
ಮೀರತ್ (ನ.03) ಮದುವೆಯಾಗಿ 15 ವರ್ಷಗಳಾಗಿದೆ. ಮೂರು ಮಕ್ಕಳಿದ್ದಾರೆ. ಈಗಲೂ ಪತ್ನಿ ಮೇಲೆ ಅದೇ ಪ್ರೀತಿ, ಕಾಳಜಿ. ಸಂಸಾರ ಹೆಚ್ಚಿನ ಸಮಸ್ಯೆಗಳಿಲ್ಲದ ಸಾಗುತ್ತಿದೆ. ಇದರ ನಡುವೆ ಈತ ಏಕಾಏಕಿ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪತ್ನಿಗಾಗಿ ಮಿಡಿಯುತ್ತಿರುವ ಈ ಪತಿ ವಿಶೇಷ ಮನವಿಯೊಂದನ್ನು ಪೊಲೀಸರ ಮುಂದೆ ಇಟ್ಟಿದ್ದಾನೆ. ಈತನ ಮನವಿ ಓದಿದ ಪೊಲೀಸರು, ನೋಡೋಣ ಎಂದು ತಿಪ್ಪೆ ಸಾರುವ ಉತ್ತರ ಹೇಳುವಂತಿಲ್ಲ. ಕಾರಣ ಈತ ಮೊದಲೇ ತಾನು ನೀಲಿ ಡ್ರಂ ಆಗಲಾರೆ ಎಂದಿದ್ದಾನೆ. ನಿರ್ಲಕ್ಷಿಸಿದ್ದರೆ ಪೊಲೀಸರ ಕುತ್ತಿಗೆಗೆ ಬರಲಿದೆ, ಮನವಿಯಂತೆ ಕಾರ್ಯನಿರ್ವಹಿಸಬೇಕಾ, ಅಥವಾ ಮನವಿ ಫೈಲ್‌ನಲ್ಲಿ ಇಡಬೇಕಾ ಏನೂ ತಿಳಿಯದೇ ಪೊಲೀಸರು ಕಂಗಾಲಾದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಈತನ ವಯಸ್ಸು 38. ಬೇಗನ ಮದುವೆಯಾಗಿದ್ದಾನೆ. ಮೂವರು ಮಕ್ಕಳಿದ್ದಾರೆ. 13 ವರ್ಷದ ಮಗಳು, 11 ವರ್ಷದ ಮಗ ಹಾಗೂ 5 ವರ್ಷದ ಮಗಳು. ಸಂಸಾರ ಉತ್ತಮವಾಗಿ ಸಾಗಿತ್ತು. ಸಂಭ್ರಮ, ಖುಷಿಗೆ ಕಡಿಮೆ ಇರಲಿಲ್ಲ. ಇದೀಗ ತನ್ನ ಪತ್ನಿಗಾಗಿ ವಿಶೇಷ ಮನವಿಯೊಂದಿಗೆ ಪೊಲೀಸ್ ಠಾಣೆ ಮೆಟ್ಟೇಲೇರಿದ್ದಾನೆ. ತನ್ನ ಪತ್ನಿಗೆ ಅದೇ ಊರಿನ ಯುವಕನ ಜೊತೆಗೆ ಪ್ರೀತಿ. ಅವರ ಪ್ರೀತಿ ಗಾಢವಾಗಿದೆ. ಇವರಿಬ್ಬರ ಪ್ರೀತಿ ವಿಚಾರ ಈತನಿಗೆ ತಿಳಿದಿದೆ. ಹದಯ, ಮನಸ್ಸು ಒಡೆದು ಹೋಗಿದೆ. ಆದರೆ ಮನಸ್ಸು ಗಟ್ಟಿಮಾಡಿಕೊಂಡು ಇದೀಗ ಈ ಪತಿರಾಯ, ಪೊಲೀಸರ ಬಳಿ ಬಂದು, ನನ್ನ ಪತ್ನಿಗೂ ಹಾಗೂ ಗ್ರಾಮದ ಯುವಕನಿಗೂ ಮದುವೆ ಮಾಡಿಸಲು ಪೊಲೀಸರ ಬಳಿ ಕೇಳಿಕೊಂಡಿದ್ದಾನೆ. ಮೌಲ್ವಿಗಳು ಮದುವೆ ಮಾಡಿಸಲು ಒಪ್ಪುತ್ತಿಲ್ಲ. ನೀವು ಈ ಪ್ರಕರಣ ಸುಖಾಂತ್ಯ ಮಾಡಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾನೆ.
