ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿರುದ್ಧ ಕೇಸ್ ಬುಕ್ ಆಗಿದೆ. ಇದರಿಂದ ಮತ್ತಷ್ಟು ಸಂಕಟ ಎದುರಾಗಿದೆ.
ಕೊಡಗು, (ಜ.08): ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೊಡವರು ಗೋಮಾಂಸ ತಿನ್ನುತ್ತಾರೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯಿಂದಾಗಿ ಕೊಡವರ ಭಾವನಗೆ ಧಕ್ಕೆಯಾಗಿದೆ ಎಂದು ಪಶ್ಟಿಮ ಘಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ ಎಂಬುವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಕೊಡವ ಸಮುದಾಯ
ಟಿಪ್ಪು ಜಯಂತಿ ಮೂಲಕ ಕೊಡವರ ಸಿಟ್ಟಿಗೆ ಗುರಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಗೋಮಾಂಸ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದರು.
'ಕೊಡವರು ಕೂಡ ಗೋಮಾಂಸ ತಿನ್ನುತ್ತಾರೆ' ಎಂದಿದ್ದ ಸಿದ್ದರಾಮಯ್ಯ ವಿರುದ್ಧ ಕೊಡವರು ಸಿಡಿದೆದ್ದಿದ್ದರು. ಕೊಡವರು ಗೋವನ್ನು ಪೂಜ್ಯನೀಯ ದೃಷ್ಟಿಯಿಂದ ಕಾಣುತ್ತಾರೆ. ಅಲ್ಲದೆ ಕೊಡಗಿನಲ್ಲಿ ಗೋಹತ್ಯೆ, ಗೋಮಾಂಸ ಭಕ್ಷಣೆ ನಿಷೇಧವಿದೆ. ಬ್ರಿಟಿಷರ ಕಾಲದಿಂದಲೂ ಈ ನಿಯಮ ಜಾರಿಯಲ್ಲಿದೆ. ಹೀಗಿರುವಾಗ ಕೊಡವರು ಗೋಮಾಂಸ ತಿನ್ನುತ್ತಾರೆ ಅನ್ನೋದು ತಪ್ಪು. ಮಾಜಿ ಸಿಎಂ ಸಿದ್ದರಾಮಯ್ಯ ತನ್ನ ಹೇಳಿಕೆಯನ್ನ ಹಿಂಪಡೆಯುವ ಮೂಲಕ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂಬ ಆಗ್ರಹಿಸಿದ್ದರು.