ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗಿದೆ. ಕೃಷ್ಣ ಜನ್ಮಭೂಮಿ ವಿವಾದ ತೀವ್ರಗೊಳ್ಳುತ್ತಿದೆ. ಇದೀಗ ಈದ್ಗಾ ಮಸೀದಿ ಸಮಿತಿ ಇದೀಗ ಕೋರ್ಟ್ ಮೊರೆ ಹೋಗಿದೆ. ಯಶ್‌ಗೆ ವಿಶ್ ಮಾಡಿದ ಹೃತಿಕ್, ಕೆಜಿಎಫ್ -2 ಸುಳಿವು ನೀಡಿದ್ದಾರೆ. ಫೆಬ್ರವರಿ 11ಕ್ಕೆ ಐಪಿಎಲ್ ಆಟಗಾರರ ಹರಾಜು ಸಾಧ್ಯತೆ ಇದೆ. ಕಾಲರ್ ಟ್ಯೂನ್‌ಗೆ ಸೋಂಕಿತ ಅಮಿತಾಬ್ ಧ್ವನಿ ಬೇಡ, ಚಲಾವಣೆಯಲ್ಲಿರುವ ನಗದು ಏರಿಕೆ ಸೇರಿದಂತೆ ಜನವರಿ 8ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು...
undefined
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿರುದ್ಧ ಕೇಸ್ ಬುಕ್ ಆಗಿದೆ. ಇದರಿಂದ ಮತ್ತಷ್ಟು ಸಂಕಟ ಎದುರಾಗಿದೆ.
ಕೃಷ್ಣ ಜನ್ಮಭೂಮಿ ವಿವಾದ: ಮಸೀದಿ ತೆರವು ಅರ್ಜಿ ರದ್ದತಿಗೆ ಕೋರ್ಟ್ ಹತ್ತಿದ ಶಾಹಿ ಈದ್ಗಾ ಸಮಿತಿ!...
ಕೃಷ್ಣ ಜನ್ಮಭೂಮಿ ವಿವಾದ ತೀವ್ರಗೊಳ್ಳುತ್ತಿದೆ. ಕೃಷ್ಣ ದೇಗುಲ ಹಾಗೂ ಅಲ್ಲಿರುವ ಶಾಹಿ ಮಸೀದಿಯನ್ನು ತೆರವುಗೊಳಿಸಲು ಈಗಾಗಲೇ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿ ಅಂಗೀಕರಿಸಲಾಗಿದೆ..ಇದೀಗ ಶಾಹಿ ಈದ್ಗಾ ಸಮಿತಿ, ಈ ಅರ್ಜಿಯನ್ನು ರದ್ದುಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದೆ.
ಬೆಂಗಳೂರಿನಲ್ಲಿ ಬೆಳೆದ ರಾಜ್ ಅಮೆರಿಕ ಸೇನೆಯ ಮೊದಲ ಮುಖ್ಯ ಮಾಹಿತಿ ಅಧಿಕಾರಿ!...
ತಮಿಳುನಾಡಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದ ಡಾ. ರಾಜ್ ಅಯ್ಯರ್ ಅವರು ಅಮೆರಿಕದ ಸೇನೆಯ ಮೊಟ್ಟಮೊದಲ ಮುಖ್ಯ ಮಾಹಿತಿ ಅಧಿಕಾರಿಯಾಗಿ ನೇಮಕವಾಗಿದ್ದಾರೆ.
ಫೆಬ್ರವರಿ 11ಕ್ಕೆ ಐಪಿಎಲ್ ಆಟಗಾರರ ಹರಾಜು..?...
14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಫೆಬ್ರವರಿ ಎರಡನೇ ವಾರದಲ್ಲಿ ಆಟಗಾರರ ಹರಾಜು ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಯಶ್‌ಗೆ ವಿಶ್ ಮಾಡಿದ ಕ್ರಿಶ್, ಕೆಜಿಎಫ್ -2ಗೆ ಹೊಸ ಸುಳಿವು ಕೊಟ್ಟ ಹೃತಿಕ್!...
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್‌ಗೆ ಇಂದು 35ನೇ ಹುಟ್ಟುಹಬ್ಬದ ಸಂಭ್ರಮ. ಆಪ್ತರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಯಶ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ನಟ, ನಟಿಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಲಾವಾದಿಂದ ಜಗತ್ತಿನ ಮೊದಲ ಕಸ್ಟಮೈಸಡ್ ಸ್ಮಾರ್ಟ್‌ಫೋನ್, ಜ.11ರಿಂದ ಮಾರಾಟಕ್ಕೆ ಲಭ್ಯ...
