
ಅಕ್ಕನಿಗೆ ಹುಷಾರಿರಲಿಲ್ಲ, ಅಕ್ಕನ ಆರೈಕೆಗೆ ಅಂತ ತಂಗಿ, ಅಕ್ಕನ ಮನೆಗೆ ಹೋಗಿ ಬರ್ತಿದ್ಲು. ಅಕ್ಕನನ್ನು ನೋಡೋ ಬದಲು ಭಾವನನ್ನು ನೋಡಿದ್ದಾಳೆ. ಅಷ್ಟೇ, 55 ವರ್ಷದ ಬಾವನ ನೋಟಕ್ಕೆ ಕ್ಲೀನ್ ಬೋಲ್ಡ್ ಆಗಿದ್ದಾಳೆ. ಮಾತು, ಹರಟೆ ಮಧ್ಯೆ ಇಬ್ಬರೂ ಪ್ರೀತಿಗೆ ಬಿದ್ದಿದ್ದಾರೆ. ಈಗ ಮದುವೆ ಆಗಿ, ಸಮಾಜ ಏನೇ ಅಂದ್ರೂ ಡೋಟ್ ಕೇರ್, ನಮಗೆ ಪ್ರೀತಿ (Love) ಮುಖ್ಯ ಎನ್ನುತ್ತಿದ್ದಾರೆ.
ಈ ಮದುವೆ (marriage) ನಡೆದಿರೋದು ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ. 18 ವರ್ಷದ ಹುಡುಗಿ ತನ್ನ ಅಕ್ಕನ ಗಂಡ, 55 ವರ್ಷದ ಬಾವನನ್ನು ಮದುವೆ ಆಗಿದ್ದಾಳೆ. ಅಕ್ಕನಿಗೆ ಹುಷಾರಿರ್ತಾ ಇರಲಿಲ್ಲ. ಅವಳ ಮನೆಗೆ ಆಗಾಗ ಹೋಗ್ತಾ ಇದ್ದೆ. ಅಕ್ಕನ ಮನೆಯಲ್ಲಿ ಅಡುಗೆ ಮಾಡುವ ಜವಾಬ್ದಾರಿ ನನ್ನದಾಗಿತ್ತು. ಅಲ್ಲಿ ಬಾವ ನನ್ನನ್ನು ಹೆಚ್ಚು ಮಾತನಾಡಿಸಲು ಶುರು ಮಾಡಿದ್ರು. ಇಬ್ಬರೂ ನಿಧಾನವಾಗಿ ಹತ್ತಿರವಾದ್ವಿ. ಇಬ್ಬರೂ ಪ್ರೀತಿಸಲು ಶುರು ಮಾಡಿದ್ವಿ. ಈ ವಿಷ್ಯವನ್ನು ಮನೆಯವರಿಗೆ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದಿದ್ದಾಳೆ ಹುಡುಗಿ. ಗುಲಾಬಿ ಸೀರೆಯುಟ್ಟು ಮಾಧ್ಯಮದ ಮುಂದೆ ಬಂದ ನವವಧು, ಸಮಾಜದ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ ಎಂದಿದ್ದಾಳೆ. ನಮಗೆ ಪ್ರೀತಿ ಮುಖ್ಯ. ಸಮಾಜ ನಮ್ಮ ಬಗ್ಗೆ ಏನೇ ಮಾತನಾಡಿದ್ರೂ ಕೇರ್ ಮಾಡೋದಿಲ್ಲ ಎಂದಿದ್ದಾಳೆ.
Kamal Haasan Birthday: ನನ್ 'ಅದ್ಭುತ ಅಪ್ಪ' ನೆಚ್ಚಿನ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ ಎಂದ ಶ್ರುತಿ ಹಾಸನ್!
