ಯಗತ್ಯ. ಈ ಸಂಬಂಧದಲ್ಲಿ ಕಾನೂನು ಲಭ್ಯ ಮಾಡಿದ ಹಕ್ಕುಗಳನ್ನೂ ತಿಳಿದುಕೊಳ್ಳುವುದು ಅಗತ್ಯ.
“ಲಿವ್ ಇನ್ ರಿಲೇಷನ್’ ನಮ್ಮ ದೇಶದ ನಗರಗಳಲ್ಲಿ ಹೆಚ್ಚುತ್ತಿರುವ ದೊಡ್ಡ ಟ್ರೆಂಡ್. ಸುಪ್ರೀಂ ಕೋರ್ಟ್ ನಿಂದ ಈ ಸಂಬಂಧಕ್ಕೆ ಮಾನ್ಯತೆ ದೊರೆತ ಬಳಿಕವಂತೂ ಲಿವ್ ಇನ್ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚುತ್ತಿದೆ ಎನ್ನಲಾಗಿದೆ. ನಮ್ಮ ಸಮಾಜ ಮದುವೆಗೂ ಮುನ್ನ ಗಂಡು-ಹೆಣ್ಣು ಒಟ್ಟಿಗೆ ಬದುಕುವುದನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತದೆಯಾದರೂ ಇಂದಿನ ಆಧುನಿಕ ಯುವಜನತೆ ಯಾವುದೇ ಎಗ್ಗಿಲ್ಲದೆ ಈ ಸಂಬಂಧವನ್ನು ಒಪ್ಪಿಕೊಂಡಿದೆ. ಇತ್ತೀಚೆಗೆ ದೆಹಲಿಯಲ್ಲಿ ಶ್ರದ್ಧಾ ವಾಲ್ಕರ್ ಹತ್ಯಾಕಾಂಡದ ಬಳಿಕವಂತೂ ಡೇಟಿಂಗ್ ಆಪ್ ಗಳ ಬಗ್ಗೆ ಹೆಚ್ಚಿನ ಪ್ರಚಾರ ದೊರೆತಿರುವುದು ನಿಜವಾದ ಸಂಗತಿ. ಆದರೆ, ಈ ದುರಂತ ಘಟನೆ ಲಿವ್ ಇನ್ ಸಂಬಂಧದ ಬಗ್ಗೆ ಮರುವಿಮರ್ಶೆ ಮಾಡುವಂತೆ ಪ್ರೇರಣೆ ನೀಡಿರುವುದೂ ಸುಳ್ಳಲ್ಲ. ಲಿವ್ ಇನ್ ಸಂಬಂಧ ಪಾಶ್ಚಿಮಾತ್ಯ ದೇಶಗಳಿಂದ ಬಂದಿರುವ ಪದ್ಧತಿ. ಅಲ್ಲಿ ಇದು ಅತಿ ಸಾಮಾನ್ಯ. ನಮ್ಮ ದೇಶದ ಸುಪ್ರೀಂ ಕೋರ್ಟ್ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿರಿಸಿ ಕೆಲ ಸಮಯದ ಹಿಂದೆ ಲಿವ್ ಇನ್ ಸಂಬಂಧಕ್ಕೂ ಮಾನ್ಯತೆ ನೀಡಿದೆ. ಏಕೆಂದರೆ. ಲಿವ್ ಇನ್ ಸಂಬಂಧದ ಬಳಿಕ ಮಹಿಳೆ ಸಂತ್ರಸ್ತಳಾಗದಂತಿರಲು ಈ ಕ್ರಮ ಕೈಗೊಳ್ಳಲಾಗಿದೆ. ಇಂದು ದೊಡ್ಡ ನಗರಗಳಲ್ಲಿ ಲಿವ್ ಇನ್ ಸಂಬಂಧ ಅತ್ಯಂತ ಸಹಜವೆಂಬಂತೆ ಬೆಳೆಯುತ್ತಿದೆ.
