ಓಬಿಸಿ, ಪರಿಶಿಷ್ಟ ಜಾತಿ ಪಂಗಡ ಮೀಸಲಾತಿ ಮಸೂದೆಗೆ ತೆಲಾಂಗಣ ವಿಧಾನಸಭೆ ಅಸ್ತು

By Suvarna Web DeskFirst Published Apr 16, 2017, 3:48 AM IST
Highlights

ರಜಾದಿನದ ಹೊರತಾಗಿಯೂ ಸರ್ಕಾರವು ಕರೆದಿದ್ದ ವಿಶೇಷಾಧಿವೇಶನದಲ್ಲಿ ‘ತೆಲಾಂಗಣ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಸೂದೆ-2017’ಯನ್ನು ಅಂಗೀಕರಿಸಲಾಗಿದೆ.  ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ,  ಹಾಗೂ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ಈ ಮಸೂದೆಯು ಖಚಿತಪಡಿಸುತ್ತದೆ.

ಹೈದರಾಬಾದ್ (ಏ.16): ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಮ್ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು  ಕ್ರಮವಾಗಿ ಶೇ.10 ಹಾಗೂ ಶೇ.12ಕ್ಕೆ ಏರಿಸುವ ಮಸೂದೆಯನ್ನು ಇಂದು ತೆಲಾಂಗಣ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮೀಸಲಾತಿ ಮಿತಿಯನ್ನು ವಿಧಾನಸಭೆಯು ಮೀರಿದಂತಾಗಿದೆ.

ರಜಾದಿನದ ಹೊರತಾಗಿಯೂ ಸರ್ಕಾರವು ಕರೆದಿದ್ದ ವಿಶೇಷಾಧಿವೇಶನದಲ್ಲಿ ‘ತೆಲಾಂಗಣ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಸೂದೆ-2017’ಯನ್ನು ಅಂಗೀಕರಿಸಲಾಗಿದೆ.  ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ,  ಹಾಗೂ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ಈ ಮಸೂದೆಯು ಖಚಿತಪಡಿಸುತ್ತದೆ.

ಮಸೂದೆಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ಸೇವೆಗಳಲ್ಲಿರುವ ಮೀಸಲಾತಿಯನ್ನು ಶೇ.6ರಿಂದ 10ಕ್ಕೆ ಏರಿಸಲಾಗಿದೆ.

ಐವರು ಬಿಜೆಪಿ ಶಾಸಕರು ಮಸೂದೆಗೆ ಭಾರೀ ವೀರೋಧ ವ್ಯಕ್ತಪಡಿಸಿದ್ದು, ಬಳಿಕ ಅವರನ್ನು ಸದನದಿಂದ ಅಮಾನತುಗೊಳಿಸಬೇಕಾಯಿತು.  

ಹಿಂದುಳಿದ ಮುಸ್ಲಿಮ್ ವರ್ಗಗಳಿಗೆ ಹಾಲಿ ಶೇ.4ರಷ್ಟಿರುವ ಮೀಸಲಾತಿಯನ್ನು ಶೇ.12ಕ್ಕೆ ಏರಿಸುವ ಈ ಮಸೂದೆಯನ್ನು ಖುದ್ದು ಮುಖ್ಯಮಂತ್ರಿ  ಕೆ,ಚಂದ್ರಶೇಖರ್ ರಾವ್ ವಿಧಾನಸಬೆಯಲ್ಲಿ ಮಂಡಿಸಿದರು. ಈ ಮಸೂದೆಯು ಹಾಗೂ ಮೀಸಲಾತಿಯು ಯಾವುದೇ ಧರ್ಮಾಧಾರಿತವಾಗಿರದೇ, ಕೇವಲ ಹಿಂದುಳಿಯುವಿಕೆ ಆಧಾರದಲ್ಲಾಗಿದೆಯೆಂದು ಕೆಸಿಆರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಪ್ರತ್ಯೇಕ ತೆಲಾಂಗಣ ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ, ಅವರಲ್ಲಿ ಶೇ.90 ಮಂದಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ  ಹಿಂದುಳಿದವರಾಗಿದ್ದಾರೆ. ಆದುದರಿಂದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆಯೆಂದು ಅವರು ಸದನಕ್ಕೆ ತಿಳಿಸಿದ್ದಾರೆ.

ಈ ಮಸೂದೆ ಅಂಗೀಕಾರಗೊಳ್ಳುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.62ಕ್ಕೇರಿದಂತಾಗುತ್ತದೆ. ಆದರೆ ನವಂಬರ್ 1992ರಲ್ಲಿ ಇಂದಿರಾ ಸಾವ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಮಿತಿಯನ್ನು ಶೆ.50ಕ್ಕೆ ನಿಗದಿಪಡಿಸಿದೆ.  

click me!