ಬ್ರಿಟನ್ ರಾಣಿ ಎಲಿಜಬೆತ್-2ಗೆ ಅಡಿಯಾಳಾಗಿತ್ತು ಆರ್‌ಎಸ್‌ಎಸ್!

By Web DeskFirst Published Aug 7, 2018, 10:10 AM IST
Highlights

ಆದರೆ ನಿಜಕ್ಕೂ ಆರ್‌ಎಸ್‌ಎಸ್ ಬ್ರಿಟಷ್ ರಾಣಿ ಎಲಿಜಬೆತ್ ಅಂಗರಕ್ಷನಾಗಿ, ಅಡಿಯಾಳಾಗಿ ಸೇವೆ ಸಲ್ಲಿಸಿತ್ತೇ ಎಂದು ತನಿಖೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. 

‘ಸ್ವಾತಂತ್ರ್ಯಪೂರ್ವ ಭಾರತದಲ್ಲಿ ರಾಷ್ಟ್ರೀಯ ಸ್ವೇವಕ ಸಂಘ(ಆರ್‌ಎಸ್‌ಎಸ್) ಬ್ರಿಟಿಷರ ಅಡಿಯಾಳಾಗಿ ಗುಲಾಮಗಿರಿ ಮಾಡುತ್ತಿತ್ತು. ರಾಣಿ
ಎಲಿಜಬೆತ್-2 ಸೇವಕರಾಗಿ ಸಂಘದ ಸದಸ್ಯರು ಕೆಲಸ ಮಾಡುತ್ತಿದ್ದರು’ ಎಂಬ ಅಡಿಬರಹದೊಂದಿಗೆ ರಾಣಿ ಎಲಿಜಬೆತ್ ಅಂಗರಕ್ಷಕರಾಗಿ ಆರ್‌ಎಸ್‌ಎಸ್ ಸ್ವಯಂ ಸೇವಕರು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಆದರೆ ನಿಜಕ್ಕೂ ಆರ್‌ಎಸ್‌ಎಸ್ ಬ್ರಿಟಷ್ ರಾಣಿ ಎಲಿಜಬೆತ್ ಅಂಗರಕ್ಷನಾಗಿ, ಅಡಿಯಾಳಾಗಿ ಸೇವೆ ಸಲ್ಲಿಸಿತ್ತೇ ಎಂದು ತನಿಖೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ ಸ್ವತಂತ್ರಪೂರ್ವದಲ್ಲಿ ಆರ್‌ಎಸ್‌ಎಸ್, ರಾಣಿ ಎಲಿಜಬೆತ್ ಅಂಗರಕ್ಷಕನಾಗಿತ್ತು ಎಂದು ಹರಿದಾಡುತ್ತಿರುವ ಪೋಟೋ ಸ್ವತಂತ್ರಪೂರ್ವದ್ದಲ್ಲ. ರಾಣಿ ಎಲಿಜಬೆತ್ ಭಾರತಕ್ಕೆ ಭೇಟಿ ನೀಡಿದ್ದು 1972 ಫೆಬ್ರವರಿ 6ರಂದು. ಅಂದರೆ ಸ್ವಾತಂತ್ರ್ಯಾ ನಂತರದ 5 ವರ್ಷದ ಬಳಿಕ. ಹಾಗಾಗಿ ಇದು ಸ್ವತಂತ್ರಪೂರ್ವದ್ದಲ್ಲ ಎಂಬುದು ಸ್ಪಷ್ಟ. 

ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಕಾಣುವಂತೆ ಆರ್‌ಎಸ್‌ಎಸ್ ಸ್ವಯಂಸೇವಕರು ರಾಣಿ ಎಲಿಜಬೆತ್ ಗಾರ್ಡ್ ಆಗಿ ಎಂದೂ ಕಾರ್ಯನಿರ್ವಹಿಸಿಲ್ಲ. ಸಂಬಂಧವೇ ಇಲ್ಲದ ಫೋಟೋದೊಂದಿಗೆ ಫೋಟೋಶಾಪ್ ಮೂಲಕ ಎಡಿಟ್ ಮಾಡಿ ಜೋಡಿಸಿ ಹೀಗೆ ಬಿಂಬಿಸಲಾಗಿದೆ. 1956ರಲ್ಲಿ ಕ್ವೀನ್ ಎಲಿಜಬೆತ್ ನೈಜೀರಿಯಾದ ಕುದುವಾಗೆ ರಾಯಲ್ ವೆಸ್ಟ್ ಆಫ್ರಿಕನ್ ಫ್ರಂಟಿಯರ್ ಫೋರ್ಸ್’ ಎಂದು ಮರುನಾಮಕರಣವಾಗಿದ್ದ ಸೇನಾದಳವನ್ನು ಪರಿಶೀಲಿಸಲು ಬಂದಿದ್ದರು.

ಆಗ ನೈಜಜೀರಿಯಾ ಸೇನೆ ಜೊತೆಗೆ ರಾಣಿ ಎಲಿಜಬೆತ್-2 ಇರುವ ಪೋಟೋದೊಂದಿಗೆ ಆರ್‌ಎಸ್ ಎಸ್ ಸ್ವಯಂಸೇವಕರ ಸುಮಾರು ವರ್ಷಗಳ ಹಿಂದಿನ ಫೋಟೋವನ್ನು ಸೇರಿಸಿ ಆರ್‌ಎಸ್‌ಎಸ್ ಬ್ರಿಟಿಷರ ಅಡಿಯಾಳಾಗಿತ್ತು,ಗುಲಾಮಗಿರಿಮಾಡುತ್ತಿತ್ತು ಎಂದು ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗಿದೆ.

[ವೈರಲ್ ಚೆಕ್ ಅಂಕಣ]

click me!