ಇಬ್ಬರು ವಯಸ್ಕ (Adult) ವ್ಯಕ್ತಿಗಳು ಮದುವೆಯಾಗದೆಯೂ (Marriage) ಒಟ್ಟಿಗೆ ಇರಲು ಬಯಸಿದರೆ ಅದು ಕಾನೂನು (Law) ಪ್ರಕಾರ ತಪ್ಪಲ್ಲ. ಕಾನೂನು ಇವರನ್ನು ಮದುವೆ ಆದ ಜೋಡಿಗಳಂತೆಯೇ ಪರಿಗಣಿಸುತ್ತದೆ. ಆದರೆ, ಇದಕ್ಕೆ ಕೆಲವು ನಿಯಮಗಳು ಅನ್ವಯ. ಕೋರ್ಟ್ (Court) ನಿಯಮಕ್ಕೆ ಅನುಗುಣವಾಗಿ ಲಿವ್ ಇನ್ (Live-in) ನಲ್ಲಿ ಇರುವುದಾದರೂ ಅದೆಷ್ಟು ಸುರಕ್ಷಿತ (Safe)?
ನೀವು ಪ್ರೀತಿಸ್ತಿರೋ ಹುಡುಗ ಒಳ್ಳೆವ್ನಾ ಅನ್ನೋದು ಕಂಡುಹಿಡಿಯೋದೇಗೆ?
ಸುಪ್ರೀಂ ಕೋರ್ಟ್ ಏನು ಹೇಳಿದೆ?: ಅಸಲಿಗೆ, ಲಿವ್ ಇನ್ ಬಗ್ಗೆ ದೇಶದಲ್ಲಿ ಯಾವುದೇ ಕಾನೂನು ರೂಪುಗೊಂಡಿಲ್ಲ. ವರ್ಷಗಟ್ಟಲೆ ಲಿವ್ ಇನ್ ಸಂಬಂಧದಲ್ಲಿದ್ದ ಮಹಿಳೆಯರನ್ನು ಆಕೆಯ ಸಂಗಾತಿ (Partner) ಇದ್ದಕ್ಕಿದ್ದ ಹಾಗೆ ಮನೆಯಿಂದ ಆಚೆ ಕಳಿಸಿದ ಘಟನೆಗಳು ಸಾಕಷ್ಟು ನಡೆದಿವೆ. ಆಗ ಆ ಮಹಿಳೆಯರಿಗೆ (Woman) ಹಣಕಾಸು ಬೆಂಬಲ (Financial Support) ಸೇರಿದಂತೆ ಯಾವುದೇ ಬೆಂಬಲ ದೊರೆಯುತ್ತಿರಲಿಲ್ಲ. ಹಣಕಾಸು ನೆರವು ಕೋರಲು ಹಕ್ಕುದಾರಳೂ ಆಗಿರುವುದಿಲ್ಲ ಎನ್ನುವ ಭಾವನೆಯನ್ನು ತಪ್ಪಿಸಲು ಹಾಗೂ ಮಹಿಳೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲವು ನಿಯಮಗಳನ್ನು ರೂಪಿಸಲಾಗಿದೆ.
- ಹುಡುಗ-ಹುಡುಗ ಇಬ್ಬರೂ ವಯಸ್ಕರಾಗಿರಬೇಕು. ಯಾರಾದರೂ ಅಪ್ರಾಪ್ತರಾಗಿದ್ದರೆ ಆ ಸಂಬಂಧಕ್ಕೆ ಮಾನ್ಯತೆ ಇಲ್ಲ.
- ಲಿವ್ ಇನ್ ಗೆ ಯಾವಾಗ ಮಾನ್ಯತೆ (Recognition) ಇದೆ ಎಂದರೆ, ಅವರು ಪತಿ-ಪತ್ನಿಯರ (Husband-Wife) ಹಾಗೆ ಜತೆಯಾಗಿ ಬದುಕುತ್ತಿರಬೇಕು. ಸಮಯದ ಮಿತಿ ಇಲ್ಲವಾದರೂ ಜತೆಯಾಗಿದ್ದು ದೂರವಾಗಿರುವವರಿಗೆ ಅನ್ವಯವಾಗುವುದಿಲ್ಲ.