ಯುವಕ, ಈತನ ಪತ್ನಿ, ಮನೆಯವರು ಎಲ್ಲರೂ ಒಪ್ಪಿದ್ದಾರೆ.ಹೀಗಿರುವಾಗ ಪೊಲೀಸರ ಬಳಿ ಮನವಿ ಮಾಡಿದ್ದೇಕೆ ಅನ್ನೋ ಪ್ರಶ್ನೆ ಕಾಡುವುದು ಸಹಜ. ಇದಕ್ಕೆ ಮುಖ್ಯ ಕಾರಣ ನೀಲಿ ಡ್ರಂ. ಈ ಘಟನೆಯನ್ನೂ ಮೀರತ್ ಪೊಲೀಸರಿಗೆ ಹೇಳಿದ್ದಾನೆ. ಇದೇ ಕಾರಣದಿಂದ ಪೊಲೀಸರು ಕಂಗಾಲಾಗಿದ್ದಾರೆ. ಇತ್ತೀಚೆಗೆ ಮೀರತ್‌ನಲ್ಲಿ ಒಂದು ಘಟನೆ ನಡೆದಿತ್ತು. ಪತ್ನಿಗೆ ಬೇರೊಬ್ಬನ ಜೊತೆ ಪ್ರೀತಿ. ಪತಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಗಲಾಟೆ ಶುರುವಾಗಿದೆ. ಈ ವೇಳೆ ಪತ್ನಿ ತನ್ನ ಲವರ್ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದಳು. ಇಷ್ಟೇ ಅಲ್ಲ ಪತಿಯ ಮೃತದೇಹವನ್ನು ನೀಲಿನ ಡ್ರಂನಲ್ಲಿ ಬಚ್ಚಿಟ್ಟಿದ್ದಳು. ಈ ಘಟನೆ ನನೆನಪಿಸಿ ನಾನು ನೀಲಿ ಡ್ರಂ ಆಗಲಾರೆ. ನನ್ನ ಮಕ್ಕಳಿಗಾಗಿ ನಾನು ಬದುಕಬೇಕು. ಅವರಿಗೆ ಉತ್ತಮ ಜೀವನ ಕಲ್ಪಿಸಬೇಕು. ಇದಕ್ಕಾಗಿ ಪೊಲೀಸರು ಮುಂದೆ ನಿಂತು ಎಲ್ಲವೂ ಸುಖಾಂತ್ಯಗೊಳಿಸಬೇಕು ಎಂದು ಮನವಿ ಮಾಡಿದ್ದಾನೆ.
6 ತಿಂಗಳ ಹಿಂದೆ ಪತ್ನಿಯ ಪ್ರೀತಿ ವಿಚಾರ ಗೊತ್ತಾಯಿತು. ಗ್ರಾಮದ ಯುವಕ ಮನೆಗೆ ಕೆಲಸಕ್ಕೆ ಬಂದಿದ್ದ. ಅಲ್ಲಿಂದ ಇವರ ಪರಿಚಯ, ಸ್ನೇಹ, ಪ್ರೀತಿಯಾಗಿ ಬೆಳೆದಿತ್ತು. ಮಕ್ಕಳೂ ತಾಯಿ ಇಚ್ಚೆಯಂತೆ ಇರಲಿ ಎಂದಿದ್ದಾರೆ. ಕುಟುಂಬಸ್ಥರು ಪ್ರಿಯಕರನ ಜೊತೆಗೆ ಬಿಟ್ಟುಬಿಡಲು ಸೂಚಿಸಿದ್ದಾರೆ. ಮಕ್ಕಳ ಮುಖ ನೋಡಿ ಮನಸ್ಸು ಬದಲಿಸುವಂತೆ ಮನವಿ ಮಾಡಿಕೊಂಡಿದ್ದೆ. ಆದರೆ ಆಕೆ ಹಿಂದೆ ಸರಿಯಲಿಲ್ಲ. ಪ್ರೀತಿ ಬಲವಂತ ಮಾಡಲು ಸಾಧ್ಯವಿಲ್ಲ. ಬಲವಂತ ಮಾಡಿದರೆ ನೀಲಿ ಡ್ರಂ ಆಗುತ್ತೇನೆ. ನನ್ನ ಮಕ್ಕಳು ಅನಾಥವಾಗುತ್ತಾರೆ ಎಂದು ಈತ ಹೇಳಿದ್ದಾನೆ.
ಪತ್ನಿಯನ್ನು ಇಷ್ಟಪಟ್ಟಿದ್ದೆ , ಪ್ರೀತಿಸಿದ್ದೆ. ಮಕ್ಕಳ ಜೊತೆ ಸುಖ ಸಂಸಾರ ನಮ್ಮದಾಗಿತ್ತು. ಆದರೆ ಈ ಪ್ರೀತಿ, ಸಂಸಾರವೇ ಒಡೆದು ಹೋಗಿದೆ. ಈಗ ನನ್ನ ಮಕ್ಕಳ ಭವಿಷ್ಯ ಮುಖ್ಯ. ಮದುವೆ ಮತ್ತೊಂದು ಅನಾಹುತಕ್ಕೂ ಕಾರಣವಾಗಬಲ್ಲದು. ನನ್ನ ಜೀವನ ಮಕ್ಕಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಬಾರದು. ಹೀಗಾಗಿ ಮತ್ತೊಂದು ಮದುವೆ ನಾನು ಆಗಲ್ಲ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.