ಕಾಂಗ್ರೆಸ್ ಟೈಮ್ ಮುಗಿತೆಂದ ಟೈಮ್ಸ್ ನೌ ಸಮೀಕ್ಷೆ: ಮತ್ತೆ ನಮೋ!

By Web DeskFirst Published Aug 15, 2018, 4:45 PM IST
Highlights

ಹೊರಬಿತ್ತು ಟೈಮ್ಸ್ ನೌ ಸಮೀಕ್ಷೆ! ಪ್ರಧಾನಿ ಸ್ಥಾನದಲ್ಲಿ ಕೂರಲಿದ್ದಾರೆ ಮೋದಿ! ಕಾಂಗ್ರೆಸ್‌ಗೆ ಲಭಿಸುವ ಸ್ಥಾನ ಎಷ್ಟು ಗೊತ್ತಾ?! ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಎಂದ ಸಮೀಕ್ಷೆ

ನವದೆಹಲಿ(ಆ.15): 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 227 ಸ್ಥಾನಗಳನ್ನು ಪಡೆಯುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.

ಬಿಜೆಪಿ 227, ಕಾಂಗ್ರೆಸ್‌ಗೆ 78, ಇತರ ಪಕ್ಷಗಳಿಗೆ 238 ಸೀಟುಗಳು ಬರಲಿವೆ ಎಂದು ಸಮೀಕ್ಷೆ ತಿಳಿಸಿದೆ. ಯಾವುದೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸುವ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 49 ಸ್ಥಾನಗಳು ಬರಲಿವೆ. ಇನ್ನು ಟಿಡಿಪಿ ಸಖ್ಯ ಕಳೆದುಕೊಂಡಿರುವ ಆಂಧ್ರದಲ್ಲಿ 7, ಬಿಹಾರದಲ್ಲಿ 14, ಜಾರ್ಖಂಡ್‌ನಲ್ಲಿ 12, ಛತ್ತೀಸ್‌ಗಢದಲ್ಲಿ 10 ಬರಲಿವೆ ಎಂದು ಸಮೀಕ್ಷೆ ತಿಳಿಸಿದೆ. 

ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟ ಸರ್ಕಾರವಿದ್ದರೂ ಬಿಜೆಪಿಗೆ 2 ಸ್ಥಾನ ಲಾಭವಾಗಲಿದೆ. ಕಳೆದ ಬಾರಿಗೆ ಬಿಜೆಪಿಗೆ 17 ಸ್ಥಾನ ಸಿಕ್ಕಿತ್ತು. ಕಾಂಗ್ರೆಸ್‌ 6 ಸ್ಥಾನ, ಇತರರಿಗೆ (ಜೆಡಿಎಸ್) 3 ಸ್ಥಾನ. ಜೆಡಿಎಸ್ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‌ಗೆ 3 ಸ್ಥಾನ ನಷ್ಟವಾಗಲಿದೆ. ಜೆಡಿಎಸ್ ಹಿಂದಿನ ಚುನಾವಣೆಯಲ್ಲಿ 2 ಸ್ಥಾನ ಗೆದ್ದಿದ್ದರೆ ಹೆಚ್ಚುವರಿಯಾಗಿ 1 ಸ್ಥಾನ ಪಡೆದುಕೊಳ್ಳಲಿದೆ. ಕೇರಳದಲ್ಲಿ ಬಿಜೆಪಿ ಮೊದಲ ಬಾರಿಗೆ  1 ಸ್ಥಾನ ಗೆಲ್ಲಲಿದ್ದರೆ, ಕಾಂಗ್ರೆಸ್‌ಗೆ 2 ಸ್ಥಾನ ನಷ್ಟವಾಗಲಿದೆ. ಇತರರಿಗೆ 13 ಸ್ಥಾನ ಲಭ್ಯವಾಗಲಿದೆ ಎಂದು ಸಮೀಕ್ಷೆ ವಿವರಿಸಿದೆ.

ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ಈಗಾಗಲೇ ಆಡಳಿತ ಮತ್ತು ಪ್ರತಿಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿದ್ದು, ಒಂದು ಕಡೆ ಪ್ರಧಾನಿ ಮೋದಿ ತಮ್ಮ ಸರ್ಕಾರದ ಸಾಧನೆಗಳ ಮೇಲೆ ಅತೀವ ವಿಶ್ವಾಸವಿಟ್ಟಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳು ಬಿಜೆಪಿ ಮಣಿಸಲು ಇನ್ನಿಲ್ಲದ ಕಸರತ್ತು ನಡೆಸಿವೆ.

click me!