ಕೆಲವರು ಚೆನ್ನಾಗಿ ಮಾತನಾಡುತ್ತಾರೆ, ಆದರೆ ಹೆಚ್ಚು ಮಾತನಾಡುವುದಿಲ್ಲ. ಜನರೊಂದಿಗೆ ಒಡನಾಡುವುದೆಂದರೆ ಇಷ್ಟ, ಹಾಗೆಯೇ ಏಕಾಂಗಿಯಾಗಿದ್ದುಕೊಂಡು ರಿಚಾರ್ಜ್ ಆಗುತ್ತಾರೆ. ಸಾಕಷ್ಟು ಜನರ ಪರಿಚಯ ಹೊಂದಿರುತ್ತಾರೆ, ಆದರೆ ಕೆಲವೇ ಕೆಲವರೊಂದಿಗೆ ಆತ್ಮೀಯವಾಗಿರುತ್ತಾರೆ. ಇವರು ಅಂತರ್ಮುಖಿಗಳೂ ಅಲ್ಲ, ಬಹಿರ್ಮುಖಿಗಳೂ ಅಲ್ಲ. ಇವರನ್ನು ಉಭಯಮುಖಿಗಳು ಎನ್ನಬಹುದು.
ನಿಮ್ಮೆಲ್ಲ ಭಾವನೆಗಳನ್ನು ಸ್ನೇಹಿತರ ಬಳಿ ಹೇಳಿಕೊಂಡು ಹಗುರವಾಗುವುದು ನಿಮ್ಮ ಸ್ವಭಾವವೋ ಅಥವಾ ಏನನ್ನೂ ಹೇಳಿಕೊಳ್ಳದೆ ಮುಗುಮ್ಮಾಗಿ ಇದ್ದುಬಿಡುವುದು ನಿಮಗಿಷ್ಟವೋ? ಭಾವನೆಗಳನ್ನು ಹಂಚಿಕೊಳ್ಳುವುದು ನಿಮಗೆ ಇಷ್ಟವಾಗುವುದೋ ಅಥವಾ ಯಾರಲ್ಲೂ ಹಂಚಿಕೊಳ್ಳದೆ ನೋವಾಗಲೀ, ಖುಷಿಯಾಗಲೀ ನಿಮ್ಮೊಳಗೇ ಅವುಗಳನ್ನು ಅನುಭವಿಸುವುದು ನಿಮಗಿಷ್ಟವೋ? ಇದರಲ್ಲಿ ಯಾವ ಗುಣ ನಿಮ್ಮದು ಎನ್ನುವುದರ ಆಧಾರದ ಮೇಲೆ ನೀವು ಅಂತರ್ಮುಖಿಯೋ, ಬಹಿರ್ಮುಖಿಯೋ ಎನ್ನುವುದನ್ನು ನಿರ್ಧರಿಸಬಹುದು. ಇವೆರಡರಲ್ಲಿ ಯಾವುದೋ ಒಂದು ಗುಣ ಒಳ್ಳೆಯದು, ಮತ್ತೊಂದು ಕೆಟ್ಟದ್ದು ಎನ್ನುವುದೇನೂ ಇಲ್ಲ. ಎರಡರಲ್ಲೂ ಕೊರತೆಯಿದೆ, ಎರಡರಲ್ಲೂ ಒಳ್ಳೆಯದಿದೆ. ಆದರೆ, ಈ ಎರಡೂ ಕೆಟಗರಿಗೆ ಸೇರದ ಮಧ್ಯಮ ಮಾರ್ಗಿಗಳೂ ಆಗಿದ್ದಿರಬಹುದು. ಇವರನ್ನು ಉಭಯಮುಖಿ ಅಥವಾ ಮಧ್ಯಮುಖಿ ಎನ್ನಬಹುದೇನೋ. ಇದನ್ನು ಆಂಬಿವರ್ಟ್ ಎಂದು ಹೇಳಲಾಗುತ್ತದೆ. ಇದು ಇಂಟ್ರಾವರ್ಟೂ ಅಲ್ಲದ, ಎಕ್ಸ್ಟ್ರಾವರ್ಟೂ ಅಲ್ಲದ ಮಾರ್ಗ. ಅಂದರೆ, ನೀವು ಕೆಲವೊಮ್ಮೆ ಅಂತರ್ಮುಖಿಯೂ ಆಗುತ್ತೀರಿ, ಕೆಲವೊಮ್ಮೆ ಬಹಿರ್ಮುಖಿಯೂ ಆಗಬಲ್ಲಿರಿ. ಯಾವಾಗಲಾದರೂ ಒಬ್ಬರೇ ಇರುವುದು ಹಿತ ನೀಡಿದರೆ ಮತ್ತೊಮ್ಮೆ ಜನರ ಒಡನಾಟ ಬೇಕು ಎಂದು ಬಯಸುತ್ತೀರಿ. ನಿಮ್ಮದು ಇದೇ ಗುಣವಾಗಿದ್ದರೆ ಇನ್ನೂ ಕೆಲವು ಲಕ್ಷಣಗಳನ್ನು ಹೊಂದಿರುತ್ತೀರಿ. ಅವುಗಳ ಮೂಲಕ ನೀವು ಯಾವ ಮಾರ್ಗಿಗಳು ಎನ್ನುವುದನ್ನು ಕಂಡುಕೊಳ್ಳಬಹುದು.
