ಸೋನಿಯಾ, ರಾಹುಲ್‌ಗೆ ನೊಟೀಸ್, ಭಾರತಕ್ಕೆ ಕಬ್ಬಿಣದ ಕಡಲೆಯಾದ ಕಿವೀಸ್; ಫೆ.28ರ ಟಾಪ್ 10 ಸುದ್ದಿ!

Suvarna News   | Asianet News
Published : Feb 28, 2020, 04:42 PM IST
ಸೋನಿಯಾ, ರಾಹುಲ್‌ಗೆ ನೊಟೀಸ್, ಭಾರತಕ್ಕೆ ಕಬ್ಬಿಣದ ಕಡಲೆಯಾದ ಕಿವೀಸ್; ಫೆ.28ರ ಟಾಪ್ 10 ಸುದ್ದಿ!

ಸಾರಾಂಶ

ದೆಹಲಿ ದಂಗೆ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ನೊಟೀಸ್ ನೀಡಲಾಗಿದೆ. ಪೊಲೀಸರ ಗುಂಡಿಗೆ ಬಲಿಯಾದ ಸ್ಲಂ ಭರತ್ ಹಲವು ಸೆಲೆಬ್ರೆಟಿಗಳ ಹತ್ಯೆಗೆ ಸಜ್ಜಾಗಿದ್ದ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯ ಸೋತಿದ್ದ ಭಾರತಕ್ಕೆ ಇದೀಗ 2ನೇ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಕಾಜಲ್ ಅಗರ್ವಾಲ್ ಬಿಚ್ಚಿಟ್ಟ ಕರಾಳ ಘಟನೆ, ಮಂದಿರಾ ಬೇಡಿ ಫಿಟ್ನಸ್ ಸೇರಿದಂತೆ ಫೆ.28ರ ಟಾಪ್ 10 ಸುದ್ದಿ ಇಲ್ಲಿವೆ.

ದೆಹಲಿ ದಂಗೆ: ಸೋನಿಯಾ, ರಾಹುಲ್‌ ಗಾಂಧಿ ವಿರುದ್ಧ FIR...

ದೆಹಲಿ ದಂಗೆಗೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಸೋನಿಯಾ, ರಾಹುಲ್ ಗಾಂಧಿ ವಿರುದ್ಧ FIR ದಾಖಲಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಸೋನಿಯಾ, ರಾಹುಲ್‌ಗೆ ನೊಟೀಸ್ ನೀಡಲಾಗಿದೆ. 

ಯಶ್, ದುನಿಯಾ ವಿಜಯ್ ಗೂ ಬೆದರಿಕೆ : ಪ್ರಚಾರ ಪಡೆಯಲು ಯತ್ನಿಸಿದ್ದ ರೌಡಿ ಭರತ

ಪೊಲೀಸರ ಗುಂಡಿಗೆ ಬಲಿಯಾದ ಪಾತಕ ಲೋಕದ ಕುಖ್ಯಾತ ರೌಡಿ ಸ್ಲಂ ಭರತ ಸ್ಯಾಂಡಲ್ ವುಡ್ ನಟರಾದ ಯಶ್ ಹಾಗೂ ದುನಿಯಾ ವಿಜಯ್ ಗೂ ಬೆದರಿಕೆ ಒಡ್ಡಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಯೋಜಿಸಿದ್ದ. 

ಫಲಿಸದ ಪ್ರಾರ್ಥನೆ: ನಾಪತ್ತೆಯಾದ 6 ವರ್ಷದ ದೇವಾನಂದ ಶವವಾಗಿ ಪತ್ತೆ!

ನೂರಾರು ಮಂದಿ ಆ ಪುಟ್ಟ ಬಾಲಕಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು, ಸೋಶಿಯಲ್ ಮೀಡಿಯಾದಲ್ಲೂ ಬಾಲಕಿ ನಾಪತ್ತೆಯಾಗಿದ್ದಾಳೆ ಎಂಬ ಪೋಸ್ಟ್ ಗಳು ಭಾರೀ ಪ್ರಮಾಣದಲ್ಲಿ ಶೇರ್ ಆಗಿದ್ದವು. ಬಾಲಕಿಯ ಹೆತ್ತವರು ಕಂಡ ಕಂಡ ದೇವರ ಮೊರೆ ಹೋಗಿದ್ದರು. ಆದರೀಗ ಆ ಪುಟ್ಟ ಬಾಲಕಿಯ ಶವ ನದಿಯಲ್ಲಿ ಪತ್ತೆಯಾಗಿದೆ. 

ಕಿವೀಸ್ ಎದುರಿನ 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಇಶಾಂತ್ ಶರ್ಮಾ..!

ಕಿವೀಸ್ ವಿರುದ್ಧದ 2 ಟೆಸ್ಟ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಅತಿದೊಡ್ಡ ಆಘಾತವೊಂದು ಎದುರಾಗಿದ್ದಿದ್ದು, ಪ್ರಮುಖ ವೇಗಿ ಇಶಾಂತ್ ಶರ್ಮಾ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದಾರೆ.  

