ಕೈಗೆ ಸಿಕ್ಕಿದ್ದೆಲ್ಲ ಎಸೆಯುವ ಮಕ್ಕಳನ್ನು ಸಂಭಾಳಿಸುವುದು ಹೇಗೆ?

By Suvarna News  |  First Published Aug 17, 2022, 4:03 PM IST

ತರ್ಲೇ ಮಕ್ಕಳು ಅಂತಾ ಹಾಗೆ ಬಿಟ್ರೆ ಪಾಲಕರಿಗೆ ಮುಂದೆ ಇದು ದೊಡ್ಡ ಸಮಸ್ಯೆಯಾಗುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ತಲೆ ತಗ್ಗಿಸುವಂತಾಗುತ್ತದೆ. ಹಾಗಾಗಿ ಮಕ್ಕಳಿಗೆ ಚಿಕ್ಕಪುಟ್ಟ ಸಂಗತಿಯನ್ನೂ ಹೇಳಿಕೊಡಬೇಕಾಗುತ್ತದೆ.  
 


ಮಕ್ಕಳು ಅಂದ್ಮೇಲೆ ಅಳು, ನಗು, ಕಿಡಿಗೇಡಿತನ ಇರ್ಲೇಬೇಕು. ತರ್ಲೇ ಮಾಡದ ಮಕ್ಕಳಿಲ್ಲ. ಸಣ್ಣ ಪುಟ್ಟ ಚೇಷ್ಟೆ ಮಾಡುವ ಮಕ್ಕಳೆಂದ್ರೆ ಎಲ್ಲರಿಗೂ ಇಷ್ಟವಾಗುತ್ತದೆ. ಆದ್ರೆ ಕಿಡಿಗೇಡಿತನ ಹೆಚ್ಚಾದ್ರೆ ಕಿರಿಕಿರಿಯಾಗುತ್ತದೆ. ಮನೆಯಲ್ಲಿರುವ ಎಲ್ಲ ವಸ್ತುಗಳನ್ನು ಮಕ್ಕಳು ಚೆಲ್ಲಾಪಿಲ್ಲಿ ಮಾಡ್ತಾರೆ. ಮನೆಗೆ ಬರ್ತಿದ್ದಂತೆ ಇದು ಮಕ್ಕಳಿರುವ ಮನೆ ಎಂಬುದು ಗೊತ್ತಾಗುತ್ತೆ. ಸಾಮಾನ್ಯವಾಗಿ ಮಕ್ಕಳ ಕೈಗೆ ವಸ್ತುವನ್ನು ಕೊಟ್ಟಾಗ ಅವರು ಆಟವಾಡ್ತಾರೆ. ಆಟವಾಡ್ತಾ ಅದನ್ನು ಎಸೆಯುತ್ತಾರೆ. ದೊಡ್ಡವರು ಅದನ್ನು ತಂದುಕೊಟ್ಟಾಗ ಮತ್ತೆ ಎಸೆಯುತ್ತಾರೆ. ದೊಡ್ಡವರು ತಂದುಕೊಡ್ತಾರೆ ಎನ್ನುವ ಕಾರಣಕ್ಕೆ ಮಕ್ಕಳು ಎಸೆಯೋದನ್ನು ಮುಂದುವರೆಸ್ತಾರೆ. ಇದು ಕೇವಲ ಆಟ ಮಾತ್ರ. ಸ್ವಲ್ಪ ಸಮಯದ ನಂತ್ರ ಮಕ್ಕಳ ಗಮನ ಬೇರೆ ಕಡೆ ಹೋಗುತ್ತದೆ. ಆದ್ರೆ ಮತ್ತೆ ಕೆಲ ಮಕ್ಕಳಿಗೆ ವಸ್ತುಗಳನ್ನು ಎಸೆಯೋದು ಒಂದು ಚಟವಾಗಿರುತ್ತದೆ. ಅವರ ಕೈಗೆ ಯಾವುದೇ ವಸ್ತು ಸಿಗಲಿ ಅದನ್ನು ಎಸೆಯುತ್ತಾರೆ. ಮನೆಯೊಳಗೆ ವಸ್ತುಗಳನ್ನು ಎಸೆದ್ರೆ ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳಬಹುದು. ಆದ್ರೆ ಕೆಲ ಮಕ್ಕಳು ಮನೆ ಸಾಮಾನುಗಳನ್ನು ರಸ್ತೆಗೆ ಎಸೆಯುತ್ತಾರೆ. ಹೋಗ್ಲಿ ಮಕ್ಕಳು ಬಿಡು ಅಂತಾ ಪಾಲಕರು ಸುಮ್ಮನಿದ್ರೆ ಮಕ್ಕಳ ಈ ಚೇಷ್ಟೆ ಅತಿಯಾಗುತ್ತದೆ. ಮನೆಯಲ್ಲಿ ಮಾತ್ರವಲ್ಲ ಹೋದ ಕಡೆಯೆಲ್ಲ ಮಕ್ಕಳು ಇದನ್ನು ಮುಂದುವರೆಸ್ತಾರೆ. ಇದು ಪಾಲಕರನ್ನು ಮುಜುಗರಕ್ಕೀಡು ಮಾಡುತ್ತದೆ. ನಿಮ್ಮ ಮಕ್ಕಳು ಕೂಡ ಮನೆಯಲ್ಲಿರುವ ವಸ್ತುಗಳನ್ನು ಬೀದಿಗೆಸೆಯುವ ಚಟ ಹೊಂದಿದ್ರೆ ಅದನ್ನು ಇಂದೇ ತಪ್ಪಿಸಿ. ಅದಕ್ಕೆ ಏನು ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ.

