ಗಂಡ್ಮಕ್ಕಳ ಜೊತೆ ಮಾತಾಡೋದು ಕಷ್ಟವಾಗ್ತಿದೆ ಏನ್ಮಾಡ್ಲಿ?

By Suvarna NewsFirst Published Aug 17, 2022, 5:46 PM IST
Highlights

ಓದಿನಲ್ಲಿ ಚುರುಕಿದ್ರೆ ಸಾಲದು ವ್ಯವಹಾರ ಜ್ಞಾನ ಇರ್ಬೇಕು ಅಂತಾ ದೊಡ್ಡವರು ಹೇಳ್ತಾರೆ. ಎಲ್ಲರ ಜೊತೆ ಹೇಗೆ ಮಾತನಾಡಬೇಕು ಎಂಬುದು ಕೂಡ ಗೊತ್ತಿರಬೇಕು. ಅನೇಕ ಬಾರಿ ನಮ್ಮ ಮಾತೇ ನಮಗೆ ಮುಳುವಾಗುತ್ತದೆ. ಬೆಳೆದು ಬಂದ ಪರಿಸರ ನಮ್ಮ ಸ್ವಭಾವಕ್ಕೆ ಮೂಲ ಕಾರಣವಾಗಿರುತ್ತದೆ. ನಾವು ದೊಡ್ಡವರಾದಂತೆ ಅದನ್ನು ಬದಲಿಸಿಕೊಳ್ಳಲು ಕಲಿಬೇಕು. 
 

ಕೋ ಎಜ್ಯುಕೇಷನ್ ನಲ್ಲಿ ಗಂಡ್ಮಕ್ಕಳು ಹಾಗೂ ಹೆಣ್ಮಕ್ಕಳು ಒಟ್ಟಿಗೆ ಕಲಿಯುತ್ತಾರೆ. ಚಿಕ್ಕವರಿರುವಾಗ್ಲೇ ಗಂಡು ಮಕ್ಕಳ ಜೊತೆ ಬೆರೆಯುವ ಕಾರಣ ದೊಡ್ಡವರಾದ್ಮೇಲೆ ಹೆಣ್ಮಕ್ಕಳಿಗೆ ಇದು ವಿಶೇಷ ಎನ್ನಿಸುವುದಿಲ್ಲ. ಆದ್ರೆ ಗರ್ಲ್ಸ್ ಸ್ಕೂಲ್ ಅಥವಾ ಬಾಯ್ಸ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಇನ್ನೊಬ್ಬರ ಜೊತೆ ಬೆರೆಯುವುದು ಆರಂಭದಲ್ಲಿ ಸ್ವಲ್ಪ ಕಷ್ಟವಾಗುತ್ತದೆ. ಬಾಲ್ಯದಿಂದಲೂ ಬರೀ ಹುಡುಗಿಯರ ಶಾಲೆಯಲ್ಲಿ ಓದಿದ್ದ ಹುಡುಗಿಯೊಬ್ಬಳಿಗೆ ಕಾಲೇಜಿಗೆ ಬರ್ತಿದ್ದಂತೆ ಹುಡುಗ್ರನ್ನು ಕಂಡರೆ ಭಯವೆನ್ನಿಸುತ್ತದೆ. ಅವರ ಜೊತೆ ಹೇಗೆ ವರ್ತಿಸಬೇಕು ಎಂಬುದು ಗೊತ್ತಾಗ್ತಿಲ್ಲ. ಹುಡುಗಿ ತನಗೆ ಏನಾಗ್ತಿದೆ ಎಂಬ ವಿಷ್ಯವನ್ನು ಎಲ್ಲರ ಮುಂದಿಟ್ಟಿದ್ದಾಳೆ. ಜೊತೆಗೆ ತಜ್ಞರಿಂದ ಸಲಹೆ ಕೂಡ ಕೇಳಿದ್ದಾಳೆ.