ಅಂದಹಾಗೆ, ಆಂಬಿವರ್ಟ್ ಎನ್ನುವ ಶಬ್ದ ಇತ್ತೀಚಿನದ್ದಲ್ಲ. 1923ರಷ್ಟು ಹಿಂದೆಯೇ ಎಡ್ಮಂಡ್ ಸ್ಮಿತ್ ಕಾಂಕ್ಲಿನ್ ಎನ್ನುವವರು ಈ ಶಬ್ದವನ್ನು ಪರಿಚಯಿಸಿ, ಅಂತರ್ಮುಖತೆ, ಬಹಿರ್ಮುಖತೆಯ ಎರಡೂ ಗುಣವನ್ನು ಅಳವಡಿಸಿಕೊಂಡು ಸಮತೋಲಿತ ಸ್ವಭಾವ ಹೊಂದಿರುವವರನ್ನು ಆಂಬಿವರ್ಟ್ ಎಂದು ಕರೆದಿದ್ದರು.
• ಜನರ ಒಡನಾಟ (Interaction) ನಿಮಗಿಷ್ಟ/ ಇಷ್ಟವೂ ಅಲ್ಲ!
ಅಂತರ್ಮುಖ (Introvert) ಗುಣವುಳ್ಳವರು ಜನರೊಂದಿಗೆ ದೀರ್ಘ ಸಮಯ (Long Time) ಒಡನಾಡುತ್ತಿದ್ದರೆ ಭಾರೀ ಹಿಂಸೆ ಅನುಭವಿಸುತ್ತಾರೆ. ಜಂಗುಳಿಯಿಂದ (Crowd) ಎದ್ದು ಹೋಗಿ ಒಬ್ಬರೇ ಇದ್ದುಬಿಡೋಣ ಎಂದು ಅವರಿಗೆ ಎನಿಸುತ್ತದೆ. ಆದರೆ, ಬಹಿರ್ಮುಖಿಗಳಿಗೆ (Extrovert) ಯಾವಾಗಲೂ ಜನ (People) ಬೇಕು. ಆದರೆ, ನಿಮಗೆ ಕೆಲವೊಮ್ಮೆ ಜನರ ಸಹವಾಸ ಬೇಕು ಎನಿಸುತ್ತದೆ. ಹಾಗೆಯೇ ಕೆಲವೊಮ್ಮೆ ಒಬ್ಬರೇ ಇರುವ ಬಯಕೆಯೂ ಆಗುತ್ತದೆ. ಕೆಲವೊಮ್ಮೆ ಜನರೊಂದಿಗೆ ಇರುವಾಗ ಖುಷಿಯಾಗಿದ್ದರೆ, ಮತ್ತೊಮ್ಮೆ ಏಕಾಂಗಿತನದಲ್ಲೂ ಸಂತಸ ಕಾಣುತ್ತೀರಿ.
Personality Tips: ನೀವು ಇಂಟ್ಯೂಷನ್ ಹೊಂದಿದ್ದೀರಾ? ನಿಮಗೂ ಹೀಗೆಲ್ಲ ಆಗುತ್ತಾ?
• ಅತಿಯಾದ ಏಕಾಂಗಿತನದಿಂದ (Solitude) ದೂರ
ಕೆಲವೊಮ್ಮೆ ಅತಿಯಾಗಿ ಏಕಾಂಗಿಯಾಗಿದ್ದರೆ ಬೋರೆನಿಸುವುದು ಸಹಜ. ನಿರ್ದಿಷ್ಟ ಜನರೊಂದಿಗೆ ಒಡನಾಟ ಬೇಕು ಎನಿಸುವುದು, ನಿಮ್ಮದೇ ಆದ ಕಂಪೆನಿಯಲ್ಲಿ ಖುಷಿ ಕಾಣುವ ಆಸೆಯಾಗುವುದು, ಜನರೊಂದಿಗೆ ನಿಯಮಿತವಾದ ಒಡನಾಟದಲ್ಲಿರುವ ಸಮತೋಲನದ (Balanced) ಗುಣ ಖಂಡಿತವಾಗಿ ಆಂಬಿವರ್ಟ್ (Ambivert) ಗಳ ಲಕ್ಷಣ.