- ಲಿವ್ ಇನ್ ಸಂಬಂಧದಲ್ಲಿರುವ ಮಹಿಳೆಗೆ ಪತ್ನಿಯ ಹಾಗೆ ಸಂಗಾತಿಯಿಂದ ಉದರ ಪೋಷಣೆಯ ಜವಾಬ್ದಾರಿ ಹೊರಬೇಕೆಂದು ಕೇಳುವ ಹಕ್ಕಿದೆ. ಲಿವ್ ಇನ್ ಸಂಬಂಧದಲ್ಲಿದ್ದು ಸಂಗಾತಿ ದೂರ ಮಾಡಿದ ಸಮಯದಲ್ಲೂ ಈ ಅಧಿಕಾರ (Right) ಹೋಗುವುದಿಲ್ಲ.
- ಲಿವ್ ಇನ್ ನಲ್ಲಿ ಜನಿಸಿದ ಮಕ್ಕಳಿಗೆ (Children) ತಾಯಿ-ತಂದೆಯರ ಆಸ್ತಿಯಲ್ಲಿ ಅಧಿಕಾರವಿದೆ.
- ಪರಸ್ಪರ ಮೋಸ (Cheat) ಮಾಡುವುದು ಅಪರಾಧ. ಮಹಿಳೆಗೆ ಕೌಟುಂಬಿಕ ದೌರ್ಜನ್ಯದ (Domestic Violence) ವಿರುದ್ಧ ರಕ್ಷಣೆಯಿದೆ.
Live-In Relationships: ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದೀರಾ? ಹಾಗಿದ್ರೆ ಈ ವಿಷ್ಯಗಳು ತಿಳಿದಿರಲಿ
ಎಚ್ಚರಿಕೆ ಇರಲಿ: ಲಿವ್ ಇನ್ ಸಂಬಂಧಕ್ಕೆ ಮುಂದಾಗುವುದು ಜೀವನದ ಅತಿ ದೊಡ್ಡ ನಿರ್ಣಯ. ರಕ್ಷಣೆಗೆ ಎಂತಹ ಕಾನೂನಿದ್ದರೂ ವ್ಯಕ್ತಿಗತ ಬದುಕನ್ನು ಜೀವಿಸಬೇಕಾದವರು ನಾವೇ ಎನ್ನುವ ಕಾಳಜಿ ಬೇಕು. ಏಕೆಂದರೆ, ಸಮಾಜದಲ್ಲಿ ಇದು ಸ್ವೀಕಾರಾರ್ಹ ಸಂಬಂಧವಲ್ಲ. ಪರಸ್ಪರ ನಂಬಿಕೆ (Faith) ಇದ್ದರೂ ಅದು ಕ್ಷಣಿಕವಾಗಿರಬಹುದು. ದೀರ್ಘಾವಧಿ ಜೀವಿತದ ಬಗ್ಗೆ ಯೋಚಿಸಿ. ಪತಿ-ಪತ್ನಿಯರ ಹಾಗೆ ಗೌರವಪೂರ್ಣವಾದ (Respectful) ಬದುಕು ಸಾಧ್ಯವೇ ಎಂದು ನೋಡಿಕೊಳ್ಳಿ. ಸಂಗಾತಿಗಳ ನಡುವೆ ಜಗಳ-ಮುನಿಸು ಸಾಮಾನ್ಯ. ಆದರೆ, ಹಿಂಸಾತ್ಮಕ (Violent) ಧೋರಣೆಯ, ಕಠೋರ ವರ್ತನೆಯ ಸಂಗಾತಿಯೊಂದಿಗೆ ಯಾವುದೇ ಕಾರಣಕ್ಕೂ ಇರಬೇಡಿ.