ಆಕೆಗೆ ಈಗ 18 ವರ್ಷ. ಕಾಲೇಜು (College) ಮೆಟ್ಟಿಲೇರಿರುವ ಹುಡುಗಿ. ಹೈಸ್ಕೂಲ್ (High School) ವರೆಗೂ ಗರ್ಲ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಹುಡುಗಿಗೆ ಕಾಲೇಜಿ ವಿಚಿತ್ರವೆನ್ನಿಸುತ್ತಿದೆ. ಇದಕ್ಕೆ ಕಾರಣ ಅಲ್ಲಿ ಕೋ ಎಜ್ಯುಕೇಷನ್ ಇದೆ. ಗಂಡು (Male) ಮಕ್ಕಳನ್ನು ಕಂಡ್ರೆ ವಿಪರೀತ ನಾಚಿಕೊಳ್ಳುವ ಹುಡುಗಿಗೆ ಇದೇ ದೊಡ್ಡ ಸಮಸ್ಯೆಯಾಗಿದೆ. ಹುಡುಗಿ ಕೆಲ ದಿನಗಳಿಂದ ಕಾಲೇಜಿನಲ್ಲಿ ಓದುತ್ತಿರುವ ಹುಡುಗನೊಬ್ಬನನ್ನು ಪ್ರೀತಿ (Love) ಸ್ತಿದ್ದಾಳಂತೆ. ಆಕೆಗೆ ಆತ ತುಂಬಾ ಇಷ್ಟವಾಗಿದ್ದಾನೆ. ಆದ್ರೆ ಆತನ ಮುಂದೆ ಪ್ರೇಮ ನಿವೇದನೆ ಮಾಡೋದು ಈಕೆಗೆ ದೊಡ್ಡ ಸವಾಲಾಗಿದೆ. 

ಹುಡುಗ್ರ ಜೊತೆ ವಿಚಿತ್ರವಾಗಿ ವರ್ತಿಸುವ ಕಾರಣ ಕಾಲೇಜಿನಲ್ಲಿ ಅನೇಕರಿಗೆ ಈಕೆ ಕಂಡ್ರೆ ಆಗ್ತಿಲ್ಲ. ಇದು ಸ್ನೇಹಿತೆ (Friend) ಯರಿಂದ ಹುಡುಗಿಗೆ ಗೊತ್ತಾಗಿದೆ. ಯಾವುದೇ ಕಾರಣಕ್ಕೂ ಆ ಹುಡುಗನನ್ನು ಬಿಟ್ಟುಕೊಡಲಾರೆ ಎನ್ನುವ ಹುಡುಗಿಗೆ ಅವನ ಜೊತೆ ಮಾತನಾಡೋಕೆ ಬರ್ತಿಲ್ಲ. ಆತ ಹತ್ತಿರ ಬರ್ತಿದ್ದಂತೆ ಈಕೆ ವರ್ತನೆ (Behavior ) ಬದಲಾಗುತ್ತದೆಯಂತೆ. ಇದೇ ವಿಷ್ಯದ ಬಗ್ಗೆ ಚಿಂತಿಸಿ ನಿದ್ರೆ ಹಾಳು ಮಾಡಿಕೊಂಡಿದ್ದೇನೆ. ನನಗೆ ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ. ಯಾವುದರಲ್ಲೂ ಮನಸ್ಸಿಲ್ಲ ಎನ್ನುತ್ತಾಳೆ ಹುಡುಗಿ. ತನ್ನ ಈ ಸ್ವಭಾವ, ವರ್ತನೆಯನ್ನು ಹೇಗೆ ಬದಲಿಸಿಕೊಳ್ಬೇಕು ಎಂಬುದು ಹುಡುಗಿ ಪ್ರಶ್ನೆಯಾಗಿದೆ.

ದಾಂಪತ್ಯದಲ್ಲಿ PERSONAL SPACE ಎಷ್ಟಿರಬೇಕು?