ಕಸ್ಟಮೈಸಡ್ ಸ್ಮಾರ್ಟ್‌ಫೋನ್ ಎಂಬ ವಿಶಿಷ್ಟ ಪರಿಕಲ್ಪನೆಯ ಸ್ಮಾರ್ಟ್‌ಫೋನ್ ಬಿಡುಗಡೆಯ ಮೂಲಕ ದೇಶಿ ಫೋನ್ ಉತ್ಪಾದಕ ಕಂಪನಿ ಲಾವಾ ಜೋರು ಸದ್ದು ಮಾಡುತ್ತಿದೆ. ಮೈಜೆಡ್ ಎಂಬ ಕಸ್ಟಮಿಸಬಲ್ ಸ್ಮಾರ್ಟ್‌ಫೋನ್ ನಿಮಗೆ ಜನವರಿ 11ರಿಂದಲೇ ಮಾರಾಟಕ್ಕೆ ಲಭ್ಯವಾಗಲಿದೆ. ಜೊತೆಗೆ ಇನ್ನೂ ಹಲವು ಫೋನ್‌ಗಳನ್ನು ಲಾಂಚ್ ಮಾಡಿದೆ.
ಚಲಾವಣೆಯಲ್ಲಿರುವ ನಗದು 5 ಲಕ್ಷ ಕೋಟಿ ರುಪಾಯಿಯಷ್ಟು ಏರಿಕೆ...
2020ನೇ ಸಾಲಿನಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ 5 ಲಕ್ಷ ಕೋಟಿ ರು.ನಷ್ಟು ಹೆಚ್ಚಳವಾಗಿದೆ ಎಂದು ರಿಸರ್ವ್ ಬ್ಯಾಂಕ್ ಅಂಕಿ-ಅಂಶಗಳೊಂದಿಗೆ ಖಚಿತಪಡಿಸಿದೆ.
ಸ್ಪರ್ಧಾತ್ಮಕ ಬೆಲೆಯಲ್ಲಿ ನೂತನ MG ಹೆಕ್ಟರ್ ಕಾರು ಬಿಡುಗಡೆ!...
ಟಾಟಾ ಹ್ಯಾರಿಯರ್ ಹಾಗೂ ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಎಂಜಿ ಮೋಟಾರ್ಸ್ ಕಂಪನಿಯ ಹೆಕ್ಟರ್ ಕೆಲ ಹೆಚ್ಚುವರಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಿದೆ. ವಿಶೇಷ ಅಂದರೆ ಈ ಸೆಗ್ಮೆಂಟ್‌ನಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೂ ಎಂಜಿ ಹೆಕ್ಟರ್ ಪಾತ್ರವಾಗಿದೆ.
ಕಾಲರ್ ಟ್ಯೂನ್‌ಗೆ ಸೋಂಕಿತ ಅಮಿತಾಬ್ ಧ್ವನಿ ಬೇಡ: ಹೈ ಕೋರ್ಟ್‌ನಲ್ಲಿ ಅರ್ಜಿ...
ಸ್ವತಃ ಕೊರೋನಾ ಸೋಂಕಿಗೆ ತುತ್ತಾದ ಅಮಿತಾಭ್ ಬಚ್ಚನ್ ಅವರ ಧ್ವನಿ ಇರುವ ಕಾಲರ್ ಟ್ಯೂನ್‌ಅನ್ನು ತೆಗೆದು ಹಾಕಲು ಡೆಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ನಿತ್ಯ ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡಿದರೆ, ಸೆಕ್ಸ್ ಡ್ರೈವ್ ಮೇಲೆ ಬೀರುತ್ತೆ ಪರಿಣಾಮ...
ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವ ಪುರುಷರೇ ಎಚ್ಚರವಹಿಸಿ. ಯಾಕೆ ಅಂದ್ರೆ ರಾತ್ರಿ ಶಿಫ್ಟ್‌ನಲ್ಲಿ ಕೆಲಸ ಮಾಡುವವರಿಗೆ ಶಿಫ್ಟ್‌ನಲ್ಲಾಗುವ ಬದಲಾವಣೆಯಿಂದ ಹಲವು ಸಮಸ್ಯೆಗಳು ಕಾಡುತ್ತವೆ. ಹೌದು ಇದರಿಂದ ಸೆಕ್ಸ್ ಡ್ರೈವ್ ಮೇಲೆ ಪರಿಣಾಮ ಹಾಗೂ ತಂದೆಯಾಗುವ ಚಾನ್ಸಸ್ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ.