
ಉತ್ತರ ಪ್ರದೇಶದ ಕಾನ್ಪುರದಲ್ಲಿ ಪತಿ – ಪತ್ನಿ ಪ್ರೇಮ ಕಥೆ (love story)ಯೊಂದು ಹೃದಯ ಸ್ಪರ್ಶಿಸಿದೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ರೂ ನೆಮ್ಮದಿ ಇಲ್ದೆ ಚಿಕ್ಕ ಚಿಕ್ಕ ವಿಷ್ಯಕ್ಕೆ ಗಲಾಟೆ ಮಾಡ್ಕೊಂಡು ದೂರ ಹೋಗುವ ದಂಪತಿ ಮಧ್ಯೆ ಪತ್ನಿಗೆ ಸರ್ಪ್ರೈಸ್ ನೀಡಲು ಪಾನ್ ಅಂಗಡಿ ಮಾಲೀಕ ಮಾಡಿದ ಕೆಲ್ಸ ಎಲ್ಲರ ಗಮನ ಸೆಳೆದಿದೆ. ಪಾಲ್ ವಾಲಾ ಪತ್ನಿಗೆ ಸರ್ಪ್ರೈಸ್ ನೀಡಲು ಬಯಸಿದ್ದರು. ಹಾಗಾಗಿ 20 ರೂಪಾಯಿ ನಾಣ್ಯ ಸಂಗ್ರಹಿಸಲು ಮುಂದಾಗಿದ್ದಾರೆ. ಗುರಿ ತಲುಪಲು ಯಶಸ್ವಿಯಾದ ಪಾನ್ ವಾಲಾ, 105,800 ರೂಪಾಯಿ ಸಂಗ್ರಹಿಸಿ ತನ್ನ ಪತ್ನಿಗೆ ಸರ್ಪ್ರೈಸ್ ಆಗಿ ಬಂಗಾರದ ಚೈನ್ ಉಡುಗೊರೆಯಾಗಿ ನೀಡಿದ್ದಾರೆ.
ಕಾನ್ಪುರದ ಎಚ್ ಎಎಲ್ ಬಳಿ ಪಾನ್ ಮಾರಾಟ ಮಾಡುವ 22 ವರ್ಷದ ಅಭಿಷೇಕ್ ಮದುವೆ ಒಂದು ವರ್ಷದ ಹಿಂದೆ ನಡೆದಿತ್ತು. ಅಭಿಷೇಕ್ ಫತೇಪುರದ ಜಹಾನಾಬಾದ್ನಲ್ಲಿರುವ ಚಾಂಡಿಪುರ ಗ್ರಾಮದ ನಿವಾಸಿ ರಾಖಿಯನ್ನು ಮದುವೆ ಆಗಿದ್ದಾರೆ. ಸಣ್ಣ ಅಂಗಡಿಯಿಂದಲೇ ಅವರ ಜೀವನ ಸಾಗಬೇಕಾಗಿತ್ತು. ಪತ್ನಿ ಈವರೆಗೂ ಏನನ್ನೂ ಕೇಳಿರಲಿಲ್ಲ. ಆದ್ರೆ ಒಂದು ಚಿನ್ನದ ಚೈನ್ ಬೇಕು ಎನ್ನುವ ಆಸೆಯನ್ನು ಪತ್ನಿ ಹೊಂದಿದ್ದರು. ಅದನ್ನು ಎಂದೂ ಅಭಿಷೇಕ್ ಬಳಿ ಹೇಳಿರಲಿಲ್ಲ. ಪತ್ನಿಗೆ ಬಂಗಾರದ ಚೈನ್ ನೀಡಿ ಸರ್ಪ್ರೈಸ್ ಮಾಡ್ಬೇಕು ಎನ್ನುವ ಆಸೆ ಅಭಿಷೇಕ್ ಗೆ ಇತ್ತು. ಹಾಗಾಗಿ ಕಳೆದ ಒಂದು ವರ್ಷಗಳಿಂದ ನಾಣ್ಯ ಸಂಗ್ರಹಿಸಲು ಶುರು ಮಾಡಿದ್ದರು. 20 ರೂಪಾಯಿ ನಾಣ್ಯವನ್ನು ಸೇವಿಂಗ್ ಡಬ್ಬಕ್ಕೆ ಹಾಕ್ತಾ ಬಂದಿದ್ದರು. ಒಂದು ವರ್ಷದ ನಂತ್ರ ದೊಡ್ಡ ಮೊತ್ತ ಸೇವ್ ಆಗಿದೆ.