ಆ ಕರಾಳ ಘಟನೆಗೆ ಬೆಚ್ಚಿಬಿದ್ದ ನಟಿ; ರಾತ್ರಿ ಮನೆಯಿಂದಾನೇ ಹೊರ ಬರುತ್ತಿಲ್ಲವಂತೆ!

ಈ ಚೆಲುವೆಯ ಜೀವನದಲ್ಲಿ ಮರೆಯಲಾಗದೊಂದು ಕಹಿ ಘಟನೆ ನಡೆದಿದೆ. ಮಲ್ ಹಾಸನ್‌ ಹಾಗೂ ಕಾಜಲ್‌ ಅಗರ್ವಾಲ್‌ ಅಭಿನಯದ ಇಂಡಿಯಾ 2 ಚಿತ್ರ ಶೂಟಿಂಗ್‌ ಸೆಟ್‌ನಲ್ಲಿನ ಘಟನೆ  ಅಗರ್ವಾಲ್ ಮನಸ್ಸು ಕದಡಿದೆ.

ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ: ಬ್ಯಾಂಕ್ ಸಿಬ್ಬಂದಿಗೆ ನಿರ್ಮಲಾ ಆದೇಶ!...

 ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್‌ ಅಧಿಕಾರಿಗಳು ತಮ್ಮ ಜೊತೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುತ್ತಿಲ್ಲ ಎಂಬ ಗ್ರಾಹಕರ ಆರೋಪಗಳ ಬೆನ್ನಲ್ಲೇ, ಇದೀಗ ಹಣಕಾಸು ಸಚಿವೆ ಖಡಕ್ ಸೂಚನೆ ನೀಡಿದ್ದಾರೆ.

47ರ ಹರೆಯದ ಫಿಟ್ ಆ್ಯಂಡ್ ಹಾಟ್ ಮಂದಿರಾ ಬೇಡಿ!

ಈಜು, ಬಾಕ್ಸಿಂಗ್, ಜಿಮ್, ಯೋಗಾ, ಓಡುವುದು ಹೀಗೆ ಯಾವ ವ್ಯಾಯಮವಾದರೂ ಸರಿ ಪ್ರತಿದಿನ ತಪ್ಪದೇ ದೇಹ ದಂಡಿಸುವ  47ರ  ಹರೆಯದ ಮಂದಿರಾ ಬೇಡಿ ತಮ್ಮ ಫಿಟ್‌ನೆಸ್ ಮಂತ್ರದಿಂದ ಫ್ಯಾನ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ತಮ್ಮ ಹಾಟ್‌ನೆಸ್‌ನಿಂದ ಈಗಲೂ ಪಡ್ಡೆ ಹುಡುಗರ ನಿದ್ರೆಗೆಡಿಸುತ್ತಿದ್ದಾರೆ.

ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಲಾಂಚ್!

: ಟಾಟಾ ಮೋಟಾರ್ಸ್ ಮಾಲೀಕತ್ವದ ಲ್ಯಾಂಡ್ ರೋವರ್ ಇದೀಗ ಡಿಫೆಂಡರ್ SUV ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಡಿಸೈನ್, ಹೆಚ್ಚು ಫೀಚರ್ಸ್ ಒಳಗೊಂಡಿರುವ ನೂತನ ಡಿಫೆಂಡರ್ ಕಾರು, ಬೆಟ್ಟ, ಗುಡ್ಡ, ನದಿ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಅತ್ಯಂತ ಬಲಿಷ್ಠ ಡಿಫೆಂಡರ್ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

30 ವರ್ಷ ಜೊತೆಯಲ್ಲಿದ್ದ ಆಪ್ತನನ್ನೇ ಕೊಲ್ಲೋಕೆ ನೋಡಿದ್ರಾ ಮುತ್ತಪ್ಪ ರೈ..?

30 ವರ್ಷದಿಂದ ಜೊತೆಯಲ್ಲಿದ್ದ ಆಪ್ತನನ್ನೇ ಮುತ್ತಪ್ಪ ರೈ ಕೊಲ್ಲೋಕೆ ನೋಡಿದ್ರಾ..? ಹೀಗೊಂದು ಆರೋಪ ಕೇಳಿ ಬಂದಿದೆ. ಮುತ್ತಪ್ಪ ರೈ ತನ್ನನ್ನು ಕೊಲೆ ಮಾಡಲು ಯತ್ನಿಸಿರುವುದಾಗಿ ಅವರ ಆಪ್ತನೊಬ್ಬ ಆರೋಪಿಸಿದ್ದಾನೆ.

ತಾತನಾದ RGV; ಚಾನ್ಸ್‌ ಸಿಕ್ಕಿದ್ರೆ ಅವರನ್ನ ವರಿಸುತ್ತೇನೆಂದ ನಟಿ!

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ಹಾಗೂ ಚಿತ್ರಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ ಬಾಲಿವುಡ್ ಹಾಗೂ ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಪೋಲಿ ಪೋಲಿ ಫೋಟೋ ಶೇರ್ ಮಾಡಿಯೂ ಇವರು ಟ್ರೋಲ್ ಆಗೋದು ಹೊಸತಲ್ಲ ಬಿಡಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!