ತಜ್ಞರ ಉತ್ತರ : ಪ್ರೀತಿಸಿದವರ ಮುಂದೆ ಪ್ರೇಮ ನಿವೇದನೆ ಮಾಡೋದು ಸಾಮಾನ್ಯವಾಗಿ ಎಲ್ಲರಿಗೂ ಕಷ್ಟದ ವಿಷ್ಯ. ಸಂಕೋಚ, ಭಯ ಇಲ್ಲಿ ಸರ್ವೇಸಾಮಾನ್ಯ. ಆದ್ರೆ ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಭಾವನೆಯನ್ನು ನೀವು ಆತನ ಮುಂದೆ ಹೇಳಲೇಬೇಕು. ಅದಕ್ಕೆ ನೀವು ಮೊದಲು ಸಿದ್ಧರಾಗ್ಬೇಕು. ನಿಮ್ಮ ಸಂಕೋಚ ಮತ್ತು ಅಂತರ್ಮುಖಿ ವ್ಯಕ್ತಿತ್ವವನ್ನು ಮೊದಲು ಬದಲಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ನಿಮ್ಮ ಸಂಕೋಚ ಹಾಗೂ ನಿಮ್ಮ ವ್ಯಕ್ತಿತ್ವದಿಂದ ನಿಮ್ಮ ಕ್ರಶ್ ಗೆ ನಿಮ್ಮ ಮೇಲೆ ಕೆಟ್ಟ ಭಾವನೆ ಮೂಡಿರಬಹುದು. ಅದನ್ನು ಬದಲಿಸುವ ಮೊದಲು ನೀವು ಬದಲಾಗುವ ಕಡೆ ಗಮನ ನೀಡಬೇಕು. ಆಗ ನೀವು ಕ್ರಶ್ ಜೊತೆ ಮಾತ್ರವಲ್ಲ ಎಲ್ಲರ ಜೊತೆ ಆರಾಮವಾಗಿ ಮಾತನಾಡಬಹುದು ಎನ್ನುತ್ತಾರೆ ತಜ್ಞರು. ಸ್ಕೂಲ್ ಹಾಗೂ ಕಾಲೇಜು ಎರಡೂ ಭಿನ್ನವಾಗಿದೆ. ಕಾಲೇಜಿನಲ್ಲಿ ಸ್ನೇಹಿತರ ಜೊತೆ ಇರುವುದು ಅನಿವಾರ್ಯ. ನೀವು ಅವ್ರ ಜೊತೆ ಮಾತನಾಡದೆ ಹೋದ್ರೆ ನೀವು ಕ್ಲಾಸ್ಮೆಂಟ್ ರೂಪದಲ್ಲಿ ಹಿಂದೆ ಇರ್ತೀರಿ. ಸ್ನೇಹಿತರ ಪಟ್ಟಿಯಲ್ಲಿ ಜಾಗ ಪಡೆಯೋದಿಲ್ಲ. ಇದು ಮುಂದೆ ನಿಮಗೆ ನಷ್ಟ ತರಬಹುದು. ಹಾಗೆ ನಿಮ್ಮ ವರ್ತನೆಯಿಂದ ನೀವಿಷ್ಟಪಟ್ಟ ಹುಡುಗ ನಿಮಗೆ ಸಿಗದೆ ಹೋಗ್ಬಹುದು. 

ಬೆನ್ನು ನೋವಾ? ಯಾವುದ್ಯಾವುದೋ ಭಂಗಿ ಸೂಟ್ ಆಗೋಲ್ಲ

ಸಂಕೋಚ ನ್ಯೂರೋಬಯಾಲಜಿಯಾಗಿದೆ. ಸ್ವಯಂ ಪ್ರಜ್ಞೆ, ನಕಾರಾತ್ಮಕ ಸ್ವಾಭಿಮಾನ, ಕಡಿಮೆ ಆತ್ಮವಿಶ್ವಾಸ ಮತ್ತು ಇತರರ ಭಯ ಸಹ ನೀವು ನಾಚಿಕೆಪಡುವಂತೆ ಮಾಡುತ್ತದೆ. ಇದೆಲ್ಲದಕ್ಕೂ ಒಂದೇ ಪರಿಹಾರ ನಿಮ್ಮ ಸ್ವಭಾವದಲ್ಲಿ ಬದಲಾವಣೆ ಎನ್ನುತ್ತಾರೆ ತಜ್ಞರು. 
 

click me!