ಬಿಳಿ ಕೂದಲು, ಗಡ್ಡ ಬಿಟ್ಟಿರುವ ಬಾವ ಕೂಡ ನಾದಿನಿಯನ್ನು ಸಂಪೂರ್ಣ ಒಪ್ಪಿಕೊಂಡಿದ್ದಾನೆ. ಮದುವೆಗೆ ಇಬ್ಬರ ಸಹಮತ ಇದೆ. ಹುಡುಗಿ ಒತ್ತಾಯಕ್ಕೆ ಅಥವಾ ನನ್ನ ಒತ್ತಾಯಕ್ಕೆ ಈ ಮದುವೆ ನಡೆದಿಲ್ಲ ಎಂದು ಆತ ಹೇಳಿದ್ದಾನೆ. ಮಾಧ್ಯಮದವರು ವೃದ್ಧ ಎನ್ನುತ್ತಿದ್ದಂತೆ ಕೋಪಗೊಂಡ ವ್ಯಕ್ತಿ, ನನಗೆ ನೀವು ವಯಸ್ಸಾದ ವ್ಯಕ್ತಿ ಅಂದ್ರೆ ಬೇಸರವಾಗುತ್ತೆ ಎಂದಿದ್ದಾನೆ. ಆತನ ಮಾತಿಗೆ ಹೊಸ ಹೆಂಡ್ತಿ ಸಾಥ್ ನೀಡಿದ್ದಾಳೆ. ನಗ್ತಾ, ಗಂಡನ ಪರ ವಹಿಸಿದ ನವವಧು, ಬಾವನನ್ನು ನನ್ನ ದೃಷ್ಟಿಯಿಂದ ನೋಡಿದ್ರೆ ಅವರಿಗೆ ವಯಸ್ಸಾಗಿಲ್ಲ. ಕೇಲವ ಕೂದಲು ಬೆಳ್ಳಗಾಗಿದೆ. ಹೇರ್ ಡೈ ಮಾಡಿದ್ರೆ ಕಪ್ಪಾಗುತ್ತೆ. ಹಲ್ಲು ಬೆಳ್ಳಗಾಗುತ್ತೆ. ಅವರು ಸುಂದರವಾಗಿದ್ದಾರೆ, ಬುದ್ಧಿವಂತರು ಅಂತ ಹುಡುಗಿ ಗಂಡನನ್ನು ಹೊಗಳಿದ್ದಾಳೆ.
Relationship Tips: ಡೇಟಿಂಗ್ ಹೋದಾಗ ಈ 3 ಪ್ರಶ್ನೆಗಳನ್ನ ಎಂದಿಗೂ ಕೇಳಬೇಡಿ!
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ :
ಸೋಶಿಯಲ್ ಮೀಡಿಯಾದಲ್ಲಿ ಈ ನವಜೋಡಿಯ ಸುದ್ದಿ ವೈರಲ್ ಆಗಿದೆ. ಜನರು ಕಮೆಂಟ್ ಶುರು ಮಾಡಿದ್ದಾರೆ. ಈ ಪ್ರೀತಿಯನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ. ಪ್ರೀತಿಗೆ ವಯಸ್ಸು ಮುಖ್ಯವಲ್ಲ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋದು ಮುಖ್ಯ ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಂದಿಷ್ಟು ಮಂದಿ ಇದನ್ನು ವಿರೋಧಿಸಿದ್ದಾರೆ. ವಯಸ್ಸಿನ ಅಂತನ ಮುಂದೆ ಸಮಸ್ಯೆ ತರಬಹುದು ಎಂದಿದ್ದಾರೆ. ಬಾವ, ಮುಗ್ದ ಹುಡುಗಿಯ ಬಾಳು ಹಾಳು ಮಾಡಿದ್ದಾನೆ, ಮೊದಲ ಪತ್ನಿಗೆ ಹುಷಾರಿಲ್ಲ,ಹಾಗಾಗಿ ಇನ್ನೊಬ್ಬಳನ್ನು ಬಲೆಗೆ ಬೀಳಿಸಿಕೊಂಡಿದ್ದಾನೆ ಅಂತ ಕಮೆಂಟ್ ಮಾಡಿದ್ದಾರೆ. ಅಕ್ಕ ಏನಾದ್ಲು ಎನ್ನುವ ಪ್ರಶ್ನೆ ಬಳಕೆದಾರರನ್ನು ಕಾಡಿದೆ. ಅಕ್ಕ, ಈ ಮದುವೆ ಒಪ್ಪಿದ್ದಾಳಾ, ಅವಳಿಗೆ ಹುಷಾರಾಗಿದ್ಯಾ ಎಂಬುದನ್ನು ಹುಡುಗಿ ಸ್ಪಷ್ಟಪಡಿಸಿಲ್ಲ. ವಿಡಿಯೋದಲ್ಲಿ ಈ ಜೋಡಿಯ ಮೂಲವನ್ನೂ ಹೇಳಲಾಗಿಲ್ಲ. ಆದ್ರೆ ಅವರ ಭಾಷೆಯನ್ನು ಕೇಳಿ ಇವರು ಉತ್ತರ ಪ್ರದೇಶದವರು ಅಂತ ಅಂದಾಜಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.