• ಲೀಡರ್ (Leader), ಫಾಲೋವರ್ (Follower) ಎರಡೂ ಆಗಬಲ್ಲಿರಿ
ಅಗತ್ಯದ ಸಂದರ್ಭಗಳಲ್ಲಿ (Situation) ಯಾವುದಾದರೂ ಕಾರ್ಯದ ನೇತೃತ್ವ ವಹಿಸಲು ನಿಮಗೆ ಭಯ (Fear)ವಾಗುವುದಿಲ್ಲ, ಹಿಂಜರಿಕೆಯೂ ಇರುವುದಿಲ್ಲ. ಸೂಕ್ತವಾಗಿ ನಿಭಾಯಿಸಬಲ್ಲಿರಿ. ಹಾಗೆಯೇ, ಸರಿಯಾದ ನೇತೃತ್ವ ಇರುವಾದ ನಿಶ್ಚಿಂತೆಯಿಂದ ಅವರನ್ನು ಅನುಸರಿಸಬಲ್ಲಿರಿ. ನಾಯಕತ್ವದ ಪಟ್ಟಕ್ಕೇ ಜೋತು ಬೀಳುವವರು ನೀವಲ್ಲ. ಈ ಗುಣ ನಿಮ್ಮಲ್ಲಿದ್ದರೆ ನೀವು ಉಭಯಮುಖಿ.
• ಗುಂಪಿನ ಕಾರ್ಯಕ್ಕೂ (Group Work) ಓಕೆ, ಒಬ್ಬರೇ (Alone) ಮಾಡಬಲ್ಲಿರಿ
ಅಂತರ್ಮುಖಿಗಳು ಸಾಮಾನ್ಯವಾಗಿ ತಮ್ಮ ಪಾಡಿಗೆ ತಾವಿದ್ದುಕೊಂಡು ಮಾಡುವ ಕೆಲಸಗಳಿಗೆ ಆದ್ಯತೆ (Prefer) ನೀಡುತ್ತಾರೆ. ಬಹಿರ್ಮುಖಿಗಳು ಜನರೊಂದಿಗೆ ಒಟನಾಡುವ ಕೆಲಸಕ್ಕೆ ಬೇಸರ (Bore) ಮಾಡಿಕೊಳ್ಳುವುದೇ ಇಲ್ಲ. ಆದರೆ, ನೀವು ಎರಡೂ ರೀತಿಯ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲಿರಿ. ಗುಂಪಿನಲ್ಲಿ ಹೊಂದಾಣಿಕೆ (Adjust) ಮಾಡಿಕೊಂಡು ಕೆಲಸ ನಿಭಾಯಿಸುವ ನೀವು, ಒಬ್ಬಂಟಿಯಾಗಿದ್ದುಕೊಂಡೂ ಕೆಲಸ ಮಾಡಬಲ್ಲಿರಿ.
Personality Tips: ಜನರನ್ನು ಆಕರ್ಷಿಸಬೇಕು ಅಂದ್ರೆ ನಿಮ್ಮ ವ್ಯಕ್ತಿತ್ವ ಹೀಗಿರಲಿ!
• ಪರಿಚಯಸ್ಥರು (Acquaintance) ಬಹಳ, ಕೆಲವೇ ಆತ್ಮೀಯರು (Close)
ಬಹಿರ್ಮುಖಿಗಳಿಗೆ ಬಹಳಷ್ಟು ಜನ ಸ್ನೇಹಿತರಿರುತ್ತಾರೆ. ಅಂತರ್ಮುಖಿಗಳಿಗೆ ಭಾರೀ ವಿರಳ. ಆದರೆ, ನೀವು ಮಧ್ಯಮಮಾರ್ಗಿಯಾಗಿದ್ದರೆ ಸಾಕಷ್ಟು ಜನ ಉತ್ತಮ ಪರಿಚಯಸ್ಥರಿರುತ್ತಾರೆ. ಅವರೊಂದಿಗೆ ಖುಷಿಯಿಂದ ಒಡನಾಡಬಲ್ಲಿರಿ. ಆದರೆ, ಕೆಲವೇ ಆತ್ಮೀಯ ಸ್ನೇಹಿತರಿರುತ್ತಾರೆ.
• ಮಾತುಗಳ (Talk) ಲೋಕ
ಕೆಲವರು ಮಾತನಾಡುತ್ತಿದ್ದರೆ ನಿಲ್ಲಿಸುವುದೇ ಇಲ್ಲ. ಕೆಲವು ನಿಮಿಷಗಳ ಕಾಲ ನಿರಂತರವಾಗಿ ಮಾತನಾಡುತ್ತಲೇ ಇರುತ್ತಾರೆ. ಆದರೆ, ಕೆಲವರು ಚುಟುಕಾಗಿ (Short) ಮಾತನಾಡಿ ಮುಗಿಸುತ್ತಾರೆ. ನೀವು ಸಮಯ ಸಂದರ್ಭ ನೋಡಿಕೊಂಡು ದೀರ್ಘವಾಗಿ (Small) ಅಥವಾ ಚುಟುಕಾಗಿ ಮಾತನಾಡಬಲ್ಲಿರಿ ಎಂದಾದರೆ ಉಭಯಮುಖಿ ಗುಣ ಹೊಂದಿದ್ದೀರಿ ಎಂದರ್ಥ.