
ನವದೆಹಲಿ(ಜ.08): ಕಳೆದ ವರ್ಷದ ಕೊರೋನಾ ಲಾಕ್‌ಡೌನ್ ವೇಳೆ ರೈಲು ಸಂಚಾರ ಸ್ತಬ್ಧವಾದ ಮಾರ್ಚ್ 21ರಿಂದ ಜೂ.31ರ ಅವಧಿಯಲ್ಲಿ ಕಾಯ್ದಿರಿಸಿ ರದ್ದುಗೊಳಿಸಲಾದ ರೈಲ್ವೆ ಟಿಕೆಟ್‌ನ ಪೂರ್ತಿ ಹಣದ ಹಿಂಪಡೆತಕ್ಕೆ ಇದ್ದ 6 ತಿಂಗಳ ಮಿತಿಯನ್ನು ಇದೀಗ ಕೇಂದ್ರ ಸರ್ಕಾರ ಮತ್ತೆ 3 ತಿಂಗಳಿಗೆ ವಿಸ್ತರಣೆ ಮಾಡಿದೆ.
ರೈಲ್ವೆ ಕೌಂಟರ್‌ಗಳಲ್ಲಿ ರದ್ದುಗೊಳಿಸಿದ ರೈಲ್ವೆ ಟಿಕೆಟ್‌ನ ಹಣ ಮರುಪಾವತಿಗೆ ಗ್ರಾಹಕರು ಮುಗಿಬೀಳುತ್ತಿದ್ದು, ಇದರಿಂದ ಕೊರೋನಾ ವೇಗವಾಗಿ ಹಬ್ಬುವ ಭೀತಿಯಿದೆ. ಹೀಗಾಗಿ ರೈಲ್ವೆ ನಿಲ್ದಾಣಗಳ ಕೌಂಟರ್‌ಗಳಲ್ಲಿ ಜನರ ಸರತಿ-ಸಾಲು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಕೊರೋನಾ ಅವಧಿಯಲ್ಲಿ ರೈಲ್ವೆ ಟಿಕೆಟ್ ಹಣ ಹಿಂಪಡೆತಕ್ಕೆ ಇದ್ದ 3 ದಿನಗಳ ಮಿತಿಯನ್ನು 6 ತಿಂಗಳಿಗೆ ವಿಸ್ತರಿಸಲಾಗಿತ್ತು.
ಇಂದಿನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸೇವೆ, ಇಲ್ಲಿದೆ ವೇಳಾಪಟ್ಟಿ..!
ಇನ್ನು ಒಂದು ವೇಳೆ 139 ನಂಬರ್‌ಗೆ ಕರೆ ಮಾಡಿ ಟಿಕೆಟ್ ರದ್ದು ಪಡಿಸಿದ್ದರೆ ಅಥವಾ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ರದ್ದು ಪಡಿಸಿದ್ದರೆ, ಹಣ ವಾಪಾಸ್ ಪಡೆಯಲು, 9 ತಿಂಗಳುಗಳ ಕಾಲ ಅವಕಾಶ ನೀಡಲಾಗಿದೆ. ಅಂದರೆ ಪ್ರಯಾಣಕ್ಕೆ ಗೊತ್ತು ಮಾಡಿದ ದಿನದಿಂದ 9 ತಿಂಗಳೊಳಗಾಗಿ ರಿಸರ್ವೇಸನ್ ಕೌಂಟರ್‌ಗೆ ತೆರಳಿ ಹಣವನ್ನು ವಾಪಾಸ್ ಪಡೆಯಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