ಮಕ್ಕಳು (Children) ತಪ್ಪು ಮಾಡ್ದಾಗ ಪಾಲಕರು ಕೋಪ (Anger) ಗೊಳ್ಳೋದು ಸಹಜ. ಆದ್ರೆ ಕೋಪದಿಂದ ಎಲ್ಲವೂ ಪರಿಹಾರವಾಗುವುದಿಲ್ಲ. ನೀವು ಕೋಪಗೊಂಡ್ರೆ ಮಕ್ಕಳು ಮತ್ತೊಂದಿಷ್ಟು ವಸ್ತುವನ್ನು ಹೊರಕ್ಕೆ ಎಸೆಯಬಹುದು. ಹಾಗಾಗಿ  ವಸ್ತುವನ್ನು ಎಸೆದ್ರೆ ಏನಾಗುತ್ತದೆ ಎಂಬುದನ್ನು ನೀವು ಮಕ್ಕಳಿಗೆ ವಿವರಿಸಬೇಕು. ವಸ್ತು (Material) ವನ್ನು ಎಸೆದ್ರೆ ಆ ವಸ್ತು ಹಾಳಾಗುತ್ತದೆ ಅಥವಾ ಅದು ತಾಗಿ ಇನ್ನೊಬ್ಬ ವ್ಯಕ್ತಿಗೆ ಗಾಯವಾಗಬಹುದು ಎಂದು ಮಗುವಿಗೆ ವಿವರಿಸಿ. ಮಕ್ಕಳಿಗೆ ನಿಯಮ ಮಾಡಿ. ಮಗು ವಸ್ತುವನ್ನು ಎಸೆದ್ರೆ ಇನ್ಮುಂದೆ ಆ ವಸ್ತುವನ್ನು ಅವರಿಗೆ ನೀಡೋದಿಲ್ಲವೆಂದು ಎಚ್ಚರಿಕೆ ನೀಡಿ. ಮಕ್ಕಳು ವಸ್ತುವನ್ನು ಎಸೆದಾಗ ಅದನ್ನು ನೀವು ಎತ್ತಿಟ್ಟರೆ ಮತ್ತೆ ಮಕ್ಕಳು ಈ ಕೆಲಸಕ್ಕೆ ಹೋಗೋದಿಲ್ಲ. ಎಸೆಯಲೆಂದೇ ಇರುವ ವಸ್ತುವನ್ನು ಮಾತ್ರ ಮಕ್ಕಳ ಕೈಗೆ ನೀಡಿ. ಚೆಂಡು (Ball) ಅಥವಾ ಮುರಿದು, ಹಾಳಾಗದ ವಸ್ತುವನ್ನು ಮಾತ್ರ ಮಕ್ಕಳಿಗೆ ನೀಡಿ. ಇದರಿಂದ ಮಕ್ಕಳು ಕೂಡ ಅಲ್ಪಾವಧಿಗೆ ಸಂತೋಷ (Happiness) ಪಡುತ್ತಾರೆ ಮತ್ತು ಸ್ವಲ್ಪ ಸಮಯದ ನಂತರ ವಸ್ತುಗಳನ್ನು ಎಸೆಯುವುದನ್ನು ನಿಲ್ಲಿಸ್ತಾರೆ. ಯಾವುದೇ ಕಾರಣಕ್ಕೂ ಮಗು (Child) ವಸ್ತುವನ್ನು ಎಸೆಯುತ್ತಿದ್ದರೆ ಅವರಿಗೆ ಪ್ರೋತ್ಸಾಹ ನೀಡಬೇಡಿ. ನೀವು ಪ್ರೋತ್ಸಾಹ ನೀಡಿದ್ರೆ ನಂತ್ರ ತೊಂದರೆ ಅನುಭವಿಸಬೇಕಾಗುತ್ತದೆ.

