ಹಣ ಹಂಚಿಕೆ ಆಡಿಯೋ ರಿಲೀಸ್‌, ನನ್ನ ವಿರುದ್ಧ ಏನೋ ಸಂಚು ನಡೆಯುತ್ತಿದೆ: ಶಿವಲಿಂಗೇಗೌಡ

By Girish GoudarFirst Published Oct 18, 2024, 4:53 PM IST
Highlights

ಈ ಹಿಂದೆ ಕೂಡ ಇಂತಹ ಆಡಿಯೋ ಎಡಿಟ್ ಮಾಡಿ ಹರಿಬಿಡಲಾಗಿತ್ತು. ಕೆಲವರು ಇಂತಹದೆ ಪ್ರವೃತ್ತಿ ಮಾಡುತ್ತಾರೆ. ಇನ್ನು ಮುಂದೆ ಈ ರೀತಿ ಮಾಡೋದರ ಬಗ್ಗೆ ಎಚ್ಚರ ವಹಿಸುತ್ತೇವೆ. ಈ ಬಗ್ಗೆ ನಮ್ಮ ವಕೀಲರನ್ನು ಸಂಪರ್ಕ ಮಾಡಿ ದೂರು ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇನೆ. ಹಣ ಹಂಚಿಕೆ ಬಗ್ಗೆ ಪ್ರಸ್ತಾಪವೇ ಇಲ್ಲ. ಅದೊಂದು ನಕಲಿ ಆಡಿಯೋ ಏನು ಬೇಕಾದ್ರು ತನಿಖೆ ಆಗಲಿ ಸಿದ್ದನಿದ್ದೇನೆ: ಶಾಸಕ ಶಿವಲಿಂಗೇಗೌಡ 
 

ಹಾಸನ(ಅ.18):  ಲೋಕಸಭಾ ಚುನಾವಣಾ ವೇಳೆಯಲ್ಲಿ ಹಣ ಹಂಚಿಕೆ ಬಗ್ಗೆ ಮಾತನಾಡಿರೋ ಆಡಿಯೋ ನಕಲಿಯಾಗಿದೆ. ನನ್ನ ವಿರುದ್ಧ ಏನೋ ಸಂಚು ನಡೆಯುತ್ತಿರೊ ಅನುಮಾನ ಇದೆ. ಮಿಮಿಕ್ರಿ ಆಡಿಯೊ ಸೃಷ್ಟಿ ಮಾಡಿ ಸಂಚು ಮಾಡಲಾಗಿದೆ. ನಮ್ಮ ಮನೆಗೆ ನಿತ್ಯ ನೂರಾರು ಜನರು ಬರ್ತಾರೆ. ನಾನು ಮಾತನಾಡಿದ್ದನ್ನ ತಿರುಚಲಾಗಿದೆ. ಖಂಡಿತ ಅದು ನನ್ನ ಮಾತುಗಳಲ್ಲ. ಚುನಾವಣೆ ನಡೆದು ಐದು ತಿಂಗಳು ಕಳೆದಿದೆ. ಆಗ ಮಾತನಾಡಿಧ್ದೆ ಎಂದು ಈಗ ಆಡಿಯೋ ಬಿಟ್ಟಿದ್ದಾರೆ. ಕಟ್ ಅಂಡ್ ಪೇಸ್ಟ್ ಮಾಡಿ ಈ ರೀತಿಯ ಆಡಿಯೋ ಸೃಷ್ಟಿ ಮಾಡಲಾಗಿದೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. 

ಇಂದು(ಶುಕ್ರವಾರ) ಜಿಲ್ಲೆಯ ಅರಸೀಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಶಿವಲಿಂಗೇಗೌಡ ಅವರು, ಈ ಹಿಂದೆ ಕೂಡ ಇಂತಹ ಆಡಿಯೋ ಎಡಿಟ್ ಮಾಡಿ ಹರಿಬಿಡಲಾಗಿತ್ತು. ಕೆಲವರು ಇಂತಹದೆ ಪ್ರವೃತ್ತಿ ಮಾಡುತ್ತಾರೆ. ಇನ್ನು ಮುಂದೆ ಈ ರೀತಿ ಮಾಡೋದರ ಬಗ್ಗೆ ಎಚ್ಚರ ವಹಿಸುತ್ತೇವೆ. ಈ ಬಗ್ಗೆ ನಮ್ಮ ವಕೀಲರನ್ನು ಸಂಪರ್ಕ ಮಾಡಿ ದೂರು ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇನೆ. ಹಣ ಹಂಚಿಕೆ ಬಗ್ಗೆ ಪ್ರಸ್ತಾಪವೇ ಇಲ್ಲ. ಅದೊಂದು ನಕಲಿ ಆಡಿಯೋ ಏನು ಬೇಕಾದ್ರು ತನಿಖೆ ಆಗಲಿ ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ. 

Latest Videos

ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರ ಸಂಬಂಧ ಜೆಡಿಎಸ್ ನಿಂದ ದೂರು ವಿಚಾರದ ಬಗ್ಗೆ ಮಾತನಾಡಿದ ಶಿವಲಿಂಗೇಗೌಡ ಅವರು, ದೂರು ಕೊಡಲಿ ಬಿಡಿ, ಅದಕ್ಕೂ ನನಗು ಸಂಬಂಧ ಇಲ್ಲ. ಎಲ್ಲ ಆಡಿಯೋಗಳನ್ನು ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ. ನಾನು ಮಾತಾಡಿರೊ ಕೆಲ ಅಂಶಗಳಲ್ಲಿ ಲೋಕಾರೂಢಿ ಮಾತನಾಡಿದ್ದೇನೆ. ಆದರೆ ಅದರ ನಡುವೆ ಕೆಲ ಮಾತು ಸೇರಿಸಿ ಕುತಂತ್ರ ಮಾಡಲಾಗಿದೆ. ನನ್ನ ಶಕ್ತಿ ಕುಂದಿಸಲು ಹೀಗೆ ಮಾಡಲಾಗುತ್ತಿದೆ. ರಾಜಕೀಯವಾಗಿ ಮೇಲೆ ಬರದಂತೆ ತಡೆಯಲು ಈ ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ನಾನೇ ಸತ್ಯ ಶೋಧನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. 

ಸಚಿವ ಆಗೋದು ಬಿಡೋದು ನನ್ನ ಹಣೆಬರಹ ಇದ್ದಂತೆ ಆಗುತ್ತೆ. ಮೊದಲ ಬಾರಿಗೆ ನನ್ನ ಹೆಸರು ಬಂದಿತ್ತು ಕಡೆಗೆ ತಪ್ಪಿಹೋಯ್ತು. ಈಗಲೂ ಸಚಿವ ಆಗಬಹುದು ಎಂದು ತಡೆಯಲು ಕುತಂತ್ರದಿಂದ ಹೀಗೆ ಮಾಡುತ್ತಿರಬಹುದು ಎಂದು ತಿಳಿಸಿದ್ದಾರೆ. 

click me!