ನಾನು ನೀಲಿ ಡ್ರಂ ಆಗಲಾರೆ, ಪತ್ನಿಗಾಗಿ ಮಿಡಿದ ಪತಿಯ ಹೃದಯದಿಂದ ಪೊಲೀಸರು ಕಂಗಾಲು
ನೋಡ್ತಾ ನೋಡ್ತಾ ಅಭಿಷೇಕ್ 1,05,800 ರೂಪಾಯಿ ಸಂಗ್ರಹಿಸಿದ್ದಾರೆ. ಒಟ್ಟೂ 5,290 20 ನಾಣ್ಯ (coin) ಸಂಗ್ರಹವಾಗಿದೆ. ಈ ಎಲ್ಲ ಹಣವನ್ನು ಮೂಟೆಯಲ್ಲಿ ಹಾಕಿ ಬಂಗಾರದಂಗಡಿಗೆ ಬಂದಿದ್ದಾರೆ ಅಭಿಷೇಕ್. 1.20 ಲಕ್ಷ ರೂಪಾಯಿ ಬೆಲೆಯ ಗೋಲ್ಡ್ ಚೈನ್ ಖರೀದಿ ಮಾಡಿದ ಅಭಿಷೇಕ್, ನಾಣ್ಯಗಳನ್ನು ಗೋಲ್ಡ್ ಶಾಪ್ (Gold Shop) ಗೆ ನೀಡಿದ್ದಾರೆ. ಮಗಳ ಜೊತೆ ತವರಿನಲ್ಲಿರುವ ರೇಖಿ, ಕೆಲವೇ ದಿನಗಳಲ್ಲಿ ಅಭಿಷೇಕ್ ಮನೆಗೆ ವಾಪಸ್ ಆಗಲಿದ್ದಾರಂತೆ. ಸ್ಥಳೀಯ ಮಹೇಶ್ ಜ್ಯುವೆಲ್ಲರ್ಸ್ ನಲ್ಲಿ ಅಭಿಷೇಕ್ ಚಿನ್ನ ಖರೀದಿ ಮಾಡಿದ್ದಾರೆ. ಅಭಿಷೇಕ್ ಚಿನ್ನದ ಚೈನ್ ಗೆ ಆರ್ಡರ್ ನೀಡಿದ್ದು, ಹೆಚ್ಚುವರಿಯಾಗಿ 15 ಸಾವಿರವನ್ನು ಕೊನೆಯಲ್ಲಿ ಪಾವತಿಸಬೇಕು ಅಂತ ಜ್ಯುವೆಲರಿ ಮಾಲೀಕರು ಹೇಳಿದ್ದಾರೆ.
23 ವರ್ಷಗಳಲ್ಲಿ ಭಾರತದ ಶೇ.1ರಷ್ಟು ಶ್ರೀಮಂತರ ಆಸ್ತಿ ಶೇ.62ರಷ್ಟು ಹೆಚ್ಚಳ
ಪ್ರೀತಿಯೇ ಸಣ್ಣ ಉಳಿತಾಯ (Savings)ಕ್ಕೆ ಕಾರಣವಾಯ್ತು :
ಅಭಿಷೇಕ್ ಪತ್ನಿ ಆಸೆಯನ್ನು ನಿರ್ಲಕ್ಷ್ಯ ಮಾಡಿ, ಬಂದ ಹಣವನ್ನೆಲ್ಲ ನಿತ್ಯದ ಬಳಕೆಗೆ ಖರ್ಚು ಮಾಡಿದ್ರೆ ಇಷ್ಟೊಂದು ಹಣ ಸೇವ್ ಆಗ್ತಿರಲಿಲ್ಲ. ಪಿಗ್ಗಿ ಬ್ಯಾಂಕ್ ನಲ್ಲಿ ಪ್ರತಿ ದಿನ 20 ರೂಪಾಯಿ ನಾಣ್ಯ ಹಾಕ್ತಾ ಬಂದ ಅಭಿಷೇಕ್ ಕೂಡ, ಸಣ್ಣ ಉಳಿತಾಯದಿಂದ ಗೋಲ್ಡ್ ಚೈನ್ (Gold Chain) ಖರೀದಿ ಮಾಡ್ಬಹುದು ಅಂತ ಊಹಿಸಿರಲಿಲ್ಲ. ಅಭಿಷೇಕ್ ಜೀವನ ಅನೇಕರಿಗೆ ಪಾಠವಾಗಬೇಕಿದೆ. ದಿನಕ್ಕೆ 10 -20 ರೂಪಾಯಿ ಉಳಿತಾಯ ಮಾಡಿದ್ರೂ ಮುಂದೆ ಆಪತ್ತಿನ ಸಮಯದಲ್ಲಿ ಅದು ಸಹಾಯಕ್ಕೆ ಬರಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.