Tap to resize

Latest Videos

Teenage Love: ಸೂಕ್ಷ್ಮವಾದ ವಿಷ್ಯ, ಪೋಷಕರು ಹುಷಾರಾಗರಿಬೇಕಷ್ಟೇ!

ಈ ಸಲಹೆಯನ್ನೂ ಪಾಲನೆ ಮಾಡಿ : ಒಂದ್ವೇಳೆ ನೀವು ಹೇಳಿದಂತೆ ಮಗು ಕೇಳಿದ್ರೆ, ವಸ್ತುವನ್ನು ಎಸೆಯದೆ ಕೈನಲ್ಲಿಯೇ ಹಿಡಿದುಕೊಂಡಿದ್ದರೆ ಪಾಲಕರಾದವರು ಅದನ್ನು ಪ್ರೋತ್ಸಾಹಿಸಬೇಕು. ಮಕ್ಕಳನ್ನು ಹೊಗಳಬೇಕು. ಅವರಿಗೆ ಇಷ್ಟವಾದ ತಿಂಡಿ (breakfast) ಅಥವಾ ಆಟಿಕೆ (Toy) ಯನ್ನು ನೀಡ್ಬೇಕು.  

ಅಮ್ಮಂದಿರು ಮಕ್ಕಳ ಜೊತೆ ಸ್ನೇಹಿತರಂತೆ ಆತ್ಮೀಯವಾಗಿರಲು ಟಿಪ್ಸ್

ಮಕ್ಕಳ ಮುಂದೆ ಕೋಪಗೊಂಡ ನೀವು ಯಾವುದೇ ಕಾರಣಕ್ಕೂ ಕೈನಲ್ಲಿರುವ ವಸ್ತುವನ್ನು ಎಸೆಯಬೇಡಿ. ಅನೇಕ ಪಾಲಕರಿಗೂ ವಸ್ತುವನ್ನು ಎಸೆಯುವ ಚಟವಿರುತ್ತದೆ. ಕೋಪದಲ್ಲಿದ್ದಾಗ ಕೈನಲ್ಲಿದ್ದ ವಸ್ತುವನ್ನು ಎಸೆಯುತ್ತಾರೆ. ಪಾಲಕರನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಪಾಲಕರು ವಸ್ತುವನ್ನು ಎಸೆದಂತೆ ಕೋಪದಲ್ಲಿದ್ದಾಗ ಮಕ್ಕಳು ಕೂಡ ವಸ್ತುಗಳನ್ನು ಎಸೆಯಲು ಶುರು ಮಾಡ್ತಾರೆ. ಮಕ್ಕಳ ಈ ಚಟದಿಂದ ಅಮೂಲ್ಯವಾದ ವಸ್ತುಗಳು ಹಾಳಾಗಬಹುದು.   
 

click me!